AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಂ ಇಂಡಿಯಾದ ಮುಂದಿನ ಟಿ20 ಸರಣಿ ಯಾವಾಗ? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ನ್ಯೂಜಿಲೆಂಡ್ ಸರಣಿ ನಂತರ ಟೀಂ ಇಂಡಿಯಾ ದೀರ್ಘಕಾಲ ಟಿ20 ಪಂದ್ಯಗಳಿಂದ ದೂರವಿರಲಿದೆ. ಡಿಸೆಂಬರ್ 2026ರಲ್ಲಿ ಶ್ರೀಲಂಕಾ ವಿರುದ್ಧ ಭಾರತ ತನ್ನ ಮುಂದಿನ ಅಂತರರಾಷ್ಟ್ರೀಯ ಟಿ20 ಸರಣಿಯನ್ನು ಆಡಲಿದೆ. ಈ ಮೂರು ಪಂದ್ಯಗಳ ಸರಣಿಯ ಸಂಪೂರ್ಣ ವೇಳಾಪಟ್ಟಿ, ಸ್ಥಳ ಮತ್ತು ಸಮಯದ ವಿವರ ಇಲ್ಲಿದೆ. ಇದು ಆಯ್ಕೆದಾರರಿಗೆ ಮಹತ್ವದ ವೇದಿಕೆಯಾಗಲಿದೆ.

ಟೀಂ ಇಂಡಿಯಾದ ಮುಂದಿನ ಟಿ20 ಸರಣಿ ಯಾವಾಗ? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ಟೀಂ ಇಂಡಿಯಾImage Credit source: BCCI X
ಪೃಥ್ವಿಶಂಕರ
|

Updated on: Nov 02, 2026 | 3:25 PM

Share

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ ಮುಕ್ತಾಯಗೊಳಿಸಿದೆ. ಭಾನುವಾರ ಸೆಡ್ಡನ್ ಪಾರ್ಕ್‌ನಲ್ಲಿ ನಡೆದ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್‌ಗಳ ಸೋಲು ಕಂಡಿತು. ಆದರೆ ಆರಂಭದ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಭಾರತ, ಐದು ಪಂದ್ಯಗಳ ಸರಣಿಯನ್ನು 3-2 ಅಂತರದಲ್ಲಿ ತನ್ನದಾಗಿಸಿಕೊಂಡಿದೆ. ಇದೀಗ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಈ ಸರಣಿ ನವೆಂಬರ್ 4ರಿಂದ ಆರಂಭವಾಗಲಿದೆ. ಇದಾದ ಬಳಿಕ ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನೂ ಆಡಲಿದೆ. ಡಿಸೆಂಬರ್ 1ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯ ಮುಕ್ತಾಯಗೊಳ್ಳಲಿದೆ. ಹೀಗಾಗಿ ಟೀಂ ಇಂಡಿಯಾ ಸುಮಾರು ಏಳು ವಾರಗಳ ಕಾಲ ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ದೂರ ಉಳಿಯಲಿದೆ.

ಮುಂದೆ ತವರಿನಲ್ಲೇ ಭಾರತದ ಟಿ20 ಕ್ರಿಕೆಟ್ ಅಭಿಯಾನ ಆರಂಭವಾಗಲಿದ್ದು, ಡಿಸೆಂಬರ್‌ನಲ್ಲಿ ಶ್ರೀಲಂಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಇದು 2026-27ರ ತವರಿನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್​ನಲ್ಲಿ ಭಾರತದ ಎರಡನೇ ಸರಣಿಯಾಗಿರಲಿದೆ.

ಭಾರತದ ಮುಂದಿನ ಟಿ20 ಪಂದ್ಯ ಯಾವಾಗ?

ಭಾರತ ತಂಡದ ಮುಂದಿನ ಟಿ20 ಅಂತರರಾಷ್ಟ್ರೀಯ ಪಂದ್ಯ ಡಿಸೆಂಬರ್ 22, 2026ರಂದು ನಡೆಯಲಿದೆ. ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯ ಆಡಲಿದೆ. ಈ ಪಂದ್ಯ ರಾತ್ರಿ 7 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯದೊಂದಿಗೆ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ಇದು 2026ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ತವರಿನ ಅಂತರರಾಷ್ಟ್ರೀಯ ಕ್ರಿಕೆಟ್ ಸೀಸನ್​ನ ಕೊನೆಯ ಸರಣಿಯಾಗಿರಲಿದೆ.

