ಹೊಸ ಲುಕ್​ನಲ್ಲಿ ಕಾಣಿಸಿಕೊಂಡ ಮಹೇಶ್​ ಬಾಬು; ರಾಜಮೌಳಿಗೆ ಹೆಚ್ಚಾಯ್ತು ತಲೆಬಿಸಿ

ಮಹೇಶ್​ ಬಾಬು ಅವರು ಫ್ಯಾಮಿಲಿ ಸಮೇತ ಜೈಪುರ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಅವರ ಹೊಸ ಗೆಟಪ್​ ರಿವೀಲ್​ ಆಗಿದೆ. ಹೊಸ ಸಿನಿಮಾದ ಲುಕ್​ ಗೌಪ್ಯವಾಗಿ ಇರಬೇಕು ಎಂಬ ರಾಜಮೌಳಿ ಅವರ ಆಶಯಕ್ಕೆ ತಣ್ಣೀರು ಎರಚಿದಂತೆ ಆಗಿದೆ. ಹೊಸ ಗೆಟಪ್​ನಲ್ಲಿ ಮಹೇಶ್ ಬಾಬು ಅವರನ್ನು ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ.

ಹೊಸ ಲುಕ್​ನಲ್ಲಿ ಕಾಣಿಸಿಕೊಂಡ ಮಹೇಶ್​ ಬಾಬು; ರಾಜಮೌಳಿಗೆ ಹೆಚ್ಚಾಯ್ತು ತಲೆಬಿಸಿ
ರಾಜಮೌಳಿ, ಮಹೇಶ್​ ಬಾಬು
Follow us
ಮದನ್​ ಕುಮಾರ್​
|

Updated on: Aug 11, 2024 | 10:30 PM

ನಟ ಮಹೇಶ್​ ಬಾಬು ಹೊಸ ಸಿನಿಮಾಗಾಗಿ ಡಿಫರೆಂಟ್​ ಗೆಟಪ್​ ಪ್ರಯತ್ನಿಸುತ್ತಿದ್ದಾರೆ. ಅವರ ಬಹುತೇಕ ಸಿನಿಮಾಗಳಲ್ಲಿ ಶಾರ್ಟ್​ ಹೇರ್​ ಇರುತ್ತದೆ. ಆದರೆ ಈಗ ಮಹೇಶ್​ ಬಾಬು ಅವರು ನಿರ್ದೇಶಕ ರಾಜಮೌಳಿ ಜೊತೆ ಹೊಸ ಸಿನಿಮಾ ಮಾಡುತ್ತಿರುವುದರಿಂದ ಆ ಚಿತ್ರಕ್ಕೆ ಉದ್ದ ಕೂದಲಿನ ಗೆಟಪ್​ ಪ್ರಯತ್ನಿಸುತ್ತಿದ್ದಾರೆ. ಹೇಗಾದರೂ ಮಾಡಿ ಈ ಲುಕ್​ ಅನ್ನು ಗೌಪ್ಯವಾಗಿ ಇಡಬೇಕು ಎಂಬುದು ರಾಜಮೌಳಿ ಉದ್ದೇಶ. ಆದರೆ ಅದು ಈಡೇರುತ್ತಲೇ ಇಲ್ಲ. ಮಹೇಶ್​ ಬಾಬು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಹೊಸ ಗೆಟಪ್​ ಬಹಿರಂಗ ಆಗಿದೆ. ಇದರಿಂದ ರಾಜಮೌಳಿಗೆ ತಲೆಬಿಸಿ ಹೆಚ್ಚಾಗುತ್ತಿದೆ.

ಇತ್ತೀಚೆಗೆ ಮಹೇಶ್​ ಬಾಬು ಅವರು ಕುಟುಂಬದ ಜೊತೆ ಜೈಪುರ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ವೇಳೆ ಅವರು ಉದ್ದ ಕೂದಲಿನ ಗೆಪಟ್​ನಲ್ಲಿ ಇರುವ ಫೋಟೋ ಮತ್ತು ವಿಡಿಯೋ ವೈರಲ್​ ಆಗಿದೆ. ಮಹೇಶ್​ ಬಾಬು ಅವರ ಗಡ್ಡದ ಲುಕ್​ ಕೂಡ ಗಮನ ಸೆಳೆದಿದೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋ ಮತ್ತು ವಿಡಿಯೋ ವೈರಲ್​ ಆಗುತ್ತಿವೆ. ಜನರು ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಮಹೇಶ್​ ಬಾಬು ಅವರು ಇತ್ತೀಚೆಗೆ ಬರ್ತ್​ಡೇ ಆಚರಿಸಿಕೊಂಡರು. ಅಂದು ರಾಜಮೌಳಿ ಜೊತೆಗಿನ ಸಿನಿಮಾದ ಟೈಟಲ್​ ಬಿಡುಗಡೆ ಆಗಬಹುದು ಎಂದು ಅನೇಕರು ನಿರೀಕ್ಷಿಸಿದ್ದರು. ಆದರೆ ನಿರೀಕ್ಷೆ ಈಡೇರಲಿಲ್ಲ. ಈ ಸಿನಿಮಾಗೆ ‘ಗೋಲ್ಡ್​’ ಎಂದು ಹೆಸರು ಇಟ್ಟಿದ್ದಾರೆ ಎಂಬ ಗಾಸಿಪ್​ ಇದೆ. ಆದರೆ ಆ ಬಗ್ಗೆ ಚಿತ್ರತಂಡದವರು ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಸದ್ಯಕ್ಕೆ ಈ ಚಿತ್ರವನ್ನು ‘ಎಸ್​ಎಸ್​ಎಂಬಿ 29’ ಎಂದು ತಾತ್ಕಾಲಿಕವಾಗಿ ಕರೆಯಲಾಗುತ್ತಿದೆ.

ಇದನ್ನೂ ಓದಿ: ರಾಜಮೌಳಿ ಜೀವನದ ಅಪರೂಪದ ಮಾಹಿತಿ ತಿಳಿಸಿದ ಹೊಸ ಸಾಕ್ಷ್ಯಚಿತ್ರ

ರಾಜಮೌಳಿ ಅವರು ಪ್ರತಿ ಸಿನಿಮಾವನ್ನು ಬಹಳ ಕಾಳಜಿಯಿಂದ ಮಾಡುತ್ತಾರೆ. ಹಾಗಾಗಿ ಅವರು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ಅವರ ಸಿನಿಮಾಗಳಲ್ಲಿ ಹೀರೋಗಳ ಗೆಟಪ್​ ಬದಲಾಗುತ್ತದೆ. ಮಹೇಶ್​ ಬಾಬು ಕೂಡ ಈಗ ಗೆಟಪ್​ ಬದಲಾಯಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ. ವಿದೇಶಕ್ಕೆ ತೆರಳಿ ಪಾತ್ರಕ್ಕಾಗಿ ಅವರು ಒಂದಷ್ಟು ತಯಾರಿಯನ್ನೂ ಮಾಡಿಕೊಂಡು ಬಂದಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಈ ಸಿನಿಮಾ ಮೇಲೆ ಹೈಪ್​ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.