AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಗೆ ರೆಡಿ ಆದ ತೆಲುಗಿನ ಸ್ಟಾರ್ ಹೀರೋ: ಮುಂದಿನ ವರ್ಷವೇ ಕಲ್ಯಾಣ

Tollywood news: ಸಾಯಿ ತೇಜ್ ಅವರು ಕಳೆದ 11 ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು 28ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈಗ ಅವರಿಗೆ 39 ವರ್ಷ. ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆದರೆ, ವಿವಾಹ ಸುದ್ದಿ ಬಂದಾಗ ಅವರು ಸೈಲೆಂಟ್ ಆಗಿ ಇದ್ದಿದ್ದೇ ಹೆಚ್ಚು. ಅವರು ಈಗ ಮದುವೆ ಆಗುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

ಮದುವೆಗೆ ರೆಡಿ ಆದ ತೆಲುಗಿನ ಸ್ಟಾರ್ ಹೀರೋ: ಮುಂದಿನ ವರ್ಷವೇ ಕಲ್ಯಾಣ
Sai Dharam Tej
 ಶ್ರೀಲಕ್ಷ್ಮೀ ಎಚ್
| Edited By: |

Updated on:Nov 19, 2025 | 10:04 PM

Share

ಸದ್ಯ ಟಾಲಿವುಡ್​ನಲ್ಲಿ (Tollywood) ಮದುವೆಯ ಸುಗ್ಗಿ ನಡೆಯುತ್ತಿದೆ ಎಂದರೂ ತಪ್ಪಾಗಲಾರದು. ಸದ್ಯದಲ್ಲೇ ಅಲ್ಲು ಅರ್ಜುನ್ ತಮ್ಮ ಹಾಗೂ ನಟ ಅಲ್ಲು ಸಿರಿಶ್ ವಿವಾಹ ನೆರವೇರಲಿದೆ. ಮುಂದಿನ ವರ್ಷ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ನಡೆಯಲಿದೆಯಂತೆ. ಇದರ ಮಧ್ಯೆ ಮತ್ತೋರ್ವ ಹೀರೋ ತಾವು ವಿವಾಹ ಆಗೋದಾಗಿ ಘೋಷಣೆ ಮಾಡಿದ್ದಾರೆ. ಈ ವಿಷಯ ಫ್ಯಾನ್ಸ್ ಖುಷಿಗೆ ಕಾರಣ ಆಗಿದೆ. ಅಷ್ಟಕ್ಕೂ ಯಾರು ಅವರು? ಸಾಯಿ ಧರಮ್ ತೇಜ್.

ಸಾಯಿ ತೇಜ್ ಅವರು ಕಳೆದ 11 ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು 28ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈಗ ಅವರಿಗೆ 39 ವರ್ಷ. ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆದರೆ, ವಿವಾಹ ಸುದ್ದಿ ಬಂದಾಗ ಅವರು ಸೈಲೆಂಟ್ ಆಗಿ ಇದ್ದಿದ್ದೇ ಹೆಚ್ಚು. ಅವರು ಈಗ ಮದುವೆ ಆಗುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

ಇತ್ತೀಚೆಗೆ ಸಾಯಿ ಧರಮ್ ತೇಜ್ ತಮ್ಮ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ದೇವರ ದರ್ಶನ ಪಡೆಯಲು ತಿರುಮಲಕ್ಕೆ ಬಂದಿದ್ದ ಸಾಯಿ, ಮದುವೆಯ ವಿಷಯವನ್ನು ಪ್ರಸ್ತಾಪಿಸಿದರು. ದೇವರ ಆಶೀರ್ವಾದ ಪಡೆದ ನಟ, ದೇವಾಲಯದ ಮುಂದೆ ಮಾಧ್ಯಮಗಳೊಂದಿಗೆ ಮಾತನಾಡಿದರು. ಮದುವೆಗೆ ಪ್ರತಿಕ್ರಿಯಿಸಿದ ಸಾಯಿ ದುರ್ಗಾ ತೇಜ್, ಮುಂದಿನ ವರ್ಷ ತಮ್ಮ ಮದುವೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಟಾಲಿವುಡ್​ಗೆ 50 ಕೆಜಿ ಚಿನ್ನ ಧರಿಸಿ ಬಂದ ನಟಿ ಸೋನಾಕ್ಷಿ ಸಿನ್ಹಾ

‘ಒಳ್ಳೆಯ ಸಿನಿಮಾಗಳು ಮತ್ತು ಒಳ್ಳೆಯ ಜೀವನವನ್ನು ನೀಡಿದ್ದಕ್ಕಾಗಿ ಭಗವಂತನಿಗೆ ಧನ್ಯವಾದ ಹೇಳಲು ಬಂದಿದ್ದೇನೆ. ಹೊಸ ವರ್ಷ, ಹೊಸ ಜೀವನಕ್ಕಾಗಿ ಭಗವಂತನ ಆಶೀರ್ವಾದ ಪಡೆದಿದ್ದೇನೆ’ ಎಂದು ಅವರು ಹೇಳಿದರು. ಮುಂದಿನ ವರ್ಷ ‘ಸಂಬರಲ ಯೇತ್ತಿ ಗಟ್ಟು’ ಚಿತ್ರ ಬರಲಿದೆ ಎಂದು ಸಾಯಿ ದುರ್ಗಾ ತೇಜ ಹೇಳಿದರು. ಸಾಯಿ ಧರಮ್ ತೇಜ್ ತಮ್ಮ ತಾಯಿಯ ಗೌರವಾರ್ಥವಾಗಿ ತಮ್ಮ ಹೆಸರನ್ನು ಸಾಯಿ ದುರ್ಗಾ ತೇಜ್ ಎಂದು ಬದಲಾಯಿಸಿಕೊಂಡಿದ್ದಾರೆ.

