Gold Rates 29 September: ಶುದ್ಧ ಚಿನ್ನದ ಬೆಲೆ 15,000 ರೂಗಿಂತ ಕೆಳಕ್ಕೆ; ಇಲ್ಲಿದೆ ದರಪಟ್ಟಿ
Gold Price 29 September 2026: ಚಿನ್ನದ ಬೆಲೆ ಇವತ್ತು ಗ್ರಾಮ್ಗೆ 125 ರೂ ಕಡಿಮೆಗೊಂಡಿದೆ. ಎರಡು ದಿನದಲ್ಲಿ ಬೆಲೆ 355 ರೂ ಕುಸಿದಿದೆ. ಆಭರಣ ಚಿನ್ನದ ಬೆಲೆ 13,765 ರೂನಿಂದ 13,640 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 14,880 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 240 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 245 ರೂ ಇದೆ.

ನವದೆಹಲಿ, ಸೆಪ್ಟೆಂಬರ್ 29: ಬಂಗಾರದ ದರ ಭಾರೀ ಕುಸಿತ ಕಾಣುವುದು ಮುಂದುವರಿದಿದೆ. ನಿನ್ನೆ 230 ರೂಗಳಷ್ಟು ಇಳಿದಿದ್ದ ಇದರ ಬೆಲೆ ಇವತ್ತು ಮಂಗಳವಾರ 125 ರೂ ತಗ್ಗಿದೆ. ಶುದ್ಧ ಚಿನ್ನದ ಬೆಲೆ 15,000 ರೂಗಿಂತ ಕೆಳಗೆ ಬಂದಿದೆ. ವಿದೇಶಗಳಲ್ಲೂ ಬೆಲೆ ತೀವ್ರ ಕುಸಿತ ಕಂಡಿದೆ. ಸ್ಪಾಟ್ ಚಿನ್ನ ಮತ್ತು ಬೆಳ್ಳಿ ಬೆಲೆಗಳೂ ಕಡಿಮೆಗೊಂಡಿವೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,36,400 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,48,800 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,36,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 24,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಸೆಪ್ಟೆಂಬರ್ 29ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,880
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,640
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,160
- ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 13,640 ರೂ
- ಚೆನ್ನೈ: 13,640 ರೂ
- ಮುಂಬೈ: 13,640 ರೂ
- ದೆಹಲಿ: 13,655
- ಕೋಲ್ಕತಾ: 13,640 ರೂ
- ಕೇರಳ: 13,640 ರೂ
- ಅಹ್ಮದಾಬಾದ್: 13,645 ರೂ
- ಜೈಪುರ್: 13,655
- ಲಕ್ನೋ: 13,655
- ಭುವನೇಶ್ವರ್: 13,640 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 132. 76 ಡಾಲರ್ (12,756 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 1.947 ಡಾಲರ್ (187 ರುಪಾಯಿ)
ಇದನ್ನೂ ಓದಿ: ಸಿಬಿಡಿಟಿ ಮಹತ್ವದ ಘೋಷಣೆ: ಟ್ಯಾಕ್ಸ್ ಆಡಿಟ್ ರಿಪೋರ್ಟ್ ಮತ್ತು ಇನ್ಕಮ್ ರಿಟರ್ನ್ ಸಲ್ಲಿಸಲು ಗಡುವುಗಳ ವಿಸ್ತರಣೆ
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 14,880 ರುಪಾಯಿ
- ಮಲೇಷ್ಯಾ: 555 ರಿಂಗಿಟ್ (13,071 ರುಪಾಯಿ)
- ದುಬೈ: 497.25 ಡಿರಾಮ್ (13,009 ರುಪಾಯಿ)
- ಅಮೆರಿಕ: 136 ಡಾಲರ್ (13,075 ರುಪಾಯಿ)
- ಸಿಂಗಾಪುರ: 180 ಸಿಂಗಾಪುರ್ ಡಾಲರ್ (13,534 ರುಪಾಯಿ)
- ಕತಾರ್: 497.50 ಕತಾರಿ ರಿಯಾಲ್ (13,137 ರೂ)
- ಸೌದಿ ಅರೇಬಿಯಾ: 511 ಸೌದಿ ರಿಯಾಲ್ (13,087 ರುಪಾಯಿ)
- ಓಮನ್: 52.70 ಒಮಾನಿ ರಿಯಾಲ್ (13,160 ರುಪಾಯಿ)
- ಕುವೇತ್: 41.73 ಕುವೇತಿ ದಿನಾರ್ (13,032 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 240 ರೂ
- ಚೆನ್ನೈ: 245 ರೂ
- ಮುಂಬೈ: 240 ರೂ
- ದೆಹಲಿ: 240 ರೂ
- ಕೋಲ್ಕತಾ: 240 ರೂ
- ಕೇರಳ: 245 ರೂ
- ಅಹ್ಮದಾಬಾದ್: 240 ರೂ
- ಜೈಪುರ್: 240 ರೂ
- ಲಕ್ನೋ: 240 ರೂ
- ಭುವನೇಶ್ವರ್: 245 ರೂ
- ಪುಣೆ: 240
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




