ಆರ್ಸಿಬಿಯ ಅಣಕಿಸಿದ ತಮಿಳು ನಟಿ, ಅಭಿಮಾನಿಗಳಿಂದ ಖಡಕ್ ಪ್ರತಿಕ್ರಿಯೆ
ಕನ್ನಡದ ಸಿನಿಮಾಗಳಲ್ಲಿಯೂ ನಟಿಸಿರುವ ತಮಿಳು ನಟಿ ಕಸ್ತೂರಿ ಶಂಕರ್, ಆರ್ಸಿಬಿಯನ್ನು ಟ್ರೋಲ್ ಮಾಡಿದ್ದು, ಆರ್ಸಿಬಿ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

ಐಪಿಎಲ್ 2024ರಿಂದ ಆರ್ಸಿಬಿ (RCB) ತಂಡ ಹೊರಬಿದ್ದಿದೆ. ಆದರೆ ಈ ಬಾರಿ ಟೂರ್ನಿಯಲ್ಲಿ ಕೆಲವು ಪಂದ್ಯಗಳಲ್ಲಿ ಅದ್ಭುತವಾಗಿ ಆಡಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ. ಅದರಲ್ಲೂ ಕ್ವಾಲಿಫೈಯರ್ ಹಂತಕ್ಕೆ ಆಯ್ಕೆ ಆಗಲು ಚೆನ್ನೈ ತಂಡವನ್ನು ಸೋಲಿಸಿದ್ದಂತೂ ಆರ್ಸಿಬಿ ಅಭಿಮಾನಿಗಳು ಮರೆಯುವಂತೆಯೇ ಇಲ್ಲ. ಆದರೆ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನದ ಎದುರು ಸೋತು ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಆರ್ಸಿಬಿ ಮೇಲೆ ಸೋತು ನಿರಾಶರಾಗಿದ್ದ ಚೆನ್ನೈ ಅಭಿಮಾನಿಗಳು, ಆರ್ಸಿಬಿ, ಆರ್ಆರ್ ವಿರುದ್ಧ ಸೋಲುತ್ತಿದ್ದಂತೆ ಆರ್ಸಿಬಿಯನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ತಮಿಳಿನ ಜನಪ್ರಿಯ ನಟಿಯೊಬ್ಬರು ಆರ್ಸಿಬಿಯನ್ನು ಟ್ರೋಲ್ ಮಾಡಿದ್ದು, ಆರ್ಸಿಬಿ ಅಭಿಮಾನಿಗಳಿಂದ ಖಡಕ್ ಪ್ರತಿಕ್ರಿಯೆಗಳನ್ನು ಪಡೆದಿದ್ದಾರೆ.
ಕನ್ನಡದ ‘ಜಾಣ’, ‘ತುತ್ತಾ ಮುತ್ತ’, ‘ಹಬ್ಬ’ ಸೇರಿದಂತೆ ತಮಿಳು, ತೆಲುಗಿನ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಕಸ್ತೂರಿ ಶಂಕರ್, ನಿನ್ನೆ ಆರ್ಸಿಬಿ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಬೆಂಗಳೂರು ದಂಡು (ಬೆಂಗಳೂರು ಕಂಟೋನ್ಮೆಂಟ್) ರೈಲ್ವೆ ನಿಲ್ದಾಣದಲ್ಲಿನ ಬೋರ್ಡ್ ನ ಚಿತ್ರವನ್ನು ನಟಿ ಶೇರ್ ಮಾಡಿದ್ದಾರೆ. ಆ ಚಿತ್ರದಲ್ಲಿ ಬೆಂಗಳೂರು ಕಂಟೋನ್ಮೆಂಟ್ ಎಂಬುದು ಇಂಗ್ಲೀಷ್ನಲ್ಲಿ Bengaluru Cunt (ಬೆಂಗಳೂರು ಕಂಟ್) ಎಂದಿದೆ. ಆ ಚಿತ್ರದಲ್ಲಿ U ಬದಲಿಗೆ A ಎಂದು ಬದಲಿಸಿ ಹಂಚಿಕೊಳ್ಳುವ ಮೂಲಕ ಬೆಂಗಳೂರಿನ ಕೈಯಲ್ಲಿ ಸಾಧ್ಯವಿಲ್ಲ (Bengaluru Can’t) ಎಂಬ ಅರ್ಥ ಬರುವಂತೆ ವ್ಯಂಗ್ಯ ಮಾಡಿದ್ದಾರೆ.
