AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣವೀರ್ ವಿವಾದ ಬಳಿಕ ‘ಡಾನ್ 3’ ಚಿತ್ರಕ್ಕೆ ಮರಳಲು ಶಾರುಖ್ ರೆಡಿ; ಹಾಕಿದ ಷರತ್ತೇನು?

‘ಡಾನ್ 3’ ಚಿತ್ರದ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ರಣವೀರ್ ಸಿಂಗ್ ನಿರ್ಗಮನದ ನಂತರ, ನಾಯಕನ ಆಯ್ಕೆ ಗೊಂದಲ ಸೃಷ್ಟಿಸಿದೆ. ಹೃತಿಕ್ ರೋಷನ್ ವದಂತಿಗಳನ್ನು ಅಲ್ಲಗಳೆದಿದ್ದಾರೆ. ಶಾರುಖ್ ಖಾನ್ ಅಟ್ಲೀ ನಿರ್ದೇಶನದ ಷರತ್ತಿನೊಂದಿಗೆ ಮರಳುವ ಸಾಧ್ಯತೆ ಇದೆ. ಫರ್ಹಾನ್ ಅಖ್ತರ್ ಅವರ ಮೌನವು ಮುಂದಿನ ‘ಡಾನ್’ ಯಾರು ಎಂಬ ಕುತೂಹಲ ಹೆಚ್ಚಿಸಿದೆ.

ರಣವೀರ್ ವಿವಾದ ಬಳಿಕ ‘ಡಾನ್ 3’ ಚಿತ್ರಕ್ಕೆ ಮರಳಲು ಶಾರುಖ್ ರೆಡಿ; ಹಾಕಿದ ಷರತ್ತೇನು?
ಶಾರುಖ್ ಖಾನ್
ರಾಜೇಶ್ ದುಗ್ಗುಮನೆ
|

Updated on: May 27, 2026 | 1:09 PM

Share

‘ಡಾನ್ 3’ (Don 3) ಚಿತ್ರದ ವಿವಾದ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಸದ್ಯ ಬಿ-ಟೌನ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಶಾರುಖ್ ಖಾನ್ ಅವರು ‘ಡಾನ್’ ಹಾಗೂ ‘ಡಾನ್ 2’ ಸಿನಿಮಾಗಳಲ್ಲಿ ನಟಿಸಿ ಜಾಗತಿಕ ಮಟ್ಟದಲ್ಲಿ ದೊಡ್ಡ ಯಶಸ್ಸು ತಂದುಕೊಟ್ಟಿದ್ದರು. ಆ ಬಳಿಕ ನಿರ್ದೇಶಕ ಫರ್ಹಾನ್ ಅಖ್ತರ್ ಅವರು ‘ಡಾನ್ 3’ ಚಿತ್ರಕ್ಕೆ ರಣವೀರ್ ಸಿಂಗ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಆದರೆ, ರಣವೀರ್ ಸಿಂಗ್ ಸಿನಿಮಾದಿಂದ ದಿಢೀರ್ ಹೊರನಡೆದಿರುವುದರಿಂದ ಅವರು ಈ ಚಿತ್ರದಲ್ಲಿ ನಟಿಸುವುದು ಬಹುತೇಕ ಅನುಮಾನವಾಗಿದೆ. ಈ ಬೆಳವಣಿಗೆಯಿಂದಾಗಿ ಈಗ ‘ಡಾನ್ 3’ ಚಿತ್ರಕ್ಕೆ ಮುಂದಿನ ನಾಯಕ ಯಾರು? ಶಾರುಖ್ ಖಾನ್ ಮತ್ತೆ ಡಾನ್ ಆಗಿ ಮರಳುತ್ತಾರಾ? ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ.

