Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಟಿನ ಮೇಲೆ ಮೆಸ್ಸಿ ಫೋಟೋ; ವಿಶ್ವಕಪ್ ಹೀರೋಗೆ ಅರ್ಜೇಂಟಿನಾ ಸರ್ಕಾರದಿಂದ ವಿಶೇಷ ಗೌರವ..!

Lionel Messi: ವರದಿ ಪ್ರಕಾರ ಅರ್ಜೆಂಟೀನಾ ಸರ್ಕಾರ ತನ್ನ ದೇಶದ ನೋಟಿನ ಮೇಲೆ ಮೆಸ್ಸಿ ಚಿತ್ರವನ್ನು ಹಾಕುವತ್ತ ಚಿತ್ತ ಹರಿಸಿದೆ ಎಂದು ತಿಳಿದುಬಂದಿದೆ.

ನೋಟಿನ ಮೇಲೆ ಮೆಸ್ಸಿ ಫೋಟೋ; ವಿಶ್ವಕಪ್ ಹೀರೋಗೆ ಅರ್ಜೇಂಟಿನಾ ಸರ್ಕಾರದಿಂದ ವಿಶೇಷ ಗೌರವ..!
ನೋಟಿನ ಮೇಲೆ ಮೆಸ್ಸಿ ಫೋಟೋ
Follow us
TV9 Web
| Updated By: Digi Tech Desk

Updated on:Dec 22, 2022 | 12:14 PM

ಅರ್ಜೆಂಟೀನಾವನ್ನು (Argentina Football Team) ವಿಶ್ವ ಚಾಂಪಿಯನ್ ಮಾಡಿದ ನಂತರ ಲಿಯೋನೆಲ್ ಮೆಸ್ಸಿ (Lionel Messi) ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಅದರಲ್ಲೂ ಬರೋಬ್ಬರಿ 36 ವರ್ಷಗಳ ಬಳಿಕ ವಿಶ್ವಕಪ್ (FIFA World Cup 2022) ಟ್ರೋಫಿಯೊಂದಿಗೆ ಅರ್ಜೆಂಟೀನಾ ತಲುಪಿದಾಗ ಅವರನ್ನು ಸ್ವಾಗತಿಸಲೂ ಇಡೀ ಅರ್ಜೆಂಟಿನಾವೇ ಎದುರಾಗಿತ್ತು. ಹಾಗೆಯೇ ವಿಶ್ವಕಪ್ ಗೆದ್ದ ರಾತ್ರಿ ಬ್ಯೂನಸ್ ಐರಿಸ್‌ನ ಬೀದಿಗಳಲ್ಲಿ 20 ಲಕ್ಷಕ್ಕೂ ಅಧಿಕ ಜನ ಒಂದೆಡೆ ಸೇರಿ ಇಡೀ ರಾತ್ರಿ ಸಂಭ್ರಮಾಚರಣೆ ಮಾಡಿದ್ದರು. ಅಷ್ಟೇ ಅಲ್ಲ, ಮೆಸ್ಸಿ ತಂಡ ತವರು ಮನೆಗೆ ಬಂದ ನಂತರವೂ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಆದರೆ, ಈಗ ಬರುತ್ತಿರುವ ಸುದ್ದಿ ಇವೆಲ್ಲಕ್ಕಿಂತ ಮಿಗಿಲಾದ್ದದಾಗಿದೆ. ವರದಿ ಪ್ರಕಾರ ಅರ್ಜೆಂಟೀನಾ ಸರ್ಕಾರ ತನ್ನ ದೇಶದ ನೋಟಿನ ಮೇಲೆ ಮೆಸ್ಸಿ ಚಿತ್ರವನ್ನು ಹಾಕುವತ್ತ ಚಿತ್ತ ಹರಿಸಿದೆ ಎಂದು ತಿಳಿದುಬಂದಿದೆ.

