‘ನೀರಿನ ಬಾಟಲಿಯಲ್ಲಿ ಮೂತ್ರ ಮಾಡಿ ಕೊಡ್ತಾರೆ’: ದಿ ರಾಕ್​ ಮೇಲೆ ಗಂಭೀರ ಆರೋಪ

ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಡ್ವೇನ್​ ಜಾನ್ಸನ್​ ಅಲಿಯಾಸ್​ ದಿ ರಾಕ್​ ಅವರು ಕೆಟ್ಟ ಕಾರಣಗಳಿಂದ ಸುದ್ದಿ ಆಗುತ್ತಿದ್ದಾರೆ. ಶೂಟಿಂಗ್ ಸಮಯದಲ್ಲಿ ಅವರು ತೀರಾ ಅಸಹ್ಯವಾದ ವರ್ತನೆ ತೋರುತ್ತಾರೆ ಎಂದು ಆರೋಪಿಸಲಾಗಿದೆ. ಬಾಟಲಿಯಲ್ಲಿ ಮೂತ್ರ ವಿರ್ಸಜನೆ ಮಾಡಿ, ಅದನ್ನು ಸಹಾಯಕರ ಕೈಗೆ ಕೊಡುತ್ತಾರೆ ಎಂಬ ಆರೋಪ ಕೇಳಿಬಂದಿದೆ.

‘ನೀರಿನ ಬಾಟಲಿಯಲ್ಲಿ ಮೂತ್ರ ಮಾಡಿ ಕೊಡ್ತಾರೆ’: ದಿ ರಾಕ್​ ಮೇಲೆ ಗಂಭೀರ ಆರೋಪ
ಡ್ವೇನ್​ ಜಾನ್ಸನ್​ ಅಲಿಯಾಸ್​ ದಿ ರಾಕ್​
Follow us
|

Updated on: May 01, 2024 | 6:49 PM

WWE ಮ್ಯಾಚ್​ಗಳನ್ನು ನೋಡಿ ಎಂಜಾಯ್​ ಮಾಡಿದ ಎಲ್ಲರಿಗೂ ದಿ ರಾಕ್​ ಅಲಿಯಾಸ್​ ಡ್ವೇನ್​ ಜಾನ್ಸನ್​ ಬಗ್ಗೆ ಗೊತ್ತೇ ಇರುತ್ತದೆ. ಹಾಲಿವುಡ್​(Hollywood) ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್​ ಆಗಿದ್ದಾರೆ. ಕೋಟ್ಯಂತರ ಮಂದಿಗೆ ದಿ ರಾಕ್ (The Rock)​ ಎಂದರೆ ಅಚ್ಚುಮೆಚ್ಚು. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ. ಆದರೆ ಈಗ ಅವರ ಮೇಲೆ ಕೆಲವು ಗಂಭೀರ ಆರೋಪಗಳು ಕೇಳಿಬಂದಿವೆ. ‘ದಿ ರಾಕ್​ ಅವರು ನೀರಿನ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ’ ಎಂದು ಕೆಲವರು ಆರೋಪಿಸಿದ್ದಾರೆ. ಅಮೆರಿಕದ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟ ಆಗಿದೆ. ಡ್ವೇನ್​ ಜಾನ್ಸನ್​ (Dwayne Johnson) ಮೇಲಿನ ಈ ಆರೋಪಗಳನ್ನು ಕೇಳಿ ಎಲ್ಲರಿಗೂ ಶಾಕ್​ ಆಗಿದೆ.

