AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುಗರ್ ಕಂಟ್ರೋಲ್‌ ಮಾಡಲು ಈ ಕಷಾಯ ಸಹಾಯ ಮಾಡುತ್ತದೆಯೇ?

ಪುದೀನಾ ಮತ್ತು ದಾಲ್ಚಿನ್ನಿ ಕಷಾಯ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಎಂಬ ಮಾತುಗಳಿವೆ. ಆದರೆ ಇದು ನಿಜಕ್ಕೂ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆಯೇ, ಇದರಿಂದ ಸಿಗುವ ಪ್ರಯೋಜನಗಳು, ಸೇವಿಸುವ ವಿಧಾನ ಮತ್ತು ಮಧುಮೇಹ ಇರುವವರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಈ ಸ್ಟೋರಿಯಲ್ಲಿದೆ.

ಶುಗರ್ ಕಂಟ್ರೋಲ್‌ ಮಾಡಲು ಈ ಕಷಾಯ ಸಹಾಯ ಮಾಡುತ್ತದೆಯೇ?
Mint Cinnamon Tea For DiabetesImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Sep 04, 2026 | 7:10 PM

Share

ಮಧುಮೇಹ ಎಂಬ ರೋಗ ಒಮ್ಮೆ ಬಂದರೆ ಅದನ್ನು ನಿಯಂತ್ರಣದಲ್ಲಿಡುವುದು ಮಾತ್ರ ಪರಿಹಾರ. ಒಮ್ಮೆ ಬಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಆಹಾರ, ವ್ಯಾಯಾಮ ಮತ್ತು ವೈದ್ಯರು ಸೂಚಿಸಿದ ಔಷಧಿಗಳನ್ನು ಸರಿಯಾಗಿ ಪಾಲಿಸುವುದು ಅತ್ಯಂತ ಮುಖ್ಯ. ಈ ನಡುವೆ ಕೆಲವು ಮನೆಮದ್ದುಗಳು ಶುಗರ್ ಕಡಿಮೆ ಮಾಡುತ್ತವೆ ಎಂಬ ಸಲಹೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ. ಅದರಲ್ಲಿ ಪುದೀನಾ ಎಲೆ ಮತ್ತು ದಾಲ್ಚಿನ್ನಿಯಿಂದ ತಯಾರಿಸುವ ಕಷಾಯ ಕೂಡ ಒಂದು.

ಹೇಗೆ ತಯಾರಿಸಬಹುದು?

ಒಂದು ಕಪ್ ನೀರಿಗೆ ತೊಳೆದ ಕೆಲವು ಪುದೀನಾ ಎಲೆಗಳು ಮತ್ತು ಸಣ್ಣ ತುಂಡು ದಾಲ್ಚಿನ್ನಿ ಹಾಕಿ ಸುಮಾರು 5–10 ನಿಮಿಷ ಕುದಿಸಬಹುದು. ನಂತರ ಸೋಸಿ ಬೆಚ್ಚಗಿರುವಾಗ ಕುಡಿಯಬಹುದು. ಸಕ್ಕರೆ ಅಥವಾ ಜೇನುತುಪ್ಪ ಸೇರಿಸದಿರುವುದು ಉತ್ತಮ, ವಿಶೇಷವಾಗಿ ಮಧುಮೇಹ ಇರುವವರು.

ಯಾರು ಎಚ್ಚರ ವಹಿಸಬೇಕು?

ಮಧುಮೇಹದ ಔಷಧಿ ಅಥವಾ ಇನ್ಸುಲಿನ್ ಬಳಸುತ್ತಿರುವವರು ಇಂತಹ ಕಷಾಯವನ್ನು ನಿಯಮಿತವಾಗಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ. ರಕ್ತದಲ್ಲಿನ ಸಕ್ಕರೆ ಕಡಿಮೆಯಾಗುವ ಅಪಾಯವಿರುವವರು ವಿಶೇಷ ಎಚ್ಚರಿಕೆ ವಹಿಸಬೇಕು. ಅಲ್ಲದೆ ದಾಲ್ಚಿನ್ನಿಯನ್ನು ಅತಿಯಾಗಿ ಸೇವಿಸುವುದು ಸೂಕ್ತವಲ್ಲ. ಮುಖ್ಯವಾಗಿ, ಈ ಕಷಾಯವನ್ನು ಮಧುಮೇಹದ ಚಿಕಿತ್ಸೆಗೆ ಪರ್ಯಾಯವಾಗಿ ನೋಡಬಾರದು. ಸಮತೋಲಿತ ಆಹಾರ, ನಿಯಮಿತ ದೈಹಿಕ ಚಟುವಟಿಕೆ, ರಕ್ತದಲ್ಲಿನ ಸಕ್ಕರೆಯ ಮೇಲ್ವಿಚಾರಣೆ ಮತ್ತು ವೈದ್ಯರ ಸಲಹೆಯೇ ಮಧುಮೇಹ ನಿರ್ವಹಣೆಯ ಪ್ರಮುಖ ಆಧಾರ.

