AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Holi 2022 Date: ಹೋಲಿಕಾ ದಹನ ಯಾವಾಗ? ಹೋಳಿಯ ಮಹತ್ವವೇನು? ಇಲ್ಲಿದೆ ತಿಳಿದುಕೊಳ್ಳಿ

ಬಣ್ಣಗಳ ಮೂಲಕ ಆಚರಿಸುವ ಹೋಳಿ ಹಬ್ಬವನ್ನು ಜಾತಿ, ಧರ್ಮ ಭೇದವಿಲ್ಲದೆ ದೇಶದಾದ್ಯಂತ ಆಚರಿಸಲಾಗುತ್ತದೆ. ಈ ಬಾರಿ ಮಾರ್ಚ್​​ 18 ರಂದು ಹೋಳಿ ಆಚರಿಸಲಾಗುತ್ತಿದೆ.

Holi 2022 Date: ಹೋಲಿಕಾ ದಹನ ಯಾವಾಗ? ಹೋಳಿಯ ಮಹತ್ವವೇನು? ಇಲ್ಲಿದೆ ತಿಳಿದುಕೊಳ್ಳಿ
ಸಾಂಕೇತಿಕ ಚಿತ್ರ
TV9 Web
| Updated By: Pavitra Bhat Jigalemane|

Updated on: Mar 16, 2022 | 11:13 AM

Share

ಭಾರತೀಯ ಸಂಪ್ರದಾಯದಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನವಿದೆ. ಪ್ರಮುಖ ಹಬ್ಬಗಳ ಆಚರಣೆ ಜನರನ್ನು, ಜನರ ಮನಸ್ಸನ್ನು ಮತ್ತಷ್ಟು ಸಂತಸಗೊಳಿಸುತ್ತದೆ. ಅಂತಹ ಹಬ್ಬಗಳಲ್ಲಿ ಹೋಳಿ (Holi) ಕೂಡ ಒಂದು. ಬಣ್ಣಗಳ ಮೂಲಕ ಆಚರಿಸುವ ಈ ಹಬ್ಬ ಜಾತಿ, ಧರ್ಮ ಭೇದವಿಲ್ಲದೆ ದೇಶದಾದ್ಯಂತ ಆಚರಿಸಲಾಗುತ್ತದೆ. ಈ ಬಾರಿ ಮಾರ್ಚ್​​ 18 ರಂದು ಹೋಳಿ ಆಚರಿಸಲಾಗುತ್ತಿದೆ. ಹೋಳಿ ಬಣ್ಣಗಳ ಹಬ್ಬ. ಬದುಕಿನ ಅಂಧವಕಾರವನ್ನು ಹೋಗಲಾಡಿಸಿ, ಬದುಕೂ ಕೂಡ ಬಣ್ಣಗಳಂತೆ ಕಲರ್​ಫುಲ್​ ಆಗಿರಲಿ ಎಂದು ಆಚರಿಸುತ್ತಾರೆ. ಆದರೆ ಈ ಹೋಳಿ ಹಬ್ಬಕ್ಕೆ ಪುರಾಣದ ಇತಿಹಾಸವೂ ಇದೆ. ಅದೇ ರೀತಿ ಹೋಳಿ ಆಚರಣೆಗೆ ಅನೇಕ ದಂತಕಥೆಗಳೂ ಇವೆ.  ದುಷ್ಟರನ್ನು ಸಂಹರಿಸಿ, ಶಿಷ್ಟರನ್ನು ರಕ್ಷಿಸಿದ ನೆನಪಿನ ಆಚರಣೆಗಾಗಿ ಹೋಳಿಯನ್ನು ಆಚರಿಸಲಾಗುತ್ತದೆ.  ದೇಶದ ವಿವಿದೆಡೆ ವಿವಿಧ ರೀತಿಯಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ.

ಹೋಲಿಕಾ ದಹನ:

ಹೋಳಿಯ ಹಿಂದಿನ ದಿನ ರಾತ್ರಿ ಹೋಳಿಕಾ ದಹನ್​ ಎಂದು ಆಚರಿಸುತ್ತಾರೆ, ಜನರು ಮರ ಮತ್ತು ಹಸುವಿನ ಸಗಣಿಯಿಂದ ಮಾಡಿದ ಹೋಲಿಕಾ ಪೈರನ್ನು ತಯಾರಿಸುತ್ತಾರೆ ಮತ್ತು ಅದನ್ನು ಸುಟ್ಟು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರನ್ನು ಪ್ರಾರ್ಥಿಸುತ್ತಾರೆ. ಉತ್ತರ ಭಾರತ, ನೇಪಾಳ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಈ ರೀತಿಯ ಆಚರಣೆಗಳನ್ನು ಮಾಡುತ್ತಾರೆ.