ಸಿನಿಮಾದ ಶೂಟಿಂಗ್​ ಸೆಟ್​ಗೆ ಡ್ವೇನ್​ ಜಾನ್ಸನ್​ ಅವರು ತುಂಬ ತಡವಾಗಿ ಬರುತ್ತಾರೆ ಎನ್ನಲಾಗಿದೆ. ಇದರಿಂದಾಗಿ ನಿರ್ಮಾಪಕರಿಗೆ ನೂರಾರು ಕೋಟಿ ರೂಪಾಯಿ ನಷ್ಟ ಆಗಿದೆ. ಅಷ್ಟೇ ಅಲ್ಲದೇ ಸಹ-ನಟರ ಜೊತೆಗೆ ಡ್ವೇನ್​ ಜಾನ್ಸನ್​ ಗಲಾಟೆ ಕೂಡ ಮಾಡಿಕೊಂಡಿದ್ದಾರೆ. ಅದಕ್ಕಿಂತಲೂ ಕೆಟ್ಟ ವರ್ತನೆ ಏನೆಂದರೆ, ಅವರು ನೀರಿನ ಬಾಟಲಿಯಲ್ಲಿ ಮೂತ್ರ ಮಾಡಿ, ಅದನ್ನು ಎಸೆಯಲು ಬೇರೆಯವರಿಗೆ ಆದೇಶಿಸುತ್ತಾರೆ ಎಂದು ಹೇಳಲಾಗಿದೆ.

‘ಸಿನಿಮಾದ ಶೂಟಿಂಗ್​ ಸೆಟ್​ನಲ್ಲಿ ಕ್ಯಾರವ್ಯಾನ್​ನಿಂದ ದೂರ ಇರುವಾಗ ಡ್ವೇನ್​ ಜಾನ್ಸನ್​ ಅವರು ಸಾರ್ವಜನಿಕ ಶೌಚಾಲಯ ಉಪಯೋಗಿಸಲು ಒಪ್ಪುವುದಿಲ್ಲ. ಅವರು ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಬಳಿಕ ತಮ್ಮ ಆಪ್ತ ಸಹಾಯಕರನ್ನು ಕರೆದು, ಅವರ ಕೈಗೆ ಮೂತ್ರದ ಬಾಟಲಿಯನ್ನು ಕೊಟ್ಟು ಎಸೆಯಲು ಹೇಳುತ್ತಾರೆ’ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ. ಈ ಮೊದಲು ಜಿಮ್​ನಲ್ಲಿ ವರ್ಕೌಟ್​ ಮಾಡುವಾಗ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸ ತಮಗೆ ಇದೆ ಎಂದು ಸ್ವತಃ ಡ್ವೇನ್​ ಜಾನ್ಸನ್​ ಒಪ್ಪಿಕೊಂಡಿದ್ದರು.

ಇದನ್ನೂ ಓದಿ: ಅತ್ಯಾಚಾರ ಆರೋಪಿ ಹಾರ್ವಿ ವೈನ್​ಸ್ಟೀನ್​ಗೆ ವಿಧಿಸಿದ್ದ ಶಿಕ್ಷೆ ರದ್ದು; ಮಿಟೂ ಅಭಿಯಾನಕ್ಕೆ ಹಿನ್ನಡೆ

ಡ್ವೇನ್​ ಜಾನ್ಸನ್​ ಅವರು ‘ರೆಡ್​ ನೋಟಿಸ್​’ ಸಿನಿಮಾದ ಶೂಟಿಂಗ್​ಗೆ ಯಾವಾಗಲೂ ತಡವಾಗಿ ಬರುತ್ತಿದ್ದರು. ಇದರಿಂದಾಗಿ ಸಹ ಕಲಾವಿದ ರಿಯಾನ್​ ಗಾಸ್ಲಿಂಗ್​ ಅವರಿಗೆ ತುಂಬ ಕಿರಿಕಿರಿ ಆಗಿತ್ತು. ಇದರಿಂದಾಗಿ ಅವರಿಬ್ಬರು ಜಗಳ ಮಾಡಿಕೊಂಡು ಮಾತು ಬಿಟ್ಟಿದ್ದರು. ಅಲ್ಲದೇ, ‘ಫಾಸ್ಟ್​ ಆ್ಯಂಡ್​ ಫ್ಯೂರಿಯಸ್​’ ಸಿನಿಮಾದ ಚಿತ್ರೀಕರಣದ ವೇಳೆ ನಟ ವಿನ್​ ಡೀಸೆಲ್​ ಜೊತೆ ಕೂಡ ಡ್ವೇನ್​ ಜಾನ್ಸನ್​ ಗಲಾಟೆ ಮಾಡಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್