ರಣವೀರ್ ಸಿಂಗ್ ಚಿತ್ರದಿಂದ ಹೊರಬಿದ್ದ ತಕ್ಷಣವೇ, ಆ ಪಾತ್ರಕ್ಕೆ ಬಾಲಿವುಡ್ ಸೂಪರ್‌ಸ್ಟಾರ್ ಹೃತಿಕ್ ರೋಷನ್ ಅವರನ್ನು ಕರೆತರಲಾಗುತ್ತಿದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಈ ಬಗ್ಗೆ ಸ್ವತಃ ಸ್ಪಷ್ಟನೆ ನೀಡಿದ್ದ ಹೃತಿಕ್, ‘ಕೇವಲ ವದಂತಿಯಾಗಿ ಆರಂಭವಾದ ಮಾತುಗಳು ಈಗ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿವೆ. ಆದರೆ ‘ಡಾನ್ 3’ ಚಿತ್ರಕ್ಕಾಗಿ ಚಿತ್ರತಂಡ ನನ್ನನ್ನು ಯಾವುದೇ ಹಂತದಲ್ಲೂ ಸಂಪರ್ಕಿಸಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ’ ಎಂದು ಸುಮ್ಮನೆ ಹರಡಿದ್ದ ಸುದ್ದಿಗೆ ಬ್ರೇಕ್ ಹಾಕಿದ್ದರು.

ಮರುಪ್ರವೇಶಕ್ಕೆ ಶಾರುಖ್ ಖಾನ್ ಷರತ್ತು?

ಮತ್ತೊಂದೆಡೆ, ಶಾರುಖ್ ಖಾನ್ ಅವರೇ ಮತ್ತೆ ‘ಡಾನ್’ ಆಗಿ ಕಂಬ್ಯಾಕ್ ಮಾಡಲಿದ್ದಾರೆ ಎಂಬ ಬಲವಾದ ವರದಿಗಳು ಕೇಳಿಬರುತ್ತಿವೆ. ಆದರೆ, ಕಿಂಗ್ ಖಾನ್ ಮರಳಿ ಬರಲು ಒಂದು ಮುಖ್ಯ ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ‘ಜವಾನ್’ ಚಿತ್ರದ ನಿರ್ದೇಶಕ ಅಟ್ಲೀ ಅವರು ಈ ಚಿತ್ರವನ್ನು ನಿರ್ದೇಶಿಸುವುದಾದರೆ ಮಾತ್ರ ತಾವು ನಟಿಸಲು ಸಿದ್ಧ ಎಂದು ಶಾರುಖ್ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಶಾರುಖ್ ಖಾನ್ ಅವರಾಗಲಿ ಅಥವಾ ನಿರ್ಮಾಣ ಸಂಸ್ಥೆಯಾಗಲಿ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ನಿರ್ದೇಶಕ ಫರ್ಹಾನ್ ಅಖ್ತರ್ ಮೌನ:

ಇಷ್ಟೆಲ್ಲಾ ಗೊಂದಲ ಹಾಗೂ ವಿವಾದಗಳು ಸೃಷ್ಟಿಯಾಗಿದ್ದರೂ, ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಫರ್ಹಾನ್ ಅಖ್ತರ್ ಮಾತ್ರ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮೌನ ವಹಿಸಿದ್ದಾರೆ. ಅವರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯೂ ಸಹ ಚಿತ್ರದ ಭವಿಷ್ಯದ ಬಗ್ಗೆ ಅಥವಾ ಮುಂದಿನ ನಾಯಕ ಯಾರು ಎಂಬುದರ ಕುರಿತು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ: ‘ಡಾನ್ 3’ ವಿವಾದ: ಚಿತ್ರರಂಗದಿಂದ ಬ್ಯಾನ್ ಆದ ಬಳಿಕ ಮೌನ ಮುರಿದ ರಣವೀರ್ ಸಿಂಗ್‌

