ಸೆನ್ಸಾರ್ ಪರೀಕ್ಷೆ ಮುಗಿಸಿದ ‘ಕ್ಯಾಪ್ಟನ್ ಮಿಲ್ಲರ್’; ಶಿವಣ್ಣ, ಧನುಶ್ ಚಿತ್ರಕ್ಕೆ ಯಾವ ಪ್ರಮಾಣಪತ್ರ?
ಸೆನ್ಸಾರ್ ಪ್ರಮಾಣ ಪತ್ರ ಪಡೆದ ಬಳಿಕ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಅವಧಿ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಚಿತ್ರದ ಅವಧಿ 2 ಗಂಟೆ 37 ನಿಮಿಷ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ತಮಿಳಿನ ಜೊತೆಗೆ ಕನ್ನಡ, ತೆಲುಗು ಮುಂತಾದ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ.

2024ರ ಆರಂಭದಲ್ಲಿಯೇ ಹಲವು ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್ಗೆ ಸಿದ್ಧವಾಗಿವೆ. ಸಂಕ್ರಾಂತಿ ಹಬ್ಬದ ಲಾಭ ಪಡೆಯಲು ಅನೇಕ ಚಿತ್ರತಂಡಗಳು ಸ್ಕೆಚ್ ಹಾಕಿವೆ. ಇವುಗಳ ಸಾಲಿನಲ್ಲಿ ಧನುಶ್ (Dhanush) ನಟನೆಯ ‘ಕ್ಯಾಪ್ಟನ್ ಮಿಲ್ಲರ್’ (Captain Miller) ಸಿನಿಮಾ ಸಹ ಇದೆ. ಈ ಚಿತ್ರದಲ್ಲಿ ಶಿವರಾಜ್ಕುಮಾರ್ (Shivarajkumar) ಕೂಡ ಒಂದು ಪ್ರಮುಖ ಪಾತ್ರ ಮಾಡಿರುವುದರಿಂದ ನಿರೀಕ್ಷೆ ಜೋರಾಗಿದೆ. ಜನವರಿ 12ರಂದು ‘ಕ್ಯಾಪ್ಟನ್ ಮಿಲ್ಲರ್’ ಚಿತ್ರ ತೆರೆ ಕಾಣಲಿದೆ. ಈ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿವೆ. ಸಿನಿಮಾ ನೋಡಿದ ಸೆನ್ಸಾರ್ ಮಂಡಳಿ ಸದಸ್ಯರು ‘ಯು/ಎ’ ಪ್ರಮಾಣಪತ್ರ ನೀಡಿದ್ದಾರೆ.
ಶಿವರಾಜ್ಕುಮಾರ್ ಅವರಿಗೆ ಪರಭಾಷೆಯಲ್ಲೂ ಡಿಮ್ಯಾಂಡ್ ಇದೆ. ಕಳೆದ ವರ್ಷ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾದಲ್ಲಿ ಶಿವಣ್ಣ ಒಂದು ಪಾತ್ರ ಮಾಡಿದ್ದರು. ಅದನ್ನು ಕಂಡು ಫ್ಯಾನ್ಸ್ ಖುಷಿ ಆಗಿದ್ದರು. ‘ಜೈಲರ್’ ಸಿನಿಮಾದ ಗೆಲುವಿನಲ್ಲಿ ಶಿವರಾಜ್ಕುಮಾರ್ ಅವರ ಕೊಡುಗೆ ಕೂಡ ಇತ್ತು. ಈಗ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಅವರ ಪಾತ್ರ ಹೇಗಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.
ಸೆನ್ಸಾರ್ ಪ್ರಮಾಣ ಪತ್ರ ಪಡೆದ ಬಳಿಕ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಅವಧಿ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಚಿತ್ರದ ಅವಧಿ 2 ಗಂಟೆ 37 ನಿಮಿಷ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ತಮಿಳಿನ ಜೊತೆಗೆ ಕನ್ನಡ, ತೆಲುಗು ಮುಂತಾದ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಸಂಕ್ರಾಂತಿ ಹಬ್ಬದಲ್ಲಿ ಹಲವು ಚಿತ್ರಗಳ ಜೊತೆ ‘ಕ್ಯಾಪ್ಟನ್ ಮಿಲ್ಲರ್’ ಪೈಪೋಟಿ ನೀಡಲಿದೆ.
‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾಗೆ ಅರುಣ್ ಮಾದೇಶ್ವರನ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಧನುಶ್ ಅವರ ಗೆಟಪ್ ಡಿಫರೆಂಟ್ ಆಗಿದೆ. ಜಿ.ವಿ. ಪ್ರಕಾಶ್ ಕುಮಾರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ರೆಟ್ರೋ ಕಾಲದ ಕಥೆ ಈ ಸಿನಿಮಾದಲ್ಲಿದೆ. ಅದ್ದೂರಿ ಬಜೆಟ್ನಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ಬಾಕ್ಸ್ ಆಫೀಸ್ನಲ್ಲಿ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