AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ವಿಕ್ ಕಾಮರ್ಸ್​ನಲ್ಲಿ ಅಮೇಜಾನ್ ಹಿಂದಿಕ್ಕಿದ ಫ್ಲಿಪ್​ಕಾರ್ಟ್; ಬ್ಲಿಂಕಿಟ್, ಝೆಪ್ಟೋಗಳೊಂದಿಗೆ ಈಗ ರೇಸ್

ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಅಮೇಜಾನ್​ಗಿಂತ ಹಿಂದೆ ಇರುವ ಫ್ಲಿಪ್​ಕಾರ್ಟ್, ಈಗ ಕ್ವಿಕ್ ಕಾಮರ್ಸ್ ಕ್ಷೇತ್ರದ ರೇಸ್​ನಲ್ಲಿ ಮುಂದಿದೆ. ಅಮೇಜಾನ್​ಗಿಂತ ವೇಗವಾಗಿ ಡಾರ್ಕ್ ಸ್ಟೋರ್ಸ್ ಹೆಚ್ಚಿಸುತ್ತಿದೆ ಫ್ಲಿಪ್​ಕಾರ್ಟ್. ಸ್ಟೋರ್ಸ್ ಮಾತ್ರವಲ್ಲ, ಸರಾಸರಿ ಆರ್ಡರ್​ಗಳಲ್ಲೂ ಅಮೇಜಾನ್ ಅನ್ನು ಹಿಂದಿಕ್ಕಿದೆ. ಬ್ಲಿಂಕಿಟ್, ಝೆಪ್ಟೋ, ಇನ್ಸ್​ಟಾಮಾರ್ಟ್ ಕಂಪನಿಗಳು ಈಗಲೂ ಕ್ವಿಕ್ ಕಾಮರ್ಸ್ ಮಾರುಕಟ್ಟೆಯನ್ನು ಆಳುತ್ತಿವೆ.

ಕ್ವಿಕ್ ಕಾಮರ್ಸ್​ನಲ್ಲಿ ಅಮೇಜಾನ್ ಹಿಂದಿಕ್ಕಿದ ಫ್ಲಿಪ್​ಕಾರ್ಟ್; ಬ್ಲಿಂಕಿಟ್, ಝೆಪ್ಟೋಗಳೊಂದಿಗೆ ಈಗ ರೇಸ್
ಫ್ಲಿಪ್​ಕಾರ್ಟ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 07, 2026 | 5:40 PM

Share

ಬೆಂಗಳೂರು, ಸೆಪ್ಟೆಂಬರ್ 7: ಭಾರತದ ಆನ್‌ಲೈನ್ ಶಾಪಿಂಗ್ ಹಾಗೂ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ವೇಗದ ವಿತರಣೆ (Quick Commerce) ವಿಭಾಗದಲ್ಲಿ ‘ಫ್ಲಿಪ್‌ಕಾರ್ಟ್’ (Flipkart) ಸಂಸ್ಥೆಯು ದೈತ್ಯ ‘ಅಮೆಜಾನ್’ (Amazon) ಅನ್ನು ಹಿಂದಿಕ್ಕಿ ಗಮನಾರ್ಹ ಮುನ್ನಡೆ ಸಾಧಿಸಿದೆ. 10 ರಿಂದ 15 ನಿಮಿಷಗಳಲ್ಲಿ ದಿನಸಿ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ತಲುಪಿಸುವ ‘ಕ್ವಿಕ್ ಕಾಮರ್ಸ್’ ಮಾರುಕಟ್ಟೆ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಈ ವಲಯದಲ್ಲಿ ಫ್ಲಿಪ್‌ಕಾರ್ಟ್ ತನ್ನ ‘Minutes’ ಸೌಲಭ್ಯದ ಮೂಲಕ ಬಲವಾದ ಹಿಡಿತ ಸಾಧಿಸುತ್ತಿದೆ.

ಬ್ಲಿಂಕಿಟ್ (Blinkit), ಝೆಪ್ಟೋ (Zepto) ಹಾಗೂ ಸ್ವಿಗ್ಗಿ ಇನ್‌ಸ್ಟಾಮಾರ್ಟ್ (Swiggy Instamart) ಮುಂಚೂಣಿಯಲ್ಲಿರುವ ಕ್ವಿಕ್ ಕಾಮರ್ಸ್ ವಿಭಾಗಕ್ಕೆ ತಡವಾಗಿ ಕಾಲಿಟ್ಟರೂ, ಫ್ಲಿಪ್‌ಕಾರ್ಟ್ ಅತ್ಯಂತ ವೇಗವಾಗಿ ಕಾರ್ಯಾಚರಣೆ ವಿಸ್ತರಿಸಿದೆ.

