AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಸಲಿಂಗಿ ಅಲ್ಲ’: ದಿಶಾ ಪಟಾನಿ ಜೊತೆಗಿನ ಸಂಬಂಧಕ್ಕೆ ಮೌನಿ ರಾಯ್ ಸ್ಪಷ್ಟನೆ

ಮೌನಿ ರಾಯ್ ಮತ್ತು ದಿಶಾ ಪಟಾನಿ ಅವರು ಸಿಕ್ಕಾಪಟ್ಟೆ ಆಪ್ತವಾಗಿದ್ದಾರೆ. ಹಾಗಾಗಿ ಅನೇಕರಿಗೆ ಅನುಮಾನ ಇದೆ. ಇತ್ತೀಚೆಗೆ ಮೌನಿ ರಾಯ್ ಅವರು ಪತಿ ಸೂರಜ್ ನಂಬಿಯಾರ್​ಗೆ ವಿಚ್ಛೇದನ ನೀಡಿದ ಬಳಿಕ ಮೌನಿ ಮತ್ತು ದಿಶಾ ಬಗ್ಗೆ ಗಾಸಿಪ್ ಹೆಚ್ಚಾಯಿತು. ಅವುಗಳಿಗೆಲ್ಲ ಈಗ ಮೌನಿ ರಾಯ್ ಸ್ಪಷ್ಟನೆ ನೀಡಿದ್ದಾರೆ.

‘ನಾನು ಸಲಿಂಗಿ ಅಲ್ಲ’: ದಿಶಾ ಪಟಾನಿ ಜೊತೆಗಿನ ಸಂಬಂಧಕ್ಕೆ ಮೌನಿ ರಾಯ್ ಸ್ಪಷ್ಟನೆ
Disha Patani, Mouni Roy
ಮದನ್​ ಕುಮಾರ್​
|

Updated on: Jun 14, 2026 | 8:04 AM

Share

ಬಾಲಿವುಡ್ ನಟಿ ಮೌನಿ ರಾಯ್ (Mouni Roy) ಇತ್ತೀಚೆಗಷ್ಟೇ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದರು. ಪತಿ ಸೂರಜ್ ನಂಬಿಯಾರ್ ಅವರಿಂದ ಅಧಿಕೃತವಾಗಿ ಬೇರ್ಪಟ್ಟ ಬೆನ್ನಲ್ಲೇ, ನಟಿಯ ಲೈಂಗಿಕ ಆದ್ಯತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವದಂತಿಗಳು ಹರಿದಾಡತೊಡಗಿದ್ದವು. ದಿಶಾ ಪಟಾನಿ (Disha Patani) ಮತ್ತು ಮೌನಿ ರಾಯ್ ಅವರು ಆಪ್ತವಾಗಿ ಇರುವುದನ್ನು ಹಲವರು ತಪ್ಪಾಗಿ ಅರ್ಥೈಸಿದ್ದರು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ಮೌನಿ ರಾಯ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ತಾವು ಸಲಿಂಗಿ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಪ್ರಸಾರವಾಗುವ ‘ಮೋನಿಕಾ ಶರ್ಮಾ ಚಾಟ್ ಶೋ’ನಲ್ಲಿ ಭಾಗವಹಿಸಿದ್ದ ಮೌನಿ ರಾಯ್ ಅವರಿಗೆ, ಬಾಲಿವುಡ್‌ನಲ್ಲಿ ನಿಮ್ಮ ಬಗ್ಗೆ ಕೇಳಿಬಂದ ಅತ್ಯಂತ ದೊಡ್ಡ ವದಂತಿ ಯಾವುದು ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಯಾವುದೇ ಮುಜುಗರವಿಲ್ಲದೇ ಉತ್ತರಿಸಿದ ಮೌನಿ, ‘ಓಹ್.. ನಾನು ಗೇ (ಸಲಿಂಗಕಾಮಿ) ಎಂಬ ವದಂತಿ!’ ಎಂದು ನಗುತ್ತಲೇ ಉತ್ತರಿಸಿದರು.

ಪತಿಯಿಂದ ಬೇರ್ಪಟ್ಟ ನಂತರದ ದಿನಗಳ ಬಗ್ಗೆ ಮಾತನಾಡಿದ 40ರ ಪ್ರಾಯದ ಮೌನಿ ರಾಯ್, ‘ನನ್ನ ಕಷ್ಟದ ದಿನಗಳಲ್ಲಿ ನನ್ನ ಕುಟುಂಬ ಮತ್ತು ಸ್ನೇಹಿತರು ಬಂಡೆಯಂತೆ ನನ್ನ ಪರವಾಗಿ ನಿಂತಿದ್ದಾರೆ. ಈ ವಿಷಯದಲ್ಲಿ ನಾನು ನಿಜಕ್ಕೂ ಅದೃಷ್ಟವಂತೆ. ಅದರಲ್ಲೂ ನನ್ನ ಸ್ನೇಹಿತೆಯರು ನನ್ನ ಜೀವನದ ಏಳು-ಬೀಳುಗಳು, ಒಳ್ಳೆಯ ಹಾಗೂ ಕೆಟ್ಟ ದಿನಗಳಲ್ಲಿ ನನಗೆ ಗಟ್ಟಿ ಬೆಂಬಲ ನೀಡಿದ್ದಾರೆ’ ಎಂದು ತಮಗೆ ಸಿಕ್ಕ ಪ್ರೀತಿಯನ್ನು ಸ್ಮರಿಸಿಕೊಂಡರು.

ಜೊತೆಗೆ, ಪ್ರತಿಯೊಬ್ಬ ಮಹಿಳೆಯ ಜೀವನದಲ್ಲೂ ಪರಸ್ಪರ ಪ್ರೋತ್ಸಾಹಿಸುವ ಮತ್ತು ಧೈರ್ಯ ತುಂಬುವ ಇಂತಹ ಉತ್ತಮ ಗೆಳತಿಯರು ಇರುವುದು ತುಂಬಾ ಮುಖ್ಯ ಎಂದೂ ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಯುವತಿಯರಿಗೆ ಮಹತ್ವದ ಸಂದೇಶ ನೀಡಿದ ಮೌನಿ, ‘ಪ್ರತಿಯೊಬ್ಬ ಯುವತಿಯೂ ಜೀವನದಲ್ಲಿ ಎದುರಾಗುವ ಏರುಪೇರುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕಾದರೆ, ಅವರು ಭಾವನಾತ್ಮಕವಾಗಿ ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗುವುದು ಅತ್ಯಂತ ಅಗತ್ಯ’ ಎಂದು ಹೇಳಿದರು.

ಇದನ್ನೂ ಓದಿ: ದಿಶಾ ಪಟಾನಿ-ಮೌನಿ ರಾಯ್​ ಈ ರೀತಿ ಸ್ನೇಹ; ಇದೇ ಕಾರಣಕ್ಕೆ ವಿಚ್ಛೇದನ ನೀಡಿದ್ರಾ ಸೂರಜ್?

2022ರಲ್ಲಿ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ವಿವಾಹವಾಗಿದ್ದ ಮೌನಿ ರಾಯ್, ಕಳೆದ ತಿಂಗಳಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಪರಸ್ಪರ ಒಪ್ಪಿಗೆಯಿಂದ ಸೌಹಾರ್ದಯುತವಾಗಿ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದರು. ಅವರಿಬ್ಬರ ವಿಚ್ಛೇದನಕ್ಕೆ ದಿಶಾ ಪಟಾನಿ ಕಾರಣ ಎಂದು ಕೆಲವರು ಗಾಸಿಪ್ ಹಬ್ಬಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us