AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Lion day 2021: ವಿಶ್ವ ಸಿಂಹ ದಿನದ ಇತಿಹಾಸ ಮತ್ತು ಮಹತ್ವ

ವಿಶ್ವ ಸಿಂಹ ದಿನ 2021: ಕ್ಷೀಣಿಸುತ್ತಿರುವ ಸಿಂಹಗಳ ಸಂಖ್ಯೆಯ ಕುರಿತಾಗಿ ಜಾಗೃತಿ ಮೂಡಿಸಲು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ.

World Lion day 2021: ವಿಶ್ವ ಸಿಂಹ ದಿನದ ಇತಿಹಾಸ ಮತ್ತು ಮಹತ್ವ
ವಿಶ್ವ ಸಿಂಹ ದಿನ 2021
TV9 Web
| Edited By: |

Updated on: Aug 10, 2021 | 10:22 AM

Share

ಪ್ರತೀ ವರ್ಷ ವಿಶ್ವ ಸಿಂಹ ದಿನವನ್ನು ಆಗಸ್ಟ್ 10ರಂದು ಆಚರಿಸಲಾಗುತ್ತದೆ. ಕ್ಷೀಣಿಸುತ್ತಿರುವ ಸಿಂಹಗಳ ಸಂಖ್ಯೆಯ ಕುರಿತಾಗಿ ಜಾಗೃತಿ ಮೂಡಿಸಲು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ. ಏಷ್ಯಾಟಿಕ್​ ಸಿಂಹವು ಭಾರತದಲ್ಲಿ ಅತಿ ಹೆಚ್ಚು ಗುರುತಿಸಲ್ಪಟ್ಟಿದೆ.  ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಗುಜರಾತ್​ನಲ್ಲಿ ನಡೆದ ಗಣತಿಯ ಪ್ರಕಾರ ಸಿಂಹಗಳ ಸಂಖ್ಯೆಯಲ್ಲಿ ಏರಿಕೆ ಕಂಡಿರುವುದು ತಿಳಿದು ಬಂದಿದೆ. ಭಾರತದಲ್ಲಿ 2015ರ ಗಣತಿಯ ಪ್ರಕಾರ 523 ಸಿಂಹಗಳು ಹಾಗೂ 2020ರಲ್ಲಿ ನಡೆದ ಗಣತಿಯ ಪ್ರಕಾರ 674 ಸಿಂಹಗಳು ಗುರಿತಿಸಲ್ಪಟ್ಟಿದೆ. 5 ವರ್ಷಗಳಲ್ಲಿ ಸಿಂಹಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ.

ಇತಿಹಾಸ ಏಷ್ಯಾ, ಆಫ್ರಿಕಾ ಹಾಗೂ ಯುರೋಪಿನಾದ್ಯಂತ ಮೂರು ಮಿಲಿಯನ್ ವರ್ಷಗಳ ಹಿಂದೆ ಸಿಂಹಗಳು ಮುಕ್ತವಾಗಿ ಸಂಚರಿಸುತ್ತಿದ್ದವು. ಕಳೆದ 100 ವರ್ಷಗಳಲ್ಲಿ ಗಮನಿಸಿದರೆ ಶೇ. 80ರಷ್ಟು ಕಣ್ಮರೆಯಾಗಿವೆ. ಇತ್ತೀಚಿಗಿನ ಸಮೀಕ್ಷೆಯ ಪ್ರಕಾರ ಐತಿಹಾಸಿಕವಾಗಿ ಸಿಂಹಗಳ ಸಂಖ್ಯೆಯು 30,000 ದಿಂದ 20,000 ಕ್ಕೆ ಇಳಿಕೆಯಾಗಿದೆ ಎಂಬುದು ತಿಳಿದು ಬಂದಿದೆ.

ಭಾರತದಲ್ಲಿ ಏಷ್ಯಾಟಿಕ್​ ಸಿಂಹಗಳು ಹೆಚ್ಚಾಗಿ ನಿರ್ಬಂಧಿತ ಗಿರ್ ಅರಣ್ಯದಲ್ಲಿ ಮತ್ತು ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡು ಬರುತ್ತವೆ. ಭಾರತದಲ್ಲಿ ಸಿಂಹಗಳ ವರ್ಣಚಿತ್ರಗಳು, ಸಾಹಿತ್ಯ ಮತ್ತು ರಾಜ ಲಾಂಛನ ಜತೆಗೆ ಸಾಂಸ್ಕೃತಿಕ ಗುರುತಿನ ಒಂದು ಭಾಗವಾಗಿದೆ. ಬ್ರಿಟೀಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ಸಿಂಹಗಳನ್ನು ದೊಡ್ಡ ಪ್ರಮಾಣದಲ್ಲಿ ಬೇಟಿಯಾಡಲಾಯಿತು. ಬಳಿಕ ಸಿಂಹಗಳ ಸಂಖ್ಯೆ ಇಳಿಕೆಯ ಹಾದಿ ಹಿಡಿಯಿತು.

ಭಾರತ ಸರ್ಕಾರ ಸಿಂಹಗಳನ್ನು ರಕ್ಷಣೆಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಅರಣ್ಯದ ನಾಶ, ಅತಿಯಾದ ಬೇಟೆಯಿಂದಾಗಿ ಕಾಡಿನಲ್ಲಿ ಒಂಟಿಯಾಗಿ ಅಲೆಯುವ ಸಿಂಹಗಳ ಘರ್ಜನೆ ಕ್ಷೀಣಿಸುತ್ತಿದೆ. ಜತೆಗೆ ಸಿಂಹಗಳ ಸಂಖ್ಯೆಯಲ್ಲಿ ಕ್ರಮೇಣ ಇಳಿಕೆ ಕಂಡು ಬರುತ್ತಿದೆ.

ಇದನ್ನೂ ಓದಿ:

Viral Video: ದಾರಿ ತಪ್ಪಿ ರಸ್ತೆಗೆ ಬಂದು ಅಲೆದಾಡುತ್ತಿರುವ 5 ಸಿಂಹಗಳು; ದೃಶ್ಯ ಕ್ಯಾಮರಾದಲ್ಲಿ ಸೆರೆ

Viral Video: ಸಿಂಹಕ್ಕೆ ಕಾಟ ಕೊಡುತ್ತಿದೆ ಪುಟ್ಟ ಆಮೆ! ಸಿಂಹದ ಪಜೀತಿ ಕೇಳುವವರು ಯಾರೂ ಇಲ್ವೇ?