‘ಜಾಸ್ತಿ ಮಾತಾಡ್ತಾ ಇದೀಯ ನೀನು’: ಪಾಪರಾಜಿಗಳ ಮೇಲೆ ರೊಚ್ಚಿಗೆದ್ದ ರಣಬೀರ್ ಕಪೂರ್
ಪಾಪರಾಜಿಗಳು ಆಗಾಗ ಮಿತಿ ಮೀರಿ ನಡೆದುಕೊಳ್ಳುತ್ತಾರೆ. ಇದರಿಂದ ಸೆಲೆಬ್ರಿಟಿಗಳಿಗೆ ಕಿರಿಕಿರಿ ಆಗುತ್ತದೆ. ರಣಬೀರ್ ಕಪೂರ್ ಅವರು ಕೂಡ ಪಾಪರಾಜಿಗಳ ನಡವಳಿಕೆಯನ್ನು ಖಂಡಿಸಿದ್ದಾರೆ. ಅತಿಯಾಗಿ ಮಾತನಾಡುತ್ತಿದ್ದವರಿಗೆ ಅವರು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಮುಂಬೈನಲ್ಲಿ ನಡೆದ ‘ರಾಮಾಯಣ’ ಸಿನಿಮಾದ ಪತ್ರಿಕಾಗೋಷ್ಠಿ ಹಾಗೂ ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಫ್ಯಾಷನ್ ಶೋ ಬಳಿಕ ಬಾಲಿವುಡ್ ನಟ ರಣಬೀರ್ ಕಪೂರ್ ಅವರು ತಮ್ಮ ಪತ್ನಿ ಆಲಿಯಾ ಭಟ್, ‘ಲವ್ ಆ್ಯಂಡ್ ವಾರ್’ ಚಿತ್ರದ ಸಹನಟ ವಿಕ್ಕಿ ಕೌಶಲ್ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಶನಿವಾರ (ಸೆಪ್ಟೆಂಬರ್ 26) ರಾತ್ರಿ ಡಿನ್ನರ್‌ಗೆ ತೆರಳಿದ್ದರು. ಆದರೆ, ಈ ಸಂದರ್ಭದಲ್ಲಿ ಕ್ಯಾಮೆರಾಗಳ ಮುಂದೆ ಪೋಸ್ ನೀಡುವಾಗ ಛಾಯಾಗ್ರಾಹಕರೊಬ್ಬರ ನಡವಳಿಕೆಗೆ ರಣಬೀರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಡಿನ್ನರ್ ಮುಗಿಸಿ ಹೊರಬಂದಾಗ ರಣಬೀರ್-ಆಲಿಯಾ ದಂಪತಿ, ವಿಕ್ಕಿ ಹಾಗೂ ಬನ್ಸಾಲಿ ಒಟ್ಟಿಗೆ ನಿಂತು ಛಾಯಾಗ್ರಾಹಕರಿಗೆ ಪೋಸ್ ನೀಡುತ್ತಿದ್ದರು. ರಣಬೀರ್ ಅವರು ಆಲಿವ್-ಗ್ರೀನ್ ಕುರ್ತಾದಲ್ಲಿ ಮಿಂಚಿದರೆ, ಆಲಿಯಾ ನಿಯಾನ್ ಗ್ರೀನ್ ಗೌನ್ ಹಾಗೂ ವಿಕ್ಕಿ ಬಿಳಿ ಶರ್ಟ್‌ನಲ್ಲಿ ಕಂಗೊಳಿಸುತ್ತಿದ್ದರು. ಪೋಟೋ ತೆಗೆಸಿಕೊಳ್ಳುವಾಗ ನಿರ್ದೇಶಕ ಬನ್ಸಾಲಿ ಪಕ್ಕಕ್ಕೆ ಸರಿಯಲು ಯತ್ನಿಸಿದಾಗ, ರಣಬೀರ್ ಅವರನ್ನು ಮತ್ತೆ ಹತ್ತಿರ ಕರೆದು ಒಟ್ಟಿಗೆ ಫೋಟೋಗೆ ನಿಂತರು.
