FD Rates: ನಗಣ್ಯ ಎನಿಸುವಂಥ ಬ್ಯಾಂಕ್ ಬಡ್ಡಿದರ ಕಾಲದಲ್ಲಿ ನಿವೃತ್ತರು ಪರಿಗಣಿಸಬೇಕಾದ ಪರ್ಯಾಯ ಮಾರ್ಗಗಳಿವು

ಬ್ಯಾಂಕ್​ಗಳಲ್ಲಿ ಹಿರಿಯ ನಾಗರಿಕರಿಗೆ ಸಿಗುತ್ತಿರುವ ಬಡ್ಡಿದರವು ಹಣದುಬ್ಬರದ ಸರಾಸರಿಗಿಂತಲೂ ಕಡಿಮೆ. ಅಂದರೆ ಇಂಥ ನಿಶ್ಚಿತ ಠೇವಣಿಗಳಲ್ಲಿ ಇರಿಸಿದ ಹಣ ಇದ್ದಂತೆ ಇದ್ದರೂ ಅದರ ಮೌಲ್ಯ ಕಡಿಮೆಯಾದಂತೆ.

FD Rates: ನಗಣ್ಯ ಎನಿಸುವಂಥ ಬ್ಯಾಂಕ್ ಬಡ್ಡಿದರ ಕಾಲದಲ್ಲಿ ನಿವೃತ್ತರು ಪರಿಗಣಿಸಬೇಕಾದ ಪರ್ಯಾಯ ಮಾರ್ಗಗಳಿವು
ಪ್ರಾತಿನಿಧಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: preethi shettigar

Updated on: Sep 13, 2021 | 8:41 AM

ಬ್ಯಾಂಕ್ ಬಡ್ಡಿದರಗಳು ಐತಿಹಾಸಿಕ ಕೆಳಮಟ್ಟದಲ್ಲಿವೆ. ಇಡಗಂಟನ್ನು ಬ್ಯಾಂಕುಗಳಲ್ಲಿ ಠೇವಣಿಯಿರಿಸಿ ಅದರಿಂದ ಸಿಗುವ ನಿಗದಿತ ಆದಾಯವನ್ನು ಜೀವನಕ್ಕೆ ನೆಚ್ಚಿಕೊಂಡಿರುವವರು ಕಡಿಮೆ ಬಡ್ಡಿದರದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಭಾರತದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮೂರು ವರ್ಷಗಳಿಗೆ ಎಫ್​ಡಿ ಮಾಡಿದರೆ ಹಿರಿಯ ನಾಗರಿಕರಿಗೆ ಶೇ 5.80 ಬಡ್ಡಿ ಸಿಗುತ್ತಿದೆ. ಒಂದು ವರ್ಷದ ಎಫ್​ಡಿಗೆ ಶೇ 5ರ ಬಡ್ಡಿ ಸಿಗುತ್ತಿದೆ. ಪ್ರಸ್ತುತ ಭಾರತದ ಹಣದುಬ್ಬರ ಸರಾಸರಿ ಶೇ 5.59 ಇದೆ. ಈ ಲೆಕ್ಕದಲ್ಲಿ ಅಂದಾಜಿಸಿದರೆ ಸಿಗುತ್ತಿರುವ ಬಡ್ಡಿದರವು ಹಣದುಬ್ಬರದ ಸರಾಸರಿಗಿಂತಲೂ ಕಡಿಮೆ. ಅಂದರೆ ಇಂಥ ನಿಶ್ಚಿತ ಠೇವಣಿಗಳಲ್ಲಿ ಇರಿಸಿದ ಹಣ ಇದ್ದಂತೆ ಇದ್ದರೂ ಅದರ ಮೌಲ್ಯ ಕಡಿಮೆಯಾದಂತೆ.