ಅಮಿತಾಭ್ ಬಚ್ಚನ್ ಮತ್ತು ಶಾರುಖ್ ಖಾನ್ ಅವರಂತಹ ದಿಗ್ಗಜರು ನಟಿಸಿ ಬೆಳೆಸಿದ ‘ಡಾನ್’ ಸರಣಿಯ ಮುಂದಿನ ನಾಯಕ ಯಾರಾಗಲಿದ್ದಾರೆ ಎಂಬುದು ಸದ್ಯಕ್ಕೆ ದೊಡ್ಡ ಸಸ್ಪೆನ್ಸ್ ಆಗಿ ಉಳಿದಿದೆ. ಈ ಚಿತ್ರವನ್ನು ಅರ್ಧಕ್ಕೆ ಕೈ ಬಿಡೋ ಬಗ್ಗೆಯೂ ನಿರ್ಮಾಪಕರು ಯೋಚಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಡಿಕೆಶಿಗೆ ಸಿಎಂ ಪಟ್ಟ!: ಸತ್ಯವಾಗುತ್ತಿದೆ ರಂಭಾಪುರಿ ಶ್ರೀಗಳ ಮಾತು
ಡಿಕೆಶಿಗೆ ಸಿಎಂ ಪಟ್ಟ!: ಸತ್ಯವಾಗುತ್ತಿದೆ ರಂಭಾಪುರಿ ಶ್ರೀಗಳ ಮಾತು
ಬಂಡೀಪುರದಲ್ಲಿ ಚಲಿಸುವ ಕಾರಿಂದ ಬಿಯರ್ ಕ್ಯಾನ್, ಟಿಶ್ಯೂ ಎಸೆದ ಪ್ರವಾಸಿಗರು
ಬಂಡೀಪುರದಲ್ಲಿ ಚಲಿಸುವ ಕಾರಿಂದ ಬಿಯರ್ ಕ್ಯಾನ್, ಟಿಶ್ಯೂ ಎಸೆದ ಪ್ರವಾಸಿಗರು
ಹೈಕಮಾಂಡ್ ಜತೆಗಿನ ಮಾತುಕತೆ ಬಗ್ಗೆ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್
ಹೈಕಮಾಂಡ್ ಜತೆಗಿನ ಮಾತುಕತೆ ಬಗ್ಗೆ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್
ಹೀಗೆ ಔಟಾಗಿ, ಹೀಗೊಂದು ದಾಖಲೆ ಬರೆದ ಸಾಯಿ ಸುದರ್ಶನ್
ಹೀಗೆ ಔಟಾಗಿ, ಹೀಗೊಂದು ದಾಖಲೆ ಬರೆದ ಸಾಯಿ ಸುದರ್ಶನ್
ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ವಿಜಯೇಂದ್ರ ಸ್ಫೋಟಕ ಭವಿಷ್ಯ!
ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ವಿಜಯೇಂದ್ರ ಸ್ಫೋಟಕ ಭವಿಷ್ಯ!
ಗುರು ಸಂಚಾರ ಮಕರ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗುರು ಸಂಚಾರ ಮಕರ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
Video: ಪವರ್ ಕೇಬಲ್ ಕದಿಯಲು ಹೋಗಿ ಕಳ್ಳನಿಗೆ ಎಂಥಾ ಪರಿಸ್ಥಿತಿ ಬಂತು ನೋಡಿ
Video: ಪವರ್ ಕೇಬಲ್ ಕದಿಯಲು ಹೋಗಿ ಕಳ್ಳನಿಗೆ ಎಂಥಾ ಪರಿಸ್ಥಿತಿ ಬಂತು ನೋಡಿ
ರೆಡಿನಾ... ಮೊದಲ ಓವರ್​ ನಂದೇ! RCB ಫ್ಯಾನ್ಸ್​ಗೆ ಶಾಕ್ ನೀಡಿದ ಕೊಹ್ಲಿ
ರೆಡಿನಾ... ಮೊದಲ ಓವರ್​ ನಂದೇ! RCB ಫ್ಯಾನ್ಸ್​ಗೆ ಶಾಕ್ ನೀಡಿದ ಕೊಹ್ಲಿ
ಕೂದಲೆಳೆ ಅಂತರದಲ್ಲಿ ತಪ್ಪಿದ ಅಪಘಾತ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕೂದಲೆಳೆ ಅಂತರದಲ್ಲಿ ತಪ್ಪಿದ ಅಪಘಾತ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರಿನಲ್ಲಿ ಕುರಿಗಳಿಗೂ ಪೊಲೀಸರಿಂದ ಟೈಟ್ ಸೆಕ್ಯೂರಿಟಿ!
ಬೆಂಗಳೂರಿನಲ್ಲಿ ಕುರಿಗಳಿಗೂ ಪೊಲೀಸರಿಂದ ಟೈಟ್ ಸೆಕ್ಯೂರಿಟಿ!