AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಟ್ಟ ನೆರೆಹೊರೆಯವರಿಂದ ಭಾರತಕ್ಕೆ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕಿದೆ; ಭಯೋತ್ಪಾದನೆ ವಿರುದ್ಧ ಜೈಶಂಕರ್ ಎಚ್ಚರಿಕೆ

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇಂದು ಭಯೋತ್ಪಾದನೆಯ ವಿರುದ್ಧ ಬಲವಾದ ಸಂದೇಶವನ್ನು ನೀಡಿದ್ದು, ಒಂದು ಕಡೆ ಭಾರತದಿಂದ ಸಹಕಾರವನ್ನು ಬಯಸುವ ಮತ್ತೊಂದು ಕಡೆ ಭಯೋತ್ಪಾದನೆಯನ್ನು ಬೆಂಬಲಿಸುವ ನೆರೆಹೊರೆಯವರ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಎಲ್ಲ ಹಕ್ಕು ಭಾರತಕ್ಕಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನವನ್ನು ಉಲ್ಲೇಖಿಸಿದ ಅವರು, ಉತ್ತಮ ನೆರೆಹೊರೆಯ ಸಂಬಂಧಗಳು ನಿರಂತರ ಭಯೋತ್ಪಾದನಾ ಕೃತ್ಯಗಳೊಂದಿಗೆ ಸಹಬಾಳ್ವೆ ನಡೆಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದ್ದಾರೆ.

ಕೆಟ್ಟ ನೆರೆಹೊರೆಯವರಿಂದ ಭಾರತಕ್ಕೆ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕಿದೆ; ಭಯೋತ್ಪಾದನೆ ವಿರುದ್ಧ ಜೈಶಂಕರ್ ಎಚ್ಚರಿಕೆ
S Jaishankar
ಸುಷ್ಮಾ ಚಕ್ರೆ
|

Updated on: Jan 02, 2026 | 3:54 PM

Share

ಚೆನ್ನೈ, ಜನವರಿ 2: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಇಂದು (ಶುಕ್ರವಾರ) ಪಾಕಿಸ್ತಾನದ ಮೇಲೆ ತೀಕ್ಷ್ಣವಾದ ದಾಳಿ ನಡೆಸಿದರು. ಭಯೋತ್ಪಾದನೆಯನ್ನು ಬೆಂಬಲಿಸುವುದನ್ನು ಮುಂದುವರಿಸುವ “ಕೆಟ್ಟ ನೆರೆಹೊರೆಯವರು” ಎಂದು ಪಾಕಿಸ್ತಾನವನ್ನು ಟೀಕಿಸಿದ್ದಾರೆ. ಅಂತಹ ಬೆದರಿಕೆಗಳ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಎಲ್ಲಾ ಹಕ್ಕನ್ನು ಭಾರತ ಹೊಂದಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಐಐಟಿ ಮದ್ರಾಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಎಸ್. ಜೈಶಂಕರ್, ಭಾರತವು ತನ್ನ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಭಯೋತ್ಪಾದನೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ಹೊರಗಿನ ದೇಶದ ಸಲಹೆಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅಂತ್ಯಕ್ರಿಯೆ; ಕುಟುಂಬಕ್ಕೆ ಪ್ರಧಾನಿ ಮೋದಿಯ ಪತ್ರ ನೀಡಿದ ಸಚಿವ ಜೈಶಂಕರ್

“ಭಯೋತ್ಪಾದನೆಯನ್ನು ಮುಂದುವರಿಸುವ ಕೆಟ್ಟ ನೆರೆಹೊರೆಯವರ ವಿಷಯಕ್ಕೆ ಬಂದಾಗ ಭಾರತವು ತನ್ನ ಜನರನ್ನು ರಕ್ಷಿಸುವ ಎಲ್ಲಾ ಹಕ್ಕನ್ನು ಹೊಂದಿದೆ ಮತ್ತು ಅಗತ್ಯವಿರುವ ಎಲ್ಲವನ್ನೂ ಮಾಡುತ್ತದೆ. ನಮ್ಮ ನೀರನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಮತ್ತು ನಮ್ಮ ದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

ಅಗತ್ಯದ ಸಮಯದಲ್ಲಿ ಭಾರತವು ತನ್ನ ನೆರೆಹೊರೆಯವರನ್ನು ನಿರಂತರವಾಗಿ ಬೆಂಬಲಿಸಿದೆ. ಆದರೆ, ನೆರೆಹೊರೆಯ ಬಗ್ಗೆ ನಮ್ಮ ವಿಧಾನವು ಸಾಮಾನ್ಯ ಜ್ಞಾನದಿಂದ ಮಾರ್ಗದರ್ಶಿಸಲ್ಪಡುತ್ತದೆ. ಉತ್ತಮ ನೆರೆಹೊರೆಯವರೊಂದಿಗೆ ಭಾರತವು COVID ಸಮಯದಲ್ಲಿ ಲಸಿಕೆಗಳು, ಉಕ್ರೇನ್ ಸಂಘರ್ಷದ ಸಮಯದಲ್ಲಿ ಇಂಧನ ಮತ್ತು ಆಹಾರ ಬೆಂಬಲ ಅಥವಾ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ 4 ಬಿಲಿಯನ್ ಡಾಲರ್ ಸಹಾಯವನ್ನು ಮಾಡಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಭಯೋತ್ಪಾದನೆ ಬಗ್ಗೆ ಸಮರ್ಥನೆಗೆ ಅವಕಾಶವೇ ಇಲ್ಲ; SCO ಶೃಂಗಸಭೆಯಲ್ಲಿ ಸಚಿವ ಜೈಶಂಕರ್ ಸಂದೇಶ

ಏಪ್ರಿಲ್ 2025ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಹಲವಾರು ಪ್ರವಾಸಿಗರನ್ನು ಕೊಂದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಮತ್ತಷ್ಟು ಹದಗೆಟ್ಟವು. ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಶಿಕ್ಷಾರ್ಹ ಕ್ರಮಗಳನ್ನು ಘೋಷಿಸಿತು, ಇದರ ಬಳಿಕ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಗಿಲ್ಲಿ ನಟ ಬರೆದು ಹಾಡಿದ ರ್ಯಾಪ್ ಸಾಂಗ್ ಪೂರ್ಣ ವಿಡಿಯೋ ಇಲ್ಲಿದೆ
ಗಿಲ್ಲಿ ನಟ ಬರೆದು ಹಾಡಿದ ರ್ಯಾಪ್ ಸಾಂಗ್ ಪೂರ್ಣ ವಿಡಿಯೋ ಇಲ್ಲಿದೆ