Somayaan to Chandrayaan: ಸೋಮಯಾನ ಎಂಬ ಹೆಸರನ್ನು ಚಂದ್ರಯಾನ ಎಂದು ಬದಲಿಸಿದ್ದು ಅಟಲ್ ಬಿಹಾರಿ ವಾಜಪೇಯಿ; ಇದಕ್ಕೂ ಇದೆ ಕಾರಣ
ದೇಶವು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ಕಾರಣ ಈ ಮಿಷನ್ ಅನ್ನು ಚಂದ್ರಯಾನ ಎಂದು ಕರೆಯಬೇಕು, ಇದು ಚಂದ್ರನಲ್ಲಿ ಅನ್ವೇಷಣೆ ಮಾಡುತ್ತದೆ. ಇದನ್ನು ಸೋಮಯಾನ ಎಂದು ಕರೆಯಬಾರದು ಎಂದು ವಾಜಪೇಯಿ ಹೇಳಿದ್ದರು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಂದಿನ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್ ಹೇಳಿರುವುದಾಗಿ ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ.
ದೆಹಲಿ ಆಗಸ್ಟ್ 23: ಚಂದ್ರಯಾನ-3 (Chandrayaan-3) ಚಂದ್ರನ ಮೇಲ್ಮೈನಲ್ಲಿ ಲ್ಯಾಂಡಿಂಗ್‌ಗೆ ಸಿದ್ಧವಾಗುತ್ತಿದ್ದಂತೆ, ಅದರ ಮೂಲ ಮತ್ತು ನಾಮಕರಣದ ಬಗ್ಗೆ ಇರುವ ಕತೆ ಮತ್ತೆ ಸುದ್ದಿಯಾಗುತ್ತಿದೆ. 1999 ರಲ್ಲಿ, ಚಂದ್ರಯಾನಕ್ಕೆ ಸರ್ಕಾರದ ಅನುಮೋದನೆಯ ಸಮಯದಲ್ಲಿ, ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರು ಈ ಹೆಸರನ್ನಿಟ್ಟಿದ್ದರು. ಬಾಹ್ಯಾಕಾಶ ವಿಜ್ಞಾನಿಗಳು ಚಂದ್ರನ ಪರಿಶೋಧನೆಯಲ್ಲಿ ತೊಡಗಿಸಿಕೊಳ್ಳುವ ಈ ಯೋಜನೆಗೆ ‘ಸೋಮಯಾನ’ (Somayaan) ಎಂದು ಹೆಸರಿಡಲಾಗಿತ್ತು. ನಂತರ ವಾಜಪೇಯಿ ಸೋಮಯಾನ ಎಂಬುದರ ಬದಲು ‘ಚಂದ್ರಯಾನ’ ಎಂದು ಹೆಸರು ಬದಲಾಯಿಸಿದರು.
ನಾಮಕರಣದಲ್ಲಿನ ಈ ಬದಲಾವಣೆಯು ಬಾರೀ ಗಮನ ಸೆಳೆಯಿತು. ಏಕೆಂದರೆ ಅವರ ಆರಂಭಿಕ ಆದ್ಯತೆಯಾದ ‘ಸೋಮಯಾನ’ ಸಂಸ್ಕೃತ ಶ್ಲೋಕದಿಂದ ಪ್ರಭಾವಿತವಾಗಿದೆ: “ಓ ಚಂದ್ರನೇ! ನಾವು ನಿನ್ನನ್ನು ನಮ್ಮ ಬುದ್ಧಿಯ ಮೂಲಕ ಗ್ರಹಿಸೋಣ. ನಮ್ಮ ಮಾರ್ಗವನ್ನು ಬುದ್ಧಿವಂತಿಕೆಯಿಂದ ಬೆಳಗಿಸೋಣ ಎಂದು ಈ ಶ್ಲೋಕ ಹೇಳುತ್ತದೆ.