The locals have known for years …. 🤭😃#eesala #illa pic.twitter.com/gektBLqkFZ
— Kasturi (@KasthuriShankar) May 23, 2024
ಅಸಲಿಗೆ ಇದೇ ಪೋಸ್ಟ್ ಅನ್ನು ಚೆನ್ನೈ ಆಟಗಾರ ತುಷಾರ್ ದೇಶಪಾಂಡೆ ಹಂಚಿಕೊಂಡಿದ್ದರು. ಚೆನ್ನೈ ಸೋಲಿನಿಂದ ತೀವ್ರ ನಿರಾಶರಾಗಿದ್ದ ತುಷಾರ್ ದೇಶಪಾಂಡೆ, ಬೆಂಗಳೂರು ಸೋಲುವವರೆಗೂ ಕಾದು, ಬಳಿಕ ಆರ್ಸಿಬಿಯ ವಿರುದ್ಧ ಈ ಚಿತ್ರ ಹಂಚಿಕೊಂಡಿದ್ದ. ಅದೇ ಚಿತ್ರವನ್ನು, ಅದೇ ಪೋಸ್ಟ್ ಅನ್ನು ನಟಿ ಕಸ್ತೂರಿ ಶಂಕರ್ ನಕಲು ಮಾಡಿ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಪೋಸ್ಟ್ಗೆ ಆರ್ಸಿಬಿ ಅಭಿಮಾನಿಗಳು ಖಡಕ್ ಆದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಈ ಐಪಿಎಲ್ನಲ್ಲಿ ಚೆನ್ನೈ ತಂಡವನ್ನು ಆರ್ಸಿಬಿ ಸೋಲಿಸಿದ ರೀತಿಯನ್ನು ನಟಿಗೆ ಕೆಲವರು ನೆನಪಿಸಿದ್ದಾರೆ. ಇನ್ನು ಕೆಲವರು ಚೆನ್ನೈ ತಂಡ ಮೋಸದಾಟ ಆಡಿ ಎರಡು ವರ್ಷ ಬ್ಯಾನ್ ಆಗಿದ್ದನ್ನು ನೆನಪು ಮಾಡಿದ್ದಾರೆ. ಕೆಲವರು ನಟಿಯ ಬಗ್ಗೆ ಕೆಲ ಅಶ್ಲೀಲ ಕಮೆಂಟ್ಗಳನ್ನು ಸಹ ಮಾಡಿದ್ದಾರೆ.
ಇದನ್ನೂ ಓದಿ:RCB vs CSK: ಚೆನ್ನೈ ವಿರುದ್ಧ ಗೆದ್ದ ಬಳಿಕ ಆರ್ಸಿಬಿಯಿಂದ ಬೆಳಗಿನ ಜಾವ 5 ಗಂಟೆವರೆಗೆ ಪಾರ್ಟಿ: ಶಾಕಿಂಗ್
ಕಸ್ತೂರಿ ಶಂಕರ್ 90 ರ ದಶಕದ ಜನಪ್ರಿಯ ನಾಯಕ ನಟಿಯಾಗಿದ್ದವರು. ತಮಿಳಿನ ಹಲವು ಸೂಪರ್ ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ತೆಲುಗಿನಲ್ಲಿಯೂ ಸಹ ಹಲವು ಸ್ಟಾರ್ ನಟರಿಗೆ ನಾಯಕಿಯಾಗಿದ್ದಾರೆ. ಕನ್ನಡದಲ್ಲಿ ರವಿಚಂದ್ರನ್ ನಟಿಸಿರುವ ‘ಜಾಣ’, ರಮೇಶ್ ಅರವಿಂದ್ರ ‘ತುತ್ತಾ-ಮುತ್ತ’, ವಿಷ್ಣುವರ್ಧನ್ ನಟಿಸಿರುವ ‘ಹಬ್ಬ’, ‘ಒನ್ ಮ್ಯಾನ್ ಆರ್ಮಿ’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




