Nannamma Superstar Finale: ‘ನನ್ನಮ್ಮ ಸೂಪರ್ ಸ್ಟಾರ್’ ಫಿನಾಲೆ; ಶೋಗೆ ರಂಗು ತುಂಬಲಿರುವ ಉಪೇಂದ್ರ

Nannamma Superstar Finale: ‘ನನ್ನಮ್ಮ ಸೂಪರ್ ಸ್ಟಾರ್’ ಫಿನಾಲೆ; ಶೋಗೆ ರಂಗು ತುಂಬಲಿರುವ ಉಪೇಂದ್ರ
‘ನನ್ನಮ್ಮ ಸೂಪರ್ ಸ್ಟಾರ್’ ಫಿನಾಲೆಯಲ್ಲಿ ಉಪೇಂದ್ರ

ವೀಕ್ಷಕರ ಮನಗೆದ್ದಿರುವ ರಿಯಾಲಿಟಿ ಶೋ ‘ನನ್ನಮ್ಮ ಸೂಪರ್ ಸ್ಟಾರ್’ ಫಿನಾಲೆ ಇಂದು ಅಂದರೆ ಶನಿವಾರ ಹಾಗೂ ನಾಳೆ- ಭಾನುವಾರದಂದು ಪ್ರಸಾರವಾಗಲಿದೆ. ರಿಯಲ್ ಸ್ಟಾರ್ ಉಪೇಂದ್ರ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

TV9kannada Web Team

| Edited By: shivaprasad.hs

Apr 02, 2022 | 3:26 PM

‘ಕಲರ್ಸ್ ಕನ್ನಡ’ದಲ್ಲಿ ಪ್ರಸಾರವಾಗುತ್ತಿರುವ ‘ನನ್ನಮ್ಮ ಸೂಪರ್​ಸ್ಟಾರ್’ (Nannamma Superstar) ಕಾರ್ಯಕ್ರಮಕ್ಕೆ ದೊಡ್ಡ ಅಭಿಮಾನಿ ಬಳಗವಿದೆ. ಸೆಲೆಬ್ರಿಟಿ ಮಕ್ಕಳು ಮಾಡುವ ತುಂಟಾಟಗಳನ್ನು ವೀಕ್ಷಕರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಈ ರಿಯಾಲಿಟಿ ಶೋ ಅಂತಿಮ ಹಂತ ತಲುಪಿದೆ. ಈ ವೀಕೆಂಡ್​ನಲ್ಲಿ ಗ್ರಾಂಡ್ ಫಿನಾಲೆ ನಡೆಯಲಿದೆ. ಇಂದು ಅಂದರೆ (ಶನಿವಾರ, ಏ.2) ಹಾಗೂ ಭಾನುವಾರ (ಏ.3) ಗ್ರಾಂಡ್ ಫಿನಾಲೆ ಕಾರ್ಯಕ್ರಮ ಪ್ರಸಾರವಾಗಲಿದ್ದು, ಅದರಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ. ವಿಶೇಷವೆಂದರೆ ಫಿನಾಲೆಗೆ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಚಾನಲ್ ಹಲವು ಪ್ರೋಮೋಗಳನ್ನು ರಿಲೀಸ್ ಮಾಡಿದ್ದು, ವೀಕ್ಷಕರಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿದೆ.

ಶೋನಲ್ಲಿ ಭಾಗಿಯಾಗಿರುವ ಬಾಲಕನೊಬ್ಬನಿಗೆ ‘ರ’ಕಾರ ಉಚ್ಛಾರವನ್ನು ಉಪೇಂದ್ರ ಕಲಿಸುವ ವಿಶೇಷ ದೃಶ್ಯವನ್ನು ಪ್ರೋಮೋದಲ್ಲಿ ಹಂಚಿಕೊಳ್ಳಲಾಗಿದೆ. ಇದಲ್ಲದೇ ಹಲವು ಪ್ರೋಮೋಗಳನ್ನು ವಾಹಿನಿ ಹಂಚಿಕೊಂಡಿದ್ದು, ವೀಕ್ಷಕರಲ್ಲಿ ಫಿನಾಲೆ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಶನಿವಾರ ಮತ್ತು ಭಾನುವಾರ ಸಂಜೆ 6ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ.

ವಾಹಿನಿ ಹಂಚಿಕೊಂಡ ಪ್ರೋಮೋ ಇಲ್ಲಿದೆ:

ತಾರಾ ಅನುರಾಧ ಹಾಗೂ ಅನು ಪ್ರಭಾಕರ್​ ಹಾಗೂ ಸೃಜನ್​ ಲೋಕೇಶ್ ‘ನನ್ನಮ್ಮ ಸೂಪರ್ ಸ್ಟಾರ್’ ನಿರ್ಣಾಯಕರಾಗಿದ್ದಾರೆ. ನಟಿ ಅನುಪಮಾ ಗೌಡ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಫೈನಲ್​ನಲ್ಲಿ ಆರು ಜೋಡಿ ಸ್ಪರ್ಧಿಗಳಿದ್ದಾರೆ. ವಿದ್ಯಾ- ರೋಹಿತ್, ಸುಪ್ರೀತಾ- ಇಬ್ಬನಿ, ಜಾಹ್ನವಿ- ಗ್ರಂಥ್, ಪುನೀತ- ಆರ್ಯ, ಯಶಸ್ವಿನಿ- ವಂಶಿಕಾ ಮತ್ತು ನಂದಿನಿ- ಅದ್ವಿಕ್ ಕೊನೆಯ ಸುತ್ತು ತಲುಪಿದ್ದಾರೆ. ಇವರಲ್ಲಿ ಓರ್ವ ತಾಯಿ- ಮಗು ಜೋಡಿ ‘ನನ್ನಮ್ಮ ಸೂಪರ್ ಸ್ಟಾರ್’ ಟ್ರೋಫಿ ಗೆಲ್ಲಲಿದೆ.

ಇದನ್ನೂ ಓದಿ:

‘ನನ್ನಮ್ಮ ಸೂಪರ್ ಸ್ಟಾರ್​ ಜಡ್ಜ್​​ಗಳಿಗೆ ಸೃಜನ್ ಲೋಕೇಶ್​​ ವಿಶೇಷ ಗಿಫ್ಟ್’; ಗಳಗಳನೆ ಅತ್ತ ಅನುಪಮಾ ಗೌಡ​

RRR: ‘ಶ್ರದ್ಧಾ ಕಪೂರ್, ಪರಿಣೀತಿ ಚೋಪ್ರಾ..’; ‘ಆರ್​ಆರ್​ಆರ್​’ ಆಫರ್ ರಿಜೆಕ್ಟ್ ಮಾಡಿದ್ದ 5 ಸ್ಟಾರ್ ನಟಿಯರು ಇವರೇ!

Follow us on

Related Stories

Most Read Stories

Click on your DTH Provider to Add TV9 Kannada