AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇ. 65ರಷ್ಟು ವೇಗವಾಗಿ ಕರಗುತ್ತಿವೆ ಹಿಮನದಿಗಳು; ವಿಜ್ಞಾನಿಗಳು ನೀಡಿದ ಎಚ್ಚರಿಕೆಯೇನು?

ಹಿಮಾಲಯ ಪರ್ವತ ಶ್ರೇಣಿಗಳಲ್ಲಿನ ಹಿಮಬಂಡೆ ಮತ್ತು ಹಿಮನದಿಗಳು ಹಿಂದೆಂದಿಗಿಂತಲೂ ವೇಗದಲ್ಲಿ ಕರಗುತ್ತಿದ್ದು, ಪರಿಸರ ವಿಜ್ಞಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ, ಹಿಮಾಲಯದ ಹಿಮನದಿಗಳು ಹಿಂದಿನ ದಶಕಗಳಿಗೆ ಹೋಲಿಸಿದರೆ ಶೇ. 65ರಷ್ಟು ಹೆಚ್ಚು ವೇಗವಾಗಿ ಕರಗುತ್ತಿದ್ದು, ಈ ಅಪಾಯಕಾರಿ ವಿದ್ಯಮಾನಕ್ಕೆ ವಾಯು ಮಾಲಿನ್ಯಕಾರಕ ಕಪ್ಪು ಇಂಗಾಲ ಪ್ರಮುಖ ಕಾರಣ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. 2010ರ ನಂತರದ ಅವಧಿಯಲ್ಲಿ ಹಿಮಕರಗುವಿಕೆಯ ಪ್ರಮಾಣವು ಶೇ. 65ರಷ್ಟು ಹೆಚ್ಚಾಗಿದೆ. ಇದು ಹಿಮಾಲಯದ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಭಾರಿ ಹೊಡೆತ ನೀಡಿದೆ. ಹಿಮಾಲಯದ ಹಿಮನದಿಗಳು ಗಂಗಾ, ಸಿಂಧೂ, ಬ್ರಹ್ಮಪುತ್ರ ಸೇರಿದಂತೆ ಏಷ್ಯಾದ 10 ಪ್ರಮುಖ ನದಿಗಳಿಗೆ ಪ್ರಮುಖ ನೀರಿನ ಮೂಲವಾಗಿವೆ.

ಶೇ. 65ರಷ್ಟು ವೇಗವಾಗಿ ಕರಗುತ್ತಿವೆ ಹಿಮನದಿಗಳು; ವಿಜ್ಞಾನಿಗಳು ನೀಡಿದ ಎಚ್ಚರಿಕೆಯೇನು?
ಹಿಮನದಿImage Credit source: Getty Image
ಸುಷ್ಮಾ ಚಕ್ರೆ
|

