ತಿಂಗಳ ಅವಧಿಯಲ್ಲಿ ರಾಮ್ ಚರಣ್ ನಟನೆಯ ಎರಡು ಬಿಗ್ ಬಜೆಟ್ ಸಿನಿಮಾ ರಿಲೀಸ್
ರಾಮ್ ಚರಣ್ ನಟನೆಯ ‘ಆರ್ಆರ್ಆರ್’ ಜನವರಿ 7ರಂದು ತೆರೆಗೆ ಬರುತ್ತಿದೆ. ಈ ಬೆನ್ನಲ್ಲೇ ‘ಆಚಾರ್ಯ’ ತೆರೆಗೆ ಬರಲಿದೆ. ಈ ಬಗ್ಗೆ ‘ಆಚಾರ್ಯ’ ಚಿತ್ರತಂಡದಿಂದ ಇಂದು ಘೋಷಣೆ ಆಗಿದೆ.

ರಾಮ್ ಚರಣ್ ಸದ್ಯ ಎರಡು ದೊಡ್ಡ ಪ್ರಾಜೆಕ್ಟ್ನಲ್ಲಿ ನಟಿಸುತ್ತಿದ್ದಾರೆ. ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾದಲ್ಲಿ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜತೆಗೆ ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾದಲ್ಲಿಯೂ ರಾಮ್ ಚರಣ್ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಫಸ್ಟ್ ಪೋಸ್ಟರ್ ರಿಲೀಸ್ ಆಗಿ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ವಿಶೇಷ ಎಂದರೆ ಒಂದೇ ತಿಂಗಳಲ್ಲಿ ರಾಮ್ ಚರಣ್ ನಟನೆಯ ಎರಡೆರಡು ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ.
ರಾಮ್ ಚರಣ್ ನಟನೆಯ ‘ಆರ್ಆರ್ಆರ್’ ಜನವರಿ 7ರಂದು ತೆರೆಗೆ ಬರುತ್ತಿದೆ. ಈ ಬೆನ್ನಲ್ಲೇ ‘ಆಚಾರ್ಯ’ ತೆರೆಗೆ ಬರಲಿದೆ. ಈ ಬಗ್ಗೆ ‘ಆಚಾರ್ಯ’ ಚಿತ್ರತಂಡದಿಂದ ಇಂದು ಘೋಷಣೆ ಆಗಿದೆ. ಫೆಬ್ರವರಿ 4ರಂದು ಆಚಾರ್ಯ ತೆರೆಗೆ ಬರುತ್ತಿದೆ. ಈ ವಿಚಾರ ಕೇಳಿ ರಾಮ್ ಚರಣ್ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಆಚಾರ್ಯ ಹೆಸರಿನ ಪಾತ್ರದಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಕೊರಟಾಲ ಶಿವ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಶೂಟಿಂಗ್ ಪೂರ್ಣಗೊಳ್ಳಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ಕೆಲಸಗಳು ನಿಂತಿದ್ದವು. ಕೊವಿಡ್ ಅಬ್ಬರ ಕಡಿಮೆ ಆದ ನಂತರದಲ್ಲಿ ವೇಗವಾಗಿ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಲಾಗಿದೆ.
ವಿದ್ಯಾರ್ಥಿಗಳ ನಾಯಕ ಸಿದ್ಧ ಹೆಸರಿನ ಪಾತ್ರದಲ್ಲಿ ರಾಮ್ ಚರಣ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ರಾಮ್ ಚರಣ್ ಈ ಚಿತ್ರದಲ್ಲಿ ಹೆಚ್ಚು ಹೊತ್ತು ಕಾಣಿಸಿಕೊಳ್ಳುವುದಿಲ್ಲ. ಇದೊಂದು ಅತಿಥಿ ಪಾತ್ರ. ಆದಾಗ್ಯೂ ಈ ಪಾತ್ರ ಪ್ರಾಮುಖ್ಯತೆ ಪಡೆದುಕೊಳ್ಳಲಿದೆಯಂತೆ. ‘ಆರ್ಆರ್ಆರ್’ ಚಿತ್ರದಲ್ಲಿ ರಾಮ್ ಚರಣ್ ಅವರು ಅಲ್ಲುರಿ ಸೀತಾರಾಮ ರಾಜು ಪಾತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಕನ್ನಡ, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಿಗೆ ಡಬ್ ಆಗಿ ಜನವರಿ 7ರಂದು ತೆರೆ ಕಾಣುತ್ತಿದೆ.
ಇದನ್ನೂ ಓದಿ: RRR ಸುದ್ದಿಗೋಷ್ಠಿ: ಕರುನಾಡಿಗೆ ಬಂದ ರಾಜಮೌಳಿ, ಆಲಿಯಾ, ರಾಮ್ ಚರಣ್, ಜ್ಯೂ. ಎನ್ಟಿಆರ್ ಹೇಳಿದ್ದೇನು?
ರಣವೀರ್ ಸಿಂಗ್ಗೆ ಮನೆಯಲ್ಲೇ ಬಿರಿಯಾನಿ ಮಾಡಿ ಬಡಿಸಿದ ರಾಮ್ ಚರಣ್; ಕಾರಣ ಏನು?