AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಭಾರತ ಸಿನಿರಂಗದ ಗೌರವ ಎತ್ತಿಹಿಡಿದ ನಟಿ ರೇಜಿನಾ: ಉತ್ತರ-ದಕ್ಷಿಣ ಭೇದಭಾವದ ಬಗ್ಗೆ ಖಡಕ್ ಮಾತು

ದಕ್ಷಿಣ ಭಾರತದ ಚಿತ್ರರಂಗದ ಕುರಿತು ನಟಿಯರಾದ ಜಾನ್ವಿ ಕಪೂರ್ ಹಾಗೂ ರಾಧಿಕಾ ಆಪ್ಟೆ ನೀಡಿದ್ದ ಹೇಳಿಕೆಗೆ ನಟಿ ರೇಜಿನಾ ಕ್ಯಾಸಂಡ್ರಾ ಖಡಕ್ ಉತ್ತರ ನೀಡಿದ್ದಾರೆ. ನಟಿಯರು ಸಿನಿಮಾಗಳಿಂದ ಹೊರನಡೆಯುವ ಸ್ವಾತಂತ್ರ್ಯ ಹೊಂದಿದ್ದಾರೆ. ಅದನ್ನು ಬಿಟ್ಟು ಅನಗತ್ಯವಾಗಿ ಉತ್ತರ ಮತ್ತು ದಕ್ಷಿಣ ಭಾರತದ ಚಿತ್ರರಂಗಗಳ ನಡುವೆ ಭೇದಭಾವ ಸೃಷ್ಟಿಸುವುದು ತೀರಾ ತಪ್ಪು ಎಂದು ರೇಜಿನಾ ಪ್ರತಿಪಾದಿಸಿದ್ದಾರೆ.

ದಕ್ಷಿಣ ಭಾರತ ಸಿನಿರಂಗದ ಗೌರವ ಎತ್ತಿಹಿಡಿದ ನಟಿ ರೇಜಿನಾ: ಉತ್ತರ-ದಕ್ಷಿಣ ಭೇದಭಾವದ ಬಗ್ಗೆ ಖಡಕ್ ಮಾತು
Regina
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 09, 2026 | 10:51 AM

Share

ಮುಖ್ಯಾಂಶಗಳು

  • ಉತ್ತರ-ದಕ್ಷಿಣ ಭೇದಭಾವ ಸೃಷ್ಟಿಸಬೇಡಿ
  • ನಟಿ ರೇಜಿನಾ ಕ್ಯಾಸಂಡ್ರಾ ಖಡಕ್ ಎಚ್ಚರಿಕೆ
  • ಇಷ್ಟವಿಲ್ಲದಿದ್ದರೆ ಸಿನಿಮಾದಿಂದ ಹೊರನಡೆಯುವ ಹಕ್ಕಿದೆ

ತೆಲುಗು ಚಿತ್ರರಂಗ ಮತ್ತು ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಇತ್ತೀಚೆಗೆ ನಟಿಯರಾದ ಜಾನ್ವಿ ಕಪೂರ್ ಹಾಗೂ ರಾಧಿಕಾ ಆಪ್ಟೆ ನೀಡಿದ್ದ ಹೇಳಿಕೆಗಳು ಭಾರಿ ಚರ್ಚೆಗೆ ಗ್ರಾಸವಾಗಿದ್ದವು. ಈ ವಿಚಾರದ ಬಗ್ಗೆ ನಟಿ ರೇಜಿನಾ ಕ್ಯಾಸಂಡ್ರಾ ಈಗ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ನಟಿಯರು ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದು ತಪ್ಪಲ್ಲ. ಆದರೆ ಸಿನಿರಂಗದ ನಡುವೆ ಅನಗತ್ಯವಾಗಿ ಭೇದಭಾವ ಸೃಷ್ಟಿಸುವುದು ಸರಿಯಲ್ಲ ಎಂದು ಅವರು ಖಡಕ್ಕಾಗಿ ಹೇಳಿದ್ದಾರೆ.

ಯಾವುದೇ ದೃಶ್ಯ ಅಥವಾ ಪಾತ್ರದಲ್ಲಿ ನಟಿಸಲು ಮುಜುಗರವಾದರೆ ಅದನ್ನು ನಿರಾಕರಿಸುವ ಹಕ್ಕು ನಟ-ನಟಿಯರಿಗೆ ಇರುತ್ತದೆ. ಯಾರೂ ಕೂಡ ಅಸಹಾಯಕರಾಗಿ ಇರಬೇಕಾದ ಅಗತ್ಯವಿಲ್ಲ. ಇಷ್ಟವಿಲ್ಲದಿದ್ದರೆ ಆ ಚಿತ್ರದಿಂದ ಹೊರನಡೆಯುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ತಮ್ಮ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವಷ್ಟು ಸಶಕ್ತರಾಗಿ ನಟಿಯರು ಬೆಳೆಯಬೇಕು ಎಂಬುದು ರೇಜಿನಾ ಅವರ ಅಭಿಪ್ರಾಯವಾಗಿದೆ.

ಉತ್ತರ ಭಾರತದ ನಟಿಯರು ದಕ್ಷಿಣದ ಚಿತ್ರರಂಗವನ್ನು ಟೀಕಿಸುವಾಗ ಎಚ್ಚರಿಕೆ ವಹಿಸಬೇಕು. ಇದು ತಿಳಿಯದೆ ಉತ್ತರ ಮತ್ತು ದಕ್ಷಿಣ ಎಂಬ ಭೇದಭಾವವನ್ನು ಹೆಚ್ಚಿಸುತ್ತದೆ. ಯಾವುದೇ ಸಮಸ್ಯೆಯನ್ನು ಚರ್ಚಿಸಲು ಬೇರೆಯದೇ ಆದ ಸೂಕ್ತ ಮಾರ್ಗಗಳಿವೆ. ಸಿನಿರಂಗದಲ್ಲಿ ಈಗಾಗಲೇ ಇರುವ ಗೊಂದಲಗಳನ್ನು ಮತ್ತಷ್ಟು ಹೆಚ್ಚಿಸುವುದು ಸರಿಯಲ್ಲ ಎಂದು ರೇಜಿನಾ ಎಚ್ಚರಿಸಿದ್ದಾರೆ.

ತಮಗೆ ಬಾಲಿವುಡ್‌ನಿಂದ ಆದ ಅನುಭವವನ್ನು ರೇಜಿನಾ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ‘ಕೇಸರಿ ಚಾಪ್ಟರ್ 2’ ಸಿನಿಮಾದ ಪ್ರಚಾರದ ವೇಳೆ ತಮ್ಮನ್ನು ಕಡೆಗಣಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ. ಹಾಡಿನಲ್ಲಿ ಕಾಣಿಸಿಕೊಂಡಿದ್ದರೂ ತಮ್ಮ ಹೆಸರು ಪ್ರಚಾರದ ಪಟ್ಟಿಯಲ್ಲಿ ಇರಲಿಲ್ಲ. ಇದನ್ನು ದಕ್ಷಿಣ ಭಾರತದ ನಟಿ ಎಂಬ ಕಾರಣಕ್ಕೆ ಮಾಡಿದ ಕಡೆಗಣನೆ ಎನ್ನಬೇಕೇ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ‘ನನ್ನಿಂದ ದೊಡ್ಡ ತಪ್ಪಾಯಿತು’: ‘ಪೆದ್ದಿ’ ಸಿನಿಮಾದ ಪಾತ್ರದ ಬಗ್ಗೆ ಜಾನ್ವಿ ಕಪೂರ್ ಬೇಸರ

ಜಾನ್ವಿ ಕಪೂರ್ ಅವರು ತಮ್ಮ ಚಿತ್ರದ ಪಾತ್ರವೊಂದರ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರು. ಹಾಗೆಯೇ ರಾಧಿಕಾ ಆಪ್ಟೆ ಕೂಡ ತೆಲುಗು ಸಿನಿಮಾವೊಂದರ ಚಿತ್ರೀಕರಣದ ವೇಳೆಯ ಕಹಿ ಅನುಭವವನ್ನು ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಾತನಾಡಿದ ರೇಜಿನಾ, ಸಿನಿರಂಗದ ಆಂತರಿಕ ವಿಚಾರಗಳನ್ನು ಸಮತೋಲನದಿಂದ ನೋಡಬೇಕು ಎಂದು ಹೇಳಿದ್ದಾರೆ. ಪ್ರಾದೇಶಿಕ ಭೇದಭಾವ ಮಾಡದೆ ಪರಸ್ಪರ ಗೌರವಿಸುವುದು ಮುಖ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಛಲವಾದಿ ಮನೆಗೆ ಚಾಕು, ಚೂರಿ ಪಾರ್ಸೆಲ್; ಇತ್ತ ಜೋರಾಯ್ತು ಪೋಸ್ಟರ್ ವಾರ್!
ಛಲವಾದಿ ಮನೆಗೆ ಚಾಕು, ಚೂರಿ ಪಾರ್ಸೆಲ್; ಇತ್ತ ಜೋರಾಯ್ತು ಪೋಸ್ಟರ್ ವಾರ್!
ದೀಪಾವಳಿ ಹಬ್ಬದ ಹಿನ್ನೆಲೆ ಕೆಆರ್ ಮಾರುಕಟ್ಟೆಯಲ್ಲಿ ಜನಸಾಗರ
ದೀಪಾವಳಿ ಹಬ್ಬದ ಹಿನ್ನೆಲೆ ಕೆಆರ್ ಮಾರುಕಟ್ಟೆಯಲ್ಲಿ ಜನಸಾಗರ
ದೀಪಾವಳಿ ಪಟಾಕಿ ದುರಂತ: ಮೊದಲ ದಿನವೇ ಮಕ್ಕಳೂ ಸೇರಿ 32 ಮಂದಿಗೆ ಗಾಯ
ದೀಪಾವಳಿ ಪಟಾಕಿ ದುರಂತ: ಮೊದಲ ದಿನವೇ ಮಕ್ಕಳೂ ಸೇರಿ 32 ಮಂದಿಗೆ ಗಾಯ
ಇಂದು ಈ ರಾಶಿಯವರು ಹಿತಶತ್ರುಗಳ ಬಗ್ಗೆ ಜಾಗೃತೆವಹಿಸಿ
ಇಂದು ಈ ರಾಶಿಯವರು ಹಿತಶತ್ರುಗಳ ಬಗ್ಗೆ ಜಾಗೃತೆವಹಿಸಿ
ಕುಮಾರಸ್ವಾಮಿ ಮಾಡಿರುವ ಆರೋಪಗಳ ಬಗ್ಗೆ ಸಿಎಂ ಗಮನಕ್ಕೆ ತಂದ ಹಾಸನ ಡಿಸಿ
ಕುಮಾರಸ್ವಾಮಿ ಮಾಡಿರುವ ಆರೋಪಗಳ ಬಗ್ಗೆ ಸಿಎಂ ಗಮನಕ್ಕೆ ತಂದ ಹಾಸನ ಡಿಸಿ
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ: ವಿಜಯ್​ಗೆ ಡಿಕೆಶಿ ಕೌಂಟರ್
ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ: ವಿಜಯ್​ಗೆ ಡಿಕೆಶಿ ಕೌಂಟರ್
ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ
ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​