ಸಮಂತಾ ಜೊತೆಗಿನ ಕೊನೆಯ ಫೋಟೋವನ್ನೂ ಡಿಲೀಟ್ ಮಾಡಿದ ನಾಗ ಚೈತನ್ಯ

ನಾಗ ಚೈತನ್ಯ ಅವರು ಹೊಸ ಜೀವನ ಆರಂಭಿಸುತ್ತಿದ್ದಾರೆ. ಶೋಭಿತಾ ಜೊತೆ ಅವರ ಮದುವೆ ನೆರವೇರಲಿದೆ. ಈ ಸಂದರ್ಭದಲ್ಲಿ ಮಾಜಿ ಪತ್ನಿಯ ಒಂದು ಫೋಟೋ ಅವರ ಸೋಶಿಯಲ್ ಮೀಡಿಯಾದಲ್ಲಿ ಹಾಗೆಯೇ ಉಳಿದುಕೊಂಡಿತ್ತು. ಅದನ್ನು ಡಿಲೀಟ್ ಮಾಡಿ ಎಂದು ಜನರು ಒತ್ತಾಯಿಸಿದ್ದರು. ಹಾಗಾಗಿ ನಾಗ ಚೈತನ್ಯ ಅವರು ಆ ಫೋಟೋ ಡಿಲೀಟ್​ ಮಾಡಿದ್ದಾರೆ.

ಸಮಂತಾ ಜೊತೆಗಿನ ಕೊನೆಯ ಫೋಟೋವನ್ನೂ ಡಿಲೀಟ್ ಮಾಡಿದ ನಾಗ ಚೈತನ್ಯ
ಸಮಂತಾ, ನಾಗ ಚೈತನ್ಯ
Follow us
ಮದನ್​ ಕುಮಾರ್​
|

Updated on: Oct 27, 2024 | 9:40 PM

ಪ್ರೀತಿಸಿ ಮದುವೆ ಆಗಿದ್ದ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಅವರು ವಿಚ್ಛೇದನ ಘೋಷಿಸುತ್ತಾರೆ ಎಂದು ಅವರ ಅಭಿಮಾನಿಗಳು ಊಹಿಸಿರಲಿಲ್ಲ. ಆದರೆ ಅಂಥದ್ದೊಂದು ಶಾಕಿಂಗ್ ಸುದ್ದಿ ಬಂದಾಗ ಬಹುತೇಕರಿಗೆ ನಂಬಲು ಸಾಧ್ಯವಾಗಲೇ ಇಲ್ಲ. ಈಗ ಅದೆಲ್ಲ ಹಳೇ ವಿಷಯ ಆಗಿದೆ. ಹಾಗಿದ್ದರೂ ಕೂಡ ಸಮಂತಾ ಮತ್ತು ನಾಗ ಚೈತನ್ಯ ಅವರ ಬಗೆಗಿನ ಚರ್ಚೆ ನಿಂತಿಲ್ಲ. ಶೀಘ್ರದಲ್ಲೇ ನಾಗ ಚೈತನ್ಯ ಅವರು ಎರಡನೇ ಮದುವೆ ಆಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇದ್ದ ಮಾಜಿ ಪತ್ನಿಯ ಕೊನೇ ಫೋಟೋವನ್ನು ಡಿಲೀಟ್​ ಮಾಡಿ ಸುದ್ದಿ ಆಗಿದ್ದಾರೆ.