ಪುದೀನಾ ಎಲೆಗಳಲ್ಲಿ ವಿವಿಧ ಸಸ್ಯ ಸಂಯುಕ್ತಗಳು ಕಂಡುಬರುತ್ತವೆ. ಇದನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಆರಾಮ ಸಿಗಬಹುದು ಮತ್ತು ದೇಹಕ್ಕೆ ದ್ರವಾಂಶ ದೊರೆಯುತ್ತದೆ. ದಾಲ್ಚಿನ್ನಿಯಲ್ಲಿರುವ ಕೆಲವು ಸಂಯುಕ್ತಗಳು ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಆದರೆ ಪುದೀನಾ-ದಾಲ್ಚಿನ್ನಿ ಕಷಾಯ ಕುಡಿದರೆ ಮಧುಮೇಹ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ ಅಥವಾ ಔಷಧಿ ಅಗತ್ಯವಿಲ್ಲ ಎಂದು ಹೇಳಲು ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರಿಗರೇ ಎಚ್ಚರ: ನಗರದಲ್ಲಿ ಟೋಯಿಂಗ್ ಕಾರ್ಯಾಚರಣೆ ಪುನರಾರಂಭ!
ಬೆಂಗಳೂರಿಗರೇ ಎಚ್ಚರ: ನಗರದಲ್ಲಿ ಟೋಯಿಂಗ್ ಕಾರ್ಯಾಚರಣೆ ಪುನರಾರಂಭ!
‘ಮೈಮೇಲೆ ಪ್ರಜ್ಞೆ ಇರಬೇಕು’: ಮಗ ಮಾಡಿದ ಕೃತ್ಯದ ಬಗ್ಗೆ ವಿಜಯ್ ಸಿಟ್ಟು
‘ಮೈಮೇಲೆ ಪ್ರಜ್ಞೆ ಇರಬೇಕು’: ಮಗ ಮಾಡಿದ ಕೃತ್ಯದ ಬಗ್ಗೆ ವಿಜಯ್ ಸಿಟ್ಟು
ಮೈಸೂರು ಯುವ ದಸರಾ ಉದ್ಘಾಟಕರಾಗಿ ನೃತ್ಯ ನಿರ್ದೇಶಕ ಪ್ರಭುದೇವ್ ಆಯ್ಕೆ
ಮೈಸೂರು ಯುವ ದಸರಾ ಉದ್ಘಾಟಕರಾಗಿ ನೃತ್ಯ ನಿರ್ದೇಶಕ ಪ್ರಭುದೇವ್ ಆಯ್ಕೆ
ಕೆಪಿಎಸ್​​ಸಿ ಹಗರಣ: ಆರೋಪಿ ಬಸವರಾಜ ಬಗ್ಗೆ ಸ್ಫೋಟ ಅಂಶ ಬಿಚ್ಚಿಟ್ಟ ಖಂಡ್ರೆ
ಕೆಪಿಎಸ್​​ಸಿ ಹಗರಣ: ಆರೋಪಿ ಬಸವರಾಜ ಬಗ್ಗೆ ಸ್ಫೋಟ ಅಂಶ ಬಿಚ್ಚಿಟ್ಟ ಖಂಡ್ರೆ
ಮೋಡ ಬಿತ್ತನೆ ಕಾರ್ಯಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
ಮೋಡ ಬಿತ್ತನೆ ಕಾರ್ಯಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
ಜಗದೊದ್ಧಾರನ ಆಡಿಸಿದಳೆಶೋದೆ ಕೀರ್ತನೆ ಹುಟ್ಟಿದ ತಾಣದಲ್ಲಿ ಜನ್ಮಾಷ್ಟಮಿಸಂಭ್ರಮ
ಜಗದೊದ್ಧಾರನ ಆಡಿಸಿದಳೆಶೋದೆ ಕೀರ್ತನೆ ಹುಟ್ಟಿದ ತಾಣದಲ್ಲಿ ಜನ್ಮಾಷ್ಟಮಿಸಂಭ್ರಮ
ಸದ್ದಿಲ್ಲದೆ ತಮಿಳುನಾಡಿಗೆ ಹರಿಯುತ್ತಿದೆ ಕಾವೇರಿ ನೀರು!
ಸದ್ದಿಲ್ಲದೆ ತಮಿಳುನಾಡಿಗೆ ಹರಿಯುತ್ತಿದೆ ಕಾವೇರಿ ನೀರು!
ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿಕೆಶಿ
ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿಕೆಶಿ
ನಿರುದ್ಯೋಗಿ ಯುವಕ ಯುವತಿಯರೇ ಟಾರ್ಗೆಟ್: ಈತನ ಮೊಬೈಲ್​​​ನಲ್ಲಿ ಶಾಕಿಂಗ್ ಅಂಶ
ನಿರುದ್ಯೋಗಿ ಯುವಕ ಯುವತಿಯರೇ ಟಾರ್ಗೆಟ್: ಈತನ ಮೊಬೈಲ್​​​ನಲ್ಲಿ ಶಾಕಿಂಗ್ ಅಂಶ
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