ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸಿದ್ದಾರೆ ಎಂಎಸ್ ಧೋನಿ?
MS Dhoni: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ, ತಮಿಳು ಚಿತ್ರರಂಗಕ್ಕೆ ಬಲು ಹತ್ತಿರ. ತಮಿಳಿನಲ್ಲಿ ಸಿನಿಮಾ ನಿರ್ಮಾಣವನ್ನೂ ಸಹ ಧೋನಿ ಮಾಡುತ್ತಿದ್ದಾರೆ. ಇದೀಗ ಬಿಗ್ ಬಜೆಟ್ ತಮಿಳು ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ ಎನ್ನಲಾಗುತ್ತಿದೆ.
ಕ್ರಿಕೆಟರ್ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಮತ್ತೆ ಹೊಸದಾಗಿ ಹೇಳಬೇಕಿಲ್ಲ. ಅವರು ಇತ್ತೀಚೆಗೆ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿರೋದು ಗೊತ್ತೇ ಇದೆ. ಅವರು ಈಗ ಬಿಗ್ ಬಜೆಟ್ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರವನ್ನು ನಾವು ಹೇಳುತ್ತಿಲ್ಲ, ಸ್ವತಃ ನಿರ್ದೇಶಕರ ಕಡೆಯಿಂದ ಈ ಬಗ್ಗೆ ರಿವೀಲ್ ಆಗಿದೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಹಾಗಾದರೆ ಯಾವುದು ಆ ಸಿನಿಮಾ? ಈ ಚಿತ್ರದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ? ಆ ಬಗ್ಗೆ ಇಲ್ಲಿದೆ ವಿವರ.
ದಳಪತಿ ವಿಜಯ್ ಅವರು ‘ಗೋಟ್’ ಚಿತ್ರದಲ್ಲಿ ನಟಿಸಿದ್ದಾರೆ. ‘ಗ್ರೇಟೆಸ್ಟ್ ಆಫ್ ಆಲ್ ಟೈಮ್ಸ್’ ಎಂಬುದು ಅದರ ವಿಸ್ತ್ರತ ರೂಪ. ಈ ಚಿತ್ರದಲ್ಲಿ ಎಂಎಸ್ ಧೋನಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ವೆಂಕಟ್ ಪ್ರಭು ಅವರು ರಿವೀಲ್ ಮಾಡಿದ್ದಾರೆ. ದೊಡ್ಡ ಪರದೆಮೇಲೆ ಧೋನಿ ಅವರನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ.
ಎಂಎಸ್ ಧೋನಿ ಅವರಿಗೆ ತಮಿಳು ಚಿತ್ರರಂಗದ ಜೊತೆ ಒಳ್ಳೆಯ ನಂಟು ಬೆಳೆದಿರೋದು ಗೊತ್ತೇ ಇದೆ. ಅವರು ಚೆನ್ನೈ ಸೂಪರ್ ಕಿಂಗ್ಸ್ನ ಕ್ಯಾಪ್ಟನ್ ಆಗಿದ್ದರು. ಹೀಗಾಗಿ, ತಮಿಳುನಾಡಿಗೆ ಹತ್ತಿರ ಆಗಿದ್ದಾರೆ. ಈ ಕಾರಣದಿಂದಲೇ ಅವರು ನಿರ್ಮಾಣ ಮಾಡಿದ ಮೊದಲ ಸಿನಿಮಾ ತಮಿಳಿನದ್ದು ಅನ್ನೋದು ವಿಶೇಷ. ‘ಗೋಟ್’ ಚಿತ್ರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ದೃಶ್ಯವೊಂದು ಬರುತ್ತದೆ. ಈ ಕಾರಣಕ್ಕೆ ಧೋನಿ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:MS Dhoni: ಎಂಎಸ್ ಧೋನಿ ಟೀಮ್ ಇಂಡಿಯಾಗೆ ಹೆಡ್ ಕೋಚ್?
ನಿರ್ದೇಶಕರ ಸ್ಪಷ್ಟನೆ
ಈ ಮೊದಲು ಮಾತನಾಡಿದ್ದ ವೆಂಕಟ್ ಪ್ರಭು, ‘ಸಿನಿಮಾದ ಕೊನೆಯಲ್ಲಿ ಸಿಎಸ್ಕೆ ಮ್ಯಾಚ್ನ ದೃಶ್ಯ ಬರುತ್ತದೆ. ಅಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಎಂದು ಮತ್ತೆ ಹೇಳಬೇಕಿಲ್ಲ’ ಎಂದಿದ್ದರು. ಹೀಗಾಗಿ, ಧೋನಿ ನಟಿಸುತ್ತಾರೆ ಎಂದು ಊಹಿಸಿದ್ದರು. ಆ ಬಳಿಕ ಅವರು ಹೇಳಿಕೆ ಬದಲಿಸಿದ್ದರು. ‘ಸಿನಿಮಾದಲ್ಲಿ ಕ್ರಿಕೆಟ್ ದೃಶ್ಯ ಒಂದು ಬರುತ್ತದೆ. ಇದಕ್ಕಾಗಿ ಧೋನಿ ಅವರನ್ನು ಕರೆತರೋ ಪ್ಲ್ಯಾನ್ ಇತ್ತು. ಆದರೆ, ನಂತರ ಅದನ್ನು ಕ್ಯಾನ್ಸಲ್ ಮಾಡಲಾಯಿತು’ ಎಂದು ನಿರ್ದೇಶಕರು ಹೇಳಿದ್ದಾರೆ.
‘ಗೋಟ್’ ತಮಿಳಿನ ಬಿಗ್ ಬಜೆಟ್ ಸಿನಿಮಾ. ಇದರಲ್ಲಿ ದಳಪತಿ ವಿಜಯ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಂದೆ ಹಾಗೂ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೊದಲು ‘ಬಿಗಿಲ್’ ಚಿತ್ರದಲ್ಲಿ ಅವರು ತಂದೆ-ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಪ್ರಭುದೇವ, ಸ್ನೇಹಾ, ಲೈಲಾ, ಜಯರಾಮ್, ಯೋಗಿ ಬಾಬು ನಟಿಸಿದ್ದರು. ಈ ಚಿತ್ರ ನಾಳೆ ರಿಲೀಸ್ ಆಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:42 am, Wed, 4 September 24