AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿರಿಯಡ್ಸ್‌ ಸಮಯದಲ್ಲಿ ಎಷ್ಟು ಗಂಟೆಗಳಿಗೊಮ್ಮೆ ಸ್ಯಾನಿಟರಿ ಪ್ಯಾಡ್‌ ಬದಲಾಯಿಸುತ್ತಿರಬೇಕು?

Menstrual Hygiene: ಹೆಚ್ಚಿನ ಹೆಣ್ಣುಮಕ್ಕಳು ಋತುಚಕ್ರದ ಅವಧಿಯಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ. ಆದರೆ ಇದರಲ್ಲಿ ಅನೇಕ ಮಹಿಳೆಯರಿಗೆ ಎಷ್ಟು ಗಂಟೆಗಳಿಗೊಮ್ಮೆ ಪ್ಯಾಡ್‌ಗಳನ್ನು ಬದಲಾಯಿಸಬೇಕು ಎಂಬುದು ಗೊತ್ತಿಲ್ಲ, ಅವರು ದಿನವಿಡೀ ಒಂದೇ ಪ್ಯಾಡ್‌ ಬಳಸುತ್ತದೆ. ಹೀಗೆ ಸಮಯಕ್ಕೆ ಸರಿಯಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಾಯಿಸದಿರುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಪ್ರತಿಯೊಬ್ಬ ಮಹಿಳೆಯೂ ಸಹ ಪಿರಿಯಡ್ಸ್‌ ಸಮಯದಲ್ಲಿ ಪ್ಯಾಡ್‌ಗಳನ್ನು ಎಷ್ಟು ಗಂಟೆಗಳಿಗೊಮ್ಮೆ ಬದಲಾಯಿಸಬೇಕು ಎಂಬುದನ್ನು ತಿಳಿಯಲೇಬೇಕು.

ಪಿರಿಯಡ್ಸ್‌ ಸಮಯದಲ್ಲಿ ಎಷ್ಟು ಗಂಟೆಗಳಿಗೊಮ್ಮೆ ಸ್ಯಾನಿಟರಿ ಪ್ಯಾಡ್‌ ಬದಲಾಯಿಸುತ್ತಿರಬೇಕು?
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Jun 29, 2026 | 4:58 PM

Share

ಮುಖ್ಯಾಂಶಗಳು

  • ಮುಟ್ಟಿನ ಸಮಯದಲ್ಲಿ ಮಹಿಳೆಯರು ನೈರ್ಮಲ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು
  • ಪೀರಿಯಡ್ಸ್‌ ಸಮಯದಲ್ಲಿ ಆಗಾಗ್ಗೆ ಪ್ಯಾಡ್‌ ಬದಲಾಯಿಸುವುದು ಬಹಳ ಮುಖ್ಯ
  • ಪ್ರತಿ 4 ರಿಂದ 5 ಗಂಟೆಗಳಿಗೊಮ್ಮೆ ಪ್ಯಾಡ್ ಬದಲಾಯಿಸಬೇಕು

ಪಿರಿಯಡ್ಸ್‌ ಅಥವಾ ಮುಟ್ಟು (period) ಪ್ರತಿ ಹೆಣ್ಣಿನಲ್ಲೂ ಸಂಭವಿಸುವ ನೈಸರ್ಗಿಕ ಪ್ರಕ್ರಿಯೆಯಾಗಿದೆ.  ಈ ಮುಟ್ಟಿನ ಸಮಯದಲ್ಲಿ ಪ್ರತಿಯೊಬ್ಬ ಮಹಿಳೆಯು ನೈರ್ಮಲ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಸಮಯಕ್ಕೆ ಸರಿಯಾಗಿ ಪ್ಯಾಡ್‌ಗಳನ್ನು ಬದಲಾಯಿಸುವುದು ಕೂಡ ನೈರ್ಮಲ್ಯದ ಒಂದು ಭಾಗವಾಗಿದ್ದು, ಪೀರಿಯಡ್ಸ್‌ ಸಮಯದಲ್ಲಿ ಆಗಾಗ್ಗೆ ಪ್ಯಾಡ್‌ ಬದಲಾಯಿಸುವುದು ಬಹಳ ಮುಖ್ಯ.  ಆದರೆ ಅನೇಕ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಎಷ್ಟು ಬಾರಿ ಬದಲಾಯಿಸಬೇಕು  ಎಂಬುದು ಗೊತ್ತಿಲ್ಲ. ದಿನವಿಡೀ ಒಂದೇ ಪ್ಯಾಡ್ ಬಳಸುತ್ತಾರೆ, ಹೀಗೆ ದೀರ್ಘಕಾಲದವರೆಗೆ ಪ್ಯಾಡ್‌ಗಳನ್ನು ಬದಲಾಯಿಸದಿರುವುದು ಮೂತ್ರದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ, ಖಾಸಗಿ ಭಾಗಗಳಲ್ಲಿ ಸುಡುವಿಕೆ, ತುರಿಕೆ ಮತ್ತು ಇತರ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಪ್ರತಿಯೊಬ್ಬ ಮಹಿಳೆಯೂ ಪಿರಿಯಡ್ಸ್‌ ಸಮಯದಲ್ಲಿ ಪ್ಯಾಡ್‌ಗಳನ್ನು ಎಷ್ಟು ಗಂಟೆಗಳಿಗೊಮ್ಮೆ ಬದಲಾಯಿಸಬೇಕು ಎಂಬುದನ್ನು ತಿಳಿಯಲೇಬೇಕು.

