AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್ ಚಿತ್ರದಲ್ಲಿ ಅತಿಯಾದ ಹಿಂಸೆ’; ಸೆನ್ಸಾರ್ ಮಂಡಳಿ ವಿರುದ್ಧ ಅಣ್ಣಾಮಲೈ ಕಿಡಿ

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ವಿರುದ್ಧ ಕೆ. ಅಣ್ಣಾಮಲೈ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿನಿಮಾಗಳಲ್ಲಿ ಅತಿಯಾದ ಹಿಂಸಾಚಾರ ಮತ್ತು ಮಹಿಳಾ ವಿರೋಧಿ ಧೋರಣೆಯನ್ನು ವೈಭವೀಕರಿಸುವುದನ್ನು ತಡೆಯಲು ಸಿಬಿಎಫ್‌ಸಿ ವಿಫಲವಾಗಿದೆ ಎಂದು ಆರೋಪಿಸಿದ್ದು, ದೊಡ್ಡ ಸ್ಟಾರ್ ಸಿನಿಮಾಗಳಿಗೂ ಕಟ್ಟುನಿಟ್ಟಿನ ಸೆನ್ಸಾರ್ ನಿಯಮ ಅನ್ವಯಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

‘ಟಾಕ್ಸಿಕ್ ಚಿತ್ರದಲ್ಲಿ ಅತಿಯಾದ ಹಿಂಸೆ’; ಸೆನ್ಸಾರ್ ಮಂಡಳಿ ವಿರುದ್ಧ ಅಣ್ಣಾಮಲೈ ಕಿಡಿ
ಯಶ್-ಅಣ್ಣಾಮಲೈ
ರಾಜೇಶ್ ದುಗ್ಗುಮನೆ
|

Updated on: Aug 28, 2026 | 12:27 PM

Share

ಮುಖ್ಯಾಂಶಗಳು

  • 'ಟಾಕ್ಸಿಕ್' ಸಿನಿಮಾದಲ್ಲಿ ಅತಿಯಾದ ಹಿಂಸೆ
  • ಸೆನ್ಸಾರ್ ಮಂಡಳಿ ವಿರುದ್ಧ ಅಣ್ಣಾಮಲೈ ಆಕ್ರೋಶ
  • ಸಿನಿಮಾಗಳಲ್ಲಿ ಮಹಿಳೆಯರನ್ನು ಕೀಳಾಗಿ ಬಿಂಬಿಸುವುದಕ್ಕೆ ಅಣ್ಣಾಮಲೈ ತೀವ್ರ ವಿರೋಧ

ಚಿತ್ರರಂಗದಲ್ಲಿ ಅತಿಯಾದ ಹಿಂಸಾಚಾರ ಮತ್ತು ಮಹಿಳಾ ವಿರೋಧಿ ವಿಷಯಗಳನ್ನು ವೈಭವೀಕರಿಸುವುದನ್ನು ತಡೆಯುವಲ್ಲಿ ಸೆನ್ಸಾರ್ ಮಂಡಳಿ ವಿಫಲವಾಗಿದೆ ಎಂದು ರಾಜಕಾರಣಿ ಅಣ್ಣಾಮಲೈ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಟ ಯಶ್ ಅವರ ‘ಟಾಕ್ಸಿಕ್’ ಸಿನಿಮಾ (Toxic Movie) ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕಟ್ಟುನಿಟ್ಟಾದ ಸೆನ್ಸಾರ್‌ಶಿಪ್ ಕೊರತೆ ಎದ್ದು ಕಾಣುತ್ತಿದೆ ಎಂದು ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸಿನಿಮಾಗಳಲ್ಲಿ ತೀವ್ರ ಪ್ರಮಾಣದ ಹಿಂಸೆ ಮತ್ತು ಮಹಿಳೆಯರನ್ನು ಕೀಳಾಗಿ ಬಿಂಬಿಸುವ ದೃಶ್ಯಗಳನ್ನು ಮುಕ್ತವಾಗಿ ಪ್ರದರ್ಶಿಸಲಾಗುತ್ತಿದೆ. ಪ್ರೇಕ್ಷಕರು ಇಂತಹ ಕಠಿಣ ದೃಶ್ಯಗಳನ್ನು ಅನಿವಾರ್ಯವಾಗಿ ನೋಡುವಂತಾಗಿದೆ. ನಾನು ಯಾವುದೇ ಸಿನಿಮಾವನ್ನು ಬ್ಯಾನ್ ಮಾಡಲು ಆಗ್ರಹಿಸುತ್ತಿಲ್ಲ. ಆದರೆ ಎಷ್ಟೇ ದೊಡ್ಡ ಸ್ಟಾರ್ ನಟನ ಚಿತ್ರವಾಗಿದ್ದರೂ ಸೆನ್ಸಾರ್ ಮಂಡಳಿ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಎ ಪ್ರಮಾಣಪತ್ರ ಹೊಂದಿರುವ ಸಿನಿಮಾಗಳಿಗೆ ಅಪ್ರಾಪ್ತರನ್ನು ಚಿತ್ರಮಂದಿರಗಳ ಒಳಗೆ ಬಿಡಬಾರದು. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮಾಲೀಕರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಪರದೆಯ ಮೇಲಿನ ಅತಿಯಾದ ಹಿಂಸೆ ಮತ್ತು ಪುರುಷ ಮೇಲುಗೈ ಸಂಸ್ಕೃತಿಯು ಯುವ ಪೀಳಿಗೆಯನ್ನು ತಪ್ಪುದಾರಿಗೆ ಎಳೆಯುವ ಅಪಾಯವಿದೆ’ ಎಂದು ಅವರು ಎಚ್ಚರಿಸಿದ್ದಾರೆ.

