AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Onion Black Spot: ಈರುಳ್ಳಿಯ ಮೇಲಿನ ಕಪ್ಪು ಕಲೆಗಳು ಏನು? ಇಂಥ ಈರುಳ್ಳಿ ತಿನ್ನಬಹುದೇ?

ಈರುಳ್ಳಿಯ ಮೇಲಿನ ಕಪ್ಪು ಕಲೆಗಳನ್ನು ಮಣ್ಣಿನ ಕಲೆ ಎಂದು ನಿರ್ಲಕ್ಷಿಸುತ್ತೀರಾ? ತೊಳೆದರೂ ಹೋಗದ ಕಪ್ಪು ಕಲೆಗಳು ಶಿಲೀಂಧ್ರದ ಬೆಳವಣಿಗೆಯಾಗಿರಬಹುದು. ಇಂತಹ ಈರುಳ್ಳಿಯನ್ನು ತೊಳೆದು ಅಥವಾ ಕಲೆ ಇರುವ ಭಾಗವನ್ನು ಮಾತ್ರ ಕತ್ತರಿಸಿ ಬಳಸುವುದು ಸುರಕ್ಷಿತವೇ? ಈ ಕಲೆಗಳು ಏಕೆ ಬರುತ್ತವೆ, ಯಾವಾಗ ಈರುಳ್ಳಿಯನ್ನು ಎಸೆಯಬೇಕು ಮತ್ತು ಅದನ್ನು ಸರಿಯಾಗಿ ಸಂಗ್ರಹಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

Onion Black Spot: ಈರುಳ್ಳಿಯ ಮೇಲಿನ ಕಪ್ಪು ಕಲೆಗಳು ಏನು? ಇಂಥ ಈರುಳ್ಳಿ ತಿನ್ನಬಹುದೇ?
Onion Black Spot
ಮಾಲಾಶ್ರೀ ಅಂಚನ್​
| Edited By: |

Updated on:Sep 07, 2026 | 5:24 PM

Share

ಮುಖ್ಯಾಂಶಗಳು

  • ಈರುಳ್ಳಿಯ ಮೇಲಿನ ಕಪ್ಪು ಕಲೆ ಕಂಡರೆ ಎಚ್ಚರ!
  • ಕಪ್ಪು ಕಲೆ ಇರುವ ಈರುಳ್ಳಿಯನ್ನು ತೊಳೆದು ತಿನ್ನಬಹುದೇ?
  • ಈರುಳ್ಳಿಯ ಕಪ್ಪು ಕಲೆಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ

ಮನೆಯ ಅಡುಗೆಮನೆಯಲ್ಲಿ ಈರುಳ್ಳಿ (Onion) ತೆಗೆದುಕೊಂಡಾಗ ಅದರ ಮೇಲೆ ಕಪ್ಪು ಕಲೆಗಳು ಕಾಣಿಸುವುದು ಸಾಮಾನ್ಯ. ಕೆಲವೊಮ್ಮೆ ಇವು ಮಣ್ಣಿನ ಕಲೆಗಳಿರಬಹುದು ಎಂದು ಭಾವಿಸಿ ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತೇವೆ. ಆದರೆ ಎಷ್ಟೇ ತೊಳೆದರೂ ಕೆಲವು ಕಪ್ಪು ಕಲೆಗಳು ಹೋಗುವುದಿಲ್ಲ. ಹಾಗಾದರೆ ಈ ಕಲೆಗಳು ನಿಜವಾಗಿಯೂ ಮಣ್ಣೇ ಅಥವಾ ಶಿಲೀಂಧ್ರವೇ? ಇಂತಹ ಈರುಳ್ಳಿಯನ್ನು ತಿನ್ನಬಹುದೇ ಎಂಬ ಅನುಮಾನ ಹಲವರಲ್ಲಿದೆ.

ಈರುಳ್ಳಿಯ ಮೇಲೆ ತೊಳೆದರೂ ಹೋಗದ ಕಪ್ಪು ಪದರ ಅಥವಾ ಕಲೆಗಳು ಕಂಡುಬಂದರೆ ಅವು ಶಿಲೀಂಧ್ರದ ಬೆಳವಣಿಗೆಯಾಗಿರುವ ಸಾಧ್ಯತೆ ಇದೆ. ಆಹಾರ ಪದಾರ್ಥಗಳ ಮೇಲೆ ಬೆಳೆಯುವ ಶಿಲೀಂಧ್ರಗಳು ಸೂಕ್ಷ್ಮಜೀವಿಗಳಾಗಿದ್ದು, ಸಸ್ಯ ಅಥವಾ ಪ್ರಾಣಿ ಮೂಲದ ಪದಾರ್ಥಗಳಲ್ಲಿ ಬೆಳೆಯುತ್ತವೆ. ಇವು ಸೂಕ್ಷ್ಮವಾದ ದಾರದಂತಹ ರಚನೆಗಳನ್ನು ಹೊಂದಿರುತ್ತವೆ. ಜೊತೆಗೆ ಗಾಳಿ, ನೀರು ಅಥವಾ ಕೀಟಗಳ ಮೂಲಕ ಹರಡಬಹುದಾದ ಬೀಜಕಗಳನ್ನು ಉತ್ಪಾದಿಸುತ್ತವೆ. ಈ ಬೀಜಕಗಳ ಕಾರಣದಿಂದ ಶಿಲೀಂಧ್ರವು ಕಪ್ಪು ಸೇರಿದಂತೆ ವಿವಿಧ ಬಣ್ಣಗಳಲ್ಲಿ ಕಾಣಿಸಿಕೊಳ್ಳಬಹುದು.

