AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಸಾರ್ವಜನಿಕ ಸೇವೆಗೆ 25ರ ಮೈಲಿಗಲ್ಲು: ಸೆ.17 ರಿಂದ ಅ.17ರವರೆಗೆ ‘ಸೇವಾ ಸಂಕಲ್ಪ’ ಅಭಿಯಾನ

ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ರಾಜಕೀಯ ಜೀವನದ ಅಂಗವಾಗಿ, ಎನ್​​ಡಿಎ ಮೈತ್ರಿಕೂಟ ಸೆ.17ರಿಂದ ಒಂದು ತಿಂಗಳ 'ಸೇವಾ ಸಂಕಲ್ಪ' ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದಡಿ ದೇಶಾದ್ಯಂತ ಸರ್ಕಾರಿ ಯೋಜನೆಗಳ ಜಾಗೃತಿ, ರಕ್ತದಾನ, ಸ್ವಚ್ಛತೆ, ಸಂವಾದ, ಯಾತ್ರೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಬಗ್ಗೆ ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಸಾರ್ವಜನಿಕ ಸೇವೆಗೆ 25ರ ಮೈಲಿಗಲ್ಲು: ಸೆ.17 ರಿಂದ ಅ.17ರವರೆಗೆ 'ಸೇವಾ ಸಂಕಲ್ಪ' ಅಭಿಯಾನ
Amit Shah
ರಮೇಶ್ ಬಿ. ಜವಳಗೇರಾ
|

Updated on:Sep 13, 2026 | 7:01 PM

Share

ನವದೆಹಲಿ, (ಸೆಪ್ಟೆಂಬರ್ 13): ಪ್ರಧಾನಿ ಮೋದಿ ಅವರು ರಾಜಕೀಯ ಜೀವನಕ್ಕೆ ಕಾಲಿಟ್ಟು 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅವರ ಜನ್ಮ ದಿನವಾದ ಸೆ.17ರಿಂದ ಒಂದು ತಿಂಗಳ ಅಂದರೆ ಅಕ್ಟೋಬರ್ 17ರವರೆಗೆ ‘ಸೇವಾ ಸಂಕಲ್ಪ’ ಅಭಿಯಾನ ಆರಂಭಿಸಲು ಎನ್​​ಡಿಎ ಮೈತ್ರಿಕೂಟ ನಿರ್ಧರಿಸಿದೆ. ಈ ಅವಧಿಯಲ್ಲಿ ಸರ್ಕಾರಿ ಯೋಜನೆಗಳ ಕುರಿತು ಜಾಗೃತಿ, ರಕ್ತದಾನ, ಸ್ವಚ್ಛತಾ ಅಭಿಯಾನ, ಸಂವಾದ ಸೇರಿ ಸರಣಿ ಕಾರ್ಯಕ್ರಮಗಳನ್ನು ದೇಶಾದ್ಯಂತ ಆಯೋಜಿಸಲು ನಿರ್ಧರಿಸಿದ್ದು,  ಮೋದಿ ಸರ್ಕಾರದ 25 ವರ್ಷದ ಜನಸೇವೆಯನ್ನು ಜನರಿಗೆ ತಲುಪಿಸುವ ಉದ್ದೇಶವೇ ‘ಸೇವಾ ಸಂಕಲ್ಪ ಅಭಿಯಾನ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಇಂದು(ಸೆಪ್ಟೆಂಬರ್ 13) ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಕುರಿತು ಮಾಹಿತಿ ನೀಡಿದ್ದಾರೆ. ಸೇವಾ ಸಂಕಲ್ಪ ಅಭಿಯಾನ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 17 ರವರೆಗೆ ನಡೆಯಲಿದೆ. 17ನೇ ತಾರೀಖು ಪ್ರಧಾನಿ ಮೋದಿಯವರ ಜನ್ಮದಿನ. ಹಾಗೇ ಅಕ್ಟೋಬರ್ 7 ರಂದು ಪ್ರಧಾನಿ ಮೋದಿ ಅವರು ರಾಜಕೀಯದಲ್ಲಿ 25 ವರ್ಷಗಳನ್ನು ಪೂರೈಸಲಿದ್ದಾರೆ. ಸತತ 25 ವರ್ಷಗಳ ಕಾಲ ಜನರಿಗೆ ಸೇವೆ ಸಲ್ಲಿಸುವುದು ಒಂದು ದೊಡ್ಡ ಸಾಧನೆ. ಹೀಗಾಗಿ ನಾವೆಲ್ಲರೂ, NDA ಘಟಕ ಪಕ್ಷಗಳು, ಒಂದು ತಿಂಗಳ ಕಾಲ ಸೇವಾ ಸಂಕಲ್ಪ ಅಭಿಯಾನವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ವಿಕಸಿತ ಭಾರತದ ಗುರಿ ತಲುಪಲು 23 ಅಂಶಗಳ ಕಾರ್ಯಯೋಜನೆ; ಕ್ರಮ ಕೈಗೊಳ್ಳಲು ಎಲ್ಲಾ ಸಚಿವಾಲಯಗಳಿಗೆ ನಿರ್ದೇಶನ