ಶ್ರೀಲಂಕಾ ತಂಡದ ಭಾರತ ಪ್ರವಾಸ ಡಿಸೆಂಬರ್ 13ರಿಂದ 27ರವರೆಗೆ ನಡೆಯಲಿದೆ. ಮೊದಲಿಗೆ ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ದೆಹಲಿ, ಬೆಂಗಳೂರು ಹಾಗೂ ಅಹಮದಾಬಾದ್‌ನಲ್ಲಿ ಏಕದಿನ ಪಂದ್ಯಗಳು ನಡೆಯಲಿವೆ. ಆ ಬಳಿಕ ಟಿ20 ಸರಣಿ ಆರಂಭವಾಗಲಿದೆ. ಮೂರು ಟಿ20 ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಆರಂಭವಾಗಲಿವೆ.

ಭಾರತದ ಮುಂಬರುವ ಟಿ20 ಸರಣಿಯ ವೇಳಾಪಟ್ಟಿ

  • ಡಿ. 22, ಮೊದಲ ಟಿ20: ಭಾರತ vs ಶ್ರೀಲಂಕಾ, ನಿರಂಜನ್ ಶಾ ಕ್ರೀಡಾಂಗಣ, ರಾಜ್‌ಕೋಟ್
  • ಡಿ. 24, ಎರಡನೇ ಟಿ20: ಭಾರತ vs ಶ್ರೀಲಂಕಾ, ಬಾರಾಬತಿ ಕ್ರೀಡಾಂಗಣ, ಕಟಕ್
  • ಡಿ. 27, ಮೂರನೇ ಟಿ20: ಭಾರತ vs ಶ್ರೀಲಂಕಾ, ಎಂಸಿಎ ಕ್ರೀಡಾಂಗಣ, ಪುಣೆ

ಟಿ20 ಕ್ರಿಕೆಟ್‌ನಲ್ಲಿ ಭಾರತದ್ದೇ ದರ್ಬಾರ್: ಒಂದೇ ಪಂದ್ಯದಲ್ಲಿ ಮೂರು ವಿಶ್ವದಾಖಲೆ..!

ಐಪಿಎಲ್​ವರೆಗೆ ಟಿ20 ಪಂದ್ಯಗಳಿಲ್ಲ

ಇನ್ನು ಜನವರಿಯಲ್ಲಿ ಜಿಂಬಾಬ್ವೆ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಅದೇ ತಿಂಗಳ ಕೊನೆಯಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬರಲಿದೆ. ಜನವರಿ 21ರಿಂದ ಮಾರ್ಚ್ 3ರವರೆಗೆ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನಡೆಯಲಿದೆ. ಆದರೆ ಈ ಎರಡೂ ಸರಣಿಗಳಲ್ಲಿ ಯಾವುದೇ ಟಿ20 ಪಂದ್ಯಗಳು ಇರುವುದಿಲ್ಲ.