ಫ್ಲಿಪ್​ಕಾರ್ಟ್ ಮಿನ್ಯೂಟ್ಸ್ ದೇಶಾದ್ಯಂತ 100ಕ್ಕೂ ಹೆಚ್ಚು ನಗರಗಳಲ್ಲಿ 1,000ಕ್ಕೂ ಅಧಿಕ ವಿತರಣಾ ಗೋದಾಮುಗಳನ್ನು (Dark Stores) ಹೊಂದಿದೆ. ಆದರೆ, ಬಹಳ ಕ್ಷಿಪ್ರವಾಗಿ ಹೊಸ ಹೊಸ ಡಾರ್ಕ್ ಸ್ಟೋರ್​ಗಳನ್ನು ಹೆಚ್ಚಿಸುತ್ತಿದೆ. ಎಷ್ಟು ವೇಗವಾಗಿ ವಿಸ್ತರಣೆ ಆಗುತ್ತಿದೆ ಎಂದರೆ, ಮುಂದಿನ ಒಂದು ವರ್ಷದೊಳಗೆ ಅದರ ಡಾರ್ಕ್ ಸ್ಟೋರ್ಸ್ ಸಂಖ್ಯೆ ಎರಡು ಪಟ್ಟು ಹೆಚ್ಚುವ ನಿರೀಕ್ಷೆ ಇದೆ.

ಇನ್ನೊಂದೆಡೆ, ಅಮೇಜಾನ್​ನ ಕ್ವಿಕ್ ಕಾಮರ್ಸ್ ವಿಭಾಗವಾದ ಅಮೆಜಾನ್ ನೌ ಕೆಲ ಬ್ಯಾಕೆಂಡ್ ಸಮಸ್ಯೆಗಳನ್ನು ಎದುರಿಸುತ್ತಿದ್ದ, ಕಳೆದ ಎರಡು ಮೂರು ತಿಂಗಳಲ್ಲಿ ಡಾರ್ಕ್ ಸ್ಟೋರ್ಸ್ ಸ್ಥಾಪನೆಯ ಕೆಲಸವನ್ನು ನಿಧಾನಗೊಳಿಸಿದೆ. ಸದ್ಯಕ್ಕೆ ಅಮೆಜಾನ್ ನೌ 11 ನಗರಗಳಲ್ಲಿ 500-600 ಡಾರ್ಕ್ ಸ್ಟೋರ್ಸ್ ಹೊಂದಿದೆ.

ಇದನ್ನೂ ಓದಿ: ಸ್ಮಾರ್ಟ್‌ಫೋನ್‌ಗಳಿಗೂ ಇರುತ್ತೆ ‘ಎಕ್ಸ್‌ಪೈರಿ ಡೇಟ್’: ನಿಮ್ಮ ಮೊಬೈಲ್ ಹಳೆಯದಾಗಿದೆಯೇ ಎಂದು ಪರಿಶೀಲಿಸುವುದು ಹೇಗೆ?

ಹಬ್​ಗಳಿಂದ ಸ್ಟೋರ್ಸ್​ಗೆ ಸರಕುಗಳ ರವಾನೆಯಲ್ಲಿ ಸಮಸ್ಯೆಯಾಗಿರುವುದು, ಸಿಸ್ಟಂ ಇನ್ವೆಂಟರಿ ಹಾಗೂ ಸ್ಟೋರ್ಸ್​ನಲ್ಲಿ ವಾಸ್ತವವಾಗಿ ಲಭ್ಯ ಇರುವ ಸರಕುಗಳು ವ್ಯತ್ಯಾಸವಾಗಿರುವುದು, ಇವೇ ಮುಂತಾದ ಸಮಸ್ಯೆಗಳು ಅಮೇಜಾನ್​ಗೆ ಕಾಡುತ್ತಿದೆ. ಈ ಬ್ಯಾಕೆಂಡ್ ಸಮಸ್ಯೆಗಳನ್ನು ಸರಿಪಡಿಸಿಕೊಂಡ ಬಳಿಕ ಅದು ಡಾರ್ಕ್ ಸ್ಟೋರ್ಸ್ ವಿಸ್ತರಣೆಯನ್ನು ಅಗ್ರೆಸ್ಸಿವ್ ಆಗಿ ಮುಂದುವರಿಸಬಹುದು. ಅಷ್ಟರಲ್ಲಿ ಫ್ಲಿಪ್​ಕಾರ್ಟ್ ಮಿನೂಟ್ಸ್ ತನ್ನ ಮಾರುಕಟ್ಟೆ ಪಾಲನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳಬಹುದು.