ದೇಶವು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ಕಾರಣ ಈ ಮಿಷನ್ ಅನ್ನು ಚಂದ್ರಯಾನ ಎಂದು ಕರೆಯಬೇಕು, ಇದು ಚಂದ್ರನಲ್ಲಿ ಅನ್ವೇಷಣೆ ಮಾಡುತ್ತದೆ. ಇದನ್ನು ಸೋಮಯಾನ ಎಂದು ಕರೆಯಬಾರದು ಎಂದು ವಾಜಪೇಯಿ ಹೇಳಿದ್ದರು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಂದಿನ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್ ಹೇಳಿರುವುದಾಗಿ ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ.
ಪೋಖ್ರಾನ್ II ರ ಮೊದಲ ವಾರ್ಷಿಕೋತ್ಸವದ ಸ್ಮರಣಾರ್ಥ ಪ್ರಸ್ತುತಿಗಳಿಗಾಗಿ ಮೇ 1999 ರಲ್ಲಿ ನವದೆಹಲಿಗೆ ಆಹ್ವಾನಿಸಲಾದ ಪ್ರಮುಖ ಅತಿಥಿಗಳಲ್ಲಿ ಕಸ್ತೂರಿರಂಗನ್ ಕೂಡ ಒಬ್ಬರು. ಸುದ್ದಿ ವೆಬ್‌ಸೈಟ್‌ನೊಂದಿಗೆ ಮಾತನಾಡಿದ ಅವರು, “ಮಿಷನ್‌ನ ಯೋಜನೆಯು ನಾಲ್ಕು ವರ್ಷಗಳವರೆಗೆ ವ್ಯಾಪಿಸಿದೆ, ನಂತರ ಅದರ ಕಾರ್ಯಗತಗೊಳಿಸಲು ಹೆಚ್ಚುವರಿ ನಾಲ್ಕು ವರ್ಷಗಳು ಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಚಂದ್ರಯಾನ-3ಗೆ ಯುವ ವಿಜ್ಞಾನಿಯಿಂದ ಮಹತ್ತರ ಕೊಡುಗೆ, ಬೆಳಗಾವಿಯಲ್ಲಿ ಸಿದ್ದವಾಗಿವೆ ರಾಕೆಟ್ನ ಬಿಡಿಭಾಗಗಳು
2003 ರಲ್ಲಿ ಭಾರತದ 56 ನೇ ಸ್ವಾತಂತ್ರ್ಯ ದಿನದಂದು ಐತಿಹಾಸಿಕ ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ವಾಜಪೇಯಿ ಅವರು ಭಾರತದ ಚೊಚ್ಚಲ ಚಂದ್ರನ ಪರಿಶೋಧನಾ ಪ್ರಯತ್ನ – ಚಂದ್ರಯಾನ 1 ಅನ್ನು ಪರಿಚಯಿಸಿದರು.
ನಮ್ಮ ದೇಶ ಈಗ ವಿಜ್ಞಾನ ಕ್ಷೇತ್ರದಲ್ಲಿ ಎತ್ತರಕ್ಕೆ ಹಾರಲು ಸಿದ್ಧವಾಗಿದೆ. ಭಾರತವು 2008 ರ ವೇಳೆಗೆ ತನ್ನ ಬಾಹ್ಯಾಕಾಶ ನೌಕೆಯನ್ನು ಚಂದ್ರನತ್ತ ಕಳುಹಿಸಲಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಅದಕ್ಕೆ ಚಂದ್ರಯಾನ ಎಂದು ಹೆಸರಿಸಲಾಗುತ್ತಿದೆ. ಚಂದ್ರಯಾನ-3 ಇಂದು ಆಗಸ್ಟ್ 23, 2023 ರಂದು ಚಂದ್ರನ ಮೇಲೆ ಇಳಿಯಲು ಸಿದ್ಧವಾಗಿದೆ. ಮಿಷನ್ ಯಶಸ್ವಿಯಾದರೆ, ಭಾರತ ಚಂದ್ರನ ಮೇಲೆ ಇಳಿದ ಚೀನಾ, ಯುನೈಟೆಡ್ ಸ್ಟೇಟ್ಸ್ ಮತ್ತು ರಷ್ಯಾ (ಮಾಜಿ ಸೋವಿಯತ್ ಒಕ್ಕೂಟ) ದೇಶಗಳ ಪಟ್ಟಿಗೆ ಸೇರ್ಪಡೆ ಆಗಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