ಹೀಗಾಗಿ ಐಪಿಎಲ್ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಯೇ ಕೊನೆಯ ಅಂತರರಾಷ್ಟ್ರೀಯ ಟಿ20 ಸರಣಿಯಾಗಿರಲಿದೆ. ಈ ಸರಣಿಯು ಆಯ್ಕೆಗಾರರಿಗೆ ಮುಂದಿನ ದಿನಗಳಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ಆಟಗಾರರ ಪ್ರದರ್ಶನವನ್ನು ಗಮನಿಸಲು ಉತ್ತಮ ಅವಕಾಶವಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ದರ ಏರಿಕೆ ಎಫೆಕ್ಟ್​: ನವ ದಂಪತಿಗೆ ಹಾಲು ಮೊಸರು ಗಿಫ್ಟ್
ದರ ಏರಿಕೆ ಎಫೆಕ್ಟ್​: ನವ ದಂಪತಿಗೆ ಹಾಲು ಮೊಸರು ಗಿಫ್ಟ್
ಹೆಲಿಕಾಪ್ಟರ್​ಗಳಲ್ಲಿ ಎರಡು ಪೈಲಟ್ಗಳು ಕಡ್ಡಾಯ
ಹೆಲಿಕಾಪ್ಟರ್​ಗಳಲ್ಲಿ ಎರಡು ಪೈಲಟ್ಗಳು ಕಡ್ಡಾಯ
ಬಿಗ್ ಬಾಸ್ ಮನೆಯಲ್ಲಿ ಕೋಲಾಹಲಕ್ಕೆ ಕಾರಣವಾದ ಕ್ಯಾಪ್ಟನ್ ಜಗದೀಶ್ ನಿರ್ಧಾರ
ಬಿಗ್ ಬಾಸ್ ಮನೆಯಲ್ಲಿ ಕೋಲಾಹಲಕ್ಕೆ ಕಾರಣವಾದ ಕ್ಯಾಪ್ಟನ್ ಜಗದೀಶ್ ನಿರ್ಧಾರ
ವಿಎ ಪರೀಕ್ಷೆಯಲ್ಲಿ ಅಕ್ರಮ: ಶಂಕರ್ ಬನ್ನೂರು ವಿರುದ್ಧ ಎಫ್​ಐಆರ್​​
ವಿಎ ಪರೀಕ್ಷೆಯಲ್ಲಿ ಅಕ್ರಮ: ಶಂಕರ್ ಬನ್ನೂರು ವಿರುದ್ಧ ಎಫ್​ಐಆರ್​​
ಸಿಎಂ ಡಿಕೆ ಶಿವಕುಮಾರ್ ಭೇಟಿಗೆ ಆಗಮಿಸಿದ ಸಂಸದ ಬಸವರಾಜ ಬೊಮ್ಮಾಯಿ!
ಸಿಎಂ ಡಿಕೆ ಶಿವಕುಮಾರ್ ಭೇಟಿಗೆ ಆಗಮಿಸಿದ ಸಂಸದ ಬಸವರಾಜ ಬೊಮ್ಮಾಯಿ!
ಅರುಣ್ ಸಾಳುಂಕೆ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಗಳು
ಅರುಣ್ ಸಾಳುಂಕೆ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಗಳು
ಕಾಫಿ, ಟೀ ಬೆಲೆ ಹೆಚ್ಚಳ: ಸರ್ಕಾರದ ವಿರುದ್ಧ ಆಕ್ರೋಶ, ಜನ ಏನಂತಾರೆ ನೋಡಿ
ಕಾಫಿ, ಟೀ ಬೆಲೆ ಹೆಚ್ಚಳ: ಸರ್ಕಾರದ ವಿರುದ್ಧ ಆಕ್ರೋಶ, ಜನ ಏನಂತಾರೆ ನೋಡಿ
ಸ್ಟಿಂಗ್ ಆಪರೇಷನ್ ಪ್ರಕರಣ: ಕುಮಾರಸ್ವಾಮಿ ದೆಹಲಿ ನಿವಾಸ ಪರಿಶೀಲನೆ ಸಾಧ್ಯತೆ
ಸ್ಟಿಂಗ್ ಆಪರೇಷನ್ ಪ್ರಕರಣ: ಕುಮಾರಸ್ವಾಮಿ ದೆಹಲಿ ನಿವಾಸ ಪರಿಶೀಲನೆ ಸಾಧ್ಯತೆ
ಶಕ್ತಿದೇವತೆ ಹಾಸನಾಂಬೆಯನ್ನು ನೋಡಲು ಕಿಕ್ಕಿರಿದ ಭಕ್ತರ ದಂಡು!
ಶಕ್ತಿದೇವತೆ ಹಾಸನಾಂಬೆಯನ್ನು ನೋಡಲು ಕಿಕ್ಕಿರಿದ ಭಕ್ತರ ದಂಡು!
ಕೃಷ್ಣಾ ನದಿ ನೀರು ವಿವಾದ, ಮಹಾರಾಷ್ಟ್ರದ ವಿರುದ್ಧ ಎಂಬಿ ಪಾಟೀಲ್ ವಾಗ್ದಾಳಿ
ಕೃಷ್ಣಾ ನದಿ ನೀರು ವಿವಾದ, ಮಹಾರಾಷ್ಟ್ರದ ವಿರುದ್ಧ ಎಂಬಿ ಪಾಟೀಲ್ ವಾಗ್ದಾಳಿ