AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ವಿಮರ್ಶೆ: ರಾಜಕೀಯ ಅವ್ಯವಸ್ಥೆಗೆ ಕನ್ನಡಿ ಹಿಡಿಯುವ ‘ಕಾಮನ್ ಮ್ಯಾನ್’

ಸಿನಿಮಾ ವಿಮರ್ಶೆ: ರಾಜಕೀಯ ಅವ್ಯವಸ್ಥೆಗೆ ಕನ್ನಡಿ ಹಿಡಿಯುವ ‘ಕಾಮನ್ ಮ್ಯಾನ್’
Common Man Review

ಕಾಮನ್ ಮ್ಯಾನ್

UA
  • Time - 145 Minutes
  • Released - September 25, 2026
  • Language - Kannada
  • Genre - Action, Comedy, Political
Cast - ಗೌರಿಶಂಕರ್, ನರಸಿಂಹ ಮೂರ್ತಿ, ಬಾಲ ರಾಜ್​ವಾಡಿ, ಪ್ರಕಾಶ್ ತುಮಿನಾಡು, ಪಿ.ಡಿ. ಸತೀಶ್​ ಚಂದ್ರ, ಸಬ್ಬಿ ಸುರಿ, ಸೋನಾ ಲಾದ್ವಾ, ಅಶೋಕ್ ಮುಂತಾದವರು.
Director - ಓಂ ಸಾಯಿ ಪ್ರಕಾಶ್
3
Critic's Rating
ಮದನ್​ ಕುಮಾರ್​
|

Updated on: Sep 25, 2026 | 5:13 PM

Share

ಈ ಹಿಂದೆ ‘ಕೆರೆಬೇಟೆ’ ಸಿನಿಮಾ ಮಾಡಿ ಒಂದು ಡಿಫರೆಂಟ್ ಕಥೆಯನ್ನು ಪ್ರೇಕ್ಷಕರಿಗೆ ತೋರಿಸಿದ್ದ ನಟ ಗೌರಿಶಂಕರ್ ಅವರು ಈಗ ‘ಕಾಮನ್ ಮ್ಯಾನ್’ ಆಗಿದ್ದಾರೆ. ಈ ಸಿನಿಮಾದಲ್ಲಿ ಅವರು ಎರಡು ಬೇರೆ ಬೇರೆ ರೀತಿಯ ಶೇಡ್ ಇರುವ ಪಾತ್ರವನ್ನು ಅವರು ಮಾಡಿದ್ದಾರೆ. ಒಂದು ಶೇಡ್​ನಲ್ಲಿ ಅವರು ಕ್ರಿಮಿನಲ್ ಲಾಯರ್, ಇನ್ನೊಂದರಲ್ಲಿ ಮುಖ್ಯಮಂತ್ರಿಯಾಗಿ ನಟಿಸಿದ್ದಾರೆ. ಈ ಸಿನಿಮಾಗೆ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ.

‘ಸುರಭಿ ಫಿಲ್ಮ್ಸ್’ ಮೂಲಕ ಡಾ. ನರಸಿಂಹ ಮೂರ್ತಿ ಅವರು ಬಂಡವಾಳ ಹೂಡಿದ್ದಾರೆ. ಅಲ್ಲದೇ, ಈ ಸಿನಿಮಾಗೆ ಅವರೇ ಕಥೆ ಬರೆದಿದ್ದಾರೆ. ಮುಖ್ಯಮಂತ್ರಿಯ ಪಾತ್ರದಲ್ಲಿ ಕೂಡ ಅವರು ನಟಿಸಿದ್ದಾರೆ. ಗೌರಿಶಂಕರ್, ನರಸಿಂಹ ಮೂರ್ತಿ ಜೊತೆ ಬಾಲ ರಾಜ್​ವಾಡಿ, ಪ್ರಕಾಶ್ ತುಮಿನಾಡು, ಪಿ.ಡಿ. ಸತೀಶ್​ ಚಂದ್ರ, ಸಬ್ಬಿ ಸುರಿ, ಸೋನಾ ಲಾದ್ವಾ, ಅಶೋಕ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಸಿಎಂ ಎಂದರೆ ಕಾಮನ್ ಮ್ಯಾನ್. ಹಾಗೆಯೇ, ಸಿಎಂ ಎಂದರೆ ಚೀಫ್ ಮಿನಿಸ್ಟರ್ ಕೂಡ ಹೌದು. ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಗೂ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ಇರುತ್ತದೆ. ಅದೇ ಕಾನ್ಸೆಪ್ಟ್ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಸಣ್ಣ-ಪುಟ್ಟ ವಿಚಾರಕ್ಕೂ ಕಾನೂನು ಪ್ರಕಾರ ಕಿರಿಕ್ ಮಾಡುವ ಕುಮಾರ್ ಕಂಸಾಳೆ ಎಂಬ ಕ್ರಿಮಿನಲ್ ಲಾಯರ್ ಪಾತ್ರದ ಮೂಲಕ ಹೀರೋ ಎಂಟ್ರಿ ಆಗುತ್ತದೆ. ವಾದ ಮಾಡುವುದರಲ್ಲಿ ಆತ ಎಷ್ಟು ಚಾಣಾಕ್ಷ ಎಂಬುದನ್ನು ಫಸ್ಟ್ ಹಾಫ್​ನ ಆರಂಭದಲ್ಲಿ ತೋರಿಸಲಾಗಿದೆ.

