AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ಎಡಿಷನ್ ಫೋನ್: ಏನಿದರ ವಿಶೇಷತೆ?

ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟ್ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪ್ರಸ್ತುತ ತಂತ್ರಜ್ಞಾನ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿರುವ ಲಂಡನ್ ಮೂಲದ 'ನಥಿಂಗ್' (Nothing) ಕಂಪೆನಿ ಪರಸ್ಪರ ಕೈಜೋಡಿಸಿವೆ. 2026ರ ಐಪಿಎಲ್ ಸೀಸನ್‌ನಲ್ಲಿ RCB ತಂಡದ ಮುಖ್ಯ ಪ್ರಾಯೋಜಕರಾಗಿ ಕಾಣಿಸಿಕೊಂಡಿದ್ದ ನಥಿಂಗ್ ಕಂಪೆನಿ ಇದೀಗ ಆರ್​ಸಿಬಿ ಅಭಿಮಾನಿಗಳಿಗಾಗಿ ವಿಶೇಷ ಎಡಿಷನ್ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

RCB ಎಡಿಷನ್ ಫೋನ್: ಏನಿದರ ವಿಶೇಷತೆ?
Nothing PhoneImage Credit source: Nothing India
ಝಾಹಿರ್ ಯೂಸುಫ್
|

Updated on:Jul 05, 2026 | 1:43 PM

Share

ಬ್ರಿಟನ್ ಮೂಲದ ಟೆಕ್ ಕಂಪೆನಿ ನಥಿಂಗ್ ಟೆಕ್ನಾಲಜಿ ಲಿಮಿಟೆಡ್ ನಥಿಂಗ್ ಫೋನ್​ನ ಹೊಸ ಎಡಿಷನ್ ಬಿಡುಗಡೆ ಮಾಡಲು ಮುಂದಾಗಿದೆ. ಆದರೆ ಈ ಬಾರಿ ಬಿಡುಗಡೆ ಮಾಡುತ್ತಿರುವುದು RCB ಎಡಿಷನ್ ಮೊಬೈಲ್ ಫೋನ್ ಎಂಬುದು ವಿಶೇಷ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗಾಗಿ “ನಥಿಂಗ್ 4b ಆರ್‌ಸಿಬಿ ಎಡಿಷನ್” (Nothing Phone 4b RCB Edition) ಮೊಬೈಲ್ ಫೋನ್ ಬಿಡುಗಡೆ ಮಾಡುವುದಾಗಿ ನಥಿಂಗ್ ಟೆಕ್ನಾಲಜಿ ಲಿಮಿಟೆಡ್ ಅಧಿಕೃತವಾಗಿ ಘೋಷಿಸಿದೆ. ಈ ಫೋನ್​ ಕುರಿತಾದ ಮತ್ತಷ್ಟು ಮಾಹಿತಿಗಳು ಈ ಕೆಳಗಿನಂತಿದೆ…

ನಥಿಂಗ್ 4b RCB ಎಡಿಷನ್ ಯಾವಾಗ ಬಿಡುಗಡೆ?

ನಥಿಂಗ್​ ಫೋನ್​ 4b RCB ಎಡಿಷನ್, ಜುಲೈ 7 ರಂದು ಬಿಡುಗಡೆಯಾಗಲಿದೆ. ಅಲ್ಲದೆ ಸಂಜೆ 4 ಗಂಟೆಯಿಂದ ಅಧಿಕೃತ ಸ್ಟೋರ್​ಗಳಿಂದ ಖರೀದಿಸಬಹುದು.

ಬೆಂಗಳೂರಿನಲ್ಲಿ ಎಲ್ಲಿ ಸಿಗಲಿದೆ?

ನಥಿಂಗ್​ ಫೋನ್​ 4b RCB ಎಡಿಷನ್ ಅತ್ಯಂತ ಸೀಮಿತ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿದ್ದು, ಕೇವಲ ಬೆಂಗಳೂರಿನ ಇಂದಿರಾನಗರದಲ್ಲಿರುವ ನಥಿಂಗ್ ಸ್ಟೋರ್‌ನಲ್ಲಿ ಮಾತ್ರ ನೇರವಾಗಿ ಖರೀದಿಸಬಹುದಾಗಿದೆ.

ವಿಶೇಷವೆಂದರೆ, ಈ ಫೋನ್ ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಸಿಗುವುದಿಲ್ಲ. ಇದು ಕೇವಲ ಒಂದು ದಿನದ ಆಫ್‌ಲೈನ್ ಮಾರಾಟಕ್ಕೆ ಮಾತ್ರ ಲಭ್ಯವಿರಲಿದೆ.

