AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡನೇ ದಿನಕ್ಕೆ ನೆಲಕಚ್ಚಿದ ‘ಪ್ಯಾರಡೈಸ್’ ಕಲೆಕ್ಷನ್; ಶೇ. 57ರಷ್ಟು ಕುಸಿತ

ಮೊದಲ ದಿನ ಭರ್ಜರಿ ಓಪನಿಂಗ್ ಪಡೆದಿದ್ದ 'ದಿ ಪ್ಯಾರಡೈಸ್' ಸಿನಿಮಾಗೆ ನೆಗೆಟಿವ್ ವಿಮರ್ಶೆಗಳ ಬಿಸಿ ತಟ್ಟಿದೆ. ಎರಡನೇ ದಿನವೇ ಕಲೆಕ್ಷನ್‌ನಲ್ಲಿ ಶೇಕಡಾ 57ರಷ್ಟು ಭಾರಿ ಕುಸಿತ ಕಂಡಿದೆ. ದೇಶಾದ್ಯಂತ 7,049 ಶೋಗಳಿಂದ 14.90 ಕೋಟಿ ಗಳಿಸಿದೆ. ಪ್ರಸ್ತುತ ವಿಶ್ವದಾದ್ಯಂತ ಚಿತ್ರದ ಒಟ್ಟು ಗ್ರೋಸ್ ಗಳಿಕೆ 98.50 ಕೋಟಿ ತಲುಪಿದೆ.

ಎರಡನೇ ದಿನಕ್ಕೆ ನೆಲಕಚ್ಚಿದ 'ಪ್ಯಾರಡೈಸ್' ಕಲೆಕ್ಷನ್; ಶೇ. 57ರಷ್ಟು ಕುಸಿತ
ನಾನಿ
ರಾಜೇಶ್ ದುಗ್ಗುಮನೆ
|

Updated on: Sep 26, 2026 | 7:39 AM

Share

ಮುಖ್ಯಾಂಶಗಳು

  • ನೆಗೆಟಿವ್ ಟಾಕ್ ಎಫೆಕ್ಟ್
  • 'ಪ್ಯಾರಡೈಸ್' ಬಾಕ್ಸ್ ಆಫೀಸ್ ಗಳಿಕೆಗೆ ಬಿತ್ತು ಭಾರಿ ಬ್ರೇಕ್
  • ಒಂದೇ ದಿನದಲ್ಲಿ ಶೇಕಡಾ 57ರಷ್ಟು ಕುಸಿತ

ಬಿಡುಗಡೆಯಾದ ಮೊದಲ ದಿನವೇ ಉತ್ತಮ ಓಪನಿಂಗ್ ಪಡೆದುಕೊಂಡಿದ್ದ ‘ದಿ ಪ್ಯಾರಡೈಸ್’ ಸಿನಿಮಾಗೆ ಈಗ ನೆಗೆಟಿವ್ ವಿಮರ್ಶೆಗಳ ಬಿಸಿ ತಟ್ಟಿದೆ. ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಋಣಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಎರಡನೇ ದಿನವೇ ಚಿತ್ರದ ಗಳಿಕೆಯಲ್ಲಿ ವಿಪರೀತ ಇಳಿಕೆ ಕಂಡುಬಂದಿದೆ. ಹೀಗೆಯೇ ಮುಂದುವರಿದರೆ ಸಿನಿಮಾ ಸಂಪೂರ್ಣವಾಗಿ ನೆಲಕಚ್ಚುವ ಎಲ್ಲಾ ಲಕ್ಷಣ ಗೋಚರವಾಗಿದೆ.

2ನೇ ದಿನ ಕಲೆಕ್ಷನ್ ಭಾರಿ ಡೌನ್

ಮೊದಲ ದಿನ ವಿಶ್ವಾದ್ಯಂತ 34.65 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದ ‘ಪ್ಯಾರಡೈಸ್’, ಎರಡನೇ ದಿನ ಶೇ. 57 ರಷ್ಟು ಭಾರಿ ಕುಸಿತ ಕಂಡಿದೆ. ಎರಡನೇ ದಿನ ಒಟ್ಟು 7,049 ಶೋಗಳಿಂದ ಸಿನಿಮಾ ಕೇವಲ 14.90 ಕೋಟಿ ನೆಟ್ ಕಲೆಕ್ಷನ್ ಮಾಡಲಷ್ಟೇ ಶಕ್ತವಾಗಿದೆ. ನೆಗೆಟಿವ್ ರಿವ್ಯೂಗಳಿಂದಾಗಿ ಚಿತ್ರಮಂದಿರಗಳತ್ತ ಜನ ಬರುವುದು ಗಣನೀಯವಾಗಿ ಕಡಿಮೆಯಾಗಿದೆ.

