AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹನುಮಾನ್ ಅಂಶ್’ ಒಂದು ದೈವಿಕ ಅನುಭವ: ಸೂಪರ್ ಹಿಟ್ ಚಿತ್ರಕ್ಕೆ ವರುಣ್ ಧವನ್ ಫಿದಾ

ಕಂಗನಾ ರಣಾವತ್, ಮಧುರ್ ಭಂಡಾರ್ಕರ್, ಆದಿತ್ಯ ಧರ್ ಬಳಿಕ ನಟ ವರುಣ್ ಧವನ್ ಕೂಡ ‘ಹನುಮಾನ್ ಅಂಶ್’ ಸಿನಿಮಾವನ್ನು ಹೊಗಳಿದ್ದಾರೆ. ಚಿತ್ರದ ನಾಯಕ ಶೋಭಿನವ್ ಸತ್ಯಾ ಅವರ ಅಭಿನಯ ಮತ್ತು ನಿರ್ದೇಶಕ ವಿಶಾಲ್ ಚತುರ್ವೇದಿ ಅವರ ನಿರ್ದೇಶನವನ್ನು ವರುಣ್ ಧವನ್ ವಿಶೇಷವಾಗಿ ಶ್ಲಾಘಿಸಿದ್ದಾರೆ.

‘ಹನುಮಾನ್ ಅಂಶ್’ ಒಂದು ದೈವಿಕ ಅನುಭವ: ಸೂಪರ್ ಹಿಟ್ ಚಿತ್ರಕ್ಕೆ ವರುಣ್ ಧವನ್ ಫಿದಾ
Shobhinaw Satya, Varun DhawanImage Credit source: Instagram/varundvn
ಮದನ್​ ಕುಮಾರ್​
|

Updated on: Sep 07, 2026 | 8:31 PM

Share

ಯಾವುದೇ ಪ್ರಸಿದ್ಧ ನಟ-ನಟಿಯರಿಲ್ಲದೇ, ಕೇವಲ 2 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡು ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಪ್ರದರ್ಶನ ಕಾಣುತ್ತಿರುವ ಬಾಲಿವುಡ್‌ನ ‘ಹನುಮಾನ್ ಅಂಶ್’ ಸಿನಿಮಾ ಈಗ ದೇಶಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿಗೂ ಹೆಚ್ಚು ಗಳಿಕೆ ಕಂಡು ಮುನ್ನುಗ್ಗುತ್ತಿರುವ ಈ ಚಿತ್ರಕ್ಕೆ ಇದೀಗ ಬಾಲಿವುಡ್ ನಟ ವರುಣ್ ಧವನ್ ಮಾರುಹೋಗಿದ್ದಾರೆ. ತಮ್ಮ ತಾಯಿಯೊಂದಿಗೆ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಿದ ವರುಣ್ ಧವನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಚಿತ್ರತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ವರುಣ್ ಧವನ್, ‘ಎಲ್ಲರೂ ದಯವಿಟ್ಟು ಚಿತ್ರಮಂದಿರಗಳಿಗೆ ತೆರಳಿ ಹನುಮಾನ್ ಅಂಶ್ ಸಿನಿಮಾ ನೋಡಿ. ನಾನು ಇತ್ತೀಚೆಗಷ್ಟೇ ನನ್ನ ಅಮ್ಮನ ಜೊತೆ ಹೋಗಿ ಈ ಚಿತ್ರ ವೀಕ್ಷಿಸಿದೆ. ನಿಜಕ್ಕೂ ಇದೊಂದು ಅದ್ಭುತ ಅನುಭವ. ನಿಮ್ಮ ಪೋಷಕರು ಮತ್ತು ಸ್ನೇಹಿತರನ್ನು ಕರೆದುಕೊಂಡು ಹೋಗಿ ಸಿನಿಮಾ ನೋಡಿ’ ಎಂದು ಹೇಳಿದ್ದಾರೆ.

‘ಯಾರೂ ನನಗೆ ಈ ವಿಡಿಯೋ ಮಾಡಲು ಹೇಳಿಲ್ಲ ಅಥವಾ ಕರೆ ಮಾಡಿಲ್ಲ. ನನಗಾಗಿಯೇ ಇದನ್ನು ಮಾಡಬೇಕು ಎನಿಸಿತು. ನನಗೆ ಬಾಲ್ಯದಿಂದಲೂ ಹನುಮಂತನ ಮೇಲೆ ವಿಶೇಷ ಭಕ್ತಿ ಇತ್ತು. ಆದರೆ ಈ ಚಿತ್ರವನ್ನು ನೋಡಿದ ಮೇಲೆ ಸಿಕ್ಕ ಅನುಭವವೇ ಬೇರೆ. ಇದನ್ನು ನಾನು ಕೇವಲ ಸಿನಿಮಾ ಎಂದು ಕರೆಯುವುದಿಲ್ಲ, ಇದೊಂದು ಶುದ್ಧ ದೈವಿಕ ಅನುಭವ’ ಎಂದು ವರುಣ್ ಧವನ್ ಅವರು ಹೇಳಿದ್ದಾರೆ.

122 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಬಿಡುಗಡೆಯಾದ ನಾಲ್ಕನೇ ವಾರಾಂತ್ಯದಲ್ಲಿ 39.25 ಕೋಟಿ ರೂಪಾಯಿ ಗಳಿಸುವ ಮೂಲಕ ಭಾರತದಲ್ಲಿ ‘ಹನುಮಾನ್ ಅಂಶ್’ ಚಿತ್ರದ ಒಟ್ಟು ನಿವ್ವಳ ಗಳಿಕೆ 122.13 ಕೋಟಿ ರೂಪಾಯಿ ತಲುಪಿದೆ. ದೊಡ್ಡ ಸಿನಿಮಾಗಳ ಪೈಪೋಟಿಯ ನಡುವೆಯೂ ಈ ಸಣ್ಣ ಬಜೆಟ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆಯುತ್ತಿದೆ. ‘ಟಾಕ್ಸಿಕ್’ ಚಿತ್ರಕ್ಕೂ ಈ ಸಿನಿಮಾ ಪೈಪೋಟಿ ನೀಡಿದೆ.

ಇದನ್ನೂ ಓದಿ: ಒಟಿಟಿ ಸಂಸ್ಥೆಯಿಂದ ರಿಜೆಕ್ಟ್ ಆಗಿತ್ತು ‘ಹನುಮಾನ್ ಅಂಶ್’ ಸಿನಿಮಾ: ಕಹಿ ಅನುಭವ ತೆರೆದಿಟ್ಟ ನಿರ್ದೇಶಕ

ಹನುಮಾನ್ ಅಂಶ್ ಚಿತ್ರಕ್ಕೆ ಬಾಲಿವುಡ್ ಬೆಂಬಲ: ಇದಕ್ಕೂ ಮುನ್ನ ನಟಿ ಕಂಗನಾ ರಣಾವತ್ ಅವರು ‘ಹನುಮಾನ್ ಅಂಶ್’ ಚಿತ್ರವನ್ನು ‘ಸತ್ಸಂಗ’ ಎಂದು ಕರೆದಿದ್ದರು. ಮಧುರ್ ಭಂಡಾರ್ಕರ್ ಮತ್ತು ಆದಿತ್ಯ ಧರ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ಚಿತ್ರಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಈಗ ವರುಣ್ ಧವನ್ ಅವರ ಸರದಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us