ನಾಗ ಚೈತನ್ಯ ಮತ್ತು ಸಮಂತಾ ಅವರು ಡಿವೋರ್ಸ್​ ಪಡೆದ ನಂತರ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇದ್ದ ಎಲ್ಲ ಫೋಟೋಗಳನ್ನೂ ಡಿಲೀಟ್ ಮಾಡಿದರು. ಆದರೆ ಸಮಂತಾ ಅವರಿಗೆ ಸಂಬಂಧಿಸಿ 3 ಪೋಸ್ಟ್​ಗಳು ನಾಗ ಚೈತನ್ಯ ಅವರ ಇನ್​ಸ್ಟಾಗ್ರಾಮ್​ ವಾಲ್​ನಲ್ಲಿ ಹಾಗೆಯೇ ಇತ್ತು. ಒಂದು- ವಿಚ್ಛೇದನ ಘೋಷಿಸಿದ್ದು, ಎರಡು- ಮಜಿಲಿ ಸಿನಿಮಾದ ಪೋಸ್ಟರ್​, ಮೂರು- ಸಮಂತಾ ಹಾಗೂ ನಾಗ ಚೈತನ್ಯ ಜೊತೆಯಾಗಿ ರೇಸ್​ ಕಾರ್​ ಜೊತೆ ನಿಂತಿದ್ದ ಫೋಟೋ.

ಮೊದಲ ಎರಡು ಫೋಟೋವನ್ನು ನಂತರದ ದಿನಗಳಲ್ಲಿ ನಾಗ ಚೈತನ್ಯ ಅವರು ಡಿಲೀಟ್ ಮಾಡಿದರು. ಆದರೆ ರೇಸ್​ ಕಾರ್​ ಜೊತೆ ನಿಂತಿದ್ದ ಫೋಟೋವನ್ನು ಅವರು ಡಿಲೀಟ್ ಮಾಡಿರಲಿಲ್ಲ. ಈ ವಿಚಾರವನ್ನು ಇಟ್ಟುಕೊಂಡು ಇತ್ತೀಚೆಗೆ ಸಮಂತಾ ಅವರ ಅಭಿಮಾನಿಗಳು ನಾಗ ಚೈತನ್ಯಗೆ ಕ್ಲಾಸ್ ತೆಗೆದುಕೊಂಡಿದ್ದರು. ‘ಆ ಫೋಟೋವನ್ನು ಡಿಲೀಟ್ ಮಾಡಿ’ ಎಂದು ಒತ್ತಾಯಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಶೋಭಿತಾ ಜೊತೆ ಮದುವೆ ಆಗಲಿರುವ ನಾಗ ಚೈತನ್ಯ ಅವರು ಮಾಜಿ ಪತ್ನಿಯ ಆ ಕಟ್ಟಕಡೆಯ ಫೋಟೋವನ್ನು ಈಗ ಡಿಲೀಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಸಿಟಾಡೆಲ್: ಹನಿ ಬನಿ’ ಟ್ರೇಲರ್​ನಲ್ಲಿ ಸಮಂತಾ, ವರುಣ್ ಧವನ್ ಆ್ಯಕ್ಷನ್ ಅಬ್ಬರ

ಇತ್ತೀಚೆಗೆ ಕೊಂಡ ಸುರೇಖಾ ಅವರು ಸಮಂತಾ ಮತ್ತು ನಾಗಾರ್ಜುನ ಅವರ ಕುಟುಂಬದ ಬಗ್ಗೆ ಕೆಟ್ಟದಾಗಿ ಹೇಳಿಕೆಗಳನ್ನು ನೀಡಿದ್ದರು. ಆ ವಿಚಾರವನ್ನು ಖಂಡಿಸುವ ಸಲುವಾಗಿ ನಾಗ ಚೈತನ್ಯ ಅವರು ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ‘ನನ್ನ ಮಾಜಿ ಪತ್ನಿ’ ಎಂಬ ಪದ ಬಳಕೆ ಮಾಡಿದ್ದರು. ಈ ರೀತಿ ಹೇಳುವ ಬದಲು ನೇರವಾಗಿ ‘ಸಮಂತಾ’ ಅಂತ ಹೇಳಬಹುದಿತ್ತು ಎಂದು ಕೂಡ ನೆಟ್ಟಿಗರು ನಾಗ ಚೈತನ್ಯಗೆ ಚಾಟಿ ಬೀಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