ಮುಂದಿನ ದಿನಗಳಲ್ಲಿ ಬಡ್ಡಿದರಗಳು ಹೆಚ್ಚಾಗಬಹುದು ಎಂಬ ವಿಶ್ಲೇಷಣೆಗಳು ಚಾಲ್ತಿಗೆ ಬಂದಿವೆಯಾದರೂ, ಬಡ್ಡಿದರಗಳ ಏರಿಕೆಯ ಘೋಷಣೆ ಇನ್ನೂ ಆರಂಭವಾಗಿಲ್ಲ. ಒಂದು ವೇಳೆ ಬಡ್ಡಿದರ ಹೆಚ್ಚಾದರೆ ಬ್ಯಾಂಕ್ ಠೇವಣಿಯಿಂದ ಸಿಗುವ ಆದಾಯವು ಹಣದುಬ್ಬರಕ್ಕಿಂತಲೂ ಹೆಚ್ಚಾಗಬಹುದು. ಆದರೆ ಸದ್ಯದಮಟ್ಟಿಗೆ ಇಂಥ ನಿರೀಕ್ಷೆಗಳು ಕಾಣಿಸುತ್ತಿಲ್ಲ. ಹೀಗಾಗಿ ಸ್ಥಿರ ಠೇವಣಿಗಳಿಗೆ ಹೊರತಾದ ಆಯ್ಕೆಗಳನ್ನು ಹಿರಿಯ ನಾಗರಿಕರು ನೋಡಬೇಕಾಗಿದೆ. ಅಂಥ ಒಂದಿಷ್ಟು ಆಯ್ಕೆಗಳ ಮಾಹಿತಿ ಇಲ್ಲಿದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ ಕೇಂದ್ರ ಸರ್ಕಾರ ನಿರ್ವಹಿಸುವ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (Senior citizens saving scheme – SCSS) ತೊಡಗಿಸುವ ಹಣಕ್ಕೆ ವಾರ್ಷಿಕ ಶೇ 7.4 ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ ತೊಡಗಿಸುವ ಹಣಕ್ಕೆ ಆದಾಯ ತೆರಿಗೆ ಕಾಯ್ದೆಯ ನಿಯಮ 80 ಸಿ ಅಡಿಯಲ್ಲಿ ₹ 1.5 ಲಕ್ಷದವರೆಗೆ ತೆರಿಗೆ ವಿನಾಯ್ತಿಯೂ ಇದೆ. ಆದರೆ ಈ ಯೋಜನೆಯಲ್ಲಿ ಗರಿಷ್ಠ ₹ 15 ಲಕ್ಷ ಹೂಡಿಕೆ ಮಾಡಲು ಮಾತ್ರ ಅವಕಾಶವಿದೆ.

ಪ್ರಧಾನ ಮಂತ್ರಿ ವಯವಂದನ ಯೋಜನೆ ಭಾರತ ಸರ್ಕಾರ ಬೆಂಬಲಿತ ಯೋಜನೆ ಪ್ರಧಾನ ಮಂತ್ರಿ ವಯ ವಂದನ (Pradhan Mantri Vay Vandana Yojana – PMVVY). ಭಾರತೀಯ ಜೀವ ವಿಮಾ ನಿಗಮ ಈ ಯೋಜನೆ ಅನುಷ್ಠಾನದ ಹೊಣೆ ಹೊತ್ತಿದೆ. ಈ ಯೋಜನೆಯಲ್ಲಿ ₹ 15 ಲಕ್ಷ ಹಣ ತೊಡಗಿಸಲು ಅವಕಾಶವಿದೆ. ಈ ಹಣಕ್ಕೆ ಶೇ 7.4ರಷ್ಟು ಬಡ್ಡಿ ಸಿಗುತ್ತದೆ.

ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆ ಮೇಲಿನ ಎರಡೂ ಯೋಜನೆಗಳಲ್ಲಿ ₹ 30 ಲಕ್ಷ ತೊಡಗಿಸಿದ ನಂತರವೂ ಹೂಡಿಕೆಗೆ ಹಣ ಇದ್ದರೆ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (Post Office Monthly Income Scheme – POMIS) ಉತ್ತಮ ಆಯ್ಕೆಯಾಗುತ್ತದೆ. ಅಂಚೆ ಕಚೇರಿ ಮೂಲಕ ನಿರ್ವಹಿಸುವ ಈ ಯೋಜನೆಯಲ್ಲಿ ಗರಿಷ್ಠ ₹ 4.5 ಲಕ್ಷ ಹಣ ತೊಡಗಿಸಬಹುದು. ಈ ಯೋಜನೆಯಲ್ಲಿ ತೊಡಗಿಸುವ ಹಣಕ್ಕೆ ಶೇ 6.6 ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯೊಂದಿಗೆ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯನ್ನು ಸಂಯೋಜಿಸಿಕೊಂಡರೆ ಅಸಲು ನಷ್ಟವಾಗುವ ಭೀತಿಯಿಲ್ಲದೆ ಪ್ರತಿ ತಿಂಗಳು ನಿಗದಿತ ಮೊತ್ತ ಪಡೆದುಕೊಳ್ಳಬಹುದು.

