AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಯೊಂದಿಗೆ ಮತ್ತೆ ಜಗಳವಾಗಬಹುದು ಎಂಬ ಭಯದಲ್ಲಿ ಬಾಲ್ಕನಿಯಿಂದ ಇಳಿಯಲು ಹೋಗಿ ಕಾಲು ಜಾರಿ ಬಿದ್ದು ಟೆಕ್ಕಿ ಸಾವು

ಗ್ರೇಟರ್ ನೋಯ್ಡಾದಲ್ಲಿ ಪತ್ನಿಯೊಂದಿಗೆ ಮತ್ತೆ ಜಗಳವಾಗಬಹುದೆಂಬ ಭಯದಲ್ಲಿ ಟೆಕ್ಕಿಯೊಬ್ಬರು 21ನೇ ಮಹಡಿಯ ಬಾಲ್ಕನಿಯಿಂದ ಕೆಳಗಿಳಿಯಲು ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಹರ್ಷಿತ್ ಲವಾನಿಯಾ ಎಂಬುವವರು ದಾಂಪತ್ಯ ಕಲಹದಿಂದ ಆರು ತಿಂಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪತ್ನಿ ಬಂದಾಗ ಮುಖಾಮುಖಿಯಾಗುವುದನ್ನು ತಪ್ಪಿಸಲು ಈ ದುಡುಕು ನಿರ್ಧಾರ ತೆಗೆದುಕೊಂಡಿದ್ದು, ದುರಂತ ಸಾವನ್ನಪ್ಪಿದ್ದಾರೆ. ಮಾನಸಿಕ ಒತ್ತಡ, ಅಪಾರ್ಟ್‌ಮೆಂಟ್‌ಗಳಲ್ಲಿ ಬಾಲ್ಕನಿ ಸುರಕ್ಷತೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಪತ್ನಿಯೊಂದಿಗೆ ಮತ್ತೆ ಜಗಳವಾಗಬಹುದು ಎಂಬ ಭಯದಲ್ಲಿ ಬಾಲ್ಕನಿಯಿಂದ ಇಳಿಯಲು ಹೋಗಿ ಕಾಲು ಜಾರಿ ಬಿದ್ದು ಟೆಕ್ಕಿ ಸಾವು
ಅಪಾರ್ಟ್​ಮೆಂಟ್ Image Credit source: NDTV
ನಯನಾ ರಾಜೀವ್
|

Updated on: Oct 15, 2026 | 8:51 AM

Share

ಗ್ರೇಟರ್ ನೋಯ್ಡಾ, ಅಕ್ಟೋಬರ್ 15: ಪತ್ನಿಯೊಂದಿಗೆ ಮತ್ತೆ ಜಗಳವಾಗಬಹುದೆಂಬ ಭೀತಿಯಿಂದ ಬಾಲ್ಕನಿಯಿಂದ ಕೆಳಗೆ ಇಳಿಯಲು ಹೋಗಿ ಟೆಕ್ಕಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಗ್ರೇಟರ್ ನೋಯ್ಡಾದ ವೆಸ್ಟ್ ವ್ಯಾಪ್ತಿಯ ಸೆಂಚುರಿಯನ್ ಪಾರ್ಕ್ ಟ್ರಾಪಿಕಲ್ ಗಾರ್ಡನ್ ಸೊಸೈಟಿಯಲ್ಲಿ ಈ ಘಟನೆ ಸಂಭವಿಸಿದೆ.

ಮೃತನನ್ನು ಹರ್ಷಿತ್ ಲವಾನಿಯಾ ಎಂದು ಗುರುತಿಸಲಾಗಿದೆ, ಆರು ತಿಂಗಳಿನಿಂದ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಹರ್ಷಿತ್, ಆಕೆ ಏಕಾಏಕಿ ಮನೆಬಾಗಿಲಿಗೆ ಬಂದಾಗ ಮುಖಾಮುಖಿಯಾಗುವುದನ್ನು ತಪ್ಪಿಸಲು ಬಾಲ್ಕನಿಯ ಮೂಲಕ ಕೆಳಮಹಡಿಗೆ ಜಿಗಿಯಲು ಹೋಗಿ ಕಾಲು ಜಾರಿ ನೆಲಕ್ಕೆ ಬಿದ್ದಿದ್ದಾರೆ. ಹರ್ಷಿತ್ ಲವಾನಿಯಾ ಅವರಿಗೆ 2024 ರಲ್ಲಿ ವಿವಾಹವಾಗಿತ್ತು. ದಾಂಪತ್ಯ ಕಲಹದ ಕಾರಣ ಕಳೆದ ಆರು ತಿಂಗಳಿಂದ ಪತಿಯಿಂದ ದೂರವಿದ್ದ ಹರ್ಷಿತ್, ಸೆಂಚುರಿಯನ್ ಪಾರ್ಕ್ ಸೊಸೈಟಿಯ 21ನೇ ಮಹಡಿಯ ಬಾಡಿಗೆ ಫ್ಲಾಟ್‌ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು.