ಸೇವಾ ಸಂಕಲ್ಪ ಅಭಿಯಾನವು ಪ್ರತಿ ಜಿಲ್ಲೆ, ಪ್ರತಿ ಲೋಕಸಭಾ ಕ್ಷೇತ್ರ, ಪ್ರತಿ ವಿಧಾನಸಭಾ ಕ್ಷೇತ್ರ ಮತ್ತು ಪ್ರತಿ ಬೂತ್‌ನಲ್ಲಿ ನಡೆಯುತ್ತದೆ. ಪ್ರಧಾನಿ ಮೋದಿ ಪ್ರಧಾನಿಯಾದಾಗಿನಿಂದ ಜನರಿಗೆ ಅನೇಕ ಯೋಜನೆಗಳನ್ಜು ತಂದಿದ್ದಾರೆ. ಸಂವಿಧಾನವು ನೀಡಿದ ಅಧಿಕಾರಗಳನ್ನು ದೇಶಕ್ಕೆ ತರುವ ಮತ್ತು ಅವರನ್ನು ರಕ್ಷಿಸುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಸೇವಾ ಸಂಕಲ್ಪ ಅಭಿಯಾನದ ಮೂಲಕ ನಾವು ಜನರನ್ನು ತಲುಪುತ್ತೇವೆ. 12 ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

12 ವಿವಿಧ ರೀತಿಯ ಕಾರ್ಯಕ್ರಮಗಳು

ಒಂದು ತಿಂಗಳು ನಡೆಯಲಿರುವ ಸೇವಾ ಸಂಕಲ್ಪ ಅಭಿಯಾನದಲ್ಲಿ ಸೇವಾ ದಿವಸ್, ರಕ್ತದಾನ, ನನ್ನ ಕನಸಿನ ಭಾರತದ ಚಿತ್ರ, ನಮೋ ಸೇವೆಯ ಹೇಳದ ಕಥೆಗಳು, ಅಂಗನ್ ಮಿಲನ್ ಸೇವೆ, ಸೇವೆಯ ಕಥೆ, ಸೇವಾ ಜ್ಯೋತಿ ಕಲಾಶ್ ಯಾತ್ರೆ, ವಡ್ನಗರದಿಂದ ವಾರಣಾಸಿಗೆ ಸೇವೆ, ಸೇವಾ ಸೇತು ಅಭಿಯಾನ. ಹೀಗೆ ಹಲವು ಯೋಜನೆಗಳಿಗೂ ಅಭಿಯಾನಗಳನ್ನು ನಡೆಸಲಾಗುವುದು ಎಂದು ಶಾ ವಿವರಿಸಿದ್ದಾರೆ. ದೇಶ ಮತ್ತು ಗುಜರಾತ್‌ನಲ್ಲಿ ಅನೇಕ ಬದಲಾವಣೆಗಳು ನಡೆದಿವೆ. 2014ರಲ್ಲಿ ಮೊದಲು, ನಮ್ಮ ದೇಶವು ಮೂರು ಪಿಡುಗುಗಳಿಂದ ಬಳಲುತ್ತಿತ್ತು. ಭ್ರಷ್ಟಾಚಾರ, ಜಾತಿವಾದ ಮತ್ತು ಸ್ವಜನಪಕ್ಷಪಾತ. ಈಗ ನಾವು ಜಿಡಿಪಿಯ ವಿಷಯದಲ್ಲಿ ಉನ್ನತ ಸ್ಥಾನವನ್ನು ತಲುಪಿದ್ದೇವೆ. 370ನೇ ವಿಧಿ ಮತ್ತು ನಕ್ಸಲಿಸಂನಂತಹ ಅನೇಕ ಸಮಸ್ಯೆಗಳನ್ನು ನಿವಾರಿಸಿದ್ದೇವೆ. ನಾವು ಸುಮಾರು 250 ಮಿಲಿಯನ್ ಜನರನ್ನು ಬಡತನದಿಂದ ಹೊರತಂದಿದ್ದೇವೆ ಎಂದು ಹೇಳಿದರು.

160 ಮಿಲಿಯನ್ ಜನರಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, 130 ಮಿಲಿಯನ್ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 40 ಮಿಲಿಯನ್ ಬಡವರಿಗೆ ವಸತಿ ಸೌಲಭ್ಯ ಸಿಕ್ಕಿದೆ. ಡಿಜಿಟಲ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, ಯುವಕರನ್ನು ಸಬಲೀಕರಣಗೊಳಿಸಿ. ತ್ರಿವಳಿ ತಲಾಖ್ ರದ್ದತಿಯಿಂದ ಮಹಿಳೆಯರು ಸಂತೋಷಗೊಂಡಿದ್ದಾರೆ. 2029ಕ್ಕಿಂತ ಮೊದಲು ನಾವು 21 ರಾಜ್ಯಗಳಲ್ಲಿ ಯುಸಿಸಿಯನ್ನು ಜಾರಿಗೆ ತರುತ್ತೇವೆ.  ಕಾಶಿ ವಿಶ್ವನಾಥ, ಕೇದಾರನಾಥ ಪುನರ್‌ ನಿರ್ಮಾಣಕ್ಕೆ ಒತ್ತು ನೀಡುತ್ತೇವೆ ಎಂದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Sun, 13 September 26

Follow Us