ಕಬಾಬ್ ಅಂಗಡಿ, ಮೆಡಿಕಲ್ ಶಾಪ್, ಡಾಕ್ಟರ್ ಮುಂತಾದವರ ವಿರುದ್ಧ ಕೇಸ್ ಹಾಕಿಕೊಂಡು ಜಯ ಸಾಧಿಸುತ್ತಿದ್ದ ಕುಮಾರ್ ಕಂಸಾಳೆಯ ಕಣ್ಣು ಒಂದು ದಿನ ವಿಧಾನಸೌಧದ ಮೇಲೆ ಬೀಳುತ್ತದೆ. ವಿಧಾನಸೌಧದಲ್ಲಿ ತನಗೂ ಪಾಲು ಇದೆ ಎಂದು ಆತ ಕೇಸ್ ಹಾಕುತ್ತಾನೆ. ಅದರಿಂದ ಸರ್ಕಾರಕ್ಕೆ ಆತಂಕ ಶುರು ಆಗುತ್ತದೆ. ಆ ರೀತಿ ಶುರುವಾದ ಕೇಸ್ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಈ ಸಿನಿಮಾದ ಕಥಾನಾಯಕ ಒಂದೇ ಒಂದು ಚುನಾವಣೆಯನ್ನೇ ಎದುರಿಸದೇ ರಾತ್ರೋ ರಾತ್ರಿ ಸಿಎಂ ಆಗುತ್ತಾನೆ! ಈ ಮೊದಲು ಅಧಿಕಾರದಲ್ಲಿದ್ದ ಮುಖ್ಯಮಂತ್ರಿಯ ಕುರ್ಚಿಯನ್ನು ತನ್ನ ವಶಕ್ಕೆ ಪಡೆಯುತ್ತಾನೆ. ಆಡಳಿತ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳನ್ನು ಮಾಡುತ್ತಾನೆ. ಜನಪರವಾದ ಕಾರ್ಯಗಳನ್ನು ಮಾಡಿ ಸೈ ಎನಿಸಿಕೊಳ್ಳುತ್ತಾನೆ. ರಾಜಕೀಯದಲ್ಲಿ ಇರುವ ವ್ಯಕ್ತಿ ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎಂಬುದು ಈ ಸಿನಿಮಾದಲ್ಲಿ ವಿವರಿಸಲಾಗಿದೆ.

ಇದು ಪೊಲಿಟಿಕಲ್ ಡ್ರಾಮಾ ಇರುವ ಈ ಸಿನಿಮಾ. ಹಾಗಿದ್ದರೂ ಕೂಡ ಲವ್ ಟ್ರ್ಯಾಕ್ ಇದೆ. ಅದಕ್ಕೆ ತಕ್ಕಂತೆ ಇಬ್ಬರು ನಾಯಕಿಯರು ಇದ್ದಾರೆ. ನಾಯಕ-ನಾಯಕಿ ನಡುವೆ ಕಲರ್​ಫುಲ್ ಹಾಡುಗಳು ಇವೆ. ರಾಜಕೀಯದ ಕಥಾಹಂದರದ ನಡುವೆ ಪ್ರೇಕ್ಷಕರಿಗೆ ರಿಲೀಫ್ ನೀಡಲು ಕಾಮಿಡಿ ದೃಶ್ಯಗಳ ಮೂಲಕ ಪ್ರಯತ್ನಿಸಲಾಗಿದೆ. ರಾಜಕೀಯದಲ್ಲಿ ಹೀಗೂ ಆಗಬಹುದಾ ಎಂಬ ಪ್ರಶ್ನೆಯನ್ನು ನೋಡುಗರ ಮನಸ್ಸಿನಲ್ಲಿ ಮೂಡಿಸುತ್ತಲೇ ಸಾಗುತ್ತದೆ ಈ ಚಿತ್ರದ ಕಥೆ.

