ವಿದೇಶದಿಂದ ಗೋಧಿ ಆಮದು ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿಲ್ಲ: ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ

ಸರ್ಕಾರ ಗೋಧಿಯನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಯಾವುದೇ ಚಿಂತನೆ ಮಾಡಿಲ್ಲ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಸ್ಪಷ್ಟಪಡಿಸಿದೆ.

ವಿದೇಶದಿಂದ ಗೋಧಿ ಆಮದು ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿಲ್ಲ: ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ
ಗೋಧಿ
TV9kannada Web Team

| Edited By: Vivek Biradar

Aug 21, 2022 | 4:36 PM

ನವದೇಹಲಿ: ಕೇಂದ್ರ ಸರ್ಕಾರ (Central Government) ಗೋಧಿಯನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಯಾವುದೇ ಚಿಂತನೆ ಮಾಡಿಲ್ಲ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (Department of Food & Public Distribution) ಸ್ಪಷ್ಟಪಡಿಸಿದೆ. ದೇಶೀಯ ಅಗತ್ಯತೆಗಳನ್ನು ಪೂರೈಸಲು ಭಾರತೀಯ ಆಹಾರ ನಿಗಮವು, ಸಾರ್ವಜನಿಕ ವಿತರಣೆಗೆ ಸಾಕಷ್ಟು ದಾಸ್ತಾನುಗಳನ್ನು ಹೊಂದಿದೆ ಎಂದು ಹೇಳಿದೆ.

ಈ ಸಂಬಂಧ ಟ್ವೀಟ್​ ಮಾಡಿದ ಆಹಾರ ಇಲಾಖೆ “ಭಾರತಕ್ಕೆ ಗೋಧಿಯನ್ನು ಆಮದು ಮಾಡಿಕೊಳ್ಳಲು ಅಂತಹ ಯಾವುದೇ ಯೋಜನೆ ಇಲ್ಲ. ದೇಶದಲ್ಲಿ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ದಾಸ್ತಾನುಗಳನ್ನು ಹೊಂದಿದೆ ಎಂದು ಟ್ವೀಟ್​ ಮಾಡಿದೆ.”

ಭಾರತವು ವಿಶ್ವದ ಎರಡನೇ ಅತಿದೊಡ್ಡ ಧಾನ್ಯ ಉತ್ಪಾದಕ ದೇಶವಾಗಿದ್ದು, 2022 ರಲ್ಲಿ 106.84 ಮಿಲಿಯನ್ ಟನ್ ಗೋಧಿಯನ್ನು ಉತ್ಪಾದನೆ ಮಾಡಿತ್ತು. ಇದು ಹಿಂದಿನ ಅಂದಾಜಿನ 106.41 ಮಿಲಿಯನ್ ಟನ್‌ಗಳಿಗಿಂತ ಸ್ವಲ್ಪ ಹೆಚ್ಚಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada