Anupama Parameswaran: ‘ಹೌದು ಅಣ್ಣಾ.. ನಾನು ಹೀರೋಯಿನ್ ಅಲ್ಲ’: ನಟಿ ಅನುಪಮಾ ಪರಮೇಶ್ವರನ್ ಹೀಗೆ ಹೇಳಿದ್ದು ಯಾಕೆ?
ನೀವು ಹೀರೋಯಿನ್ ಅಲ್ಲ ಎಂದು ನೆಟ್ಟಿಗರೊಬ್ಬರು ಹೇಳಿದಾಗ ಅನುಪಮಾ ಪರಮೇಶ್ವರನ್ ಅವರು ಸಿಟ್ಟು ಮಾಡಿಕೊಂಡಿಲ್ಲ. ತಮ್ಮದೇ ಶೈಲಿಯಲ್ಲಿ ಅವರು ಉತ್ತರ ನೀಡಿದ್ದಾರೆ.
ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯ ಇಲ್ಲ. ಅಷ್ಟರಮಟ್ಟಿಗೆ ಅವರು ಫೇಮಸ್ ಆಗಿದ್ದಾರೆ. ಕನ್ನಡದ ಸಿನಿಮಾ ಪ್ರೇಕ್ಷಕರಿಗೂ ಅವರು ಪರಿಚಿತರು. ಪುನೀತ್ ರಾಜ್ಕುಮಾರ್ ಅಭಿನಯದ ‘ನಟ ಸಾರ್ವಭೌಮ’ (Nata Sarvabhouma) ಸಿನಿಮಾಗೆ ಅನುಪಮಾ ಪರಮೇಶ್ವರನ್ ನಾಯಕಿ. ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲೂ ಅವರಿಗೆ ತುಂಬ ಜನಪ್ರಿಯತೆ ಸಿಕ್ಕಿದೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು ಬರೋಬ್ಬರಿ 1.3 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಾರೆ. 20ಕ್ಕೂ ಅಧಿಕ ಸಿನಿಮಾಗಳಲ್ಲಿ ಅನುಪಮಾ ಪರಮೇಶ್ವರನ್ ನಟಿಸಿದ್ದಾರೆ. ಹಾಗಿದ್ದರೂ ಕೂಡ ಅವರನ್ನು ವ್ಯಂಗ್ಯ ಮಾಡಲಾಗಿದೆ. ಇತ್ತೀಚೆಗೆ ನೆಟ್ಟಿಗನೊಬ್ಬರು ‘ಈಕೆ ಹೀರೋಯಿನ್ ಮಟೀರಿಯಲ್ ಅಲ್ಲ’ ಎಂದು ಟ್ರೋಲ್ (Troll) ಮಾಡಿದ್ದಾರೆ. ಅದಕ್ಕೆ ಅನುಪಮಾ ಪರಮೇಶ್ವರನ್ ಅವರು ಸರಿಯಾಗಿ ತಿರುಗೇಟು ನೀಡಿದ್ದಾರೆ.
ನೆಟ್ಟಿಗರಿಂದ ಕೆಟ್ಟ ಕಮೆಂಟ್ಗಳು ಬಂದಾಗ ಸೆಲೆಬ್ರಿಟಿಗಳಿಗೆ ಕೋಪ ಬರುತ್ತದೆ. ಆದರೆ ಕೆಲವರ ಅಂಥ ಸಂದರ್ಭವನ್ನು ತುಂಬ ಚೆನ್ನಾಗಿ ನಿಭಾಯಿಸುತ್ತಾರೆ. ಅದೇ ಕಾರಣಕ್ಕಾಗಿ ಅನುಪಮಾ ಪರಮೇಶ್ವರನ್ ಅವರು ಈಗ ಸುದ್ದಿ ಆಗಿದ್ದಾರೆ. ನೆಟ್ಟಿಗರಿಂದ ನಾನಾ ರೀತಿಯ ಟೀಕೆ ಬರುವುದು ಸಹಜ. ಆದರೆ ಈ ನಡುವೆ ಒಂದು ಅತಿರೇಕದ ಕಮೆಂಟ್ ಬಂದಿದೆ. ‘ಇವರು ಯಾವ ದೊಡ್ಡ ಸಿನಿಮಾ ಕೂಡ ಮಾಡಿಲ್ಲ. ನನ್ನ ಪಾಲಿಗೆ ಇವರು ಹೀರೋಯಿನ್ ಮಟೀರಿಯಲ್ ಅಲ್ಲ’ ಎಂದು ವ್ಯಕ್ತಿಯೊಬ್ಬರು ಮಾಡಿದ ಕಮೆಂಟ್ ಅನುಪಮಾ ಪರಮೇಶ್ವರನ್ ಕಣ್ಣಿಗೂ ಬಿದ್ದಿದೆ.
ಹಲವಾರು ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ ನಟಿಯನ್ನು ಅಣಕಿಸುವ ರೀತಿಯಲ್ಲಿ ಮಾತನಾಡಿದರೆ ಖಂಡಿತವಾಗಿಯೂ ಬೇಸರ ಆಗುತ್ತದೆ. ಹಾಗಿದ್ದರೂ ಕೂಡ ಅನುಪಮಾ ಪರಮೇಶ್ವರನ್ ಅವರು ಸಿಟ್ಟು ಅಥವಾ ಬೇಸರ ಮಾಡಿಕೊಂಡಿಲ್ಲ. ತಮ್ಮದೇ ಶೈಲಿಯಲ್ಲಿ ಅವರು ಉತ್ತರ ನೀಡಿದ್ದಾರೆ.‘ಹೌದು ಅಣ್ಣಾ.. ನಾನು ಹೀರೋಯಿನ್ ಟೈಪ್ ಅಲ್ಲ. ನಾನು ನಟಿ ಟೈಪ್’ ಎಂದು ಅನುಪಮಾ ಪರಮೇಶ್ವರನ್ ಹೇಳಿದ್ದಾರೆ. ಅವರ ಈ ಹೇಳಿಕೆ ಅರ್ಥಪೂರ್ಣವಾಗಿದೆ. ಯಾರು ಬೇಕಾದರೂ ಹೀರೋಯಿನ್ ಎನಿಸಿಕೊಳ್ಳಬಹುದು. ಆದರೆ ನಟಿ ಎನಿಸಿಕೊಳ್ಳಲು ಅಭಿನಯ ಬರಬೇಕು. ಹಾಗಾಗಿ ತಮ್ಮನ್ನು ಹೀರೋಯಿನ್ ಎಂಬುದಕ್ಕಿಂತಲೂ ನಟಿ ಅಂತ ಕರೆದರೆ ಹೆಚ್ಚು ಸೂಕ್ತ ಎಂದು ಅನುಪಮಾ ಪರಮೇಶ್ವರನ್ ಅವರು ಈ ಮೂಲಕ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ಸೀರೆಯುಟ್ಟು ಫೋಟೋಗೆ ಸಖತ್ ಪೋಸ್ ಕೊಟ್ಟ ಗುಂಗುರು ಕೂದಲು ಚೆಲುವೆ ಅನುಪಮಾ ಪರಮೇಶ್ವರನ್
ಅನುಪಮಾ ಪರಮೇಶ್ವರನ್ ಅವರು ಬಹುಭಾಷೆಯಲ್ಲಿ ಬೇಡಿಕೆ ಹೊಂದಿದ್ದಾರೆ. ನಟನೆ ಮಾತ್ರವಲ್ಲದೇ ಸಿನಿಮಾದ ಇನ್ನುಳಿದ ವಿಭಾಗಗಳ ಬಗ್ಗೆಯೂ ಅವರು ಆಸಕ್ತಿ ತೋರಿಸುತ್ತಿದ್ದಾರೆ ಎಂಬುದು ಗಮನಿಸಬೇಕಾದ ಅಂಶ. ನಟನೆಯ ಜೊತೆಗೆ ಛಾಯಾಗ್ರಹಣದಲ್ಲೂ ಅನುಪಮಾ ಪರಮೇಶ್ವರನ್ ಅವರಿಗೆ ಆಸಕ್ತಿ ಇದೆ. ಹಾಗಾಗಿ ‘ಐ ಮಿಸ್ ಯೂ’ ಕಿರುಚಿತ್ರಕ್ಕೆ ಅವರು ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಅವರ ಈ ಪ್ರತಿಭೆ ಬಗ್ಗೆ ಅಭಿಮಾನಿಗಳಿಗೆ ಹೆಮ್ಮೆ ಎನಿಸಿದೆ.
ಇದನ್ನೂ ಓದಿ: ಸಿಂಪಲ್ ಗೆಟಪ್ನಲ್ಲೇ ಅಭಿಮಾನಿಗಳ ಮನಗೆದ್ದ ಅನುಪಮಾ ಪರಮೇಶ್ವರನ್
ತೆಲುಗು ಭಾಷೆಯ ‘ಐ ಮಿಸ್ ಯೂ’ ಕಿರುಚಿತ್ರ ಯೂಟ್ಯೂಬ್ನಲ್ಲಿ ಲಭ್ಯವಿದೆ. ಇದಕ್ಕೆ ಸಂಕಲ್ಪ ಗೋರಾ ನಿರ್ದೇಶನ ಮಾಡಿದ್ದಾರೆ. 10 ನಿಮಿಷ ಅವಧಿಯ ಈ ಶಾರ್ಟ್ ಫಿಲ್ಮ್ಗೆ ನೋಡುಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವು ನಟಿಯರು ಕೇವಲ ಗ್ಲಾಮರ್ ಗೊಂಬೆಯಾಗಿ ಇರುವ ಬದಲು ಸಿನಿಮಾದ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆ. ದುಲ್ಕರ್ ಸಲ್ಮಾನ್ ನಿರ್ಮಾಣದ ಮೊದಲ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ಅವರು ಸಹಾಯಕ ನಿರ್ದೇಶಕಿ ಆಗಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:41 pm, Mon, 12 June 23