ಭಾರತದಲ್ಲಿ ಎರಡು ದಿನದ ಕಲೆಕ್ಷನ್:

ಎರಡು ದಿನಗಳ ಒಟ್ಟಾರೆ ಲೆಕ್ಕಾಚಾರ ನೋಡುವುದಾದರೆ, ಭಾರತದಲ್ಲಿ ‘ಪ್ಯಾರಡೈಸ್’ ಚಿತ್ರದ ಒಟ್ಟು ನೆಟ್ ಕಲೆಕ್ಷನ್ 61.15 ಕೋಟಿಗೆ ತಲುಪಿದೆ. ಇನ್ನು ಗ್ರಾಸ್ ಲೆಕ್ಕಾಚಾರದಲ್ಲಿ ಭಾರತದಲ್ಲೇ ಒಟ್ಟು 72.50 ಕೋಟಿ ರೂಪಾಯಿ ಗಳಿಕೆಯಾಗಿದೆ. ಮೊದಲ ದಿನ ಬಂದ ಭರ್ಜರಿ ಕಲೆಕ್ಷನ್‌ನಿಂದಾಗಿ ಈ ಮಟ್ಟದ ಮೊತ್ತ ಕಾಣಿಸುತ್ತಿದೆಯೇ ಹೊರತು, ಎರಡನೇ ದಿನದ ಮಟ್ಟಿಗೆ ಗಳಿಕೆ ತೀರಾ ಮಂದಗತಿಯಲ್ಲಿದೆ.

ವಿದೇಶದಲ್ಲೂ ನಿರೀಕ್ಷಿತ ಮಟ್ಟಕ್ಕಿಲ್ಲದ ಗಳಿಕೆ:

ಅತ್ತ ವಿದೇಶಗಳಲ್ಲೂ ಸಿನಿಮಾಗೆ ಹಿನ್ನಡೆಯಾಗಿದೆ. ಎರಡನೇ ದಿನ ವಿದೇಶಗಳಲ್ಲಿ ಸಿನಿಮಾ 4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಇದರೊಂದಿಗೆ ಓವರ್‌ಸೀಸ್ ಒಟ್ಟು ಗ್ರಾಸ್ ಗಳಿಕೆ 26 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: ‘ದಿ ಪ್ಯಾರಡೈಸ್’ ಸಿನಿಮಾನಲ್ಲಿ ನಟಿಸಿದ್ದ ದೃಶ್ಯಕ್ಕೆ ಕತ್ತರಿ, ನಟ ಬೇಸರ

ವರ್ಲ್ಡ್‌ವೈಡ್ ಟೋಟಲ್ ಕಲೆಕ್ಷನ್:

