ಅಮೆರಿಕ: ಟ್ರಂಪ್ ಆದೇಶಕ್ಕೆ ಹೆದರಿ ಪಾರ್ಟ್ ಟೈಂ ಉದ್ಯೋಗ ತೊರೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳು
ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕದ ಮೊದಲ ಮೂರು ದಿನಗಳಲ್ಲಿ ಅಮೆರಿಕದ ಅಧಿಕಾರಿಗಳು ಅಕ್ರಮ ವಲಸಿಗರ ನಿಯಂತ್ರಣ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದಕ್ಕೆ ಹೆದರಿರುವ ಭಾರತೀಯ ವಿದ್ಯಾರ್ಥಿಗಳು ಪಾರ್ಟ್ ಟೈಂ ಉದ್ಯೋಗವನ್ನು ತೊರೆಯುತ್ತಿದ್ದಾರೆ. ಕಾನೂನುಬದ್ಧವಾಗಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರೂ ಗಡಿಪಾರು ಭೀತಿ ಎದುರಿಸುತ್ತಿದ್ದಾರೆ. ಈ ಭಯದಿಂದ ಇಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಅರೆಕಾಲಿಕ ಉದ್ಯೋಗಗಳನ್ನು ತೊರೆಯಲಾರಂಭಿಸಿದ್ದಾರೆ.
ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿ ಆರಂಭವಾಗುತ್ತಿದ್ದಂತೆಯೇ ವಲಸಿಗರ ಸಮಸ್ಯೆಗಳು ಹೆಚ್ಚಾಗತೊಡಗಿವೆ. ಅಕ್ರಮ ವಲಸಿಗರ ವಿರುದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಈ ಭಯದಿಂದ ಭಾರತೀಯ ವಿದ್ಯಾರ್ಥಿಗಳು ಪಾರ್ಟ್ ಟೈಂ ಉದ್ಯೋಗವನ್ನು ತೊರೆಯುತ್ತಿದ್ದಾರೆ. ಕಾನೂನುಬದ್ಧವಾಗಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರೂ ಗಡಿಪಾರು ಭೀತಿ ಎದುರಿಸುತ್ತಿದ್ದಾರೆ. ಈ ಭಯದಿಂದ ಇಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಅರೆಕಾಲಿಕ ಉದ್ಯೋಗಗಳನ್ನು ತೊರೆಯಲಾರಂಭಿಸಿದ್ದಾರೆ.
ವಾಸ್ತವವಾಗಿ, F-1 ವೀಸಾದ ನಿಯಮಗಳ ಅಡಿಯಲ್ಲಿ, ಅಮೆರಿಕದಲ್ಲಿ ಅಧ್ಯಯನ ಮಾಡುವ ವಿದೇಶಿ ವಿದ್ಯಾರ್ಥಿಗಳು ವಾರದಲ್ಲಿ ಗರಿಷ್ಠ 20 ಗಂಟೆಗಳ ಕಾಲ ಮಾತ್ರ ಕೆಲಸ ಮಾಡಲು ಅನುಮತಿಸಲಾಗಿದೆ. ಆದಾಗ್ಯೂ, ವಿದ್ಯಾರ್ಥಿಗಳು ತಮ್ಮ ವೆಚ್ಚಗಳನ್ನು ಪೂರೈಸಲು ನಿಯಮಗಳಿಗೆ ವಿರುದ್ಧವಾಗಿ ಕ್ಯಾಂಪಸ್‌ನ ಹೊರಗೆ ಕೆಲಸ ಮಾಡುತ್ತಾರೆ. ಈಗ ವಲಸೆ ನಿಯಮಗಳ ಮೇಲೆ ಟ್ರಂಪ್ ಅವರ ಕಟ್ಟುನಿಟ್ಟಿನ ನಂತರ, ವಿದ್ಯಾರ್ಥಿಗಳು ತಮ್ಮ ಕ್ಯಾಂಪಸ್‌ನ ಅರೆಕಾಲಿಕ ಉದ್ಯೋಗಗಳನ್ನು ತೊರೆಯಲು ಪ್ರಾರಂಭಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾವು ಕೆಲವು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದೆ. ನಾನು ಕಾಲೇಜು ಮುಗಿದ ನಂತರ ನನ್ನ ಖರ್ಚುಗಳನ್ನು ಪೂರೈಸಲು ಸಣ್ಣ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿಂದ ನಾನು ಗಂಟೆಗೆ 7 ಡಾಲರ್ ಪಡೆಯುತ್ತಿದ್ದೆ. ನಾನು ದಿನಕ್ಕೆ 6 ಗಂಟೆ ಕೆಲಸ ಮಾಡುತ್ತಿದ್ದೆ. ಇದೊಂದು ಉತ್ತಮ ವ್ಯವಸ್ಥೆಯಾಗಿತ್ತು. ಆದರೆ ಕಳೆದ ವಾರ ನಾನು ಆ ಕೆಲಸ ಬಿಟ್ಟೆ. ಅನಧಿಕೃತ ಕೆಲಸದ ಕಾರಣದಿಂದ ನಾನು ಗಡೀಪಾರಾಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: ಮೂರನೇ ಬಾರಿಗೆ ಅಧ್ಯಕ್ಷರಾಗಲಿದ್ದಾರಾ ಟ್ರಂಪ್? ಅಮೆರಿಕ ಸಂಸತ್ನಲ್ಲಿ ನಿಲುವಳಿ ಮಂಡನೆ
ಅಕ್ರಮ ವಲಸಿಗರನ್ನು ಆದಷ್ಟು ಬೇಗ ಅಮೆರಿಕದಿಂದ ಹೊರಹಾಕುವುದು ಮತ್ತು ಕಾನೂನುಬದ್ಧ ವಲಸಿಗರಿಗೆ ಮಾಡಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಮುಂತಾದ ಹಲವು ಆದೇಶಗಳನ್ನು ಇವು ಒಳಗೊಂಡಿವೆ. ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅಮೆರಿಕದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಅಕ್ರಮ ವಲಸಿಗರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಅದರಂತೆ ಬೃಹತ್ ಕಾರ್ಯಾಚರಣೆಯೊಂದರಲ್ಲಿ 500ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಿದ್ದು, ನೂರಾರು ಮಂದಿಯನ್ನ ಗಡಿಪಾರು ಮಾಡಲಾಗಿದೆ.
ಇತ್ತೀಚೆಗಷ್ಟೇ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಟ್ರಂಪ್ ಹಲವು ಮಹತ್ವದ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದರು. ಈ ಪೈಕಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಆದೇಶವು ಪ್ರಮುಖವಾಗಿತ್ತು. ಇದರ ಭಾಗವಾಗಿ ಇಂದು ಮೊದಲ ಕಾರ್ಯಾಚರಣೆ ನಡೆದಿದೆ.
ಟ್ರಂಪ್ ಆಡಳಿತವು ಶಂಕಿತ ಭಯೋತ್ಪಾದಕ, ಅಪ್ರಾಪ್ತ ವಯಸ್ಕರ ವಿರುದ್ಧ ಅತ್ಯಾಚಾರ ಅಪರಾಧಕ್ಕೆ ಶಿಕ್ಷೆಗೊಳಗಾದ ಹಲವಾರು ಅಕ್ರಮ ವಲಸಿಗರು ಸೇರಿದಂತೆ 538 ಅಕ್ರಮ ವಲಸಿಗ ಕ್ರಿಮಿನಲ್ ಗಳನ್ನು ಬಂಧಿಸಿದೆ. ಜತೆಗೆ ಮಿಲಿಟರಿ ವಿಮಾನದ ಮೂಲಕ ನೂರಾರು ಅಕ್ರಮ ವಲಸಿಗರನ್ನು ಗಡೀಪಾರು ಮಾಡಿದೆ. ಇತಿಹಾಸದಲ್ಲೇ ಬೃಹತ್ ಗಡೀಪಾರು ಕಾರ್ಯಾಚರಣೆ ನಡೆಯುತ್ತಿದೆ. ಭರವಸೆಗಳನ್ನು ನೀಡಿದ್ದಾರೆ, ಭರವಸೆಗಳನ್ನು ಉಳಿಸಿಕೊಂಡಿದ್ದಾರೆ ಎಂದು ಕ್ಯಾರೊಲಿನ್ ಲಿವಿಟ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