AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ, ಬಂಗಾರದ ಜೊತೆ ವಿಡಿಯೋ ಹಂಚಿಕೊಂಡಿದ್ದ ಯುಟ್ಯೂಬರ್​​ ಮನೆಗೆ ಕನ್ನ: 944 ಗ್ರಾಂ ಚಿನ್ನ, ವಜ್ರದ ಆಭರಣ ಕಳವು

ಹಣ, ಬಂಗಾರದ ವಿಡಿಯೋ ಹಂಚಿಕೊಂಡಿದ್ದ ತಮಿಳುನಾಡಿನ ಯೂಟ್ಯೂಬರ್ ಮನೆಗೆ ಹಿಂಬಾಗಿಲು ಒಡೆದು ನುಗ್ಗಿದ ಕಳ್ಳರು, ಒಂದು ಕೋಟಿ ರೂ. ಮೌಲ್ಯದ 944 ಗ್ರಾಂ ಚಿನ್ನ ಹಾಗೂ ವಜ್ರದ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕಳ್ಳರ ಚಲನವಲನಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಪ್ರಕರಣದ ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ.

ಹಣ, ಬಂಗಾರದ ಜೊತೆ ವಿಡಿಯೋ ಹಂಚಿಕೊಂಡಿದ್ದ ಯುಟ್ಯೂಬರ್​​ ಮನೆಗೆ ಕನ್ನ: 944 ಗ್ರಾಂ ಚಿನ್ನ, ವಜ್ರದ ಆಭರಣ ಕಳವು
ಹಣ, ಬಂಗಾರದ ಜೊತೆ ವಿಡಿಯೋ ಹಂಚಿಕೊಂಡಿದ್ದ ಯುಟ್ಯೂಬರ್​​ ಮನೆಗೆ ಕನ್ನImage Credit source: Anshul Saxena X account
ಪ್ರಸನ್ನ ಹೆಗಡೆ
|

Updated on: Sep 26, 2026 | 10:01 AM

Share

ಚೆನ್ನೈ, ಸೆಪ್ಟೆಂಬರ್​​ 26: ಹಣ, ಬಂಗಾರದ ಸಮೇತ ತನ್ನ ಐಷಾರಾಮಿ ಜೀವನದ ಬಗ್ಗೆ ವಿಡಿಯೋ ಹಂಚಿಕೊಂಡಿದ್ದ ಯುಟ್ಯೂಬರ್​​ ಮನೆಗೆ ಕಳ್ಳರು ಕನ್ನ ಹಾಕಿರುವ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರ್‌ಕೋಯಿಲ್ ಸಮೀಪದ ಧಮ್ಮತ್ತುಕೋಣಂನಲ್ಲಿ ನಡೆದಿದೆ. ‘ಇಷ್ಟೊಂದು ಆಭರಣ, ಇಷ್ಟೊಂದು ಹಣ’ ಎಂಬ ಸಾಲುಗಳ ಜೊತೆ ವಿಐಪಿ ಗಾರ್ಡನ್ ನಿವಾಸದಲ್ಲಿ ಕುಟುಂಬದ ಜೊತೆಗೆ ವಾಸವಿದ್ದ ಯುಟ್ಯೂಬರ್​​ ಮಧುಮಿತಾ ಯುಟ್ಯೂಬ್​​ಗೆ ವಿಡಿಯೋ ಹಾಕಿದ್ದರು. ಆ ಬೆನ್ನಲ್ಲೇ ಕಟಿಂಗ್ ಮಷಿನ್ ಬಳಸಿ ಮನೆಯ ಹಿಂಬಾಗಿಲು ಒಡೆದು ನುಗ್ಗಿದ ಕಳ್ಳರು, 118 ಸವರನ್ ಚಿನ್ನ (944 ಗ್ರಾಂ) ಹಾಗೂ ವಜ್ರದ ಆಭರಣಗಳನ್ನು ಕಳವು ಮಾಡಿದ್ದಾರೆ.

944 ಗ್ರಾಂ ಚಿನ್ನ, ವಜ್ರದ ಆಭರಣ ಮತ್ತು 50 ಸಾವಿರ ರೂ. ನಗದು ಕಳವು

ದಂಪತಿ ಮಗುವಿಗೆ ಬಟ್ಟೆ ಖರೀದಿಸಲು ಮನೆಯಿಂದ ಹೊರಗೆ ಹೋಗಿದ್ದರು. ಮನೆಗೆ ಮರಳಿದಾಗ ಮನೆಯ ಹಿಂಬಾಗಿಲಿನ ಬೀಗ ಒಡೆದಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ. ಮನೆಯೊಳಗೆ ಹೋಗಿ ನೋಡಿದಾಗ ಮಲಗುವ ಕೋಣೆಯಲ್ಲಿದ್ದ ಕಪಾಟನ್ನು ಒಡೆದಿರುವುದು ಪತ್ತೆಯಾಗಿದೆ. ಸುಮಾರು 118 ಸವರನ್ ಚಿನ್ನ ಹಾಗೂ ವಜ್ರದ ಆಭರಣಗಳ ಜೊತೆಗೆ 50 ಸಾವಿರ ರೂಪಾಯಿ ನಗದು ಕಳವು ಮಾಡಲಾಗಿದೆ ಎಂದವರು ಪೊಲೀಸರಿಗೆ ದೂರು ನೀಡಿದ್ದಾರೆ. ಕಳವಾಗಿರುವ ಆಭರಣ ಮತ್ತು ನಗದು ಸೇರಿ ಒಟ್ಟು ಮೌಲ್ಯ ಸುಮಾರು ಒಂದು ಕೋಟಿ ರೂಪಾಯಿ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮಗನನ್ನು ಆಸ್ಪತ್ರೆಗೆ ದಾಖಲಿಸಿ ನೋಡಿಕೊಳ್ತಿದ್ದ ಕುಟುಂಬಕ್ಕೆ ಶಾಕ್​​: ಮನೆ ಬಾಗಿಲು ಮುರಿದು ಅರ್ಧ ಕೆಜಿ ಚಿನ್ನ ಕದ್ದ ಖದೀಮರು!

ಘಟನೆ ಕುರಿತು ಮಾಹಿತಿ ದೊರೆತ ಕೂಡಲೇ ರಾಜಕ್ಕಮಂಗಲಂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನ ನಡೆದ ವಿಐಪಿ ಗಾರ್ಡನ್ ನಿವಾಸದ ಸುತ್ತಮುತ್ತ ಹಲವು ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕಳ್ಳರ ಚಲನವಲನಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.ಈ ಕಳ್ಳತನ ಪ್ರಕರಣದ ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಹೆಚ್ಚಿನ ಜನಸಂಖ್ಯೆ ಹೊಂದಿರುವ ವಸತಿ ಪ್ರದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದ ಆಭರಣ ಕಳವಾಗಿರುವುದು ಸ್ಥಳೀಯರಲ್ಲಿ ಆತಂಕ ಹಾಗೂ ಸುರಕ್ಷತೆಯ ಬಗ್ಗೆ ಭಯ ಮೂಡಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More