ಭಾರತ ಹಾಗೂ ವಿದೇಶಿ ಮಾರುಕಟ್ಟೆ ಸೇರಿದಂತೆ ‘ಪ್ಯಾರಡೈಸ್’ ಚಿತ್ರವು ಎರಡು ದಿನಗಳಲ್ಲಿ ವಿಶ್ವಾದ್ಯಂತ ಒಟ್ಟು 98.50 ಕೋಟಿ ರೂಪಾಯಿ ಗ್ರಾಸ್ ಗಳಿಕೆ ಮಾಡಿದೆ. ಮೊದಲ ದಿನದ ಬಂಪರ್ ಗಳಿಕೆಯಿಂದ ಸಿನಿಮಾ 100 ಕೋಟಿ ಕ್ಲಬ್‌ನ ಹತ್ತಿರ ಬಂದಿದೆಯಾದರೂ, ನೆಗೆಟಿವ್ ಟಾಕ್ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಲೆಕ್ಷನ್ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಅರಣ್ಯ ವೀಕ್ಷಕನ ಮನೆಯಲ್ಲಿಯೇ ಲಕ್ಷಾಂತರ ಮೌಲ್ಯದ ಅಕ್ರಮ ನಾಟ ವಶ!
ಅರಣ್ಯ ವೀಕ್ಷಕನ ಮನೆಯಲ್ಲಿಯೇ ಲಕ್ಷಾಂತರ ಮೌಲ್ಯದ ಅಕ್ರಮ ನಾಟ ವಶ!
ಇಂದು ಅನಂತ ಹುಣ್ಣಿಮೆಯ ವಿಶೇಷ ದಿನ; ಈ ಎಲ್ಲಾ ರಾಶಿಗಳಿಗೆ ಶುಭ
ಇಂದು ಅನಂತ ಹುಣ್ಣಿಮೆಯ ವಿಶೇಷ ದಿನ; ಈ ಎಲ್ಲಾ ರಾಶಿಗಳಿಗೆ ಶುಭ
'ಭೂಮಿ ಬಿಡಿ, ಇಲ್ಲಾ ದಯಾಮರಣ ಕೊಡಿ' ಎಂದು ಆಕ್ರೋಶ
'ಭೂಮಿ ಬಿಡಿ, ಇಲ್ಲಾ ದಯಾಮರಣ ಕೊಡಿ' ಎಂದು ಆಕ್ರೋಶ
ಬೆಳೆ ಉಳಿಸಿಕೊಳ್ಳಲು ಪರದಾಟ: ವಿದ್ಯುತ್​ಗಾಗಿ ಅಧಿಕಾರಿಗಳ ಕಾಲಿಗೆ ಬಿದ್ದ ರೈತ
ಬೆಳೆ ಉಳಿಸಿಕೊಳ್ಳಲು ಪರದಾಟ: ವಿದ್ಯುತ್​ಗಾಗಿ ಅಧಿಕಾರಿಗಳ ಕಾಲಿಗೆ ಬಿದ್ದ ರೈತ
ಭಜನ್ ಕ್ಲಬ್ಬಿಂಗ್​; ದೆಹಲಿಯಲ್ಲಿ ಭಕ್ತಿಗೀತೆಗೆ ತಾಳ ಹಾಕಿದ ಪ್ರಧಾನಿ ಮೋದಿ
ಭಜನ್ ಕ್ಲಬ್ಬಿಂಗ್​; ದೆಹಲಿಯಲ್ಲಿ ಭಕ್ತಿಗೀತೆಗೆ ತಾಳ ಹಾಕಿದ ಪ್ರಧಾನಿ ಮೋದಿ
ಬಳ್ಳಾರಿ ಪಾದಯಾತ್ರೆ ಯಶಸ್ಸಿನ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಯಾತ್ರೆ
ಬಳ್ಳಾರಿ ಪಾದಯಾತ್ರೆ ಯಶಸ್ಸಿನ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಯಾತ್ರೆ
ಶವಪೆಟ್ಟಿಗೆ ಒಳಗೆ ತುಂಡು ತುಂಡಾದ ದೇಹ: 3 ತಿಂಗಳ ಬಳಿಕ ಉಡುಪಿಗೆ ಬಂತು ಶವ
ಶವಪೆಟ್ಟಿಗೆ ಒಳಗೆ ತುಂಡು ತುಂಡಾದ ದೇಹ: 3 ತಿಂಗಳ ಬಳಿಕ ಉಡುಪಿಗೆ ಬಂತು ಶವ
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಿ ಪತ್ರಕರ್ತನ ಮೈಚಳಿ ಬಿಡಿಸಿದ ಸಚಿವ ಜೈಶಂಕರ್!
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಿ ಪತ್ರಕರ್ತನ ಮೈಚಳಿ ಬಿಡಿಸಿದ ಸಚಿವ ಜೈಶಂಕರ್!
ಕೊಡಗಿನಲ್ಲಿ ಸುರಿದ ಕೆಂಬಣ್ಣದ ಮಳೆ: ಅಚ್ಚರಿಗೊಂಡ ಜನ
ಕೊಡಗಿನಲ್ಲಿ ಸುರಿದ ಕೆಂಬಣ್ಣದ ಮಳೆ: ಅಚ್ಚರಿಗೊಂಡ ಜನ
ಹಾಸನದಲ್ಲಿ ರವಿಚಂದ್ರನ್ ನೋಡಲು ಮುಗಿಬಿದ್ದ ಜನ; ವಿಡಿಯೋ ನೋಡಿ
ಹಾಸನದಲ್ಲಿ ರವಿಚಂದ್ರನ್ ನೋಡಲು ಮುಗಿಬಿದ್ದ ಜನ; ವಿಡಿಯೋ ನೋಡಿ