Updated on: Aug 25, 2024 | 12:49 PM
ನಟಿ ತಮನ್ನಾ ಭಾಟಿಯಾ ಜನಪ್ರಿಯ ಬಹುಭಾಷಾ ನಟಿ. ಅವರು ನಟಿಯಾಗಿ ಎಷ್ಟು ಜನಪ್ರಿಯರೊ ಮಾಡೆಲ್ ಆಗಿಯೂ ಅಷ್ಟೆ ಜನಪ್ರಿಯರು. ಹಲವು ಬ್ರ್ಯಾಂಡ್ಗಳಿಗೆ ರಾಯಭಾರಿ ಆಗಿದ್ದಾರೆ ತಮನ್ನಾ.
ಚಿನ್ನದ ಆಭರಣ, ಬ್ಯೂಟಿ ಪ್ರಾಡೆಕ್ಟ್, ಫ್ಯಾಷನ್, ಬ್ಯಾಂಕಿಂಗ್, ಪ್ರವಾಸ, ಮನರಂಜನೆ ಇನ್ನೂ ಹಲವಾರು ಸಂಸ್ಥೆಗಳಿಗೆ ತಮನ್ನಾ ಭಾಟಿಯಾ ರಾಯಭಾರಿ ಆಗಿದ್ದಾರೆ. ಅವರ ಸೌಂದರ್ಯ ಹಾಗೂ ಜನಪ್ರಿಯತೆಯನ್ನು ಹಲವು ಬ್ರ್ಯಾಂಡ್ಗಳು ಬಳಸಿಕೊಂಡಿವೆ.
ಆದರೆ ಇತ್ತೀಚೆಗೆ ತಮನ್ನಾ ಭಿನ್ನ ರೀತಿಯ ವಿಡಿಯೋ, ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ರಾಧೆ ಮತ್ತು ಗೋಪಿಕೆಯರ ವೇಷದಲ್ಲಿ ಯುವತಿಯರು ಸ್ನಾನ ಮಾಡುತ್ತಿರುವ ಚಿತ್ರಗಳನ್ನು ತಮನ್ನಾ ಹಂಚಿಕೊಂಡಿದ್ದರು.
ಮುಂದುವರೆದು, ಕೃಷ್ಣ-ರಾಧೆ, ಕೃಷ್ಣನ ತುಂಟಾಟ, ಗೋಪಿಕೆಯರೊಟ್ಟಿಗೆ ಕೃಷ್ಣನ ಸರಸ ಇನ್ನಿತರೆ ದೃಶ್ಯಗಳ ವಿಡಿಯೋ ಹಾಗೂ ಚಿತ್ರಗಳನ್ನು ನಟಿ ತಮನ್ನಾ ಹಂಚಿಕೊಂಡಿದ್ದರು. ಚಿತ್ರ ಹಾಗೂ ವಿಡಿಯೋ ಬಹಳ ಸುಂದರವಾಗಿ ಕಾಣುತ್ತಿದ್ದವು.
ಅಸಲಿಗೆ ತಮನ್ನಾ, ತೊರಾನಿ ಹೆಸರಿನ ಬ್ರ್ಯಾಂಡ್ನ ಬಟ್ಟೆಗಳ ರಾಯಭಾರಿ ಆಗಿದ್ದು, ‘ಲೀಲಾ’ ಹೆಸರಿನ ಲೈನ್ನ ಬಟ್ಟೆಗಳ ಪ್ರಚಾರಕ್ಕಾಗಿ ರಾಧೆಯ ವೇಷದಲ್ಲಿ ನಟಿ ತಮನ್ನಾ ಫೋಟೊಶೂಟ್ ಮಾಡಿಸಿದ್ದಾರೆ.
ತೊರಾನಿಯ ಫೋಟೊಶೂಟ್ ಬಗ್ಗೆ ವೈಯಕ್ತಿಕವಾಗಿ ಬಹಳ ಮೆಚ್ಚುಗೆ ವ್ಯಕ್ತಪಡಿಸಿರುವ ನಟಿ ತಮನ್ನಾ, ಈ ಬ್ರ್ಯಾಂಡ್ ಕೊಲ್ಯಾಬರೇಷನ್ ನನ್ನ ಪಾಲಿಗೆ ಅತ್ಯಂತ ಭಿನ್ನ ಹಾಗೂ ಮಹತ್ವವಾದುದು. ಸೆಟ್ನಲ್ಲಿ ಇದ್ದ ನಮಗೆಲ್ಲರಿಗೂ ನಾವೇನೋ ಅದ್ಭುತವಾದುದನ್ನು ಮಾಡುತ್ತಿರುವ ನಂಬಿಕೆ ಇತ್ತು ಎಂದಿದ್ದಾರೆ.
ರಾಧಾ-ಕೃಷ್ಣರ ಸರಸ, ವಿರಸ ಹೀಗೆ ಹಲವು ಭಾವ, ಭಂಗಿ, ಸನ್ನಿವೇಶಗಳ ಚಿತ್ರಗಳನ್ನು ತೊರಾನಿಯ ಲೀಲಾ ವಿನ್ಯಾಸದ ಉಡುಪುಗಳ ಪ್ರಚಾರಕ್ಕಾಗಿ ಸೆರೆ ಹಿಡಿಯಲಾಗಿದ್ದು ಕೆಲವುಗಳ ಚಿತ್ರ ಇಲ್ಲಿದೆ.