Alia Bhatt 𝗦𝘂𝗱𝗱𝗲𝗻𝗹𝘆 𝗣𝘂𝗹𝗹𝗲𝗱 Ranbir Kapoor’s hand 𝗮𝗿𝗼𝘂𝗻𝗱 𝗵𝗲𝗿 𝘄𝗮𝗶𝘀𝘁 — but why? 😱🔥
The crowd was huge, and Ranbir even got angry at the media, saying, “𝐁𝐚𝐡𝐮𝐭 𝐁𝐨𝐥 𝐑𝐚𝐡𝐚 𝐇𝐚𝐢 𝐓𝐮𝐮𝐮.” 😡
After hugging Vicky Kaushal, Alia wrapped Ranbir’s… pic.twitter.com/u5VTjziRE9
— T-Celebs (@t_celebs) September 27, 2026
ಫೋಟೋ ಸೆಷನ್ ಮುಗಿಸಿ ಎಲ್ಲರೂ ಕಾರಿನತ್ತ ಹೊರಡುವಾಗ, ಛಾಯಾಗ್ರಾಹಕರೊಬ್ಬರು ರಣಬೀರ್ ಅವರಿಗೆ ಆಲಿಯಾ ಮತ್ತು ವಿಕ್ಕಿ ಜೊತೆ ಮತ್ತೊಮ್ಮೆ ಪೋಸ್ ನೀಡುವಂತೆ ಪದೇ ಪದೇ ಜೋರಾಗಿ ಕೂಗಾಡಲು ಶುರುಮಾಡಿದರು. ಇದರಿಂದ ಸಿಟ್ಟಾದ ರಣಬೀರ್, ವಾಪಸ್ ತಿರುಗಿ ನೋಡಿ ‘ನೀನು ಜಾಸ್ತಿ ಮಾತನಾಡುತ್ತಿದ್ದೀಯಾ’ ಎಂದು ಗರಂ ಆಗಿ ಹೇಳಿದರು. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
‘ಲವ್ ಆ್ಯಂಡ್ ವಾರ್’ ಹಾಗೂ ‘ರಾಮಾಯಣ’ ನಿರೀಕ್ಷೆ:
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಒಂದು ಪೀರಿಯಡ್ ರೊಮ್ಯಾಂಟಿಕ್ ವಾರ್ ಡ್ರಾಮಾವಾಗಿದ್ದು, ರಣಬೀರ್ ಹಾಗೂ ವಿಕ್ಕಿ ಕೌಶಲ್ ಭಾರತೀಯ ವಾಯುಸೇನಾ ಅಧಿಕಾರಿಗಳಾಗಿ ನಟಿಸುತ್ತಿದ್ದಾರೆ. ಇಬ್ಬರ ನಡುವೆ ಆಲಿಯಾ ಭಟ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಮೇಲೆ ನಿರೀಕ್ಷೆ ಇದೆ.
ಇದನ್ನೂ ಓದಿ: ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲಿ ರಕ್ತ ಸಿಕ್ತ ಲುಕ್ನಲ್ಲಿ ರಣಬೀರ್; ರಾಮನ ಪಾತ್ರ ಹೋಲಿಸಿ ಟೀಕೆ
ನಿತೇಶ್ ತಿವಾರಿ ನಿರ್ದೇಶನದ ಬೃಹತ್ ಬಜೆಟ್‌ನ ‘ರಾಮಾಯಣ: ಪಾರ್ಟ್ 1’ ಸಿನಿಮಾ 2026ರ ದೀಪಾವಳಿ ಹಬ್ಬದ ಪ್ರಯುಕ್ತ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್ ಸೇರಿದಂತೆ ದೊಡ್ಡ ತಾರಾಗಣವಿದೆ. ಎರಡನೇ ಭಾಗವು 2027ರ ದೀಪಾವಳಿಗೆ ತೆರೆಕಾಣಲಿದೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಈ ಸಿನಿಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ಅಂತಾರಾಷ್ಟ್ರೀಯ ಯೂಟ್ಯೂಬರ್ ಮಿಸ್ಟರ್ ಬೀಸ್ಟ್ ಕೂಡ ಭಾಗವಹಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