Updated on:Sep 15, 2026 | 7:44 PM

Share

ನವದೆಹಲಿ, ಸೆಪ್ಟೆಂಬರ್ 15: ಜಗತ್ತಿನಾದ್ಯಂತ ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹಿಮಾಲಯ ಪರ್ವತ ಶ್ರೇಣಿಗಳ ಹಿಮಬಂಡೆ ಮತ್ತು ಹಿಮನದಿಗಳು ಕೂಡ ಹಿಂದೆಂದಿಗಿಂತಲೂ ಬಹಳ ವೇಗವಾಗಿ ಕರಗುತ್ತಿವೆ. ಇದು ಪರಿಸರ ವಿಜ್ಞಾನಿಗಳಲ್ಲಿ ಬಹಳ ಆತಂಕ ಮೂಡಿಸಿದೆ. ಇದು ಭಾರತೀಯರಿಗೂ ಕೂಡ ಎಚ್ಚರಿಕೆಯ ಗಂಟೆಯಾಗಿದೆ ಎಂದರೆ ತಪ್ಪಾಗಲಾರದು. ಇತ್ತೀಚಿನ ಅಧ್ಯಯನಗಳ ಪ್ರಕಾರ, ಹಿಮಾಲಯದ ಹಿಮನದಿಗಳು ಹಿಂದಿನ ದಶಕಗಳಿಗೆ ಹೋಲಿಸಿದರೆ ಶೇ. 65ರಷ್ಟು ಹೆಚ್ಚು ವೇಗವಾಗಿ ಕರಗುತ್ತಿವೆ. ಈ ಅಪಾಯಕಾರಿ ವಿದ್ಯಮಾನಕ್ಕೆ ವಾಯು ಮಾಲಿನ್ಯಕಾರಕ ‘ಕಪ್ಪು ಇಂಗಾಲ’ (ಬ್ಲಾಕ್ ಕಾರ್ಬನ್) ಪ್ರಮುಖ ಕಾರಣ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಭಾರತದ ಒಟ್ಟು ಭೂಭಾಗದಲ್ಲಿ ಶೇ. 18ರಷ್ಟು ಮಾತ್ರ ಹಿಮಾಲಯನ್ ಪ್ರದೇಶವಿದ್ದರೂ, ದೇಶದ ಶೇ. 35ರಷ್ಟು ನೈಸರ್ಗಿಕ ವಿಕೋಪಗಳು ಇಲ್ಲಿಯೇ ಸಂಭವಿಸುತ್ತವೆ. ಇದು ದೇಶದ ಜಿಡಿಪಿಗೆ ಶೇ. 20ಕ್ಕೂ ಹೆಚ್ಚು ಕೊಡುಗೆ ನೀಡುತ್ತದೆ. ಈ ಹಿಮನದಿಯ ಕರಗುವಿಕೆಗೆ ಸುಮಾರು ಮೂರನೇ ಒಂದು ಭಾಗದಷ್ಟು ಕಪ್ಪು ಇಂಗಾಲವೇ ನೇರ ಕಾರಣ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಈ ಶತಮಾನದ ಮಧ್ಯಭಾಗದ ವೇಳೆಗೆ ಹಿಮಾಲಯದ ಹೆಚ್ಚಿನ ನದಿಗಳು ತಮ್ಮ ಗರಿಷ್ಠ ನೀರಿನ ಹರಿವಿನ ಮಟ್ಟವನ್ನು ತಲುಪಲಿವೆ. ತದನಂತರ ಹಿಮನದಿಗಳ ಪ್ರಮಾಣ ಕುಸಿಯುತ್ತಿದ್ದಂತೆ ನದಿಗಳಲ್ಲಿ ನೀರಿನ ಹರಿವು ತೀವ್ರವಾಗಿ ಕ್ಷೀಣಿಸಲಿದೆ ಎಂದು ಹೇಳಿದೆ.

ಗಂಗಾ, ಯಮುನಾ, ಸಿಂಧೂ ಮತ್ತು ಬ್ರಹ್ಮಪುತ್ರ ಸೇರಿದಂತೆ ದೇಶದ ಪ್ರಮುಖ ಜೀವನದಿಗಳು ಹಿಮಾಲಯದ ಹಿಮನದಿಗಳನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿವೆ. ಪ್ರಸ್ತುತ ಹಿಮವು ವೇಗವಾಗಿ ಕರಗುತ್ತಿರುವುದರಿಂದ ನದಿಗಳಲ್ಲಿ ತಾತ್ಕಾಲಿಕವಾಗಿ ನೀರಿನ ಹರಿವು ಹೆಚ್ಚಾಗಬಹುದು, ಆದರೆ ದೀರ್ಘಕಾಲೀನವಾಗಿ ಹಿಮನದಿಗಳು ಕರಗಿದಂತೆ ನದಿ ಮೂಲಗಳು ಒಣಗಿ ಭಾರಿ ಜಲಕ್ಷಾಮ ಸೃಷ್ಟಿಯಾಗಲಿದೆ.

