AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಸದಾಟದ ಮಾಸ್ಟರ್ ಪ್ಲ್ಯಾನ್: ಖ್ವಾಜಾ ಬಿಚ್ಚಿಟ್ಟ ಆಸ್ಟ್ರೇಲಿಯಾದ ನಗ್ನ ಸತ್ಯ!

ಕ್ರಿಕೆಟ್ ಜಗತ್ತನ್ನು ನಡುಗಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕರಾಳ ಹಗರಣದ ಅಸಲಿ ಮುಖವಾಡ ಕಳಚಿದೆ! ಕೇವಲ ಮೂವರ ತಲೆದಂಡದೊಂದಿಗೆ ಮುಚ್ಚಿಹೋಗಿದ್ದ 'ಸ್ಯಾಂಡ್‌ಪೇಪರ್ ಗೇಟ್' ರಹಸ್ಯವನ್ನು ಆಸ್ಟ್ರೇಲಿಯಾ ಮಾಜಿ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಜಗತ್ತಿನ ಮುಂದೆ ಬಯಲು ಮಾಡಿದ್ದು, ಇಡೀ ವಿವಾದ ಹೇಗೆ ಶುರುವಾಗಿತ್ತು ಎಂಬ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಮೋಸದಾಟದ ಮಾಸ್ಟರ್ ಪ್ಲ್ಯಾನ್: ಖ್ವಾಜಾ ಬಿಚ್ಚಿಟ್ಟ ಆಸ್ಟ್ರೇಲಿಯಾದ ನಗ್ನ ಸತ್ಯ!
AustraliaImage Credit source: GettyImages
ಝಾಹಿರ್ ಯೂಸುಫ್
|

Updated on:Nov 08, 2026 | 8:15 AM

Share

ಕ್ರಿಕೆಟ್ ಜಗತ್ತಿನ ಕರಾಳ ಅಧ್ಯಾಯವೊಂದರ ಬೆಚ್ಚಿಬೀಳಿಸುವ ರಹಸ್ಯಗಳು ಕೊನೆಗೂ ಹೊರಬಿದ್ದಿವೆ! 2018ರ ಕೇಪ್‌ಟೌನ್ ಟೆಸ್ಟ್‌ನಲ್ಲಿ ಇಡೀ ಆಸ್ಟ್ರೇಲಿಯಾ ತಂಡ ಕ್ರಿಕೆಟ್‌ನ ಘನತೆಯನ್ನು ಹೇಗೆ ಬಲಿಕೊಡಲು ಸಿದ್ಧವಾಗಿತ್ತು ಎಂಬುದನ್ನು ಆಸೀಸ್ ಮಾಜಿ ಓಪನರ್ ಉಸ್ಮಾನ್ ಖ್ವಾಜಾ ಜಗತ್ತಿನ ಮುಂದೆ ಬಿಚ್ಚಿಟ್ಟಿದ್ದಾರೆ. ಕೇವಲ ಮೂವರ ತಲೆದಂಡದೊಂದಿಗೆ ಮುಚ್ಚಿಹೋಗಿದ್ದ ‘ಸ್ಯಾಂಡ್‌ಪೇಪರ್ ಗೇಟ್’ ಹಗರಣದ ಹಿಂದೆ, ಇಡೀ ತಂಡವೇ ಭಾಗಿಯಾಗಿದ್ದ ಮಾಸ್ಟರ್ ಪ್ಲ್ಯಾನ್ ಇತ್ತು ಎಂಬ ಖ್ವಾಜಾ ಅವರ ಆತ್ಮಕಥೆಯ ಸಾಲುಗಳು ಈಗ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಬಿರುಗಾಳಿ ಎಬ್ಬಿಸಿವೆ.

