AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಆರೆಂಜ್ ಕ್ಯಾಪ್ ಹೋರಾಟಕ್ಕಿಳಿದ ಕಿಂಗ್ ಕೊಹ್ಲಿ: ಭುವನೇಶ್ವರ್​ಗೆ ಸಿಕ್ಕಿತು ಪರ್ಪಲ್ ಕ್ಯಾಪ್

Orange Cap-Purple Cap IPL 2026: ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್​ಗೆ ಐಪಿಎಲ್ 2026 ರಲ್ಲಿ ಹೋರಾಟ ಮುಂದುವರೆದಿದೆ. ವಿರಾಟ್ ಕೊಹ್ಲಿ ಖಾತೆಯಿಂದ ರನ್ ಏರಿಕೆಯಾಗುತ್ತಿದ್ದರೆ, ಅತ್ತ ಭುವನೇಶ್ವರ್ ಕುಮಾರ್ ಅತ್ಯಧಿಕ ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ತೊಟ್ಟಿದ್ದಾರೆ. ಸೋಮವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ vs. ಆರ್‌ಸಿಬಿ ಪಂದ್ಯದ ನಂತರ ಈ ಬದಲಾವಣೆಗಳು ಕಂಡುಬಂದಿವೆ.

IPL 2026: ಆರೆಂಜ್ ಕ್ಯಾಪ್ ಹೋರಾಟಕ್ಕಿಳಿದ ಕಿಂಗ್ ಕೊಹ್ಲಿ: ಭುವನೇಶ್ವರ್​ಗೆ ಸಿಕ್ಕಿತು ಪರ್ಪಲ್ ಕ್ಯಾಪ್
Virat Kohli And Bhuvneshwar Kumar
ಸಾಯಿನಂದಾ
| Edited By: |

Updated on:Apr 28, 2026 | 11:16 AM

Share

ಬೆಂಗಳೂರು (ಏ. 28): ಐಪಿಎಲ್ 2026 ರಲ್ಲಿ ಸದ್ಯ ಆರೆಂಜ್ ಮತ್ತು ಪರ್ಪಲ್ ಕ್ಯಾಪ್‌ಗಳ ನಡುವೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ. ಸೋಮವಾರ, ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಅವರ ತವರು ಅಂಗಳದಲ್ಲೇ ಸೋಲಿಸುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿತು. ವಿರಾಟ್ ಕೊಹ್ಲಿ (Virat Kohli) ಅಜೇಯ 23 ರನ್​ಗಳ ಇನ್ನಿಂಗ್ಸ್ ಆಡಿದರು. ಇದರ ಜೊತೆಗೆ ಕಿಂಗ್ ಕೊಹ್ಲಿ ಸದ್ಯ ಆರೆಂಜ್ ಕ್ಯಾಪ್ ರೇಸ್‌ನ ಹೋರಾಟಕ್ಕೆ ಇಳಿದಿದ್ದಾರೆ. ಅತ್ತ ಆರ್​ಸಿಬಿಯ ಸ್ಟಾರ್ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಅಗ್ರ ಸ್ಥಾನವನ್ನು ತಲುಪಿದ್ದಾರೆ.

ಈ ವರ್ಷದ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಸನ್‌ರೈಸರ್ಸ್ ಹೈದರಾಬಾದ್‌ನ ಅಭಿಷೇಕ್ ಶರ್ಮಾ. ಅವರು ಎಂಟು ಪಂದ್ಯಗಳಲ್ಲಿ 380 ರನ್ ಗಳಿಸಿದ್ದಾರೆ. ಅವರು ಇಲ್ಲಿಯವರೆಗೆ ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ. ಕೆಎಲ್ ರಾಹುಲ್ ಪ್ರಸ್ತುತ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಎಂಟು ಪಂದ್ಯಗಳಲ್ಲಿ 358 ರನ್ ಗಳಿಸಿದ್ದಾರೆ. ಅವರು ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೈಭವ್ ಸೂರ್ಯವಂಶಿ ಮೂರನೇ ಸ್ಥಾನ-ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನ

ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಬಗ್ಗೆ ಹೇಳುವುದಾದರೆ, ಅವರು 8 ಪಂದ್ಯಗಳಲ್ಲಿ 357 ರನ್ ಗಳಿಸಿದ್ದಾರೆ. ವೈಭವ್ ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಮಧ್ಯೆ ವಿರಾಟ್ ಕೊಹ್ಲಿ 4 ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅವರು ಎಂಟು ಪಂದ್ಯಗಳಲ್ಲಿ 351 ರನ್ ಗಳಿಸಿದ್ದಾರೆ. ಕೊಹ್ಲಿ ಅವರ ಹೆಸರಿನಲ್ಲಿ ಒಂದು ಶತಕವಿಲ್ಲ, ಆದರೆ ಅವರು ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಅತ್ಯಂತ ಕಡಿಮೆ ಟಾರ್ಗೆಟ್ ಪಂದ್ಯದಲ್ಲಿ, ಕೊಹ್ಲಿ 15 ಎಸೆತಗಳಲ್ಲಿ 23 ರನ್ ಗಳಿಸಿದರು. ಟಾರ್ಗೆಟ್ ರನ್‌ಗಳು ಕಡಿಮೆಯಿದ್ದ ಕಾರಣ ಕೊಹ್ಲಿಗೆ ಹೆಚ್ಚು ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಕೊಹ್ಲಿ ಒಂದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿ ಅಜೇಯರಾಗಿ ಉಳಿದರು.

DC vs RCB: ಜಾಕೋಬ್ ಬೆಥೆಲ್‌ ಸಿಡಿಸಿದ 104 ಮೀಟರ್ ಸಿಕ್ಸ್ ಕಂಡು ಶಾಕ್ ಆದ ಕೊಹ್ಲಿ: ವಿಡಿಯೋ ನೋಡಿ

ಭುವನೇಶ್ವರ್ ಕುಮಾರ್​ಗೆ ಪರ್ಪಲ್ ಕ್ಯಾಪ್

ಪರ್ಪಲ್ ಕ್ಯಾಪ್ ವಿಚಾರಕ್ಕೆ ಬಂದರೆ, ಇಲ್ಲಿ ಆಸಕ್ತಿದಾಯಕ ಸ್ಪರ್ಧೆ ನಡೆಯುತ್ತಿದೆ. ಆರ್‌ಸಿಬಿಯ ಭುವನೇಶ್ವರ್ ಕುಮಾರ್, ಸಿಎಸ್‌ಕೆಯ ಅನ್ಶುಲ್ ಕಾಂಬೋಜ್ ಮತ್ತು ಎಸ್‌ಆರ್‌ಹೆಚ್‌ನ ಇಶಾನ್ ಮಾಲಿಂಗ ಸಮಾನ ವಿಕೆಟ್‌ಗಳನ್ನು ಹೊಂದಿದ್ದಾರೆ. ಮೂವರೂ ಈಗ 14 ವಿಕೆಟ್‌ಗಳನ್ನು ಪಡೆದಿದ್ದಾರೆ, ಆದರೆ ಭುವನೇಶ್ವರ್ ಕುಮಾರ್ ಅವರ ಉತ್ತಮ ಎಕಾನಮಿ ರೇಟ್‌ನಿಂದಾಗಿ ಪ್ರಸ್ತುತ ಪರ್ಪಲ್ ಕ್ಯಾಪ್ ಅನ್ನು ಹೊಂದಿದ್ದಾರೆ. ಅನ್ಶುಲ್ ಕಾಂಬೋಜ್ ಎರಡನೇ ಸ್ಥಾನದಲ್ಲಿದ್ದರೆ, ಇಶಾನ್ ಮಾಲಿಂಗ ಮೂರನೇ ಸ್ಥಾನದಲ್ಲಿದ್ದಾರೆ. ಜೋಫ್ರಾ ಆರ್ಚರ್, ಪ್ರಿನ್ಸ್ ಯಾದವ್ ಮತ್ತು ಕಗಿಸೊ ರಬಾಡ ತಲಾ 13 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಬೌಲರ್‌ಗಳಲ್ಲಿ ಯಾರಾದರು ಒಬ್ಬರು ಶೀಘ್ರದಲ್ಲೇ ಪರ್ಪಲ್ ಕ್ಯಾಪ್ ಗೆಲ್ಲಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:16 am, Tue, 28 April 26

Follow Us