ಮುಟ್ಟಿನ ಸಮಯದಲ್ಲಿ ಎಷ್ಟು ಗಂಟೆಗಳಿಗೊಮ್ಮೆ ಪ್ಯಾಡ್ ಬದಲಾಯಿಸಬೇಕು?

ಮುಟ್ಟಿನ ಸಮಯದಲ್ಲಿ ಪ್ಯಾಡ್‌ಗಳನ್ನು ಬದಲಾಯಿಸುವುದು ಬಹಳ ಮುಖ್ಯ, ಏಕೆಂದರೆ ಮುಟ್ಟಿನ ಸಮಯದಲ್ಲಿ ದೇಹವು ಹಾನಿಕಾರಕ ಬ್ಯಾಕ್ಟೀರಿಯಾಗಳಿಗೆ ಒಡ್ಡಿಕೊಳ್ಳುತ್ತದೆ. ಮುಟ್ಟಿನ ಸಮಯದಲ್ಲಿ ಖಾಸಗಿ ಭಾಗದ ಸೋಂಕಿನ ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ, ಮುಟ್ಟಿನ ಸಮಯದಲ್ಲಿ ಸಮಯಕ್ಕೆ ಸರಿಯಾಗಿ ಪ್ಯಾಡ್‌ಗಳನ್ನು ಬದಲಾಯಿಸುವುದು ತುಂಬಾನೇ ಮುಖ್ಯ.

ಪ್ಯಾಡ್‌ಗಳನ್ನು ಬದಲಾಯಿಸುವುದು ಮುಟ್ಟಿನ ಹರಿವನ್ನು ಅವಲಂಬಿಸಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ತಜ್ಞರ ಪ್ರಕಾರ, ಪಿರಿಯಡ್‌ ಬ್ಲೀಡಿಂಗ್ ಕಡಿಮೆಯಿದ್ದರೆ, ನೀವು ಪ್ರತಿ 5 ರಿಂದ 6 ಗಂಟೆಗಳಿಗೊಮ್ಮೆ  ಪ್ಯಾಡ್ ಅನ್ನು ಬದಲಾಯಿಸಬೇಕು. ಪಿರಿಯಡ್‌ ಬ್ಲೀಡಿಂಗ್ ಮಧ್ಯಮವಾಗಿದ್ದರೆ, ನೀವು ಪ್ರತಿ 4 ರಿಂದ 5 ಗಂಟೆಗಳಿಗೊಮ್ಮೆ ನಿಮ್ಮ ಪ್ಯಾಡ್ ಅನ್ನು ಬದಲಾಯಿಸಬೇಕು. ಅದೇ ಮೊದಲೆರಡು ದಿನಗಳಲ್ಲಿ ಪಿರಿಯಡ್‌ ಬ್ಲೀಡಿಂಗ್ ಹೆಚ್ಚಿರುವ ಪ್ರತಿ 3 ರಿಂದ 4 ಗಂಟೆಗಳಿಗೊಮ್ಮೆ ಪ್ಯಾಡ್‌ಗಳನ್ನು ಬದಲಾಯಿಸುತ್ತಲೇ ಇರಬೇಕು. ಅಲ್ಲದೆ, ರಾತ್ರಿ ಮಲಗುವಾಗ ನೈಟ್ ಪ್ಯಾಡ್ ಬಳಸಿ ಮತ್ತು ಬೆಳಿಗ್ಗೆ ಎದ್ದ ತಕ್ಷಣ ಅದನ್ನು ಬದಲಾಯಿಸಬೇಕು.

ಇನ್ನೂ ನಿಮ್ಮ ಮುಟ್ಟು ಸಾಮಾನ್ಯವಾಗಿದ್ದರೆ ಮತ್ತು ಪಿರಿಯಡ್‌ ಬ್ಲೀಡಿಂಗ್ ಸೀಮಿತವಾಗಿದ್ದರೆ, 24 ಗಂಟೆಗಳ ಅವಧಿಯಲ್ಲಿ ಪ್ಯಾಡ್‌ಗಳನ್ನು ಕೇವಲ ಮೂರು ಬಾರಿ ಬದಲಾಯಿಸಿದರೆ ಸಾಕು ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ಒಂದು ತಿಂಗಳ ಕಾಲ ಚಹಾ ಸೇವಿಸದಿದ್ದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಸಂಭವಿಸುತ್ತವೆ?

ಮುಟ್ಟಿನ ಸಮಯದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ:

  • ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸುವುದನ್ನು ತಡೆಯಲು ಖಾಸಗಿ ಭಾಗಗಳನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸುವುದು ಅತ್ಯಗತ್ಯ.
  • ಮುಟ್ಟಿನ ಸಮಯದಲ್ಲಿ ಸಮಯಕ್ಕೆ ಸರಿಯಾಗಿ ಪ್ಯಾಡ್‌ಗಳನ್ನು ಬದಲಾಯಿಸುವುದು ಮುಖ್ಯ. ಇದು ತುರಿಕೆ, ಸುಡುವಿಕೆ, ಕಿರಿಕಿರಿ ಮತ್ತು ವಾಸನೆಯಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
  • ಈ ಸಮಯದಲ್ಲಿ ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ ಮತ್ತು ಹತ್ತಿ ಒಳ ಉಡುಪುಗಳನ್ನು ಬಳಸುವುದು ಉತ್ತಮ.
  • ಪ್ಯಾಡ್ ಬದಲಾಯಿಸುವ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯುವುದು ಸಹ ಮುಖ್ಯವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us