ಒಂದು ರೀತಿಯಲ್ಲಿ ಈಗಿನ ಕಾಲಘಟ್ಟದ ರಾಜಕೀಯ ವಿಡಂಭನೆ ರೀತಿಯಲ್ಲಿ ‘ಕಾಮನ್ ಮ್ಯಾನ್’ ಸಿನಿಮಾ ಮೂಡಿಬಂದಿದೆ. ರಾಜಕೀಯದಲ್ಲಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಮಂತ್ರಿಗಳು, ಶಾಸಕರು ಏನೆಲ್ಲ ಮಾಡುತ್ತಾರೆ ಎಂಬುದನ್ನು ಎಳೆಎಳೆಯಾಗಿ ವಿವರಿಸಲಾಗಿದೆ. ಜನರ ಕಷ್ಟಗಳನ್ನು ಕೇಳುವ ಬದಲು ಸ್ವಾಮಿಜಿಗಳ ಬಳಿ ಹೋಗಿ ಸಲಹೆ ಕೇಳುವ ರಾಜಕಾರಣಿಗಳನ್ನು ಈ ಚಿತ್ರದ ಮೂಲಕ ಟೀಕಿಸಲಾಗಿದೆ.

ಇದನ್ನೂ ಓದಿ: ಈ ವಾರ ರಿಲೀಸ್ ಆಗುತ್ತಿವೆ ಹಲವಾರು ಸಿನಿಮಾಗಳು: ಪಟ್ಟಿ ಇಲ್ಲಿದೆ ನೋಡಿ

ಕಾವಿ ಹಾಕಿಕೊಂಡು ಅನಾಚಾರಗಳನ್ನು ನಡೆಸಿ, ನಂತರ ರಾಜಕೀಯ ವ್ಯಕ್ತಿಗಳ ರಕ್ಷಣೆಯಲ್ಲಿ ಇರುವವರ ಬಣ್ಣವನ್ನು ಬಯಲು ಮಾಡುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆ. ಈ ಸಿನಿಮಾ ನೋಡುವಾಗ ಇತ್ತೀಚಿನ ವರ್ಷಗಳಲ್ಲಿ ನಡೆದ ಕೆಲವು ನೈಜ ಘಟನೆಗಳು ಕೂಡ ನೆನಪಾಗುತ್ತವೆ. ರಾಜಕೀಯದ ಜೊತೆ ಕೈ ಜೋಡಿಸಿದ ಪೊಲೀಸ್ ಇಲಾಖೆಯ ಭ್ರಷ್ಟಾಚಾರದ ಬಗ್ಗೆಯೂ ‘ಕಾಮನ್ ಮ್ಯಾನ್’ ಸಿನಿಮಾ ಮಾತನಾಡುತ್ತದೆ. ಒಟ್ಟಾರೆಯಾಗಿ ಖಾಕಿ, ಕಾವಿ, ಖಾದಿ ಧರಿಸಿದವರನ್ನು ಈ ಸಿನಿಮಾ ಪ್ರಶ್ನಿಸುತ್ತದೆ.

‘ಕಾಮನ್ ಮ್ಯಾನ್’ ಸಿನಿಮಾದಲ್ಲಿ ಹೇಳಲು ಹೊರಟಿರುವ ವಿಷಯ ಪ್ರಸ್ತುತವೇ ಆಗಿದ್ದರೂ ಚಿತ್ರದ ಮೇಕಿಂಗ್ ಹಳೆಯ ಶೈಲಿಯಲ್ಲೇ ಇದೆ. ಕಥೆಯಲ್ಲಿ ಬರುವ ಟ್ವಿಸ್ಟ್​ಗಳಲ್ಲಿ ಹೊಸತನ ಕಾಣಿಸದು. ಲಾಜಿಕ್ ಹುಡುಕುವ ಪ್ರೇಕ್ಷಕರಿಗೆ ಈ ಸಿನಿಮಾದ ಕಥೆ ರುಚಿಸದೇ ಇರಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More