ಸದ್ಯದಲ್ಲೇ ಬಿಡುಗಡೆಯಾಗಲಿರುವ ತಮ್ಮ ಆತ್ಮಕಥೆ ‘ಸಬ್ರ್’ ನಲ್ಲಿ ಉಸ್ಮಾನ್ ಖ್ವಾಜಾ ಅತ್ಯಂತ ಆಘಾತಕಾರಿ ಮತ್ತು ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಬ್ರಾಡ್‌ಕಾಸ್ಟ್ ಕ್ಯಾಮೆರಾಗಳ ಕಣ್ಣಿಗೆ ಬೀಳದಂತೆ ಸ್ಯಾಂಡ್‌ಪೇಪರ್ ಅನ್ನು ಹೇಗೆ ಬಚ್ಚಿಡಬೇಕೆಂದು ಆಸ್ಟ್ರೇಲಿಯಾ ತಂಡವೇ ಒಂದು ವ್ಯವಸ್ಥಿತ ಮಾಸ್ಟರ್ ಪ್ಲ್ಯಾನ್ ರೂಪಿಸಿತ್ತು ಎಂದು ಅವರು ಬಹಿಂಗಪಡಿಸಿದ್ದಾರೆ.

ಬೌಂಡರಿ ಲೈನ್ ಬಳಿ ಸ್ಯಾಂಡ್‌ಪೇಪರ್ ಬಳಕೆ!

ಉಸ್ಮಾನ್ ಖ್ವಾಜಾ ಅವರ ಪುಸ್ತಕದ ಪ್ರಕಾರ, ಟೆಲಿವಿಷನ್ ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ಆಟಗಾರರು ಒಂದು ಉಪಾಯ ಮಾಡಿದ್ದರು. ಮೈದಾನದ ಮಧ್ಯಭಾಗದಲ್ಲಿ ಚೆಂಡನ್ನು ವಿರೂಪಗೊಳಿಸುವ ಬದಲು, ಬೌಂಡರಿ ಲೈನ್‌ಗಳ ಬಳಿ ಮಾತ್ರ ಸ್ಯಾಂಡ್‌ಪೇಪರ್ ಬಳಸಲು ಯೋಜಿಸಲಾಗಿತ್ತು. ಬೌಂಡರಿ ಬದಿಯ ಜಾಹೀರಾತು ಕುಷನ್‌ಗಳ ಬಳಿ ಆಟಗಾರರು ಓಡಾಡುವಾಗ ಮತ್ತು ಮುಖ್ಯ ಪಿಚ್‌ನಿಂದ ಕ್ಯಾಮೆರಾಗಳು ತುಂಬಾ ದೂರ ಇರುವುದರಿಂದ, ಸ್ಯಾಂಡ್‌ಪೇಪರ್ ಬಳಸುವುದನ್ನು ಝೂಮ್ ಮಾಡಿ ಹಿಡಿಯುವುದು ಬ್ರಾಡ್‌ಕಾಸ್ಟರ್‌ಗಳಿಗೆ ಕಷ್ಟವಾಗುತ್ತದೆ ಎಂಬುದು ಆಸೀಸ್ ಪಡೆಯ ಲೆಕ್ಕಾಚಾರವಾಗಿತ್ತು.

ಪ್ಲ್ಯಾನ್ ಸಿದ್ಧವಾಗಿದ್ದು ಹೇಗೆ?

ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿ “ಚೆಂಡನ್ನು ಸ್ವಿಂಗ್ ಮಾಡಲು ಏನು ಮಾಡಬಹುದು” ಎಂಬ ಬಗ್ಗೆ ಹಗುರವಾದ ಚರ್ಚೆಗಳು ಆರಂಭವಾಗಿದ್ದವು. ಈ ವೇಳೆ ಸ್ಯಾಂಡ್‌ಪೇಪರ್ ಅತ್ಯಂತ ಪರಿಣಾಮಕಾರಿ ಎಂಬ ಐಡಿಯಾ ಹೊರಬಂತು.