ಇಕಾಮರ್ಸ್ ಬ್ಯುಸಿನೆಸ್​ನಲ್ಲಿ ಅಮೇಜಾನ್ ನಂಬರ್ ಒನ್ ಎನಿಸಿದೆ. ಆದರೆ, ಅಮೇಜಾನ್​ನ 7 ಕೋಟಿ ಗ್ರಾಹಕರಲ್ಲಿ ಶೇ. 10ಕ್ಕಿಂತ ಕಡಿಮೆ ಮಂದಿ ಅಮೇಜಾನ್ ನೌ ಅನ್ನು ಉಪಯೋಗಿಸುವುದುಂಟ. ಆದರೆ, ಫ್ಲಿಪ್​ಕಾರ್ಟ್​ನ ಶೇ. 40ಕ್ಕಿಂತ ಹೆಚ್ಚು ಗ್ರಾಹಕರು ಫ್ಲಿಪ್​ಕಾರ್ಟ್ ಮಿನುಟ್ಸ್ ಬಳಸುತ್ತಾರಂತೆ.

ಇತರ ಕ್ವಿಕ್ ಕಾಮರ್ಸ್ ಕಂಪನಿಗಳೊಂದಿಗೆ ಹೋಲಿಕೆ

ಕ್ವಿಕ್ ಕಾಮರ್ಸ್ ಕಂಪನಿಗಳ ಪೈಕಿ ಅತಿಹೆಚ್ಚು ಡಾರ್ಕ್ ಸ್ಟೋರ್ಸ್​ಗಳನ್ನು ಹೊಂದಿರುವುದು ಬ್ಲಿಂಕಿಟ್. ಝೊಮಾಟೊದ ಸೋದರ ಸಂಸ್ಥೆಯಾದ ಬ್ಲಿಂಕಿಟ್ 2,443 ಡಾರ್ಕ್ ಸ್ಟೋರ್ಸ್ ಹೊಂದಿದೆ. ಸ್ವಿಗ್ಗಿಯ ಇನ್ಸ್​​ಟಾಮಾರ್ಟ್ ಮತ್ತು ಝೆಪ್ಟೋ ಒಂದು ಸಾವಿರಕ್ಕೂ ಅಧಿಕ ಡಾರ್ಕ್ ಸ್ಟೋರ್​ಗಳನ್ನು ಹೊಂದಿವೆ.

ಇದನ್ನೂ ಓದಿ: ಭಾರತದ ವಾಹನ ಮಾರಾಟದಲ್ಲಿ ಹೊಸ ದಾಖಲೆ; ಒಂದೇ ತಿಂಗಳಲ್ಲಿ ಬರೋಬ್ಬರಿ 2.4 ಮಿಲಿಯನ್ ವಾಹನಗಳ ಮಾರಾಟ

ಒಂದು ಡಾರ್ಕ್ ಸ್ಟೋರ್​ಗೆ ಸರಾಸರಿಯಾಗಿ ಬರುವ ಆರ್ಡರ್​ಗಳ ಸಂಖ್ಯೆಯಲ್ಲಿ ಝೆಪ್ಟೋ ನಂಬರ್ ಒನ್ ಎನಿಸುತ್ತದೆ. ಝೆಪ್ಟೋದ ಒಂದು ಸ್ಟೋರ್​ಗೆ ದಿನಕ್ಕೆ ಸರಾಸರಿ 2,071 ಆರ್ಡರ್ ಬರುತ್ತದೆ. ಬ್ಲಿಂಕಿಟ್ 1,600, ಇನ್ಸ್​ಟಾಮಾರ್ಟ್ 1,089 ಆರ್ಡರ್​ಗಳನ್ನು ಪಡೆಯುತ್ತವೆ. ಫ್ಲಿಪ್​ಕಾರ್ಟ್ ಮಿನುಟ್ಸ್ ದಿನಕ್ಕೆ 80-1,000 ಆರ್ಡರ್​ಗಳನ್ನು ಪಡೆಯುತ್ತದೆ.

ಕ್ವಿಕ್ ಕಾಮರ್ಸ್ ರೇಸ್​ನಲ್ಲಿ ಸದ್ಯ ಅಮೇಜಾನ್ ಅನ್ನು ಹಿಂದಿರುವ ವಾಲ್ಮಾರ್ಟ್ ಮಾಲಕತ್ವದ ಫ್ಲಿಪ್​ಕಾರ್ಟ್ ಮುಂದಿನ ದಿನಗಳಲ್ಲಿ ಬ್ಲಿಂಕಿಟ್, ಝೆಪ್ಟೋವನ್ನೂ ಹಿಂದಿಕ್ಕಿದರೆ ಅಚ್ಚರಿ ಎನಿಸದೇ ಹೋಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