AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL

IPL

2008 ರಲ್ಲಿ ಆರಂಭವಾದ ವಿಶ್ವ ಕ್ರಿಕೆಟ್​ನ ಅತ್ಯಂತ ಶ್ರೀಮಂತ ಟಿ20 ಲೀಗ್ ಐಪಿಎಲ್​ ಇದುವರೆಗೆ 18 ಆವೃತ್ತಿಗಳನ್ನು ಪೂರೈಸಿದೆ. ಇದೀಗ ಲೀಗ್​ನ 19ನೇ ಆವೃತ್ತಿಗೆ ಡಿಸೆಂಬರ್ 16 ರಂದು ಮಿನಿ ಹರಾಜು ನಡೆಯಲಿದೆ. ಒಟ್ಟು 10 ತಂಡಗಳು ಪಾಲ್ಗೊಳ್ಳುತ್ತಿರುವ ಈ ಲೀಗ್​ನಲ್ಲಿ ಅತ್ಯಂತ ಯಶಸ್ವಿ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ತಲಾ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿವೆ. ಉಳಿದಂತೆ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ 3 ಬಾರಿ, ಸನ್​ರೈಸರ್ಸ್​ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್, ಡೆಕ್ಕನ್ ಚಾರ್ಜಸ್, ಗುಜರಾತ್ ಟೈಟನ್ಸ್, ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳು ತಲಾ ಒಂದು ಬಾರಿ ಈ ಟ್ರೋಫಿಯನ್ನು ಎತ್ತಿಹಿಡಿದಿವೆ. 18 ವರ್ಷಗಳ ಬಳಿಕ ಈ ಟ್ರೋಫಿ ಎತ್ತಿಹಿಡಿದಿರುವ ಆರ್​ಸಿಬಿ ತಂಡ ಹಾಲಿ ಚಾಂಪಿಯನ್ ಆಗಿ 19ನೇ ಆವೃತ್ತಿಗೆ ಕಾಲಿಡಲಿದೆ.

ಇನ್ನೂ ಹೆಚ್ಚು ಓದಿ

MI ಮೀಟಿಂಗ್: ಹಾರ್ದಿಕ್ ಪಾಂಡ್ಯ ಭವಿಷ್ಯ ನಿರ್ಧಾರ!

Mumbai Indians: ಐಪಿಎಲ್ 2026ರ ಸೀಸನ್ ಮುಕ್ತಾಯದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಟೂರ್ನಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿ 9ನೇ ಸ್ಥಾನಕ್ಕೆ ಕುಸಿದ ಮುಂಬೈ ಇಂಡಿಯನ್ಸ್ (MI) ತಂಡ, ಈಗ ತನ್ನ ಭವಿಷ್ಯದ ದೃಷ್ಟಿಯಿಂದ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. 

IPL ‘ತಿಂಗಳ’ ಬದಲಾವಣೆಗೆ ಭರ್ಜರಿ ಪ್ಲ್ಯಾನ್

Indian Premier League: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-21 ರಲ್ಲಿ ಮಹತ್ವದ ಬದಲಾವಣೆ ಮಾಡಲು ಬಿಸಿಸಿಐ ಪ್ಲ್ಯಾನ್ ರೂಪಿಸುತ್ತಿದೆ. ಈ ಪ್ಲ್ಯಾನಿಂಗ್​​ನೊಂದಿಗೆ ಐಪಿಎಲ್​​ನಲ್ಲಿ ಕೆಲ ಬದಲಾವಣೆಯಾಗಲಿದೆ. ಅದರಲ್ಲಿ ಮುಖ್ಯ ಬದಲಾವಣೆ ಎಂದರೆ ಟೂರ್ನಿಯ ವಿಂಡೋ. ಅಂದರೆ ಐಪಿಎಲ್ ನಡೆಸುವ ತಿಂಗಳು ಬದಲಾಗಲಿದೆ.

