ತುಳು ಹೀರೋ ವಿಘ್ನೇಶ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ; ‘ಕ್ಲಾಂತ’ ಸಿನಿಮಾದಲ್ಲಿ ಮುಖ್ಯಭೂಮಿಕೆ
ಪಕ್ಕಾ ಆಕ್ಷನ್-ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಶೈಲಿಯಲ್ಲಿ ‘ಕ್ಲಾಂತ’ ಸಿನಿಮಾ ಮೂಡಿಬರುತ್ತಿದೆ. ವಿಘ್ನೇಶ್ ಹೀರೋ ಆಗಿದ್ದು, ಸಂಗೀತಾ ಭಟ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಡಿಸೆಂಬರ್ 8ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ‘ರಂಗನ್ ಸ್ಟೈಲ್’, ‘ದಗಲ್ ಬಾಜಿಲು’ ಖ್ಯಾತಿಯ ವೈಭವ್ ಪ್ರಶಾಂತ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ತುಳು ಚಿತ್ರರಂಗದಲ್ಲಿ ವಿಘ್ನೇಶ್ (Tulu Actor Vignesh) ಅವರು ಖ್ಯಾತಿ ಗಳಿಸಿದ್ದಾರೆ. ‘ದಗಲ್ ಬಾಜಿಲು’ ಸಿನಿಮಾದಲ್ಲಿ ಅವರು ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ತಳುವಿನಲ್ಲಿ ಮಾಡಿದ ಮೊದಲ ಸಿನಿಮಾವೇ ಅವರಿಗೆ ಗೆಲುವು ತಂದುಕೊಟ್ಟಿತ್ತು. ಆ ಸಿನಿಮಾದ ಮೂಲಕ ಗೆಲುವಿನ ನಗು ಬೀರಿದ್ದ ಅವರು ಈಗ ಕನ್ನಡ ಚಿತ್ರರಂಗಕ್ಕೂ (Sandalwood) ಹೀರೋ ಆಗಿ ಎಂಟ್ರಿ ನೀಡುತ್ತಿದ್ದಾರೆ. ಕನ್ನಡದಲ್ಲಿ ಅವರ ಮೊದಲ ಹೆಜ್ಜೆಯಾಗಿ ‘ಕ್ಲಾಂತ’ (Klaantha Movie) ಸಿನಿಮಾ ಮೂಡಿಬರುತ್ತಿದೆ. ಸ್ಯಾಂಡಲ್ವುಡ್ನಲ್ಲಿ ಮಾಸ್ ಹೀರೋ ಆಗಿ ಮಿಂಚಲು ಅವರು ಸಜ್ಜಾಗಿದ್ದಾರೆ.
‘ಕ್ಲಾಂತ’ ಎಂದು ಡಿಫರೆಂಟ್ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ. ಈ ಸಿನಿಮಾದದಲ್ಲಿ ನಟ ವಿಘ್ನೇಶ್ ಅವರ ಗೆಟಪ್ ತುಂಬ ಮಾಸ್ ಆಗಿ ಇರಲಿದೆ. ವೈಭವ್ ಪ್ರಶಾಂತ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ರಂಗನ್ ಸ್ಟೈಲ್’, ‘ದಗಲ್ ಬಾಜಿಲು’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿರುವ ಅನುಭವ ಅವರಿಗೆ ಇದೆ. ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಯಶಸ್ವಿಯಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಗುಂಡ್ಯ, ಕಳಸ ಮುಂತಾದ ಪ್ರದೇಶಗಳ ಕಾಡಿನಲ್ಲಿ ಈ ಸಿನಿಮಾಗೆ ಶೂಟಿಂಗ್ ಮಾಡಲಾಗಿದೆ. ಅದ್ದೂರಿ ಬಜೆಟ್ನಲ್ಲಿ ಈ ಚಿತ್ರ ತಯಾರಾಗಿದೆ.
ಇದನ್ನೂ ಓದಿ: ‘ಚಟ್ಟ’ ಪೋಸ್ಟರ್ ಬಿಡುಗಡೆ: ನೀವಂದುಕೊಂಡಂತಲ್ಲ ಇದರ ಅರ್ಥ
‘ಅನುಗ್ರಹ ಪವರ್ ಮೀಡಿಯಾ’ ಸಂಸ್ಥೆಯ ಮೂಲಕ ಉದಯ್ ಅಮ್ಮಣ್ಣಾಯ ಅವರು ‘ಕ್ಲಾಂತ’ ಸಿನಿಮಾ ನಿರ್ಮಿಸಿದ್ದಾರೆ. ಅರುಣ್ ಗೌಡ, ಪ್ರದೀಪ್ ಗೌಡ ಮತ್ತು ಹೇಮಂತ್ ರೈ ಅವರ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಡಿಸೆಂಬರ್ 8ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಸಂಗೀತಾ ಭಟ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಶೋಭರಾಜ್, ಕಾಮಿಡಿ ಕಿಲಾಡಿ ಖ್ಯಾತಿಯ ದೀಪಿಕಾ, ವೀಣಾ ಸುಂದರ್, ಯುವ, ಪ್ರವೀಣ್ ಜೈನ್, ತಿಮ್ಮಪ್ಪ ಕುಲಾಲ್, ರಾಘವೇಂದ್ರ ಕಾರಂತ್, ಸ್ವಪ್ನ, ವಾಮದೇವ ಪುಣಿಂಚತ್ತಾಯ, ಪಂಚಮಿ ವಾಮಂಜೂರ್ ಮುಂತಾದ ಕಲಾವಿದರು ನಟಿಸಿದ್ದಾರೆ.
ಇದನ್ನೂ ಓದಿ: ಮಾನ್ವಿತಾ ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ: ಹೆಸರೇನು?
ಪಕ್ಕಾ ಆ್ಯಕ್ಷನ್-ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಶೈಲಿಯಲ್ಲಿ ‘ಕ್ಲಾಂತ’ ಸಿನಿಮಾ ಮೂಡಿಬರುತ್ತಿದೆ. ಎಸ್.ಪಿ. ಚಂದ್ರಕಾಂತ್ ಅವರು ಸಂಗೀತ ನೀಡಿದ್ದಾರೆ. ಪಿ.ಆರ್. ಸೌಂದರ್ ರಾಜ್ ಸಂಕಲನ ಮಾಡಿದ್ದಾರೆ. ಮೋಹನ್ ಲೋಕನಾಥ್ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಸಂತೋಷ್ ನಾಯ್ಕ್, ಶಶಿರಾಜ್ ಕಾವೂರ್, ವೈಭವ್ ಪ್ರಶಾಂತ್ ಅವರು ಸಾಹಿತ್ಯ ಬರೆದಿದ್ದಾರೆ. ವಿನೋದ್ ಸಾಹಸ ದೃಶ್ಯಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಮಹೇಶ್ ದೇವ್ ಡಿ.ಎನ್. ಪುರ ಅವರು ಸಂಭಾಷಣೆ ಬರೆದಿದ್ದಾರೆ. 2 ಹಾಡುಗಳಿಗೆ ರಘು ನೃತ್ಯ ಸಂಯೋಜನೆ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.