AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಹಾಕಾಳಿ’ ಸಿನಿಮಾದ ಗ್ಲಿಂಪ್ಸ್ ಬಿಡುಗಡೆ; ಶುಕ್ರಾಚಾರ್ಯರ ಪಾತ್ರದಲ್ಲಿ ಅಕ್ಷಯ್ ಖನ್ನಾ

‘ಮಹಾಕಾಳಿ’ ಸಿನಿಮಾದಲ್ಲಿ ಭೂಮಿ ಶೆಟ್ಟಿ, ಅಕ್ಷಯ್ ಖನ್ನಾ, ಶ್ರಿಯಾ ರೆಡ್ಡಿ, ರೋಹಿತ್ ಸರಾಫ್, ಖುಷ್ಬೂ ಸುಂದರ್, ಸಮುದ್ರಖಣಿ, ರಾಕೇಶ್ ಬೇಡಿ, ಜಿತಿನ್ ಗುಲಾಟಿ, ರಜತ್ ಕಪೂರ್, ಮುರಳಿ ಶರ್ಮಾ, ನಾಸರ್, ಬಬ್ಲೂ ಪೃಥ್ವಿರಾಜ್ ಮುಂತಾದವರು ನಟಿಸಿದ್ದಾರೆ. ಈಗ ಬಿಡುಗಡೆ ಆಗಿರುವ ಟೀಸರ್​ನಲ್ಲಿ ಅಕ್ಷಯ್ ಖನ್ನಾ ಪಾತ್ರ ಗಮನ ಸೆಳೆದಿದೆ.

‘ಮಹಾಕಾಳಿ’ ಸಿನಿಮಾದ ಗ್ಲಿಂಪ್ಸ್ ಬಿಡುಗಡೆ; ಶುಕ್ರಾಚಾರ್ಯರ ಪಾತ್ರದಲ್ಲಿ ಅಕ್ಷಯ್ ಖನ್ನಾ
Akshaye Khanna
ಮದನ್​ ಕುಮಾರ್​
|

Updated on: Aug 24, 2026 | 4:02 PM

Share

ಬಾಲಿವುಡ್ ನಟ ಅಕ್ಷಯ್ ಖನ್ನಾ (Akshaye Khanna) ಅಭಿನಯಿಸಿರುವ ‘ಮಹಾಕಾಳಿ’ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ‘ಹನು-ಮಾನ್’ ಸಿನಿಮಾದ ಯಶಸ್ಸಿನ ನಂತರ ಡೈರೆಕ್ಟರ್ ಪ್ರಶಾಂತ್ ವರ್ಮಾ ಅವರು ತಮ್ಮ ‘ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್’ ಭಾಗವಾಗಿ ‘ಮಹಾಕಾಳಿ’ (Mahakali) ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪೌರಾಣಿಕ ಕಥಾಹಂದರ ಇರುವ ಈ ಸಿನಿಮಾದ ಮೊದಲ ಗ್ಲಿಂಪ್ಸ್ ಬಿಡುಗಡೆಯಾಗಿದೆ. ‘ಶುಕ್ರಾಚಾರ್ಯಸ್ ವಾರ್‌ಕ್ರೈ’ (Shukracharya’s WarCry) ಹೆಸರಿನಲ್ಲಿ ಬಿಡುಗಡೆ ಆಗಿರುವ ಈ 2 ನಿಮಿಷ 55 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

ಈ ಟೀಸರ್ ಮೂಲಕ ‘ಮಹಾಕಾಳಿ’ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಈ ಸಿನಿಮಾ 2027ರ ಜನವರಿ 8ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈಗ ಬಿಡುಗಡೆಯಾಗಿರುವ ಗ್ಲಿಂಪ್ಸ್​ನಲ್ಲಿ ಧರ್ಮ ಮತ್ತು ಅಧರ್ಮದ ನಡುವಿನ ಪ್ರಬಲ ಮಹಾಯುದ್ಧಕ್ಕೆ ಮುನ್ನುಡಿ ಬರೆಯುವ ದೃಶ್ಯಗಳು ಇವೆ.

ಅಸುರರ ಪರಮಗುರು ಶುಕ್ರಾಚಾರ್ಯರ ಪಾತ್ರದಲ್ಲಿ ನಟ ಅಕ್ಷಯ್ ಖನ್ನಾ ಅವರು ಅಭಿನಯಿಸಿದ್ದಾರೆ. ಗುರುತೇ ಸಿಗದಂತಹ ಭಯಾನಕ ಲುಕ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರ ತೀಕ್ಷ್ಣ ನೋಟ, ಮೈನವಿರೇಳಿಸುವ ಅಭಿನಯ ಮತ್ತು ‘ಅಂತ್ಯ ಆರಂಭವಾಗುತ್ತದೆ’ ಎಂಬ ಸಂದೇಶವು ಈ ಸಿನಿಮಾದ ಮೇಲಿನ ಜನರ ನಿರೀಕ್ಷೆ ಇನ್ನಷ್ಟು ಹೆಚ್ಚುವಂತೆ ಮಾಡಿದೆ.

‘ಮಹಾಕಾಳಿ’ ಸಿನಿಮಾದ ಗ್ಲಿಂಪ್ಸ್:

ನಟಿ ಶ್ರಿಯಾ ರೆಡ್ಡಿ ಅವರ ಪಾತ್ರ ಕೂಡ ಈ ಟೀಸರ್​ನಲ್ಲಿ ಕಾಣಿಸಿದ್ದು, ಕಥೆಯ ಮೇಲಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಉನ್ನತ ಗುಣಮಟ್ಟದ ವಿಶ್ಯುವಲ್ ಎಫೆಕ್ಟ್ಸ್ (VFX), ಅದ್ದೂರಿ ಮೇಕಿಂಗ್ ಮೂಲಕ ‘ಮಹಾಕಾಳಿ’ ಚಿತ್ರವು ಭಾರತೀಯ ಪುರಾಣಗಳನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರೇಕ್ಷಕರಿಗೆ ತೋರಿಸಲು ಸಜ್ಜಾಗುತ್ತಿದೆ. ಟೀಸರ್ ನೋಡಿದ ಜನರು ವಾವ್ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಬರ್ತಿದೆ ‘ತುಂಬಾಡ್ 2’ ಸಿನಿಮಾ; ಖಳನಾಗಿ ಅಕ್ಷಯ್ ಖನ್ನಾ ಎಂಟ್ರಿ?

ಆರ್.ಕೆ. ದುಗ್ಗಲ್ ಅವರು ಈ ಸಿನಿಮಾವನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಆರ್‌ಕೆಡಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಿವಾಜ್ ರಮೇಶ್ ದುಗ್ಗಲ್ ಅವರು ಈ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಪೂಜಾ ಅಪರ್ಣಾ ಕೊಲ್ಲೂರು ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಸ್ಮರಣ್ ಸಾಯಿ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ
ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ಬಿಗ್ ಬಾಸ್ ಮನೆಗೆ 3 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಹಕ್ಕು ವೀಕ್ಷಕರಿಗೆ
ಬಿಗ್ ಬಾಸ್ ಮನೆಗೆ 3 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಹಕ್ಕು ವೀಕ್ಷಕರಿಗೆ