Gold Silver Price on 31st January: ಇಂದೂ ಕೂಡ ಚಿನ್ನ, ಬೆಳ್ಳಿ ಬೆಲೆ ಏರಿಕೆ
Bullion Market 2024 January 31st: ಬಜೆಟ್ ಹಿಂದಿನ ದಿನವಾದ ಇಂದು ಶುಕ್ರವಾರ ಚಿನ್ನ, ಬೆಳ್ಳಿ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆ ಆಗಿವೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಗ್ರಾಮ್ಗೆ 120 ರೂ ಹೆಚ್ಚಳವಾಗಿದೆ. ಇವತ್ತು ಇದರ ಬೆಲೆ 7,730 ರೂ ಆಗಿದೆ. ಬೆಳ್ಳಿ ಬೆಲೆ ಕಳೆದ ಮೂರು ದಿನದಲ್ಲಿ ಮೂರು ರೂನಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಗ್ರಾಮ್ಗೆ 99.50 ರೂ ಆಗಿದೆ.

ಬೆಂಗಳೂರು, ಜನವರಿ 31: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಶುಕ್ರವಾರವೂ ಭರ್ಜರಿ ಏರಿಕೆ ಆಗಿದೆ. ಚಿನ್ನದ ಬೆಲೆ ಗ್ರಾಮ್ಗೆ 120 ರೂನಷ್ಟು ಹೆಚ್ಚಳವಾಗಿದೆ. ಅಪರಂಜಿ ಚಿನ್ನದ ಬೆಲೆ 133 ರುನಷ್ಟು ಏರಿಕೆ ಆಗಿದೆ. 18 ಕ್ಯಾರಟ್ ಚಿನ್ನದ ಬೆಲೆಯೂ ಕೂಡ ಹತ್ತಿರಹತ್ತಿರ ನೂರು ರೂ ನಷ್ಟು ದುಬಾರಿಯಾಗಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 8,400 ರೂ ಗಡಿ ದಾಟಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,700 ರೂ ಗಡಿ ಮೀರಿ ಹೋಗಿದೆ. ವಿದೇಶಗಳ ಪೈಕಿ ಅರಬ್ ನಾಡಿನಲ್ಲಿ ಚಿನ್ನದ ಬೆಲೆ ಏರಿಕೆ ಆಗಿದೆ. ಅಮೆರಿಕದಲ್ಲಿ ಸದ್ಯ ಅತ್ಯಂತ ಕಡಿಮೆ ಬೆಲೆ ಇದೆ. ಇದೇ ವೇಳೆ, ಬೆಳ್ಳಿ ಬೆಲೆಯೂ ಇಂದು ಭರ್ಜರಿ ಏರಿಕೆ ಆಗಿದೆ. ನಿನ್ನೆ, ಮೊನ್ನೆಯಂತೆ ಇಂದೂ ಕೂಡ ಬೆಳ್ಳಿ ಬೆಲೆ ಒಂದು ರೂನಷ್ಟು ಹೆಚ್ಚಳವಾಗಿದೆ. ಮೂರು ದಿನದಲ್ಲಿ ಅದರ ಬೆಲೆ ಮೂರು ರೂನಷ್ಟು ಭಾರೀ ಇಳಿಕೆ ಆಗಿರುವುದು ಗಮನಾರ್ಹ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 77,300 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 84,330 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,950 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 77,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,950 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜನವರಿ 31ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,300 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 84,330 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,250 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 995 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,300 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 84,330 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 995 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 77,300 ರೂ
- ಚೆನ್ನೈ: 77,300 ರೂ
- ಮುಂಬೈ: 77,300 ರೂ
- ದೆಹಲಿ: 77,450 ರೂ
- ಕೋಲ್ಕತಾ: 77,300 ರೂ
- ಕೇರಳ: 77,300 ರೂ
- ಅಹ್ಮದಾಬಾದ್: 77,350 ರೂ
- ಜೈಪುರ್: 77,450 ರೂ
- ಲಕ್ನೋ: 77,450 ರೂ
- ಭುವನೇಶ್ವರ್: 77,300 ರೂ
ಇದನ್ನೂ ಓದಿ: Budget Glossary: ಕ್ಯಾಪಿಟಲ್ ರೆಸಿಪ್ಟ್, ರೆವಿನ್ಯೂ ರೆಸಿಪ್ಟ್, ಎಕ್ಸೆಸ್ ಗ್ರ್ಯಾಂಟ್ ಇತ್ಯಾದಿ ಬಜೆಟ್ ಪದಗಳ ಪರಿಚಯ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 3,630 ರಿಂಗಿಟ್ (71,170 ರುಪಾಯಿ)
- ದುಬೈ: 3,122.50 ಡಿರಾಮ್ (73,660 ರುಪಾಯಿ)
- ಅಮೆರಿಕ: 780 ಡಾಲರ್ (67,590 ರುಪಾಯಿ)
- ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (69,450 ರುಪಾಯಿ)
- ಕತಾರ್: 3,155 ಕತಾರಿ ರಿಯಾಲ್ (74,990 ರೂ)
- ಸೌದಿ ಅರೇಬಿಯಾ: 3,190 ಸೌದಿ ರಿಯಾಲ್ (73,690 ರುಪಾಯಿ)
- ಓಮನ್: 331 ಒಮಾನಿ ರಿಯಾಲ್ (74,490 ರುಪಾಯಿ)
- ಕುವೇತ್: 255.80 ಕುವೇತಿ ದಿನಾರ್ (71,840 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 9,950 ರೂ
- ಚೆನ್ನೈ: 10,700 ರೂ
- ಮುಂಬೈ: 9,950 ರೂ
- ದೆಹಲಿ: 9,950 ರೂ
- ಕೋಲ್ಕತಾ: 9,950 ರೂ
- ಕೇರಳ: 10,700 ರೂ
- ಅಹ್ಮದಾಬಾದ್: 9,950 ರೂ
- ಜೈಪುರ್: 9,950 ರೂ
- ಲಕ್ನೋ: 9,950 ರೂ
- ಭುವನೇಶ್ವರ್: 10,700 ರೂ
- ಪುಣೆ: 9,950
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