ಆಡುವ ಬಯಕೆ ಇದೆ, ಆದರೆ..?; ಟೀಂ ಇಂಡಿಯಾದಲ್ಲಿ ಆಡುವ ಬಗ್ಗೆ ಮನದಾಳ ತೆರೆದಿಟ್ಟ ಭುವನೇಶ್ವರ್

Bhuvneshwar Kumar comeback: ಇತ್ತೀಚಿನ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ 28 ವಿಕೆಟ್‌ ಪಡೆದ ಭುವನೇಶ್ವರ್ ಕುಮಾರ್ ಟೀಂ ಇಂಡಿಯಾ ಕಮ್‌ಬ್ಯಾಕ್ ಬಗ್ಗೆ ಆಸಕ್ತಿ ಹೆಚ್ಚಿಸಿದ್ದಾರೆ. ಸ್ವಿಂಗ್ ಬೌಲರ್ ಭುವಿ, ಇತ್ತೀಚಿನ ಸರಣಿಗಳಿಗೆ ಆಯ್ಕೆಯಾಗದಿದ್ದರೂ, ಮೌನ ಮುರಿದು ನೀಲಿ ಜೆರ್ಸಿ ಧರಿಸುವ ಬಯಕೆ ವ್ಯಕ್ತಪಡಿಸಿದ್ದಾರೆ. ಆಯ್ಕೆದಾರರ ತೀರ್ಮಾನಕ್ಕೆ ಬಿಟ್ಟಿದ್ದೇನೆ ಎಂದಿದ್ದಾರೆ.

ಭರ್ಜರಿ ಬೌಲಿಂಗ್, ಸಿಡಿಲಬ್ಬರದ ಬ್ಯಾಟಿಂಗ್: ಅರ್ಜುನ್ ತೆಂಡೂಲ್ಕರ್ ಮಿಂಚಿಂಗ್!

Arjun Tendulkar: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ 13 ಮ್ಯಾಚ್​ಗಳಲ್ಲಿ ಬೆಂಚ್ ಕಾದಿದ್ದ ಅರ್ಜುನ್ ತೆಂಡೂಲ್ಕರ್ ಇದೀಗ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅದು ಕೂಡ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ. ಇದರ ಜೊತೆ ಬೌಲಿಂಗ್​ನಲ್ಲೂ ಪರಾಕ್ರಮ ಮೆರೆದಿದ್ದಾರೆ.

ನಾನು RCB ತಂಡದ ಕಟ್ಟಾ ಅಭಿಮಾನಿ: ವೈಭವ್ ಅಚ್ಚರಿಯ ಹೇಳಿಕೆ!

Vaibhav Sooryavanshi: ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ದಾಂಡಿಗ ವೈಭವ್ ಸೂರ್ಯವಂಶಿ ಈ ಬಾರಿಯ ಐಪಿಎಲ್​​ನಲ್ಲಿ ಬರೋಬ್ಬರಿ 776 ರನ್​​ ಕಲೆಹಾಕಿದ್ದರು. ಈ ಭರ್ಜರಿ ಪ್ರದರ್ಶನದೊಂದಿಗೆ ಒಂದೇ ಐಪಿಎಲ್​​ ಸೀಸನ್​ನಲ್ಲಿ 5 ಪ್ರಶಸ್ತಿ ಪಡೆದು ಹೊಸ ಇತಿಹಾಸ ನಿರ್ಮಿಸಿದ್ದರು. ಅಲ್ಲದೆ ಇದೀಗ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂ ಸಿಸಿಟಿವಿ ವಿವಾದಕ್ಕೆ ಭಾರಿ ಟ್ವಿಸ್ಟ್: ಬಾಕಿ ಹಣ ನೀಡದೆ ಅಮಾಯಕರ ಮೇಲೆ ಸುಳ್ಳು ಕೇಸ್ ಹಾಕಿದ ಆರೋಪ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸಿಸಿಟಿವಿ ವೈರ್ ಕಟ್ ಪ್ರಕರಣಕ್ಕೆ ಭಾರಿ ಟ್ವಿಸ್ಟ್ ಸಿಕ್ಕಿದ್ದು, ಕಂಪನಿಗಳು ಬಾಕಿ ಹಣ ನೀಡದೆ ವಂಚಿಸಲು ಅಮಾಯಕರ ಮೇಲೆ ಸುಳ್ಳು ಕೇಸ್ ದಾಖಲಿಸಿವೆ ಎಂಬ ಆರೋಪ ಕೇಳಿಬಂದಿದೆ. ಕೋರ್ಟ್ ನೀಡಿದ್ದ ಎಸ್‌ಒಪಿ ನಿಯಮ ಉಲ್ಲಂಘಿಸಿ ಎಐ ಹೆಸರಿನಲ್ಲಿ ಸಾಮಾನ್ಯ ಕ್ಯಾಮೆರಾ ಅಳವಡಿಸಿ ಕಣ್ಣಿಗೆ ಮಣ್ಣೆರಚಲಾಗಿದ್ದು, ತಾಂತ್ರಿಕ ದೋಷದಿಂದ ಸಿಸಿಟಿವಿ ಆಫ್ ಆಗಿದ್ದನ್ನೇ ದುಷ್ಕೃತ್ಯ ಎಂದು ಬಿಂಬಿಸಲಾಗಿದೆ ಎಂದು ಐವಿಎಸ್ ಸಿಬ್ಬಂದಿ ದೂರಿದ್ದಾರೆ.

