ಸಾಯುವುದಕ್ಕೂ ಎರಡು ದಿನ ಮೊದಲು ಕಿರುತೆರೆ ನಟಿ ಸುಭಾಷಿಣಿ ಎಷ್ಟು ಖುಷಿಯಿಂದ ಇದ್ರು ನೋಡಿ
Actress Subhashini Death: ತಮಿಳು ಕಿರುತೆರೆ ನಟಿ ಸುಭಾಷಿಣಿ ಬಾಲಸುಬ್ರಮಣಿಯಂ ಏಪ್ರಿಲ್ 6ರಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರದ್ದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. 'ಕಯಲ್' ಧಾರಾವಾಹಿಯಿಂದ ಜನಪ್ರಿಯರಾಗಿದ್ದ ಸುಭಾಷಿಣಿ, ಸಾಯುವುದಕ್ಕೂ ಮುನ್ನ ಸಂತೋಷದ ವಿಡಿಯೋ ಹಂಚಿಕೊಂಡಿದ್ದರು.

ತಮಿಳು ಕಿರುತೆರೆ ನಟಿ ಸುಭಾಷಿಣಿ ಬಾಲಸುಬ್ರಮಣಿಯಂ (Subhashini) ಅವರು ಏಪ್ರಿಲ್ 6ರಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರದ್ದು ಆತ್ಮಹತ್ಯೆ ಎಂದು ಹೇಳಲಾಗುತ್ತಾ ಇದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಸೆಲೆಬ್ರಿಟಿಗಳ ನಿಜ ಜೀವನಕ್ಕೂ, ಅವರು ತೋರಿಸಿಕೊಳ್ಳುವುದಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಅವರು ಪೋಸ್ಟ್ ಮಾಡಿದ್ದ ವಿಡಿಯೋ ಉತ್ತಮ ಸಾಕ್ಷಿ.
ಸುಭಾಷಿಣಿ ಮೂಲತಃ ಶ್ರಿಲಂಕಾದವರು. ಅವರು ಬಣ್ಣದ ಲೋಕದ ಆಫರ್ ಹುಡುಕಿ ಚೆನ್ನೈಗೆ ಬಂದರು. ಚೆನ್ನೈನಲ್ಲಿ ನಟನೆಯನ್ನು ಗಿಟ್ಟಿಸಿಕೊಳ್ಳುವ ಸಾಕಷ್ಟು ಪ್ರಯತ್ನಗಳನ್ನು ಅವರು ಮಾಡಿದರು. ಆದರೆ, ಯಾವುದೂ ಅವರಿಗೆ ಅಷ್ಟಾಗಿ ಜನಪ್ರಿಯತೆ ತಂದುಕೊಡಲಿಲ್ಲ. ಕೊನೆಗೆ ಅವರು ‘ಕಯಲ್’ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯರಾದರು. ಅವರ ಬಣ್ಣದ ಬದುಕಿಗೆ ಈ ಧಾರಾವಾಹಿ ಸಾಕಷ್ಟು ಮೈಲೇಜ್ ನೀಡಿತು.
View this post on Instagram
ಈಗ ಸುಭಾಷಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವುದಕ್ಕೂ ಮೊದಲು ಪತಿಯ ಜೊತೆ ಸುಭಾಷಿಣಿ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದರು. ಈ ವೇಳೆ ಇಬ್ಬರ ಮಧ್ಯೆ ಜಗಳ ನಡೆಯಿತೇ ಎನ್ನುವ ಪ್ರಶ್ನೆ ಮೂಡಿದೆ. ಈ ಜಗಳಿಂದ ನೊಂದು ಅವರು ಇಂತಹ ಕೆಟ್ಟ ನಿರ್ಧಾರ ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಶವವಾಗಿ ಪತ್ತೆಯಾದ ಕಿರುತೆರೆ ನಟಿ ಸುಭಾಷಿಣಿ; ಗಂಡನಿಗೆ ಕೊನೆಯ ವಿಡಿಯೋ ಕಾಲ್ ಅಚ್ಚರಿಯ ಸಂಗತಿ ಎಂದರೆ ಸುಭಾಷಿಣಿ ಅವರು ಎರಡು ದಿನಗಳ ಹಿಂದೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಅವರು ಕಾಡೆಲ್ಲ ಸುತ್ತಾಡುತ್ತಿದ್ದಾರೆ. ತುಂಬಾನೇ ಖುಷಿಯಿಂದ ಇದ್ದರು. ಆದಾಗ್ಯೂ ಇಷ್ಟು ಕಠಿಣ ನಿರ್ಧಾರ ತೆಗೆದುಕೊಳ್ಳುವ ಅಗತ್ಯ ಏಕೆ ಬಂತು ಎಂಬುದು ಅನೇಕರ ಪ್ರಶ್ನೆ. ಅವರ ಆತ್ಮಕ್ಕೆ ಎಲ್ಲರೂ ಶಾಂತಿ ಕೋರುತ್ತಿದ್ದಾರೆ. ಸಾವಿಗೆ ಅಸಲಿ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:06 pm, Tue, 7 April 26