ಚಿತ್ರಗಳಲ್ಲಿ ಮಹಿಳೆಯರನ್ನು ಕೇವಲ ಭೋಗದ ವಸ್ತುವಾಗಿ ಬಿಂಬಿಸುವುದನ್ನು ಅಣ್ಣಾಮಲೈ ಬಹಿರಂಗವಾಗಿ ವಿರೋಧಿಸಿದ್ದಾರೆ. ಇಂತಹ ಮಹಿಳಾ ವಿರೋಧಿ ವಿಷಯಗಳ ನಾರ್ಮಲೈಸೇಶನ್ ಸಿನಿಮಾದ ವೀಕ್ಷಣೆಯ ಅನುಭವವನ್ನೇ ಹಾಳುಮಾಡುತ್ತದೆ. ಒಬ್ಬ ಪುರುಷ ಹಲವಾರು ಮಹಿಳೆಯರನ್ನು ಹೊಂದುವಂತೆ ತೋರಿಸುವುದು ಸಮಾಜದ ನೈಜ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ’ ಎಂದು ಅವರು ವಾದಿಸಿದ್ದಾರೆ.

‘ಸಿನಿಮಾಗಳಿಗೆ ಟಾಕ್ಸಿಕ್ ಎನ್ನುವಂತಹ ಶೀರ್ಷಿಕೆಗಳನ್ನು ಇಟ್ಟು, ಚಿತ್ರಗಳಲ್ಲಿ ಮಹಿಳೆಯರನ್ನು ಯಾವ ರೀತಿ ಬಿಂಬಿಸಲಾಗುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಇಂತಹ ಸಿನಿಮಾಗಳು ಮೊದಲ ದಿನವೇ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿವೆ. ಪ್ರತಿದಿನವೂ ನಮ್ಮ ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ಅವುಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟರೆ, ಈ ದೇಶದಲ್ಲಿ ಮಹಿಳೆಯರ ಸುರಕ್ಷತೆ ಎಲ್ಲಿಗೆ ತಲುಪುತ್ತದೆ’ ಎಂದು ಅವರು ಪ್ರಶ್ನಿಸಿದ್ದಾರೆ.

‘ನಾವು ಪ್ರತಿಯೊಂದು ಊರಿಗೆ ಮತ್ತು ಕಾಲೇಜುಗಳಿಗೆ ತೆರಳಿ ಮಹಿಳೆಯರ ರಕ್ಷಣೆ ಹಾಗೂ ಸುರಕ್ಷತೆಯ ಬಗ್ಗೆ ಗಂಟಲು ಒಣಗುವಂತೆ ಜಾಗೃತಿ ಮೂಡಿಸುತ್ತಿದ್ದರೆ, ಸಿನಿಮಾಗಳಲ್ಲಿ ಪ್ರದರ್ಶಿಸುವ ಇಂತಹ ವಿಷಯಗಳು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿವೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಅಕ್ಕ ಆಗಲು ಒಪ್ಪಿದ್ದೇಕೆ? ನಯನತಾರಾ ಸ್ಪಷ್ಟನೆ