ಇದನ್ನೂ ಓದಿ: ಹಿಮಾಲಯದ ಉಳಿವಿಗಾಗಿ 5 ದೇಶಗಳ ಒಕ್ಕೂಟ ರಚನೆಗೆ ಸದ್ಗುರು ಕರೆ: ನೇಪಾಳ ಪ್ರಧಾನಿ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ

ಭಾರತೀಯರಿಗೆ ಎಚ್ಚರಿಕೆ ಗಂಟೆ:

ಗ್ಲೋಬಲ್ ಕನ್ಸಲ್ಟೆನ್ಸಿ ‘ಸಿಸ್ಟಮಿಕ್’ ಸಂಸ್ಥೆಯು ‘ಇಂಟಿಗ್ರೇಟೆಡ್ ಮೌಂಟೇನ್ ಇನಿಶಿಯೇಟಿವ್’, ICIMOD ಮತ್ತು ‘ಜಿಬಿ ಪಂತ್ ರಾಷ್ಟ್ರೀಯ ಹಿಮಾಲಯನ್ ಪರಿಸರ ಸಂಸ್ಥೆ’ಯ ಸಹಯೋಗದೊಂದಿಗೆ ನಡೆಸಿದ ಅಧ್ಯಯನದ ಪ್ರಕಾರ, ಪ್ರಸ್ತುತ ಪರಿಸ್ಥಿತಿ ಹೀಗೆಯೇ ಮುಂದುವರಿದರೆ 2100ರ ವೇಳೆಗೆ ಹಿಂದು ಕುಶ್ ಹಿಮಾಲಯದ ಶೇ. 80ರಷ್ಟು ಹಿಮನದಿಗಳು ಸಂಪೂರ್ಣವಾಗಿ ನಾಶವಾಗಲಿವೆ.

ನೇಪಾಳದಲ್ಲಿ ಇತ್ತೀಚೆಗೆ ಹಿಮನದಿ ಕುಸಿದು ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ 1,350ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ನೂರಾರು ಜನರು ನಾಪತ್ತೆಯಾಗಿದ್ದಾರೆ. ಈ ದುರಂತದ ಬೆನ್ನಲ್ಲೇ ಈ ವರದಿ ಬಂದಿದೆ. ಹಿಂದು ಕುಶ್ ಹಿಮಾಲಯ ವಲಯದಲ್ಲಿ ಅಂದಾಜು 40,000 ಹಿಮನದಿಗಳಿದ್ದು, ಅವುಗಳಲ್ಲಿ ಕೇವಲ 21 ಹಿಮನದಿಗಳನ್ನು ಮಾತ್ರ ತಾಂತ್ರಿಕವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ವರದಿ ಎಚ್ಚರಿಸಿದೆ.

ಕಪ್ಪು ಇಂಗಾಲದಿಂದ ಅಪಾಯವೇಕೆ?:

ಕಪ್ಪು ಇಂಗಾಲವೆಂಬುದು ಕಾಡಿನ ಕಾಡ್ಗಿಚ್ಚು, ಸೌದೆ-ಬಯೋಮಾಸ್ ಉರಿಯುವಿಕೆ, ಡೀಸೆಲ್ ವಾಹನಗಳ ಹೊಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಕೈಗಾರಿಕಾ ಮಾಲಿನ್ಯದಿಂದ ಹೊರಸೂಸುವ ಕಪ್ಪು ಇಂಗಾಲದ ಕಣಗಳಿಂದ ಉತ್ಪಾದನೆಯಾಗುತ್ತದೆ. ಇದು ಗಾಳಿಯಲ್ಲಿ ತೇಲಿ ಬಂದು ಬಿಳಿ ಹಿಮದ ಮೇಲೆ ಶೇಖರವಾಗುತ್ತಿದೆ. ಕಪ್ಪು ಬಣ್ಣವು ಸೂರ್ಯನ ಶಾಖವನ್ನು ಹೆಚ್ಚು ಹೀರಿಕೊಳ್ಳುವುದರಿಂದ ಹಿಮನದಿಯ ಮೇಲ್ಮೈ ಬಿಸಿಯಾಗಿ ಬಹಳ ವೇಗವಾಗಿ ಕರಗುತ್ತಿದೆ.