ಬರೀ ಸಿಕ್ಸ್ ಸಿಕ್ಸ್ ಸಿಕ್ಸ್​… ಐಪಿಎಲ್ ಬಗ್ಗೆ ಲಿವಿಂಗ್‌ಸ್ಟೋನ್ ಅಸಮಾಧಾನ!

ಐಪಿಎಲ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ರನ್ ಮಳೆ ಮತ್ತು ಬ್ಯಾಟರ್‌ಗಳ ಅಬ್ಬರಕ್ಕೆ ಇತ್ತೀಚಿನ ಸೀಸನ್‌ಗಳು ಸಾಕ್ಷಿಯಾಗಿವೆ. ಆದರೆ, ಇದೇ ರನ್ ಗಳಿಕೆಯ ವೈಭವ ಈಗ ಕ್ರಿಕೆಟ್‌ನ ನೈಜ ಸೌಂದರ್ಯವನ್ನು ಕೆಡಿಸುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ಎದ್ದಿದೆ. ಈ ಬಗ್ಗೆ ಇಂಗ್ಲೆಂಡ್ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

ಯಾವುದೇ ಪಾತ್ರ ಕೊಟ್ಟರೂ ನಟ ರಣವೀರ್ ಸಿಂಗ್ ಅವರು ಯಶಸ್ವಿಯಾಗಿ ನಿಭಾಯಿಸುತ್ತಾರೆ. ಲಲಿತ್ ಮೋದಿ ಬಯೋಪಿಕ್​ನಲ್ಲಿ ನಟಿಸಲು ರಣವೀರ್ ಸಿಂಗ್ ಆಸಕ್ತಿ ತೋರಿಸಿದ್ದರು ಎಂಬ ವಿಷಯ ತಿಳಿದುಬಂದಿದೆ. ಈ ವಿಚಾರವನ್ನು ಸ್ವತಃ ಲಲಿತ್ ಮೋದಿ ಅವರೇ ಬಹಿರಂಗಪಡಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಐಪಿಎಲ್ ತಂಡ ಖರೀದಿಸಲು ಮುಂದಾಗಿದ್ದ ದಾವೂದ್; ಪ್ಯಾಂಟ್‌ನಲ್ಲೇ ಮೂತ್ರ ಮಾಡಿಕೊಂಡಿದ್ದ ಲಲಿತ್ ಮೋದಿ

Lalit Modi, Dawood Ibrahim: ಐಪಿಎಲ್ ಜನಕ ಲಲಿತ್ ಮೋದಿ, ದಾವೂದ್ ಇಬ್ರಾಹಿಂ ಮತ್ತು ಆತನ ಗ್ಯಾಂಗ್‌ನಿಂದ ಬಂದ ಕೊಲೆ ಬೆದರಿಕೆಗಳು ಹಾಗೂ ಮ್ಯಾಚ್ ಫಿಕ್ಸಿಂಗ್ ವಿರುದ್ಧದ ತಮ್ಮ ನಿಲುವಿನ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್ ಆರಂಭಿಕ ವರ್ಷಗಳಲ್ಲಿ, ದಾವೂದ್‌ನ ಶತಕೋಟಿ ಡಾಲರ್ ಬೆಟ್ಟಿಂಗ್ ಸಾಮ್ರಾಜ್ಯದ ಮೇಲೆ ಪರಿಣಾಮ ಬೀರಿದ್ದರಿಂದ ಕೊಲೆ ಯತ್ನಗಳು, ಬೆದರಿಕೆಗಳು, ಮತ್ತು ತನ್ನ ಮಗನ ಅಪಹರಣದಂತಹ ಘಟನೆಗಳು ನಡೆದಿದ್ದನ್ನು ಮೋದಿ ವಿವರಿಸಿದ್ದಾರೆ. ಈ ಸಂಘರ್ಷದಿಂದಾಗಿಯೇ ತಾನು ಕ್ರಿಕೆಟ್‌ನಿಂದ ದೂರವಾಗಬೇಕಾಯಿತು ಎಂದಿದ್ದಾರೆ.