ಕಪ್ಪು ಭಾಗವನ್ನು ಕತ್ತರಿಸಿದರೆ ಸಾಕೇ?

ಈರುಳ್ಳಿಯ ಮೇಲೆ ಕಪ್ಪು ಕಲೆ ಕಂಡಾಗ ಆ ಭಾಗವನ್ನು ಮಾತ್ರ ಕತ್ತರಿಸಿ ಉಳಿದ ಈರುಳ್ಳಿಯನ್ನು ಬಳಸಬಹುದು ಎಂದು ಕೆಲವರು ಭಾವಿಸುತ್ತಾರೆ. ಆದರೆ ಶಿಲೀಂಧ್ರ ಕೇವಲ ಹೊರಭಾಗದಲ್ಲೇ ಇರುವುದಿಲ್ಲ. ಕೆಲವೊಮ್ಮೆ ಅದರ ಸೂಕ್ಷ್ಮವಾದ ಬೇರುಗಳಂತಹ ರಚನೆಗಳು ಆಹಾರದ ಒಳಭಾಗಕ್ಕೂ ಹರಡಿರಬಹುದು. ಇವು ಕಣ್ಣಿಗೆ ಸುಲಭವಾಗಿ ಕಾಣಿಸದೇ ಇರಬಹುದು.

ಹೀಗಾಗಿ ಕಪ್ಪು ಶಿಲೀಂಧ್ರ ಈರುಳ್ಳಿಯ ಹಲವು ಭಾಗಗಳಿಗೆ ಹರಡಿದ್ದರೆ, ಆ ಈರುಳ್ಳಿಯನ್ನು ಬಳಸುವ ಬದಲು ಎಸೆಯುವುದು ಸುರಕ್ಷಿತ. ಮೇಲ್ಭಾಗದಲ್ಲಿರುವ ಕಲೆಗಳನ್ನು ಮಾತ್ರ ತೊಳೆದು ತಿನ್ನುವುದು ಸೂಕ್ತವಲ್ಲ.

ರಾತ್ರಿ 9 ಗಂಟೆಯ ನಂತರ ಊಟ ಮಾಡುತ್ತೀರಾ? ಹೃದಯದ ಆರೋಗ್ಯದ ಮೇಲೆ ಏನು ಪರಿಣಾಮ?

ಶಿಲೀಂಧ್ರ ಇರುವ ಈರುಳ್ಳಿ ಅಪಾಯಕಾರಿಯೇ?

ಶಿಲೀಂಧ್ರದಿಂದ ಕೂಡಿದ ಆಹಾರವನ್ನು ಸೇವಿಸುವುದರಿಂದ ಕೆಲವರಿಗೆ ಅಲರ್ಜಿ ಅಥವಾ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ಶಿಲೀಂಧ್ರ ಹಿಡಿದ ಈರುಳ್ಳಿಯನ್ನು ಮೂಸುವುದು ಕೂಡ ಸೂಕ್ತವಲ್ಲ. ಅದರಲ್ಲಿರುವ ಬೀಜಕಗಳನ್ನು ಉಸಿರಿನ ಮೂಲಕ ಒಳಗೆಳೆದುಕೊಳ್ಳುವುದರಿಂದ ಕೆಲವರಿಗೆ ಉಸಿರಾಟದ ತೊಂದರೆ ಉಂಟಾಗುವ ಸಾಧ್ಯತೆಯಿದೆ. ಶಿಲೀಂಧ್ರ ಹಿಡಿದ ಈರುಳ್ಳಿ ಇಟ್ಟಿದ್ದ ಸ್ಥಳವನ್ನೂ ಸ್ವಚ್ಛಗೊಳಿಸುವುದು ಉತ್ತಮ. ಅದರ ಪಕ್ಕದಲ್ಲಿದ್ದ ಇತರ ಈರುಳ್ಳಿ ಅಥವಾ ತರಕಾರಿಗಳಲ್ಲೂ ಶಿಲೀಂಧ್ರದ ಲಕ್ಷಣಗಳಿವೆಯೇ ಎಂಬುದನ್ನು ಪರಿಶೀಲಿಸಿ.

ಈರುಳ್ಳಿಯನ್ನು ಹೇಗೆ ಸಂಗ್ರಹಿಸಬೇಕು?

ಶಿಲೀಂಧ್ರವು ಬೆಚ್ಚಗಿನ ಮತ್ತು ಹೆಚ್ಚು ತೇವಾಂಶ ಇರುವ ವಾತಾವರಣದಲ್ಲಿ ವೇಗವಾಗಿ ಬೆಳೆಯಬಹುದು. ಆದ್ದರಿಂದ ಈರುಳ್ಳಿಯನ್ನು ತೇವಾಂಶವಿರುವ ಸ್ಥಳದಲ್ಲಿ ಸಂಗ್ರಹಿಸಬಾರದು. ಗಾಳಿ ಸರಿಯಾಗಿ ಓಡಾಡುವ, ಒಣ ಹಾಗೂ ಸ್ವಚ್ಛವಾದ ಸ್ಥಳದಲ್ಲಿ ಇಡುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:24 pm, Mon, 7 September 26

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