ಆರಂಭದಲ್ಲಿ ಈ ಐಡಿಯಾವನ್ನು ಯಾರೂ ಸಹ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಭಾವಿಸಿದ್ದೆ. ಆದರೆ ಆಗ ತಾನೇ ತಂಡಕ್ಕೆ ಪಾದಾರ್ಪಣೆ ಮಾಡಿ 6 ಪಂದ್ಯಗಳನ್ನಷ್ಟೇ ಆಡಿದ್ದ ಕ್ಯಾಮರೋನ್ ಬ್ಯಾನ್‌ಕ್ರಾಫ್ಟ್, ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ಮತ್ತು ಹಿರಿಯರ ಮೆಚ್ಚುಗೆ ಗಳಿಸುವ ಗಡಿಬಿಡಿಯಲ್ಲಿ “ನಾನು ಇದನ್ನು ಮಾಡುತ್ತೇನೆ” ಎಂದು ತಾವಾಗಿಯೇ ಒಪ್ಪಿಕೊಂಡರು ಎಂದು ಉಸ್ಮಾನ್ ಖ್ವಾಜಾ ತಮ್ಮ ಆತ್ಮಕಥನದಲ್ಲಿ ಬಹಿರಂಗಪಡಿಸಿದ್ದಾರೆ.

ಅಲ್ಲದೆ ಕೇಪ್‌ಟೌನ್ ಟೆಸ್ಟ್‌ನ ವಿರಾಮದ ವೇಳೆ ಕೋಚಿಂಗ್ ಸಿಬ್ಬಂದಿಯೊಬ್ಬರು ಬ್ಯಾನ್‌ಕ್ರಾಫ್ಟ್ ಬಳಿ ಬಂದು, “ಬ್ಯಾಂಗರ್ಸ್, ನೀನು ಏನೇ ಮಾಡುತ್ತಿದ್ದರೂ ಅದು ಚೆನ್ನಾಗಿ ಕೆಲಸ ಮಾಡುತ್ತಿದೆ, ನಮಗೆ ಇದು ಇನ್ನೂ ಹೆಚ್ಚಾಗಿ ಬೇಕು” ಎಂದು ಬೆನ್ನು ತಟ್ಟಿದ್ದನ್ನು ಖುದ್ದಾಗಿ ಕೇಳಿದ್ದಾಗಿ ಖ್ವಾಜಾ ಬರೆದುಕೊಂಡಿದ್ದಾರೆ. ಈ ಮೂಲಕ ಕೋಚ್ ಸಿಬ್ಬಂದಿಗಳೇ ಕಳ್ಳಾಟವಾಡಲು ಕ್ಯಾಮರೋನ್ ಬ್ಯಾನ್‌ಕ್ರಾಫ್ಟ್ ಅವರನ್ನು ಪ್ರಚೋದಿಸಿದ್ದರು.

“ನಮ್ಮಲ್ಲಿ ಪ್ರತಿಯೊಬ್ಬರಿಗೂ ಇದು ಗೊತ್ತಿತ್ತು!

2018ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ನಡೆಸಿದ ತನಿಖೆಯಲ್ಲಿ ಕೇವಲ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಬ್ಯಾನ್‌ಕ್ರಾಫ್ಟ್ ಅವರನ್ನು ಮಾತ್ರ ಅಪರಾಧಿಗಳನ್ನಾಗಿ ಮಾಡಿ ನಿಷೇಧ ಹೇರಲಾಗಿತ್ತು. ಆದರೆ, ಖ್ವಾಜಾ ಈ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