  • ದಿನಾಂಕ: ಜುಲೈ 7, 2026
  •  ಸಮಯ: ಮಧ್ಯಾಹ್ನ 4:00 ಗಂಟೆಯಿಂದ (IST) ಮಾರಾಟ ಆರಂಭ.
  •  ಸ್ಥಳ: ನಥಿಂಗ್ ಫ್ಲ್ಯಾಗ್‌ಶಿಪ್ ಸ್ಟೋರ್, ಇಂದಿರಾನಗರ, ಬೆಂಗಳೂರು.
  •  ನಿಯಮ: ಮೊದಲು ಬಂದವರಿಗೆ ಆದ್ಯತೆ. ಸ್ಟಾಕ್ ಮುಗಿಯುವವರೆಗೆ ಮಾತ್ರ ಲಭ್ಯ.

ಈ ಫೋನ್​ನ ವಿಶೇಷತೆಗಳೇನು?

ಸಾಮಾನ್ಯವಾಗಿ ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಮಾತ್ರ ಲಭ್ಯವಿರುವ ನಥಿಂಗ್ ಫೋನ್‌ಗಳಿಗೆ ಹೋಲಿಸಿದರೆ,  ಆರ್‌ಸಿಬಿ ಎಡಿಷನ್ ಸಂಪೂರ್ಣ ಭಿನ್ನವಾಗಿದೆ:

  • ಮ್ಯಾಟ್ ರೆಡ್ ಫಿನಿಶ್: ಆರ್‌ಸಿಬಿ ಜೆರ್ಸಿಯಿಂದ ಪ್ರೇರಿತವಾದ ಅತ್ಯಾಕರ್ಷಕ ಕೆಂಪು ಬಣ್ಣದ ಬ್ಯಾಕ್ ಪ್ಯಾನೆಲ್.
  • ಆರ್‌ಸಿಬಿ ಲಯನ್ ಲೋಗೋ: ಫೋನಿನ ಹಿಂಭಾಗದ ಗ್ಲಾಸ್ ಮೇಲೆ ಅಧಿಕೃತ ಆರ್‌ಸಿಬಿ ಸಿಂಹದ ಲೋಗೋವನ್ನು ನೀಡಲಾಗಿದೆ.
  • ವಿಶೇಷ ಬಟನ್‌ಗಳು: ಬದಿಗಳಲ್ಲಿ ಕಪ್ಪು ಬಣ್ಣದ ಬಟನ್‌ಗಳು ಮತ್ತು ಕ್ಯಾಮೆರಾ ಮಾಡ್ಯೂಲ್ ಸುತ್ತಲೂ ಸಿಲ್ವರ್ ಡೀಟೇಲಿಂಗ್ ನೀಡಲಾಗಿದೆ.
  •  ಗ್ಲಿಫ್ ಇಂಟರ್‌ಫೇಸ್: ನಥಿಂಗ್‌ನ ಸಾಂಪ್ರದಾಯಿಕ ಟ್ರಾನ್ಸ್‌ಪರೆಂಟ್ ವಿನ್ಯಾಸ ಮತ್ತು ಎಲ್‌ಇಡಿ ಲೈಟಿಂಗ್ ಕೂಡ ಇದರಲ್ಲಿರಲಿದೆ.

ನಥಿಂಗ್​ ಫೋನ್​ 4b RCB ಎಡಿಷನ್ ವೈಶಿಷ್ಟ್ಯಗಳು:

ಆರ್‌ಸಿಬಿ ಎಡಿಷನ್ ವಿನ್ಯಾಸದಲ್ಲಿ ಬದಲಾವಣೆ ಹೊಂದಿದ್ದರೂ, ಇದರ ಒಳಗಿನ ಫೀಚರ್‌ಗಳು ಸ್ಟ್ಯಾಂಡರ್ಡ್ ನಥಿಂಗ್ ಫೋನ್ 4b ನಂತೆಯೇ ಇರಲಿವೆ.

  •  ಪ್ರೊಸೆಸರ್: ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 4.
  •  ಡಿಸ್‌ಪ್ಲೇ: 6.7-ಇಂಚಿನ ಫುಲ್ ಹೆಚ್‌ಡಿ ಪ್ಲಸ್ OLED ಸ್ಕ್ರೀನ್, 120Hz ರಿಫ್ರೆಶ್ ರೇಟ್.
  •  ಕ್ಯಾಮೆರಾ: 50MP ಪ್ರಮುಖ ಕ್ಯಾಮೆರಾ (OIS ಸಪೋರ್ಟ್) + 8MP ಅಲ್ಟ್ರಾ-ವೈಡ್ ಲೆನ್ಸ್. ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ.
  • ಬ್ಯಾಟರಿ: 6,000mAh ದೀರ್ಘಕಾಲಿಕ ಬ್ಯಾಟರಿ ಮತ್ತು 33W ಫಾಸ್ಟ್ ಚಾರ್ಜಿಂಗ್.
  • ಸಾಫ್ಟ್‌ವೇರ್: ಆಂಡ್ರಾಯ್ಡ್ 16 ಆಧಾರಿತ ನಥಿಂಗ್ ಓಎಸ್ (Nothing OS).