ಭಾರತೀಯ ಚಿತ್ರರಂಗದ ಈ ಪೋಕಸ್ ಬದಲಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಿನಿಮಾಗಳು ಸಮಾಜದ ಮೇಲೆ ಬೀರುವ ಪ್ರಭಾವ ಅಪಾರವಾಗಿದೆ. ಹೀಗಾಗಿ ಸೆನ್ಸಾರ್ ಮಂಡಳಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಮುಂಬರುವ ಪೀಳಿಗೆಗೆ ಉತ್ತಮ ಮನರಂಜನೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಅಣ್ಣಾಮಲೈ ಆಗ್ರಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮೈಸೂರು ದಸರಾ 2026: ಅರಮನೆಗೆ ಬಂದ ಗಜಪಡೆಗೆ ಭವ್ಯ ಸ್ವಾಗತ
ಮೈಸೂರು ದಸರಾ 2026: ಅರಮನೆಗೆ ಬಂದ ಗಜಪಡೆಗೆ ಭವ್ಯ ಸ್ವಾಗತ
ಸೂರತ್‌ನಲ್ಲಿ ಗೋಮಯ ರಾಖಿಗಳ ಮೂಲಕ ಪರಿಸರ ಸ್ನೇಹಿ ರಕ್ಷಾಬಂಧನ ಆಚರಣೆ
ಸೂರತ್‌ನಲ್ಲಿ ಗೋಮಯ ರಾಖಿಗಳ ಮೂಲಕ ಪರಿಸರ ಸ್ನೇಹಿ ರಕ್ಷಾಬಂಧನ ಆಚರಣೆ
ಲೋಕಾ ದಾಳಿಗೆ ಹೆದರಿ ರಾಜೀನಾಮೆ ಕೊಟ್ಟಿದ್ದ ವಿಶೇಷ ಭೂ ಸ್ವಾಧೀನ ಅಧಿಕಾರಿ!
ಲೋಕಾ ದಾಳಿಗೆ ಹೆದರಿ ರಾಜೀನಾಮೆ ಕೊಟ್ಟಿದ್ದ ವಿಶೇಷ ಭೂ ಸ್ವಾಧೀನ ಅಧಿಕಾರಿ!
NEET-PG Exam: ನೀಟ್-ಪಿಜಿ 2026 ಪರೀಕ್ಷೆಗೆ ಸಂಪೂರ್ಣ ಸಿದ್ಧತೆ
NEET-PG Exam: ನೀಟ್-ಪಿಜಿ 2026 ಪರೀಕ್ಷೆಗೆ ಸಂಪೂರ್ಣ ಸಿದ್ಧತೆ
ಇಂದು ಅರಮನೆ ಪ್ರವೇಶಿಸಲಿರುವ ಗಜಪಡೆ, ಅರಣ್ಯ ಭವನದಲ್ಲಿ ವಿಶೇಷ ಪೂಜೆ
ಇಂದು ಅರಮನೆ ಪ್ರವೇಶಿಸಲಿರುವ ಗಜಪಡೆ, ಅರಣ್ಯ ಭವನದಲ್ಲಿ ವಿಶೇಷ ಪೂಜೆ
ಜಾತ್ರೆ ಸಮಯದಲ್ಲಿ ಮನೆಯಲ್ಲಿ ಒಲೆ ಹಚ್ಚುವಂತಿಲ್ಲ!
ಜಾತ್ರೆ ಸಮಯದಲ್ಲಿ ಮನೆಯಲ್ಲಿ ಒಲೆ ಹಚ್ಚುವಂತಿಲ್ಲ!
ಬೆಂಗಳೂರಿನಲ್ಲಿ ದಕ್ಷಿಣ ಕೊರಿಯಾ ಕಂಪನಿ ಕಾರ್ಯಾರಂಭ: 350 ಜನರಿಗೆ ಉದ್ಯೋಗ
ಬೆಂಗಳೂರಿನಲ್ಲಿ ದಕ್ಷಿಣ ಕೊರಿಯಾ ಕಂಪನಿ ಕಾರ್ಯಾರಂಭ: 350 ಜನರಿಗೆ ಉದ್ಯೋಗ
ಇಂದು ಯಜುರುಪಾಕರ್ಮ, ರಕ್ಷಾ ಬಂಧನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯಜುರುಪಾಕರ್ಮ, ರಕ್ಷಾ ಬಂಧನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ಚಿಕ್ಕಣ್ಣ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಖುಷಿಯಲ್ಲಿ ಪಾವನಾ
ಚಿಕ್ಕಣ್ಣ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಖುಷಿಯಲ್ಲಿ ಪಾವನಾ