ಕಂಪನಿ ಡೆಪಾಸಿಟ್, ಎನ್​ಸಿಡಿ ಕೆಲ ಖಾಸಗಿ ಕಂಪನಿಗಳು ಸಹ ಬ್ಯಾಂಕ್​ಗಳಿಗಿಂತ ಹೆಚ್ಚಿನ ಬಡ್ಡಿ ಕೊಡುವ ನಿಶ್ಚಿತ ಠೇವಣಿ, ನಾನ್​ ಕನ್​ವರ್ಟಿಬಲ್ ಡಿಬೆಂಚರ್​ಗಳನ್ನು (ಎನ್​ಸಿಡಿ) ನೀಡುತ್ತವೆ. ಆದರೆ ಇಂಥ ಹೂಡಿಕೆಗಳಿಗೆ ಸರ್ಕಾರದ ಖಾತ್ರಿ ಇರುವುದಿಲ್ಲ. ಕೆಲವೊಮ್ಮೆ ಸರ್ಕಾರಿ ಕಂಪನಿಗಳು ಸಹ ಎನ್​ಸಿಡಿಗಳನ್ನು ಘೋಷಿಸುವುದುಂಟು. ಹಿರಿಯ ನಾಗರಿಕರು ಸ್ವಲ್ಪ ಮೊತ್ತವನ್ನು ಇಂಥ ಯೋಜನೆಗಳಲ್ಲಿ ತೊಡಗಿಸುವ ಮೂಲಕ ಹೆಚ್ಚುವರಿ ಆದಾಯ ಪಡೆಯಲು ಚಿಂತನೆ ಮಾಡಬಹುದು. ಇಂಥ ಯೋಜನೆಗಳು ಸಾಮಾನ್ಯವಾಗಿ 1ರಿಂದ 10 ವರ್ಷದ ಅವಧಿಗೆ ಇರುತ್ತವೆ. ದೀರ್ಘಾವಧಿಯನ್ನು ಆಯ್ಕೆ ಮಾಡಿಕೊಂಡಷ್ಟೂ ಬಡ್ಡಿ ಮೊತ್ತ ಹೆಚ್ಚಾಗುತ್ತದೆ. ಪ್ರಸ್ತುತ ಎಚ್​ಡಿಎಫ್​ಸಿ ಕಂಪನಿ ಎಫ್​ಡಿ ಶೇ 6.2ರ ಬಡ್ಡಿ ಕೊಡುತ್ತಿದೆ. ಇಂಥ ಹಲವು ಹೂಡಿಕೆ ಅವಕಾಶಗಳು ಲಭ್ಯವಿದೆ.

(Better Alternatives for Bank Fixed Deposits to Senior Citizens Senior Citizen Savings Scheme)

ಇದನ್ನೂ ಓದಿ: Fixed Deposits: ಎಸ್​ಬಿಐ Vs ಐಸಿಐಸಿಐ ಬ್ಯಾಂಕ್ Vs ಎಚ್​ಡಿಎಫ್​ಸಿ ಬ್ಯಾಂಕ್ Vs ಆಕ್ಸಿಸ್​ ಬ್ಯಾಂಕ್​ ಎಫ್​ಡಿ ಬಡ್ಡಿದರಗಳ ವಿವರ

ಇದನ್ನೂ ಓದಿ: ಎಸ್​ಬಿಐ ಪ್ಲಾಟಿನಂ ಡೆಪಾಸಿಟ್ಸ್ ಸ್ಕೀಮ್​ನಲ್ಲಿ ಠೇವಣಿ ಹೂಡಿ ಹೆಚ್ಚುವರಿ ಶೇಕಡಾ 0.15 ಬಡ್ಡಿ ಪಡೆಯಲು ಅವಕಾಶ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