ಇಯರ್ ಎಂಡ್ ಪಾರ್ಟಿ ಆಹ್ವಾನದ ಜತೆ ಕಾಂಡೋಮ್ ಕಳಿಸಿದ ಪಬ್

ಪುಣೆಯ ಒಂದು ಪಬ್ ಅವರು ಆಯೋಜಿಸಿದ್ದ ಹೊಸ ವರ್ಷದ ಮುನ್ನಾದಿನದ ಪಾರ್ಟಿಗಾಗಿ ಆಹ್ವಾನಿತರಿಗೆ ಕಾಂಡೋಮ್‌ಗಳು ಮತ್ತು ಓರಲ್ ರೀಹೈಡ್ರೇಶನ್ ಸೊಲ್ಯೂಷನ್ (ORS) ಪ್ಯಾಕ್‌ಗಳನ್ನು ವಿತರಿಸಿದ ನಂತರ ವಿವಾದವನ್ನು ಹುಟ್ಟುಹಾಕಿತು. ಡಿಸೆಂಬರ್ 31 ರಂದು ಹೈ ಸ್ಪಿರಿಟ್ಸ್ ಪಬ್ ಆಯೋಜಿಸುವ ಪಾರ್ಟಿಯ ಆಮಂತ್ರಣಗಳ ಜೊತೆಗೆ ಈ ವಸ್ತುಗಳನ್ನು ಅತಿಥಿಗಳಿಗೆ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಇಯರ್ ಎಂಡ್ ಪಾರ್ಟಿ ಆಹ್ವಾನದ ಜತೆ ಕಾಂಡೋಮ್ ಕಳಿಸಿದ ಪಬ್
ಪಾರ್ಟಿImage Credit source: Highepe
Follow us
ನಯನಾ ರಾಜೀವ್
|

Updated on: Dec 31, 2024 | 7:59 AM

2024 ಕಳೆದು 2025ರನ್ನು ಬರಮಾಡಿಕೊಳ್ಳಲು ಎಲ್ಲರೂ ಸಿದ್ಧತೆ ಆರಂಭಿಸಿದ್ದಾರೆ.   ಡಿಸೆಂಬರ್ 31ರಂದು ಸಾಮಾನ್ಯವಾಗಿ ಎಲ್ಲೆಡೆ ಇಯರ್ ಎಂಡ್ ಪಾರ್ಟಿಗಳನ್ನು ಆಯೋಜಿಸಲಾಗುತ್ತದೆ. ಅದೇ ದಿನವೇ ಹೊಸ ವರ್ಷದ ಆಗಮನದ ಪಾರ್ಟಿ ಕೂಡ ನಡೆಯುತ್ತದೆ. ಪುಣೆಯ ಪಬ್​ ಒಂದು ಇಯರ್ ಎಂಡ್ ಪಾರ್ಟಿ ಜತೆ ಆಹ್ವಾನದ ಜತೆ ಜನರಿಗೆ ಕಾಂಡೋಮ್ ಕಳುಹಿಸಿರುವ ವಿಚಾರ ಬೆಳಕಿಗೆ ಬಂದಿದ್ದು, ದೂರು ದಾಖಲಿಸಲಾಗಿದೆ. ಅಷ್ಟೇ ಅಲ್ಲದೆ ಓಆರ್​ಎಸ್ ಪ್ಯಾಕೆಟ್​ಗಳನ್ನು ಕೂಡ ನೀಡಿತ್ತು. ಡಿಸೆಂಬರ್ 31 ರಂದು ಹೈ ಸ್ಪಿರಿಟ್ಸ್ ಪಬ್ ಆಯೋಜಿಸುವ ಪಾರ್ಟಿಯ ಆಮಂತ್ರಣಗಳ ಜೊತೆಗೆ ಈ ವಸ್ತುಗಳನ್ನು ಅತಿಥಿಗಳಿಗೆ ನೀಡಲಾಗಿದೆ.

ನಾವು ಪಬ್‌ಗಳು ಮತ್ತು ನೈಟ್‌ಲೈಫ್‌ಗೆ ವಿರೋಧಿಗಳಲ್ಲ. ಆದರೆ, ಯುವಕರನ್ನು ಆಕರ್ಷಿಸುವ ಮಾರ್ಕೆಟಿಂಗ್ ತಂತ್ರವು ಪುಣೆ ನಗರದ ಸಂಪ್ರದಾಯಗಳಿಗೆ ವಿರುದ್ಧವಾಗಿದೆ. ಪಬ್ ಆಡಳಿತದ ವಿರುದ್ಧ ಪೊಲೀಸರಿಂದ ಕಠಿಣ ಕ್ರಮಕ್ಕೆ ನಾವು ಒತ್ತಾಯಿಸುತ್ತೇವೆ ಎಂದು ಮಹಾರಾಷ್ಟ್ರ ಪ್ರದೇಶ ಯುವ ಕಾಂಗ್ರೆಸ್ ಸದಸ್ಯ ಅಕ್ಷಯ್ ಜೈನ್ ಸೋಮವಾರ ಹೇಳಿದ್ದಾರೆ.

ಇಂತಹ ಕ್ರಮಗಳು ಯುವಕರಿಗೆ ತಪ್ಪು ಸಂದೇಶವನ್ನು ಕಳುಹಿಸಿದಂತಾಗುತ್ತದೆ. ತಪ್ಪು ತಿಳಿವಳಿಕೆಯನ್ನು ಬೆಳೆಸಿದಂತಾಗುತ್ತದೆ. ಸಮಾಜದಲ್ಲಿ ಕೆಟ್ಟ ಅಭ್ಯಾಸಗಳನ್ನು ಉತ್ತೇಜಿಸುವಂತಾಗುತ್ತದೆ ಎಂದು ಜೈನ್ ಹೇಳಿದ್ದಾರೆ. ದೂರನ್ನು ಸ್ವೀಕರಿಸಿದ ನಂತರ, ಪೊಲೀಸರು ಈ ಬಗ್ಗೆ ವಿಚಾರಣೆಯನ್ನು ಪ್ರಾರಂಭಿಸಿದರು ಮತ್ತು ಕಾಂಡೋಮ್​ಗಳನ್ನು ವಿತರಿಸುವುದು ಅಪರಾಧವಲ್ಲ ಎಂದು ಸಮರ್ಥಿಸಿಕೊಂಡ ಮಾಲೀಕರ ಹೇಳಿಕೆಗಳನ್ನು ದಾಖಲಿಸಿಕೊಂಡರು.

ಮತ್ತಷ್ಟು ಓದಿ: ಪಾಕ್ ವಿರುದ್ಧ ನಡೆದ ಯುದ್ಧದ ವೇಳೆ ಭಾರತೀಯ ಸೇನೆ ಸಾವಿರಾರು ಕಾಂಡೋಮ್‌ ಖರೀದಿ ಮಾಡಿದ್ದು ಏಕೆ? ಇಲ್ಲಿದೆ ಅಸಲಿ ವಿಚಾರ

ಈ ವಸ್ತುಗಳ ವಿತರಣೆಯು ಯುವಕರಲ್ಲಿ ಜಾಗೃತಿ ಮೂಡಿಸುವುದು, ಸುರಕ್ಷತೆಯನ್ನು ಉತ್ತೇಜಿಸುವುದು ಮತ್ತು ಜವಾಬ್ದಾರಿಯುತ ನಡವಳಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಪಬ್ ಹೇಳಿಕೊಂಡಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಡಿಸೆಂಬರ್ 31 ರಂದು ಹೈ ಸ್ಪಿರಿಟ್ಸ್ ಪಬ್ ಆಯೋಜಿಸುವ ಪಾರ್ಟಿಯ ಆಮಂತ್ರಣಗಳ ಜೊತೆಗೆ ಈ ವಸ್ತುಗಳನ್ನು ಅತಿಥಿಗಳಿಗೆ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್: ಸಿಎಂ ಸೇರಿ ಹಲವರು ಭಾಗಿ
ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್: ಸಿಎಂ ಸೇರಿ ಹಲವರು ಭಾಗಿ
ತೇಜಸ್ವಿ ಸೂರ್ಯ ಕೈ ಹಿಡಿಯಲಿರುವ ಹುಡುಗಿಯ ಸುಮಧುರ ಕಂಠದಲ್ಲಿ ರಾಮನ ಗೀತೆ
ತೇಜಸ್ವಿ ಸೂರ್ಯ ಕೈ ಹಿಡಿಯಲಿರುವ ಹುಡುಗಿಯ ಸುಮಧುರ ಕಂಠದಲ್ಲಿ ರಾಮನ ಗೀತೆ
ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