AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಜಾಬ್ vs ಕುಂಕುಮ; ವಿವಾದ ಸೃಷ್ಟಿಸಿದ ಲೆನ್ಸ್​ಕಾರ್ಟ್ ಪಾಲಿಸಿ ಡಾಕ್ಯುಮೆಂಟ್; ಆನ್​ಲೈನ್​ನಲ್ಲಿ ತಕರಾರು

Lenskart's alleged policy document bars employees from wearing bindi, while allowing Hijab: ಪ್ರಸಿದ್ಧ ಕನ್ನಡಕದ ಕಂಪನಿಯಾದ ಲೆನ್ಸ್ಕಾರ್ಟ್ ತನ್ನ ಉದ್ಯೋಗಿಗಳಿಗೆ ರೂಪಿಸಿರುವ ಸ್ಟೈಲ್​ಗೈಡ್ ಈಗ ವಿವಾದ ಸೃಷ್ಟಿಸಿದೆ. ಈ ಪಾಲಿಸಿ ಡಾಕ್ಯುಮೆಂಟ್​ನಲ್ಲಿ ಉದ್ಯೋಗಿಗಳು ಹಿಜಾಬ್ ಧರಿಸಲು ಅವಕಾಶ ಇದೆ. ಆದರೆ, ಸಿಂದೂರ, ಹಣೆಬೊಟ್ಟು ಇಡುವಂತಿಲ್ಲ ಎಂದು ತಿಳಿಸಲಾಗಿದೆ. ಆನ್​ಲೈನ್​ನಲ್ಲಿ ಈ ದಾಖಲೆ ಬಗ್ಗೆ ಆಕ್ಷೇಪಗಳು ವ್ಯಕ್​ತವಾಗಿವೆ.

ಹಿಜಾಬ್ vs ಕುಂಕುಮ; ವಿವಾದ ಸೃಷ್ಟಿಸಿದ ಲೆನ್ಸ್​ಕಾರ್ಟ್ ಪಾಲಿಸಿ ಡಾಕ್ಯುಮೆಂಟ್; ಆನ್​ಲೈನ್​ನಲ್ಲಿ ತಕರಾರು
ಲೆನ್ಸ್​ಕಾರ್ಟ್ ಶೋರೂಮ್Image Credit source: Saishna96, Wikipedia
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:Jul 06, 2026 | 10:50 AM

Share

ನವದೆಹಲಿ, ಏಪ್ರಿಲ್ 16: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯಲ್ಲಿ ಲೈಂಗಿಕ ದೌರ್ಜನ್ಯ, ಮತಾಂತರ ಕುಮ್ಮಕ್ಕು ಇತ್ಯಾದಿ ಕರ್ಮಕಾಂಡಗಳು ಬೆಳಕಿಗೆ ಬಂದು ವಿವಾದ ಹುಟ್ಟಿಕೊಂಡಿದೆ. ಇದರ ಬೆನ್ನಲ್ಲೇ ಲೆನ್ಸ್​ಕಾರ್ಟ್ (Lenskart) ಸಂಸ್ಥೆಯ ಉದ್ಯೋಗಿಗಳಿಗೆ ನೀಡಲಾಗಿರುವ ಸ್ಟೈಲ್​ಗೈಡ್​ನ ಕೆಲ ಅಂಶಗಳು ಹೊಸ ವಿವಾದ ಹುಟ್ಟುಹಾಕಿವೆ. ಸ್ಟೈಲ್​ಗೈಡ್​ನಲ್ಲಿ ಧರ್ಮತಾರತಮ್ಯ ಮಾಡಲಾಗಿರುವ ನಿಯಮಗಳನ್ನು ಹಲವರು ಎತ್ತಿ ತೋರಿಸಿದ್ದಾರೆ.

ಲೆನ್ಸ್​ಕಾರ್ಟ್ ಸ್ಟೈಲ್​ಗೈಡ್​ಗೆ ಆನ್​ಲೈನ್​ನಲ್ಲಿ ತಕರಾರು

ಲೆನ್ಸ್​ಕಾರ್ಟ್​ನ ಉದ್ಯೋಗಿಗಳ ಸ್ಟೈಲ್​ಗೈಡ್​ನಲ್ಲಿರುವ ಕೆಲ ನಿಯಮಗಳು, ಅದರಲ್ಲೂ ಧಾರ್ಮಿಕ ಸೂಕ್ಷ್ಮತೆ ಇರುವ ನಿಯಮಗಳ ಬಗ್ಗೆ ಆನ್​ಲೈನ್​ನಲ್ಲಿ ಸಾಕಷ್ಟು ತಕರಾರುಗಳು ಎದ್ದಿವೆ. ‘ಹಿಜಾಬ್​ಗೆ ಅನುಮತಿ ಕೊಡಲಾಗಿದೆ. ಆದರೆ, ಹಿಂದೂ ಉದ್ಯೋಗಿಗಳಿಗೆ ಕುಂಕುಮ, ಹಣೆಬೊಟ್ಟು ಇಡುವ ಅವಕಾಶ ನೀಡಲಾಗಿಲ್ಲ ಯಾಕೆ?’ ಎಂದು ಹಲವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೆರಿಕ ಹಿಂದಿಕ್ಕಿ ಅಗ್ರಸ್ಥಾನ, ಹೆಚ್ಚಿದ ವ್ಯಾಪಾರ ಕೊರತೆ

