AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬೇಗ ಶೂಟಿಂಗ್ ಮುಗಿಸಿ’; ನಿರ್ದೇಶಕನ ಫೋನ್ ಎತ್ತದ್ದಕ್ಕೆ ಸಂದರ್ಶನದಲ್ಲಿ ಕೋರಿಕೊಂಡ ನಿವೀನ್ ಪೌಳಿ

ತಮಿಳಿನ 'ಬೆಂಜ್' ಸಿನಿಮಾ ಶೂಟಿಂಗ್ ತಡವಾಗುತ್ತಿರುವುದಕ್ಕೆ ನಟ ನಿವಿನ್ ಪೌಳಿ ಸಾರ್ವಜನಿಕವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ವರ್ಷದಿಂದ ಒಂದೇ ಲುಕ್ ಕಾಯ್ದುಕೊಳ್ಳುವ ಒಪ್ಪಂದದಿಂದಾಗಿ ಬೇರೆ ಸಿನಿಮಾಗಳಿಗೆ ತೊಂದರೆಯಾಗಿದೆ. ಕಾಲ್ ಮಾಡಿ ಸಾಕಾಗಿದೆ ಶೀಘ್ರವೇ ಶೂಟಿಂಗ್ ಮುಗಿಸಿ ಎಂದು ನಟ ಮನವಿ ಮಾಡಿದ್ದಾರೆ.  ಆ ಬಗ್ಗೆ ಇಲ್ಲಿದೆ ವಿವರ. 

‘ಬೇಗ ಶೂಟಿಂಗ್ ಮುಗಿಸಿ’; ನಿರ್ದೇಶಕನ ಫೋನ್ ಎತ್ತದ್ದಕ್ಕೆ ಸಂದರ್ಶನದಲ್ಲಿ ಕೋರಿಕೊಂಡ ನಿವೀನ್ ಪೌಳಿ
ನಿವೀನ್ ಪೌಳಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 27, 2026 | 7:54 AM

Share

ಮುಖ್ಯಾಂಶಗಳು

  • 'ಕಾಲ್ ಮಾಡಿ ಸಾಕಾಗಿದೆ, ಪ್ಲೀಸ್ ಶೂಟಿಂಗ್ ಮುಗಿಸಿ'
  • 'ಬೆಂಜ್' ತಂಡಕ್ಕೆ ನಿವಿನ್ ಸಾರ್ವಜನಿಕ ಮನವಿ
  • ಒಂದೇ ಲುಕ್‌ನಿಂದ ಬೇಸತ್ತ ನಟ 

ಮಲಯಾಳಂ ನಟ ನಿವಿನ್ ಪೌಳಿ ತಮ್ಮ ಮುಂಬರುವ ತಮಿಳು ಸಿನಿಮಾ ‘ಬೆಂಜ್’ ತಂಡದ ವಿರುದ್ಧ ಸಾರ್ವಜನಿಕವಾಗಿ ಅಸಮಾಧಾನ ಹೊರಹಾಕಿದ್ದಾರೆ. ಈ ಚಿತ್ರದ ಶೂಟಿಂಗ್ ಪದೇ ಪದೇ ವಿಳಂಬವಾಗುತ್ತಿದೆ. ಇದರಿಂದಾಗಿ ಅವರು ಕಳೆದ ಒಂದು ವರ್ಷದಿಂದ ಒಂದೇ ರೀತಿಯ ಲುಕ್ ಕಾಯ್ದುಕೊಳ್ಳುವಂತಾಗಿದೆ. ಬೇರೆ ಸಿನಿಮಾಗಳಿಗೆ ಲುಕ್ ಬದಲಾಯಿಸಲು ಸಾಧ್ಯವಾಗದೆ ನಟ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ರೇಖಾ ಮೆನನ್ ಅವರಿಗೆ ನೀಡಿದ ಸಂದರ್ಶನದಲ್ಲಿ ನಿವಿನ್ ಈ ವಿಷಯ ತಿಳಿಸಿದ್ದಾರೆ. ಒಪ್ಪಂದದ ಪ್ರಕಾರ ಅವರು ತಮ್ಮ ಪಾತ್ರದ ಲುಕ್ ಬದಲಾಯಿಸುವಂತಿಲ್ಲ. ಕಳೆದ ವರ್ಷದಿಂದ ಈ ಸಿನಿಮಾದ ಶೂಟಿಂಗ್ ಆರಂಭವಾಗಿದೆ. ಆದರೆ ದಿನಾಂಕಗಳು ಮುಂದೂಡಲ್ಪಡುತ್ತಲೇ ಇವೆ. ಇದು ತಮ್ಮ ಇತರ ಸಿನಿಮಾಗಳ ಕೆಲಸಕ್ಕೆ ತೊಡಕಾಗಿದೆ ಎಂದು ಅವರು ಹೇಳಿದ್ದಾರೆ.