ಇದನ್ನೂ ಓದಿ: ಅವನು ನನ್ನ ಆತ್ಮೀಯ ಗೆಳೆಯ: ದಿನೇಶ್ ಕಾರ್ತಿಕ್ ಬಗ್ಗೆ ಮುರಳಿ ವಿಜಯ್ ಭಾವುಕ!

ಬೆಲೆ ಎಷ್ಟು?

ಜುಲೈ 7 ರಂದು ಮಧ್ಯಾಹ್ನ 3:30 ಕ್ಕೆ ನಡೆಯಲಿರುವ ಜಾಗತಿಕ ಲಾಂಚ್ ಈವೆಂಟ್‌ನಲ್ಲಿ ನಥಿಂಗ್​ ಫೋನ್​ 4b RCB ಎಡಿಷನ್​ನ ಅಧಿಕೃತ ಬೆಲೆ ಪ್ರಕಟವಾಗಲಿದೆ. ಆದರೆ ಟೆಕ್ ವಲಯದ ಲೀಕ್ಸ್‌ಗಳ ಪ್ರಕಾರ, ಈ ಪ್ರೀಮಿಯಂ ಮಿಡ್-ರೇಂಜ್ ಫೋನಿನ ಬೆಲೆ ₹30,000 ಕ್ಕಿಂತ ಹೆಚ್ಚಿರುತ್ತದೆ ಎಂದು ಅಂದಾಜಿಸಲಾಗಿದೆ.

Published On - 1:36 pm, Sun, 5 July 26

Follow Us
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್!
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್!
ಜುಲೈ 6 ರಿಂದ 12 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿವೆ
ಜುಲೈ 6 ರಿಂದ 12 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿವೆ
ಐಫೋನ್ ವಿಷಯ ಎತ್ತಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆದ ಸೋನು ಶ್ರೀನಿವಾಸ ಗೌಡ
ಐಫೋನ್ ವಿಷಯ ಎತ್ತಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆದ ಸೋನು ಶ್ರೀನಿವಾಸ ಗೌಡ
ಕೈದಿಗಳು ಬೆಳೆದ ತರಕಾರಿ ಮುಗಿಬಿದ್ದು ಖರೀದಿಸಿದ ಅಧಿಕಾರಿಗಳು, ಸಿಬ್ಬಂದಿ
ಕೈದಿಗಳು ಬೆಳೆದ ತರಕಾರಿ ಮುಗಿಬಿದ್ದು ಖರೀದಿಸಿದ ಅಧಿಕಾರಿಗಳು, ಸಿಬ್ಬಂದಿ
ಇಂದು ಈ ರಾಶಿಯವರು ಕೋಪ ತಾಪಗಳಿಗೆ ಒಳಗಾಗದೆ ಇದ್ದರೆ ಒಳಿತು
ಇಂದು ಈ ರಾಶಿಯವರು ಕೋಪ ತಾಪಗಳಿಗೆ ಒಳಗಾಗದೆ ಇದ್ದರೆ ಒಳಿತು
ಕಾಂಗ್ರೆಸ್​ನ ಕತ್ತೆಗಳು SIR ಪ್ರಕ್ರಿಯೆ ಹಾಳುಮಾಡುತ್ತಿವೆ: ವಿಜಯೇಂದ್ರ
ಕಾಂಗ್ರೆಸ್​ನ ಕತ್ತೆಗಳು SIR ಪ್ರಕ್ರಿಯೆ ಹಾಳುಮಾಡುತ್ತಿವೆ: ವಿಜಯೇಂದ್ರ
ಮೇಲಾಧಿಕಾರಿಗಳ ಕಿರುಕುಳ, ಕೆಲಸದ ಒತ್ತಡಕ್ಕೆ ಬಲಿಯಾದ್ರಾ ಮಹಿಳಾ ಅಧಿಕಾರಿ?
ಮೇಲಾಧಿಕಾರಿಗಳ ಕಿರುಕುಳ, ಕೆಲಸದ ಒತ್ತಡಕ್ಕೆ ಬಲಿಯಾದ್ರಾ ಮಹಿಳಾ ಅಧಿಕಾರಿ?