ಇಟ್ಟಿಗೆ ಭಟ್ಟಿಗಳು, ಡೀಸೆಲ್ ವಾಹನಗಳು ಮತ್ತು ಕಾಡ್ಗಿಚ್ಚಿನಿಂದ ಹೊರಸೂಸುವ ಕಪ್ಪು ಇಂಗಾಲವು ಗಾಳಿಯಲ್ಲಿ ಹಾರಿ ಹಿಮನದಿಗಳ ಮೇಲೆ ಸಾಂದ್ರೀಕೃತಗೊಳ್ಳುತ್ತಿದೆ. ಹಿಮದ ಮೇಲೆ ಬೀಳುವ ಈ ಕಪ್ಪು ಮಸಿಯು ಸೂರ್ಯನ ಶಾಖವನ್ನು ಹೆಚ್ಚು ಹೀರಿಕೊಳ್ಳುವುದರಿಂದ ಹಿಮವು ಶೀಘ್ರವಾಗಿ ಕರಗುತ್ತಿದೆ. ಹಿಮನದಿಗಳ ಕರಗುವಿಕೆಯಲ್ಲಿ ಮೂರನೇ ಒಂದು ಭಾಗದಷ್ಟು ಹಾನಿ ಕಪ್ಪು ಇಂಗಾಲದಿಂದಲೇ ಆಗುತ್ತಿದ್ದು, ಇದನ್ನು ತಕ್ಷಣವೇ ನಿಯಂತ್ರಿಸಬಹುದು ಎಂದು ವರದಿ ಹೇಳಿದೆ.

ಶೇ. 65ರಷ್ಟು ವೇಗವಾಗಿ ಕರಗುವಿಕೆ:

ಉಪಗ್ರಹ ಡೇಟಾ ಹಾಗೂ ಉಪಕರಣ ತಪಾಸಣೆಗಳ ಪ್ರಕಾರ, 2010ರ ನಂತರದ ಅವಧಿಯಲ್ಲಿ ಹಿಮಕರಗುವಿಕೆಯ ಪ್ರಮಾಣವು ಶೇ. 65ರಷ್ಟು ಹೆಚ್ಚಾಗಿದೆ. ಇದು ಹಿಮಾಲಯದ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಭಾರಿ ಹೊಡೆತ ನೀಡಿದೆ.

ಇದನ್ನೂ ಓದಿ: ವೇಗವಾಗಿ ಕರಗುತ್ತಿರುವ ಹಿಮಾಲಯ ನೀಡುತ್ತಿದೆ ಗಂಭೀರ ಎಚ್ಚರಿಕೆ: ನೇಪಾಳದಲ್ಲಿ ಬಾಂಬ್​​ನಂತೆ ಅಪ್ಪಳಿಸಿದ ಹಿಮದ ತುಂಡುಗಳು

ಹೆಚ್ಚುತ್ತಿದೆ ಜಲ ಬಿಕ್ಕಟ್ಟು:

ಹಿಮಾಲಯದ ಹಿಮನದಿಗಳು ಗಂಗಾ, ಸಿಂಧೂ, ಬ್ರಹ್ಮಪುತ್ರ ಸೇರಿದಂತೆ ಏಷ್ಯಾದ 10 ಪ್ರಮುಖ ನದಿಗಳಿಗೆ ಪ್ರಮುಖ ನೀರಿನ ಮೂಲವಾಗಿವೆ. ಈ ಹಿಮನದಿಗಳು ಶೀಘ್ರವಾಗಿ ಕ್ಷೀಣಿಸಿದರೆ, ಮುಂದಿನ ದಿನಗಳಲ್ಲಿ ಕೋಟ್ಯಂತರ ಜನರಿಗೆ ಕುಡಿಯುವ ನೀರು ಮತ್ತು ಕೃಷಿಗೆ ನೀರಿನ ಕೊರತೆ ಎದುರಾಗಲಿದೆ.