‘ಬೆಂಜ್’ ಸಿನಿಮಾದಲ್ಲಿ ನಿವಿನ್ ‘ಟ್ವಿನ್ ಫಿಶ್ ವಾಲ್ಟರ್’ ಎಂಬ ಖಳನಾಯಕನ ಪಾತ್ರ ಮಾಡುತ್ತಿದ್ದಾರೆ. ಇದು ತಮಿಳಿನಲ್ಲಿ ಅವರ ಮೊದಲ ವಿಲನ್ ಪಾತ್ರವಾಗಿದೆ. 2025 ರ ನವೆಂಬರ್‌ನಲ್ಲಿ ಅವರು ಮೊದಲ ಹಂತದ ಶೂಟಿಂಗ್ ಮುಗಿಸಿದ್ದರು. ಇನ್ನು 35 ದಿನಗಳ ಶೂಟಿಂಗ್ ಬಾಕಿ ಇದೆ. ಎಂಟು ತಿಂಗಳಾದರೂ ತಂಡದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ.

ತಮ್ಮ ಬೇಸರವನ್ನು ತೋಡಿಕೊಂಡ ನಟ ಚಿತ್ರತಂಡಕ್ಕೆ ನೇರ ಮನವಿ ಮಾಡಿದ್ದಾರೆ. ‘ಚಿತ್ರತಂಡಕ್ಕೆ ಕರೆ ಮಾಡಿ ನನಗೂ ಸಾಕಾಗಿದೆ. ಏನೂ ಮುಂದುವರಿಯುತ್ತಿಲ್ಲ. ಈ ಸಂದರ್ಶನ ನೋಡಿದ ಮೇಲಾದರೂ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ. ಶೀಘ್ರವೇ ಶೂಟಿಂಗ್ ಮುಗಿಸಿಕೊಡಲಿ’ ಎಂದು ನಿವಿನ್ ವಿನಂತಿಸಿದ್ದಾರೆ.

ಇದನ್ನೂ ಓದಿ: ಮಲಯಾಳಂ ಸಿನಿಮಾನಲ್ಲಿ ನಟಿಸಲಿರುವ ರುಕ್ಮಿಣಿ, ನಾಯಕ ಯಾರು?

ಬಾಕಿಯಾರಾಜ್ ಕಣ್ಣನ್ ನಿರ್ದೇಶನದ ‘ಬೆಂಜ್’ ಸಿನಿಮಾ ಲೋಕೇಶ್ ಕನಗರಾಜ್ ಸಿನಿಮಾಟಿಕ್ ಯೂನಿವರ್ಸ್ (LCU) ಭಾಗವಾಗಿದೆ. ರಾಘವ ಲಾರೆನ್ಸ್ ಇದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಆದರೆ ಲೋಕೇಶ್ ಕನಗರಾಜ್ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಸಿನಿಮಾದ ಕೆಲಸಗಳು ತಡವಾಗುತ್ತಿವೆ ಎಂದು ಹೇಳಲಾಗುತ್ತಿದೆ.

ನಿವೀನ್ ಅವರ ‘ಬೆತ್ಲೆಹ್ಯಾಮ್ ಕುಟುಂಬ ಯುನಿಟ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಇದು ರೊಮ್ಯಾಂಟಿಕ್ ಸಿನಿಮಾ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ
ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ
ಹಬ್ಬ ಹಿನ್ನೆಲೆ ಕೆ. ಆರ್ ಮಾರ್ಕೆಟ್​ನಲ್ಲಿ ಖರೀದಿ ಭರಾಟೆ ಜೋರು!
ಹಬ್ಬ ಹಿನ್ನೆಲೆ ಕೆ. ಆರ್ ಮಾರ್ಕೆಟ್​ನಲ್ಲಿ ಖರೀದಿ ಭರಾಟೆ ಜೋರು!
ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ
ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ 5 ಕೆಜಿ ಡ್ರಗ್ಸ್ ವಶ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ 5 ಕೆಜಿ ಡ್ರಗ್ಸ್ ವಶ