‘ಇದು ಮೂರ್ಖತನ. ಲೆನ್ಸ್​ಕಾರ್ಟ್ ಮಾನಗೆಟ್ಟ ಕಂಪನಿ. ಬಿಂದಿಯಲ್ಲಿ ಏನು ತಪ್ಪು ಕಂಡಿದ್ದಾರೆ. ಅವರಿಗೆ ಭಾರತದಲ್ಲಿ ಬ್ಯುಸಿನೆಸ್ ಮಾಡಬೇಕು, ಆದರೆ ಜನರ ಭಾವನೆಗಳಿಗೆ ಬೆಲೆ ಕೊಡುವುದು ಬೇಡ’ ಎಂದು ಒಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೆಫಾಲಿ ವೈದ್ಯ ಟ್ವೀಟ್

‘ನಾನು ಯಾವತ್ತೂ ಲೆನ್ಸ್​ಕಾರ್ಟ್​ನಿಂದ ಕನ್ನಡಕ ಖರೀದಿಸುವುದಿಲ್ಲ. ಇತ್ತೀಚೆಗೆ ನನ್ನ ಕುಟುಂಬದ ಸದಸ್ಯರು ಭಾರತಕ್ಕೆ ಹೋಗಿ ಇಲ್ಲಿ ತಮ್ಮ ಗ್ಲಾಸ್​ಗಳನ್ನು ಪಡೆದಿದ್ದರು. ಈ ಹಿಂದೂ ವಿರೋಧಿ ಸಂಸ್ಥೆಗೆ ಹಣ ವೆಚ್ಚ ಮಾಡಬೇಡಿ ಎಂದು ಅವರಿಗೆ ಈಗ ಹೇಳುತ್ತೇನೆ’ ಎಂದು ಮಗದೊಬ್ಬರು ಕಾಮೆಂಟಿಸಿದ್ದಾರೆ.

ಲೆನ್ಸ್​ಕಾರ್ಟ್ ಸ್ಟೈಲ್​ಗೈಡ್​ನಲ್ಲಿ ವಿವಾದವಾಗಿರುವ ಅಂಶಗಳಿವು…

  • ಕಪ್ಪು ಬಣ್ಣದ ಪೇಟ (sikh turban) ಧರಿಸಬಹುದು.
  • ಕಪ್ಪು ಬಣ್ಣದ ಹಿಜಾಬ್ ಧರಿಸಬಹುದು
  • ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಟ್ಯಾಟೂಗಳನ್ನು ಹಾಕಿಕೊಂಡಿದ್ದರೆ ಅದು ಕಣ್ಣಿಗೆ ಗೋಚರಿಸದಂತಿರಬೇಕು.
  • ಹೆನ್ನಾ (ಗೋರಂಟಿ) ಹಾಕುವಂತಿಲ್ಲ. ವಿಶೇಷ ಸಂದರ್ಭವಿದ್ದರೆ ಮುಂಚಿತವಾಗಿ ಅನುಮತಿ ಪಡೆಯಬೇಕು.
  • ಧಾರ್ಮಿಕ ತಿಲಕ, ಹಣಬೊಟ್ಟು ಹಾಕುವಂತಿಲ್ಲ.

ಇದನ್ನೂ ಓದಿ: ವಿಶ್ವದ ದೊಡ್ಡ ಆರ್ಥಿಕತೆ: 5ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದ ಭಾರತ; ಕಾರಣ ಏನು ಗೊತ್ತಾ?

ಲೆನ್ಸ್​ಕಾರ್ಟ್ ಸಂಸ್ಥಾಪಕರ ಸ್ಪಷ್ಟನೆ

ಲೆನ್ಸ್​ಕಾರ್ಟ್ ಸ್ಟೈಲ್​ಗೈಡ್ ವಿಚಾರ ಆನ್​ಲೈನ್​ನಲ್ಲಿ ಟ್ರೋಲ್ ಆಗುತ್ತಿರುವಂತೆಯೇ ಸಂಸ್ಥೆಯ ಸಂಸ್ಥಾಪಕ ಪಿಯುಸ್ ಬನ್ಸಾಲ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ವೈರಲ್ ಆಗುತ್ತಿರುವ ದಾಖಲೆಯು ಸರಿಯಿಲ್ಲ. ನಮ್ಮ ಈಗಿನ ಮಾರ್ಗಸೂಚಿಗಳನ್ನು ಇದು ಪ್ರತಿಬಿಂಬಿಸುವುದಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅವರ ಈ ಟ್ವೀಟ್​ಗೂ ತೀಕ್ಷ್ಣ ಪ್ರತಿಕ್ರಿಯೆಗಳು ಬಂದಿವೆ. ಲೆನ್ಸ್​ಕಾರ್ಟ್​ನ ಈ ಪಾಲಿಸಿ ಡಾಕ್ಯುಮೆಂಟ್ 2026ರ ಫೆಬ್ರುವರಿಯದ್ದು. ಈಗ ಬದಲಾಗಿರುವ ಪಾಲಿಸಿ ಡಾಕ್ಯುಮೆಂಟ್ ಇದ್ದರೆ ತೋರಿಸಿ ಎಂದು ಅನೇಕರು ಸವಾಲು ಹಾಕಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:44 pm, Thu, 16 April 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