“ಅದು ಕೇವಲ ಆ ಮೂವರಲ್ಲ, ಇಡೀ ತಂಡಕ್ಕೆ ಆ ವಿಷಯ ತಿಳಿದಿತ್ತು. ಬ್ಯಾಟರ್ಸ್, ಬೌಲರ್ಸ್, ಕೋಚಿಂಗ್ ಸ್ಟಾಫ್ ಎಲ್ಲರೂ ಇದರಲ್ಲಿ ಭಾಗಿಯಾಗಿದ್ದರು” ಎಂದು ಖ್ವಾಜಾ ಬರೆದಿದ್ದಾರೆ. ಈ ಮೂಲಕ ಅಂದಿನ ಪಂದ್ಯದಲ್ಲಿ ಆಡಿದ್ದ ಇತರೆ ಆಟಗಾರರು ಮತ್ತು ಪ್ರಮುಖ ಬೌಲರ್‌ಗಳು ತಮಗೇನೂ ತಿಳಿಯದೇ ಅಮಾಯಕರು ಎಂದು ಹೇಳಿಕೊಳ್ಳುತ್ತಿದ್ದ ಸುಳ್ಳನ್ನು ಖ್ವಾಜಾ ಜಗತ್ತಿನ ಮುಂದೆ ಬಯಲು ಮಾಡಿದ್ದಾರೆ. ಈ ಸ್ಫೋಟಕ ಹೇಳಿಕೆಗಳು ಈಗ ಕ್ರಿಕೆಟ್ ವಲಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿವೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಎಂಟ್ರಿಯಿಂದ ಪಂಜಾಬ್ ಕಿಂಗ್ಸ್ ಮತ್ತಷ್ಟು ಬಲಿಷ್ಠ!

ಏನಿದು ಪ್ರಕರಣ?

‘ಸ್ಯಾಂಡ್‌ಪೇಪರ್ ಗೇಟ್’ ಎಂಬುದು 2018 ರಲ್ಲಿ ಸೌತ್ ಆಫ್ರಿಕಾ ವಿರುದ್ಧದ ಕೇಪ್ ಟೌನ್ ಟೆಸ್ಟ್ ಪಂದ್ಯದ ವೇಳೆ ನಡೆದ ಕ್ರಿಕೆಟ್ ಜಗತ್ತಿನ ಅತ್ಯಂತ ದೊಡ್ಡ ‘ಚೆಂಡು ವಿರೂಪಗೊಳಿಸಿದ’ ಹಗರಣವಾಗಿದೆ. ಪಂದ್ಯದ ಮಧ್ಯೆ ಆಸ್ಟ್ರೇಲಿಯಾದ ಆಟಗಾರ ಕ್ಯಾಮರೋನ್ ಬ್ಯಾನ್‌ಕ್ರಾಫ್ಟ್ ಜೇಬಿನಿಂದ ಹಳದಿ ಬಣ್ಣದ ಉಜ್ಜು ಕಾಗದವನ್ನು (ಸ್ಯಾಂಡ್ ಪೇಪರ್) ತೆಗೆದು, ಚೆಂಡನ್ನು  ಸ್ವಿಂಗ್ ಮಾಡುವ ಉದ್ದೇಶದಿಂದ ಉಜ್ಜುತ್ತಿದ್ದುದು ಲೈವ್ ಟಿವಿ ಕ್ಯಾಮೆರಾಗಳಲ್ಲಿ ಸಿಕ್ಕಿಬಿದ್ದಿತ್ತು.

ಈ ಕಳ್ಳಾಟ ಬಯಲಾದಾಗ ಜಾಗತಿಕವಾಗಿ ತೀವ್ರ ಮುಖಭಂಗ ಅನುಭವಿಸಿದ ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿಯು, ಅಂದಿನ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್‌ಗೆ ಒಂದು ವರ್ಷ ಹಾಗೂ ಬ್ಯಾನ್‌ಕ್ರಾಫ್ಟ್‌ಗೆ ಒಂಬತ್ತು ತಿಂಗಳ ಕಾಲ ನಿಷೇಧ ಹೇರಿತ್ತು. ಆಗಿನ ತನಿಖೆಯಲ್ಲಿ “ಈ ಸಂಚು ಕೇವಲ ಆ ಮೂವರಿಗೆ ಮಾತ್ರ ತಿಳಿದಿತ್ತು” ಎಂದು ಪ್ರಕರಣ ಮುಚ್ಚಿಹಾಕಲಾಗಿತ್ತಾದರೂ, ಈಗ ಉಸ್ಮಾನ್ ಖ್ವಾಜಾ ಅವರು ತಮ್ಮ ಆತ್ಮಕಥನದಲ್ಲಿ ಎಲ್ಲಾ ವಿಚಾರಗಳನ್ನು ಬಹಿರಂಗಪಡಿಸಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

Published On - 8:11 am, Sun, 8 November 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