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

ಲಲಿತ್ ಮೋದಿ ಅವರು 2010ರ ಕೊಚ್ಚಿ ಟಸ್ಕರ್ಸ್ ಐಪಿಎಲ್ ವಿವಾದದ ಬಗ್ಗೆ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಅಂದಿನ ಯುಪಿಎ ಸರ್ಕಾರ ಮತ್ತು ಬಿಸಿಸಿಐನಿಂದ ತೀವ್ರ ಒತ್ತಡ ಎದುರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. ಶಶಿ ತರೂರ್, ಸೋನಿಯಾ ಗಾಂಧಿ, ಅಹ್ಮದ್ ಪಟೇಲ್, ಪ್ರಣಬ್ ಮುಖರ್ಜಿ ಮತ್ತು ಶಶಾಂಕ್ ಮನೋಹರ್ ಅವರ ಪಾತ್ರವನ್ನು ವಿವರಿಸಿದ್ದಾರೆ. ಸುನಂದಾ ಪುಷ್ಕರ್ ಅವರಿಗೆ ಉಚಿತ ಷೇರುಗಳ ಹಂಚಿಕೆ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

ಆರ್​ಸಿಬಿ ಹ್ಯಾಟ್ರಿಕ್ ಕಪ್ ಗೆಲ್ಲುವುದು ಕಷ್ಟಕರ..! ಇದು ಐಪಿಎಲ್ ಇತಿಹಾಸ ನುಡಿದ ಭವಿಷ್ಯ

RCB's Back-to-Back IPL Wins: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಐಪಿಎಲ್ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದೆ. ಆದರೆ, ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಪ್ರಶಸ್ತಿ ಗೆದ್ದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮೂರನೇ ಟ್ರೋಫಿಗಾಗಿ ದೀರ್ಘಕಾಲ ಕಾಯಬೇಕಾಯಿತು. ಈ ಅಂಕಿಅಂಶಗಳ ಪ್ರಕಾರ, ಆರ್​ಸಿಬಿ ಕೂಡ ತನ್ನ ಮುಂದಿನ ಟ್ರೋಫಿಗಾಗಿ ನಿರೀಕ್ಷೆಗಿಂತ ಹೆಚ್ಚು ಸಮಯ ಕಾಯಬೇಕಾಗಬಹುದು ಎಂದು ಐತಿಹಾಸಿಕ ವಿಶ್ಲೇಷಣೆ ಸೂಚಿಸುತ್ತದೆ.

IPL 2026: 15 ರನ್ ಬಾರಿಸಲು 13 ಕೋಟಿ ಸಂಬಳ ಪಡೆದ ಸನ್‌ರೈಸರ್ಸ್ ಬ್ಯಾಟರ್

Liam Livingstone IPL 2026: ಐಪಿಎಲ್ 2026ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಲಿಯಾಮ್ ಲಿವಿಂಗ್‌ಸ್ಟನ್ ಕಳಪೆ ಪ್ರದರ್ಶನ ನೀಡಿದರು. 13 ಕೋಟಿ ರೂ.ಗಳಿಗೆ ಖರೀದಿಸಿದರೂ, ಕೇವಲ 2 ಪಂದ್ಯಗಳಲ್ಲಿ 15 ರನ್ ಗಳಿಸಿ ದುಬಾರಿ ವೈಫಲ್ಯ ಅನುಭವಿಸಿದರು. ಈ ಹಿಂದೆ ಸಹ ಅವರು ಅಸ್ಥಿರ ಪ್ರದರ್ಶನ ನೀಡಿದ್ದರು. ಹೆಚ್ಚಿನ ಹಣ ಖರ್ಚು ಮಾಡಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ, ಹೈದರಾಬಾದ್ ಫ್ರಾಂಚೈಸಿ ಅವರನ್ನು ಮುಂದಿನ ಆವೃತ್ತಿಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.