ಅರ್ಜೆಂಟೀನಾ ಸರ್ಕಾರ ತನ್ನ ಐಡಿಯಾವನ್ನು ಜಾರಿಗೆ ತಂದು ಅಲ್ಲಿನ ನೋಟಿನ ಮೇಲೆ ಮೆಸ್ಸಿಯ ಚಿತ್ರವನ್ನು ಮುದ್ರಿಸಿದರೆ, ಬಹುಶಃ ವಿಶ್ವಕಪ್ ಗೆದ್ದ ನಂತರ ಒಬ್ಬ ಆಟಗಾರನ ಫೋಟೋ ಆ ದೇಶದ ಕರೆನ್ಸಿಯ ಮೇಲೆ ಮುದ್ರಣಗೊಳ್ಳುವುದು ಇತಿಹಾದಲ್ಲಿ ಇದೇ ಮೊದಲು ಎಂಬ ಖ್ಯಾತಿಗೆ ಮೆಸ್ಸಿ ಪಾತ್ರರಾಗಲಿದ್ದಾರೆ. ವಾಸ್ತವವಾಗಿ ವಿಶ್ವಕಪ್‌ ಗೆದ್ದ ಬಳಿಕ ಅಥವಾ ದೇಶಕ್ಕೆ ಕೀರ್ತಿ ತರುವ ಕೆಲಸ ಮಾಡಿದ ಆಟಗಾರನಿಗೆ ಆ ದೇಶದ ಸರ್ಕಾರ ದೊಡ್ಡ ಗೌರವ ಅಥವಾ ದೊಡ್ಡ ಪ್ರಶಸ್ತಿ ನೀಡಿ ಗೌರವಿಸುವುದನ್ನು ನಾವು ನೋಡಿದ್ದೇವೆ. ಆದರೆ ಈ ರೀತಿಯಾಗಿ ನೋಟಿನ ಮೇಲೆ ಆತನ ಫೋಟೋ ಅಚ್ಚೊತ್ತುವ ವಿಷಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಭವಿಸಲಿದೆ.

ವಿಶ್ವಕಪ್ ಟ್ರೋಫಿಯೊಂದಿಗೆ ಊಟ, ಅದರ ಜೊತೆಯೇ ನಿದ್ದೆ; ಇದು ಮೆಸ್ಸಿಯ ದಿನಚರಿ; ಫೋಟೋ ನೋಡಿ

ವಿಶ್ವಕಪ್‌ ಯಶಸ್ಸಿನ ನಂತರ ಈ ಚಿಂತನೆ ಶುರುವಾಗಿದೆ

ಆದಾಗ್ಯೂ, ಈ ವಿಷಯದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಈ ಬಗ್ಗೆ ಅರ್ಜೆಂಟೀನಾದ ಸರ್ಕಾರಿ ಇಲಾಖೆಯಲ್ಲಿ ಈ ಬಗ್ಗೆ ಚರ್ಚೆ ದೊಡ್ದದಾಗಿಯೇ ನಡೆಯುತ್ತಿದೆ ಎಂದು ವರದಿಯಾಗಿದೆ. ವಿಶ್ವಕಪ್‌ನಲ್ಲಿ ಸಾಧಿಸಿದ ಯಶಸ್ಸಿನ ದೃಷ್ಟಿಯಿಂದ ಅಲ್ಲಿನ ಸರ್ಕಾರ ಮತ್ತು ವಿಶೇಷವಾಗಿ ಹಣಕಾಸು ಇಲಾಖೆ ಅದರ ಬಗ್ಗೆ ಯೋಚಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ

ಮೂರನೇ ಬಾರಿಗೆ ಫಿಫಾ ವಿಶ್ವಕಪ್ ಗೆದ್ದ ಅರ್ಜೆಂಟೀನಾ

ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾ, ಫ್ರಾನ್ಸ್ ತಂಡವನ್ನು ಸೋಲಿಸುವ ಮೂಲಕ ಮೂರನೇ ಬಾರಿಗೆ ವಿಶ್ವಕಪ್ ಗೆದ್ದಿತು. ಇದಕ್ಕೂ ಮೊದಲು, 1978 ಮತ್ತು 1986 ರಲ್ಲಿ ಈ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಅರ್ಜೇಂಟಿನಾ ಯಶಸ್ವಿಯಾಗಿತ್ತು. ಅಲ್ಲದೆ ಇದು ಮೆಸ್ಸಿಯ ಮೊದಲ ವಿಶ್ವಕಪ್ ಪ್ರಶಸ್ತಿಯಾಗಿದೆ. ಅದೇನೇ ಇರಲಿ, ಪ್ರಪಂಚದಾದ್ಯಂತ ಟ್ರೋಫಿಗಳನ್ನು ಗೆದ್ದಿರುವ ಮೆಸ್ಸಿಯ ಕ್ಯಾಬಿನೆಟ್‌ನಲ್ಲಿ ಇದೊಂದು ಪ್ರಶಸ್ತಿ ಇರಲಿಲ್ಲ. ಒಟ್ಟಾರೆಯಾಗಿ, ಈಗ ಈ ಟ್ರೋಫಿಯನ್ನು ಗೆಲ್ಲುವುದರೊಂದಿಗೆ ಪ್ರತಿ ಫುಟ್ಬಾಲ್ ಟ್ರೋಫಿಯನ್ನು ಗೆದ್ದ ಆಟಗಾರ ಎಂಬ ಹೆಗ್ಗಳಿಕೆಗೆ ಮೆಸ್ಸಿ ಪಾತ್ರರಾಗಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:45 am, Thu, 22 December 22