ಹಿಮಸ್ಫೋಟದ ಭೀತಿ:

ಹಿಮನದಿಗಳು ವೇಗವಾಗಿ ಕರಗುವುದರಿಂದ ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ತಾತ್ಕಾಲಿಕ ಹಿಮ ಸರೋವರಗಳು ನಿರ್ಮಾಣಗೊಳ್ಳುತ್ತಿದ್ದು, ಅವು ಸ್ಫೋಟಗೊಂಡು ಭೀಕರ ಪ್ರವಾಹ ಮತ್ತು ಭೂಕುಸಿತದ ಅಪಾಯ ಹೆಚ್ಚಾಗಿದೆ. ಪರಿಸರ ತಜ್ಞರು ಕಪ್ಪು ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸಲು ತಕ್ಷಣದ ಜಾಗತಿಕ ಹಾಗೂ ಪ್ರಾದೇಶಿಕ ಹವಾಮಾನ ನೀತಿಗಳನ್ನು ಬಿಗಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಭಾರತದ ‘ಆಹಾರದ ಕಣಜ’ ಎಂದೇ ಕರೆಯಲ್ಪಡುವ ಉತ್ತರ ಭಾರತದ ಗಂಗಾ ಬಯಲು ಸೀಮೆಯ ಕೋಟ್ಯಂತರ ಹೆಕ್ಟೇರ್ ಕೃಷಿ ಭೂಮಿಯು ಈ ನದಿಗಳ ನೀರನ್ನೇ ಅವಲಂಬಿಸಿದೆ. ನದಿಗಳ ಹರಿವು ಕಡಿಮೆಯಾದರೆ ಕೃಷಿ ಉತ್ಪಾದನೆ ಕುಸಿದು, ಜಲಕ್ಷಾಮದ ಜೊತೆಗೆ ದೇಶದಲ್ಲಿ ಆಹಾರ ಬಿಕ್ಕಟ್ಟು ಎದುರಾಗುವ ಅಪಾಯವಿದೆ. ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಭಾರತದ ಶೇ. 40ಕ್ಕೂ ಹೆಚ್ಚು ಜನಸಂಖ್ಯೆಗೆ ಕುಡಿಯುವ ನೀರಿನ ಅಭಾವ ತೀವ್ರವಾಗಿ ಎದುರಾಗಲಿದೆ.

ಹಿಮನದಿಯ ಉಳಿವಿಗೆ ವರದಿಯ ಪ್ರಮುಖ ಶಿಫಾರಸುಗಳು:

ಮಸಿ ಮತ್ತು ಮಾಲಿನ್ಯ ತಡೆ: ಹಿಮನದಿಗಳ ಪ್ರದೇಶಕ್ಕೆ ವ್ಯಾಪಿಸುವ ಕಪ್ಪು ಇಂಗಾಲ ಮತ್ತು ಮಸಿಯ ಹೊರಸೂಸುವಿಕೆಯನ್ನು ತಕ್ಷಣ ನಿಯಂತ್ರಿಸುವುದು.

ಕಾಡಿನ ನಿರ್ವಹಣೆ: 30 ಲಕ್ಷ ಹೆಕ್ಟೇರ್ ಕಾಡ್ಗಿಚ್ಚು ಪೀಡಿತ ಅರಣ್ಯ ಪ್ರದೇಶವನ್ನು ವರ್ಷಪೂರ್ತಿ ಸೂಕ್ತ ನಿರ್ವಹಣೆಗೆ ಒಳಪಡಿಸುವುದು.

ಜಲಮೂಲಗಳ ರಕ್ಷಣೆ: ಕಣ್ಮರೆಯಾಗುತ್ತಿರುವ 30 ಲಕ್ಷ ಹಿಮಾಲಯನ್ ಚಿಲುಮೆಗಳಲ್ಲಿ ಅರ್ಧದಷ್ಟನ್ನು ಮರುಜೀವಗೊಳಿಸುವುದು.

ಪ್ರವಾಸೋದ್ಯಮ ನಿಯಂತ್ರಣ: ಹಿಮಾಲಯನ್ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಮತ್ತು ಹೊರೆ ಹೊರುವ ಸಾಮರ್ಥ್ಯವನ್ನು ಮಿತಿಗೊಳಿಸುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:28 pm, Tue, 15 September 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’