ಬೆಳೆ ಬೆಳೆಯೋದಿರಲಿ ಕುಡಿಯುವುದಕ್ಕೂ ಹಾಹಾಕಾರ ಶುರುವಾಗಿದೆ. ಅದರಂತೆ ಜಾನುವಾರುಗಳು, ವನ್ಯ ಜೀವಿಗಳು, ಪ್ರಾಣಿ ಪಕ್ಷಿಗಳು ಸೇರಿದಂತೆ ಜೀವ ಸಂಕುಲ ಸಂಕಷ್ಟಕ್ಕೆ ಸಿಲುಕಿದೆ. ಇದನ್ನು ಗಮನಿಸಿದ ರೈತ ರವಿ ತಿರುಮಲೆ ಅವರು ಬೋರ್ ವೆಲ್ನಲ್ಲಿ ನೀರಿಗೇನೂ ಕೊರತೆ ಇರಲಿಲ್ಲ. ಮನಸ್ಸು ಮಾಡಿದ್ದರೆ ಈಗಾಗಲೇ ಬೀಜಗಳನ್ನು ಬಿತ್ತಿ ಬೋರ್ ವೆಲ್ ನೀರಿನಲ್ಲೇ ಬೆಳೆ ಬೆಳೆಯಬಹುದಿತ್ತು. ಆದರೆ, ರೈತ ರವಿ ನೀರಿಲ್ಲದೇ ಬಳಲುತ್ತಿದ್ದ ಜಾನುವಾರುಗಳಿಗೆ, ಪ್ರಾಣಿ ಪಕ್ಷಿಗಳ ಪಾಲಿಗೆ ಜೀವದಾತರಾಗಿದ್ದಾರೆ.