ಘಟನೆ ನಡೆದ ದಿನ ಹರ್ಷಿತ್ ಅವರ ಪತ್ನಿ ಮಾತನಾಡಲು ಅವರ ಫ್ಲಾಟ್‌ಗೆ ಬಂದಿದ್ದಾರೆ. ಹೊರಗಡೆಯಿಂದ ಬಾಗಿಲು ತಟ್ಟಿ ಮಾತನಾಡಲು ಕರೆದಾಗ, ಮತ್ತೆ ವಾಗ್ವಾದ ನಡೆಯಬಹುದೆಂದು ಹೆದರಿದ ಹರ್ಷಿತ್ ಬಾಗಿಲು ತೆರೆಯಲು ನಿರಾಕರಿಸಿದ್ದಾರೆ. ಪತಿ ಬಾಗಿಲು ತೆರೆಯದಿದ್ದಾಗ ಆಕೆ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿಯನ್ನು ಕರೆದು ಬಾಗಿಲು ತೆರೆಸಲು ಮುಂದಾಗಿದ್ದಾಳೆ. ಸಿಬ್ಬಂದಿ ಬರುವುದನ್ನು ಕಂಡ ಹರ್ಷಿತ್ ಆತಂಕಗೊಂಡು, ಬಾಲ್ಕನಿಯ ರೇಲಿಂಗ್ ಹಿಡಿದು 20ನೇ ಮಹಡಿಯ ಬಾಲ್ಕನಿಗೆ ಇಳಿಯಲು ಪ್ರಯತ್ನಿಸಿದ್ದಾರೆ.

ಮತ್ತಷ್ಟು ಓದಿ: “ನನಗೆ ಕೆಲಸ ತೊರೆಯುವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ”: ಇದು ನನ್ನ ಜೀವನದ ಕಹಿ ಕ್ಷಣ ಎಂದ ಬೆಂಗಳೂರಿನ ಯುವಕ

ಜಾರಿಬಿದ್ದು ಸಾವು: ಸಮತೋಲನ ತಪ್ಪಿ 21ನೇ ಮಹಡಿಯಿಂದ ಕೆಳಗೆ ಬಿದ್ದ ಹರ್ಷಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೊಸೈಟಿಯ ನಿವಾಸಿಗಳು ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ದರಾದರೂ, ಪರೀಕ್ಷಿಸಿದ ವೈದ್ಯರು ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಪತ್ನಿಯೊಂದಿಗಿನ ನಿರಂತರ ಜಗಳ ಹಾಗೂ ಕೌಟುಂಬಿಕ ಕಲಹದಿಂದ ಹರ್ಷಿತ್ ತೀವ್ರ ಮಾನಸಿಕ ಖಿನ್ನತೆ ಮತ್ತು ಒತ್ತಡಕ್ಕೆ ಒಳಗಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಅಧಿಕೃತ ಲಿಖಿತ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಪಾರ್ಟ್‌ಮೆಂಟ್ ಕಾರಿಡಾರ್ ಮತ್ತು ಲಿಫ್ಟ್ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಹರ್ಷಿತ್ ಪತ್ನಿ ಹಾಗೂ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಬಹುಮಹಡಿ ಕಟ್ಟಡಗಳಲ್ಲಿನ ಬಾಲ್ಕನಿ ಸುರಕ್ಷತೆ: ಮಹಾನಗರಗಳ ಹೈ-ರೈಸ್ ಅಪಾರ್ಟ್‌ಮೆಂಟ್‌ಗಳಲ್ಲಿ ಬಾಲ್ಕನಿಗಳಿಂದ ಆಕಸ್ಮಿಕವಾಗಿ ಬೀಳುವ ಪ್ರಕರಣಗಳು ಹೆಚ್ಚುತ್ತಿದ್ದು, ಸುರಕ್ಷತಾ ಗ್ರಿಲ್‌ಗಳು ಮತ್ತು ನೆಟ್‌ಗಳ ಅಳವಡಿಕೆ ಕಡ್ಡಾಯಗೊಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಪ್ರತ್ಯೇಕವಾಗಿ ವಾಸಿಸುವ ದಂಪತಿಗಳ ನಡುವೆ ಪರಸ್ಪರ ಮಾತುಕತೆಗೆ ಸೂಕ್ತ ಆಪ್ತಸಮಾಲೋಚನೆ ಅಥವಾ ಮಧ್ಯಸ್ಥಿಕೆದಾರರ ಕೊರತೆಯಿರುವುದು ಇಂತಹ ಹಠಾತ್ ಹಾಗೂ ಅವಿವೇಕದ ದುಡುಕು ನಿರ್ಧಾರಗಳಿಗೆ ಕಾರಣವಾಗುತ್ತಿದೆ ಎಂದು ಮಾನಸಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