2021ರಲ್ಲಿ ಸಾಯಿ ಅವರಿಗೆ ಭೀಕರ ರಸ್ತೆ ಅಪಘಾತ ಆಯಿತು. ಸೂಪರ್ ಬೈಕ್ ಚಾಲನೆ ಮಾಡುವಾಗ ಅಪಘಾತ ಆಯಿತು. ಅವರು ಆ ಬಳಿಕ ಸಾವು-ಬದುಕಿನ ಮಧ್ಯೆ ಹೋರಾಡಿದರು. ಕೊನೆಗೂ ಅವರು ಸಾವನ್ನು ಗೆದ್ದು ಬದುಕಿದರು. ಆರು ತಿಂಗಳು ಬ್ರೇಕ್ ಪಡೆದು ಬಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:02 pm, Wed, 19 November 25

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಭಜನ್ ಕ್ಲಬ್ಬಿಂಗ್​; ದೆಹಲಿಯಲ್ಲಿ ಭಕ್ತಿಗೀತೆಗೆ ತಾಳ ಹಾಕಿದ ಪ್ರಧಾನಿ ಮೋದಿ
ಭಜನ್ ಕ್ಲಬ್ಬಿಂಗ್​; ದೆಹಲಿಯಲ್ಲಿ ಭಕ್ತಿಗೀತೆಗೆ ತಾಳ ಹಾಕಿದ ಪ್ರಧಾನಿ ಮೋದಿ
ಬಳ್ಳಾರಿ ಪಾದಯಾತ್ರೆ ಯಶಸ್ಸಿನ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಯಾತ್ರೆ
ಬಳ್ಳಾರಿ ಪಾದಯಾತ್ರೆ ಯಶಸ್ಸಿನ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಯಾತ್ರೆ
ಶವಪೆಟ್ಟಿಗೆ ಒಳಗೆ ತುಂಡು ತುಂಡಾದ ದೇಹ: 3 ತಿಂಗಳ ಬಳಿಕ ಉಡುಪಿಗೆ ಬಂತು ಶವ
ಶವಪೆಟ್ಟಿಗೆ ಒಳಗೆ ತುಂಡು ತುಂಡಾದ ದೇಹ: 3 ತಿಂಗಳ ಬಳಿಕ ಉಡುಪಿಗೆ ಬಂತು ಶವ
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಿ ಪತ್ರಕರ್ತನ ಮೈಚಳಿ ಬಿಡಿಸಿದ ಸಚಿವ ಜೈಶಂಕರ್!
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಿ ಪತ್ರಕರ್ತನ ಮೈಚಳಿ ಬಿಡಿಸಿದ ಸಚಿವ ಜೈಶಂಕರ್!
ಕೊಡಗಿನಲ್ಲಿ ಸುರಿದ ಕೆಂಬಣ್ಣದ ಮಳೆ: ಅಚ್ಚರಿಗೊಂಡ ಜನ
ಕೊಡಗಿನಲ್ಲಿ ಸುರಿದ ಕೆಂಬಣ್ಣದ ಮಳೆ: ಅಚ್ಚರಿಗೊಂಡ ಜನ
ಹಾಸನದಲ್ಲಿ ರವಿಚಂದ್ರನ್ ನೋಡಲು ಮುಗಿಬಿದ್ದ ಜನ; ವಿಡಿಯೋ ನೋಡಿ
ಹಾಸನದಲ್ಲಿ ರವಿಚಂದ್ರನ್ ನೋಡಲು ಮುಗಿಬಿದ್ದ ಜನ; ವಿಡಿಯೋ ನೋಡಿ
'ಕಾಸಿಗೆ ಡಿಗ್ರಿ' ನೀಡುವ ಬೃಹತ್ ವಂಚನೆ ಜಾಲ
'ಕಾಸಿಗೆ ಡಿಗ್ರಿ' ನೀಡುವ ಬೃಹತ್ ವಂಚನೆ ಜಾಲ
ಬಿಗ್ ಬಾಸ್ ಕನ್ನಡ ಸೀಸನ್ 13: ಕಳಪೆ ಪಟ್ಟ ಪಡೆದು ಜೈಲು ಸೇರಿದ ಕಿರಣ್
ಬಿಗ್ ಬಾಸ್ ಕನ್ನಡ ಸೀಸನ್ 13: ಕಳಪೆ ಪಟ್ಟ ಪಡೆದು ಜೈಲು ಸೇರಿದ ಕಿರಣ್
ಪೌರ ಕಾರ್ಮಿಕರ ಸಮವಸ್ತ್ರ ಧರಿಸಿ ಗೌರವ ಸಲ್ಲಿಸಿದ ಡಿಕೆ ಶಿವಕುಮಾರ್
ಪೌರ ಕಾರ್ಮಿಕರ ಸಮವಸ್ತ್ರ ಧರಿಸಿ ಗೌರವ ಸಲ್ಲಿಸಿದ ಡಿಕೆ ಶಿವಕುಮಾರ್
‘ಐ ಆ್ಯಮ್ ಗಾಡ್ ಸಿನಿಮಾದಲ್ಲಿ 35 ಸಾಂಗ್ಸ್ ಇದೆ’; ರವಿಚಂದ್ರನ್
‘ಐ ಆ್ಯಮ್ ಗಾಡ್ ಸಿನಿಮಾದಲ್ಲಿ 35 ಸಾಂಗ್ಸ್ ಇದೆ’; ರವಿಚಂದ್ರನ್