ಹೋಲಿಕಾ ದಹನ್ ಅನ್ನು ಹಿಂದೂ ತಿಂಗಳ ಪಾಲ್ಗುಣ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಈ ವರ್ಷ, ಹೋಲಿಕಾ ದಹನವು ಗುರುವಾರ 17 ಮಾರ್ಚ್ 2022 ರಂದು ನಡೆಯಲಿದೆ, ಹೋಲಿಕಾ ದಹನ ಮುಹೂರ್ತ ರಾತ್ರಿ 9.06 ರಿಂದ 10.16 ರವರೆಗೆ ಆಗಿದೆ. ಹೋಲಿಕಾ ದಹನ ಆಚರಣೆಯ ಮೂಲವು ವಿಷ್ಣುವಿನ ಭಕ್ತ ಪ್ರಹ್ಲಾದ ಮತ್ತು ಅವನ ರಾಕ್ಷಸ ತಂದೆ ಹಿರಣ್ಯಕಶ್ಯಪುವಿನ ದಂತಕಥೆಯಲ್ಲಿದೆ. ಈ ಕಥೆಯಿಂದಲೇ ಈ ಹಬ್ಬಕ್ಕೆ ‘ಹೋಲಿಕಾ ದಹನ್’ ಎಂಬ ಹೆಸರು ಬಂದಿದೆ.

ಹೋಳಿಯ ಇತಿಹಾಸ:

ಹಿರಣ್ಯಕಶ್ಯಪು ಇಡೀ ಬ್ರಹ್ಮಾಂಡಕ್ಕೇ ತಾನೇ ರಾಜ ಎಂದು ಬೀಗುತ್ತಿದ್ದನು. ಆದರೆ ಆತನ ಮಗ ಪ್ರಹ್ಲಾದ ವಿಷ್ಣುವಿನ ಪರಮಭಕ್ತನಾಗಿದ್ದನು. ಇದರಿಂದ ಕೋಪಗೊಂಡ ಅವನು ತನ್ನ ಸಹೋದರಿ ಹೋಲಿಕಾಗಳನ್ನು ಕರೆಸಿದನು. ಆಕೆಗೆ ಯಾವುದೇ ಬೆಂಕಿ ಸುಡುವುದಿಲ್ಲ ಎನ್ನುವ ವರವಿತ್ತು. ಆದರೆ ವರವನ್ನು ದುರುಪಯೋಗಪಡಿಸಿಕೊಂಡರೆ ಅಪಾಯ ಹೆಚ್ಚು ಎನ್ನಲಾಗಿತ್ತು. ಹೀಗಾಗಿ ಹೊಲಿಕಾ ಪ್ರಹ್ಲಾದನನ್ನು ತೊಡೆಯ ಮೇಲೆ ಕೂರಿಸಿಕೊಂಡು ಮರದ ಬೆಂಜಿನ ಮೇಲೆ ಕುಳುತುಕೊಂಡಳು. ಆಹ ಪ್ರಹ್ಲಾದ ನಿರಂತರ ಹರಿಯ ಧ್ಯಾನದಲ್ಲಿದ್ದ. ಇದರಿಂದಾಗಿ ಪ್ರಹ್ಲಾದ ಪಾರಾಗಿ ಹೋಲಿಕಾ ಸುಟ್ಟು ಭಸ್ಮವಾಗುತ್ತಾಳೆ. ಅಂದಿನಿಂದ ಹೋಳಿಯ ಆಚರಣೆಯನ್ನು ಮಾಡಲಾಗುತ್ತಿದೆ ಎನ್ನುವ ದಂತಕಥೆಯಿದೆ.

ಕೆಟ್ಟದ್ದನ್ನು ನಾಶಪಡಿಸಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿಂದ ಪ್ರತೀ ವರ್ಷ ದೇಶಾದ್ಯಂತ ಹೋಲಿಕಾ ದಹನ್​ ಎನ್ನುವ ಆಚರಣೆಯನ್ನು ಮಾಡಲಾಗುತ್ತದೆ. ಕರ್ನಾಟಕದ ಹಲವೆಡೆ ಕಾಮಣ್ಣದ ದಹನ ಎಂದು ಮಾಡಲಾಗುತ್ತದೆ. ಮನುಷ್ಯನ ಕೋಪ, ಮೋಹ, ಕಾಮ, ಲೋಭ ಎಲ್ಲವನ್ನೂ ತೊಡೆದು ಹಾಕಿ ಉತ್ತಮ ಜೀವನವನ್ನು ನೀಡುವಂತೆ ಕೇಳಿಕೊಳ್ಳಲು ಈ ಆಚರಣೆ ಮಾಡಲಾಗುತ್ತದೆ.

ಇದನ್ನೂ ಓದಿ:

ನೀವು ನೈಸರ್ಗಿಕ ಬಣ್ಣಗಳೊಂದಿಗೆ ಹೋಳಿ ಆಡಲು ಬಯಸುತ್ತೀರಾ? ಇಲ್ಲಿದೆ ಮನೆಯಲ್ಲಿಯೇ ಇದನ್ನು ತಯಾರಿಸುವ ವಿಧಾನ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