AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದಲ್ಲಿ ಸತ್ತಿದ್ದು 2.10 ಕೋಟಿ ಮಂದಿ, ಬರೀ 4,600 ಅಲ್ವಂತೆ! ಹೇಗೆ?

ವಾಷಿಂಗ್ಟನ್: ಮಹಾಮಾರಿ ಕೊರೊನಾ ತವರೂರು ಚೀನಾದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,600ಎಂದು ಹೇಳಿಕೆ ನೀಡಿದೆ. ಆದ್ರೆ ಅಮೆರಿಕದ ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿ ಹೊರಬಂದಿದ್ದು, ಡ್ರ್ಯಾಗನ್ ನಾಡಿನಲ್ಲಿ ಕೇವಲ ಮೂರೇ ತಿಂಗಳಲ್ಲಿ ಕೊರೊನಾಗೆ 2 ಕೋಟಿ 10 ಲಕ್ಷ ಜನರು ಬಲಿಯಾಗಿದ್ದಾರೆ ಎನ್ನಲಾಗ್ತಿದೆ. ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ ಚೀನಾದಲ್ಲಿ ಬರೋಬ್ಬರಿ 2.10 ಕೋಟಿ ಜನ ಬಲಿಯಾಗಿದ್ದಾರೆ ಎಂದು ಜಗತ್ತನ್ನೇ ನಡುಗಿಸುವ ಅತೀ ಭೀಕರ ಮಾಹಿತಿಯನ್ನು ಅಮೆರಿಕದ ಸರ್ಕಾರಕ್ಕೆ ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ […]

ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Apr 17, 2020 | 2:48 PM

Share

ವಾಷಿಂಗ್ಟನ್: ಮಹಾಮಾರಿ ಕೊರೊನಾ ತವರೂರು ಚೀನಾದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,600ಎಂದು ಹೇಳಿಕೆ ನೀಡಿದೆ. ಆದ್ರೆ ಅಮೆರಿಕದ ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿ ಹೊರಬಂದಿದ್ದು, ಡ್ರ್ಯಾಗನ್ ನಾಡಿನಲ್ಲಿ ಕೇವಲ ಮೂರೇ ತಿಂಗಳಲ್ಲಿ ಕೊರೊನಾಗೆ 2 ಕೋಟಿ 10 ಲಕ್ಷ ಜನರು ಬಲಿಯಾಗಿದ್ದಾರೆ ಎನ್ನಲಾಗ್ತಿದೆ.

ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ ಚೀನಾದಲ್ಲಿ ಬರೋಬ್ಬರಿ 2.10 ಕೋಟಿ ಜನ ಬಲಿಯಾಗಿದ್ದಾರೆ ಎಂದು ಜಗತ್ತನ್ನೇ ನಡುಗಿಸುವ ಅತೀ ಭೀಕರ ಮಾಹಿತಿಯನ್ನು ಅಮೆರಿಕದ ಸರ್ಕಾರಕ್ಕೆ ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸಹ ಸೋಂಕಿತರ ಸಂಖ್ಯೆಯನ್ನು ಚೀನಾ ಮುಚ್ಚಿಟ್ಟಿದೆ ಎಂದು ಗಂಭೀರ ಆರೋಪ ಮಾಡಿದ್ರು.

ಇದಕ್ಕೆ ಕಾರಣ ಅಮೆರಿಕದಲ್ಲಿ ಕೊರೊನಾಗೆ ಇದುವರೆಗೂ 34 ಸಾವಿರ ಜನರು ಬಲಿಯಾಗಿದ್ರೆ, ಇಟಲಿಯಲ್ಲಿ 22 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಆದ್ರೆ, ಕೊರೊನಾ ವೈರಸ್ ಹುಟ್ಟಿದ ಚೀನಾದಲ್ಲಿ ಕೇವಲ 5 ಸಾವಿರು ಜನರು ಮೃತಪಟ್ಟಿದ್ದಾರೆ ಎಂದು ಚೀನಾ ಹೇಳಿತ್ತು. ಹಾಗಾಗಿ ಚೀನಾ ನೀಡಿದ ಅಂಕಿ ಸಂಖ್ಯೆ ಭಾರೀ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು.

2019ರ ಡಿಸೆಂಬರ್​ನಿಂದ 2020ರ ಮಾರ್ಚ್ ತನಕ 2ಕೋಟಿ 10 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ ಎಂದು ಅಮೆರಿಕದ ಗುಪ್ತಚರರು ಮಾಹಿತಿ ನೀಡಿದ್ದಾರೆ. ಈ ಅವಧಿಯಲ್ಲಿ ಚೀನಾದಲ್ಲಿ 84 ಲಕ್ಷ ಲ್ಯಾಂಡ್ ಲೈನ್ ಫೋನ್ ಸಹ ಬಂದ್ ಆಗಿದ್ದವು. ಚೀನಾದಲ್ಲಿ ವ್ಯಕ್ತಿ ಸತ್ತ ಬಳಿಕ ಮಾತ್ರ ಸೆಲ್ ಫೋನ್ ಖಾತೆ ಬಂದ್ ಆಗುತ್ತೆ. ಏಕೆಂದ್ರೆ ಚೀನಾ ಸಂಪೂರ್ಣ ಡಿಜಿಟಲ್ ದೇಶ. ಚೀನಾದಲ್ಲಿ ಪ್ರತಿಯೊಂದು ಕೆಲಸವೂ ಮೊಬೈಲ್​ನಿಂದ್ಲೇ ಆಗುತ್ತೆ.

Published On - 1:48 pm, Fri, 17 April 20

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು